ಬ್ರೇಕಿಂಗ್ ನ್ಯೂಸ್
17-11-22 07:44 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆ ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ 'OnePlus 11' ಸ್ಮಾರ್ಟ್‌ಫೋನಿನಲ್ಲಿ ಇತ್ತೀಚಿನ Qualcomm Snapdragon 8 Gen 2 ಚಿಪ್‌ಸೆಟ್ ಇರಲಿದೆ ಎಂದು OnePlus ಕಂಪೆನಿ ಖಚಿತಪಡಿಸಿದೆ. ಕೆಲವೇ ವಾರಗಳ ಹಿಂದೆಯಷ್ಟೇ, ಕಳೆದ ವರ್ಷ ಬಿಡುಗಡೆಯಾಗಿದ್ದ Snapdragon 8 Gen 1 ಪ್ರೊಸೆಸರ್‌ನ ಉತ್ತರಾಧಿಕಾರಿಯಾಗಿ Qualcomm Snapdragon 8 Gen 2 ಪ್ರೊಸೆಸರ್ ಸಾಧನವನ್ನು ಪರಿಚಲಾಗಿತ್ತು. ಈ ಹೊಸ Qualcomm Snapdragon 8 Gen 2 ಪ್ರೊಸೆಸರ್ ಸಾಧನವು ಕಳೆದ ಮಾದರಿಗಿಂತ ಹೆಚ್ಚು ಶಕ್ತಿಯುತ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಬಗ್ಗೆ Qualcomm ಸಂಸ್ಥೆ ನೆನ್ನೆಯಷ್ಟೇ ಬಹಿರಂಗಪಡಿಸಿತ್ತು. ಇದೀಗ ಈ ಹೊಸ ಪ್ರೊಸೆಸರ್ 'OnePlus 11' ಸ್ಮಾರ್ಟ್‌ಫೋನಿನಲ್ಲಿ ಇರುವುದು ಖಚಿತವಾಗಿದೆ.
ಈ ಹಿಂದೆ ಸೋರಿಕೆಯಾದ ಮಾಹಿತಿಗಳ ಪ್ರಕಾರ, OnePlus 11 ಸ್ಮಾರ್ಟ್‌ಫೋನ್ Snapdragon 8 Gen 2 ಪ್ರೊಸೆಸರ್ ಮತ್ತು 16 GB RAM ಬರಬಹುದು ಎಂದು ಹೇಳಲಾಗಿತ್ತು. ಇದೀಗ OnePlus 11' ಸ್ಮಾರ್ಟ್‌ಫೋನಿನಲ್ಲಿ Qualcomm Snapdragon 8 Gen 2 ಪ್ರೊಸೆಸರ್ ಅಧಿಕೃತವಾಗಿ ಖಚಿತವಾಗಿದೆ. ಇನ್ನುಳಿದಂತೆ, OnePlus 11 ಸ್ಮಾರ್ಟ್‌ಫೋನ್6.7-ಇಂಚಿನ QHD+ OLED ಡಿಸ್ ಪ್ಲೇ ಹೊಂದಿರಬಹುದು. 100 W ಕೇಬಲ್ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ 5000 mAh ಬ್ಯಾಟರಿಯನ್ನು ಫೋನಿನಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಜನಪ್ರಿಯ ಟಿಪ್‌ಸ್ಟಾರ್ ಮ್ಯಾಕ್ಸ್ ಜಂಬೋರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮೊದಲಿಗೆ ಸುದ್ದಿ ಹರಿಬಿಟ್ಟಿದ್ದಾರೆ. ಆದರೆ, ಈ ವೈಶಿಷ್ಟ್ಯಗಳ ಕುರಿತಂತೆ ಕಂಪೆನಿಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇನ್ನು ಹೊಸ Qualcomm Snapdragon 8 Gen 2 ಪ್ರೊಸೆಸರ್ ಸಾಧನವು ಈ ಹಿಂದೆ ಪರಿಚಯಿಸಿದ್ದ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ಗಿಂತ 40% ಹೆಚ್ಚು ಪವರ್‌ಫುಲ್ ಆಗಿದೆ ಎಂದು Qualcomm ಕಂಪೆನಿ ತಿಳಿಸಿದೆ. ಈ ಹೊಸ ಸಾಧನದಲ್ಲಿ ಹೊಚ್ಚಹೊಸ CPU (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್)ಆರ್ಕಿಟೆಕ್ಚರ್ ತರಲಾಗಿದ್ದು, ಇತ್ತೀಚಿನ Qualcomm Kyro CPU ಜೊತೆಗೆ ಮೂರು ದಕ್ಷತೆಯ ಕೋರ್‌ಗಳು, ನಾಲ್ಕು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ಒಂದು ಪ್ರೈಮ್ ಕೋರ್ ರ್ಕಿಟೆಕ್ಚರ್‌ಗಳನ್ನು ಒಳಗೊಂಡಿದೆ. ಹಿಂದಿನ ಮಾದರಿಯ ಚಿಪ್‌ಸೆಟ್‌ಗಿಂತ ವಿಭಿನ್ನವಾಗಿ, Qualcomm Snapdragon 8 Gen 2 ಚಿಪ್‌ಸೆಟ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ದಕ್ಷತೆಯ ಕೋರ್‌ಗಳಲ್ಲಿ ಒಂದನ್ನು ಕಾರ್ಯಕ್ಷಮತೆಯ ಕೋರ್ ಆಗಿ ಬದಲಾಯಿಸಲಾಗಿದೆ.
