iQOO 11 ಸರಣಿ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಲೀಕ್!..ಬೆಚ್ಚಿಬಿತ್