Qualcomm Snapdragon 8 Gen 2 ಪ್ರೊಸೆಸರ್ ಮುಂದಿನ-ಪೀಳಿಗೆಯ Qualcomm AI ಇಂಜಿನ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು Qualcomm ಕಂಪೆನಿ ತಿಳಿಸಿದೆ. ಇದರಲ್ಲಿ AI ಯೂನಿಟ್ ಮಲ್ಟಿ-ಲ್ಯಾಂಗ್ವೇಜ್ ಟ್ರಾನ್ಸ್‌ಲೇಶನ್ ಮತ್ತು ಸುಧಾರಿತ AI ಕ್ಯಾಮೆರಾ ಫೀಚರ್ಸ್ ತರಲಾಗಿದೆ.ಮೋಡೆಮ್-RF ಸಿಸ್ಟಮ್‌ನಲ್ಲಿ ವಿಶ್ವದ ಮೊದಲ ಮತ್ತು ಏಕೈಕ 5G AI ಪ್ರೊಸೆಸರ್ ಇದಾಗಿದೆ. ಇನ್ನು ಈ ಪ್ರೊಸೆಸರ್ 4nm ಪ್ರೊಸೆಸ್ ಟೆಕ್ನಾಲಜಿಯನ್ನು ಆಧರಿಸಿದೆ ಎಂದು ಕಂಪೆನಿ ತಿಳಿಸಿದೆ. ಆಪಲ್‌ನ A16 ಬಯೋನಿಕ್ ಚಿಪ್ ಕೂಡ ಇದೇ ಮಾದರಿಯದ್ದಾಗಿದೆ. ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ವೈಶಿಷ್ಟ್ಯದಲ್ಲಿ ಹೊಸ ಚಿಪ್‌ಸೆಟ್ ಕಳೆದ ಸ್ನಾಪ್‌ಡ್ರಾಗನ್ 8 Gen 1 ಗಿಂತ 4.35x ವೇಗವಾಗಿದೆ ಎಂದು Qualcomm ಹೇಳಿಕೊಂಡಿದೆ.
Qualcomm Snapdragon 8 Gen 2 ಪ್ರೊಸೆಸರ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆದಾರರಿಗೆ ಗೇಮಿಂಗ್ ಅನುಭವವನ್ನು ಹೆಚ್ಚಿಸಲು Qualcomm Snapdragon Elite Gaming ವೈಶಿಷ್ಟ್ಯದ ಜೊತೆಗೆ ಸಜ್ಜಾಗಿದೆ. ನೈಜ-ಸಮಯದ ಹಾರ್ಡ್‌ವೇರ್ ಆಕ್ಸಿಲರೇಟೆಡ್ ರೇ ಟ್ರೇಸಿಂಗ್ ನಿಂದ Snapdragon 8 Gen 2 ಪ್ರೊಸೆಸರ್ ಉತ್ತಮ ಗೇಮಿಂಗ್ ಅನುಭವವನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಪ್ರೊಸೆಸರ್ ಗ್ರಾಫಿಕ್ಸ್‌ನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇತ್ತೀಚಿನ ಅನ್ರಿಯಲ್ ಎಂಜಿನ್ 5 ನೊಂದಿಗೆ ಗೇಮ್‌ಗಳಲ್ಲಿನ ಪಾತ್ರಗಳು ಹೆಚ್ಚು ನೈಜ ಮತ್ತು ಅನನ್ಯವಾಗಿರುತ್ತವೆ ಎಂದು ಕಂಪೆನಿ ತಿಳಿಸಿದೆ. ಸ್ಮಾರ್ಟ್‌ಫೋನ್ ಗೇಮಿಂಗ್ ಬಳಕೆದಾರರಿಗೆ ಸಾಧ್ಯವಾದಷ್ಟು ತಲ್ಲೀನಗೊಳಿಸುವ ಅನುಭವವನ್ನು ಒದಗಿಸುವ ಕ್ವಾಲ್ಕಾಮ್ ಕಂಪೆನಿಯ ಪ್ರಯತ್ನ ಇದಾಗಿದೆ.
Qualcomm Snapdragon 8 Gen 2 ಪ್ರೊಸೆಸರ್ ನಲ್ಲಿ Qualcomm 5G AI ಸೂಟ್ ಇದೆ, ಇದು ಉತ್ತಮ ವೇಗ, ಲೇಟೆನ್ಸಿ, ಕವರೇಜ್ ಮತ್ತು ಪವರ್ ದಕ್ಷತೆಯನ್ನು ತಲುಪಿಸಲು sub-6 GHz ಮತ್ತು mmWave 5G ಲಿಂಕ್‌ಗಳನ್ನು ಆಪ್ಟಿಮೈಸ್ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಸಾಧನವು 5G+5G/4G ಡ್ಯುಯಲ್-ಸಿಮ್ ಡ್ಯುಯಲ್-ಆಕ್ಟಿವ್ ಬೆಂಬಲಿಸುವ ಮೊದಲ ಸ್ನಾಪ್‌ಡ್ರಾಗನ್ ಪ್ಲಾಟ್‌ಫಾರ್ಮ್ ಆಗಿದ್ದು, ಇದರಿಂದ ಎರಡು 5G ಸಿಮ್‌ಗಳ ಬಳಕೆಯನ್ನು ಏಕಕಾಲದಲ್ಲಿ ಸಕ್ರಿಯಗೊಳಿಸಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಫಾಸ್ಟ್ ಕನೆಕ್ಟ್ 7800 ಸಿಸ್ಟಮ್‌ನೊಂದಿಗೆ Wi-Fi 7, ಬ್ಲೂಟೂತ್ v5.3 ಬೆಂಬಲ, 3D ಪ್ರತಿಕೃತಿ ಮುಖದ ಹೆಚ್ಚಿನ ಭದ್ರತೆ ಮತ್ತು ಡೈನಾಮಿಕ್ ಹೆಡ್-ಟ್ರ್ಯಾಕಿಂಗ್ ಆಡಿಯೋ ತಂತ್ರಜ್ಞಾನಗಳನ್ನು ತರಲಾಗಿದೆ.
Oneplus 11 Confirmed To Be Run On Snapdragon 8 Gen 2.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
27-09-23 05:08 pm
HK News Desk
Anand Mahindra, Case Against: ಸ್ಕಾರ್ಪಿಯೋ ಅಪಘಾ...
26-09-23 07:44 pm
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
27-09-23 10:42 pm
Mangalore Correspondent
Indian Coast Guard Mangalore: ಸಮುದ್ರ ಮಧ್ಯೆ ಮೀ...
27-09-23 10:01 pm
Mangalore Bus Protest, Assult: ಪ್ರಯಾಣಿಕ - ಬಸ್...
27-09-23 12:57 pm
Mangalore, Tempo driver suicide: ಬಾವಿಗೆ ಹಾರಿ...
27-09-23 12:31 pm
Indiana Hospital, arrest: ಇಂಡಿಯಾನ ಆಸ್ಪತ್ರೆಯಲ್...
26-09-23 02:24 pm
27-09-23 11:09 pm
HK News Desk
Mangalore Police, Kadri: ಗಂಡ - ಹೆಂಡ್ತಿ ಜಗಳ ;...
27-09-23 11:26 am
Mangalore OTP Fraud, Sub Registrar office Bio...
26-09-23 10:44 pm
Kerala, drug dealer trains dogs: ನಾಯಿ ಸಾಕಣೆ ಕ...
26-09-23 07:20 pm
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm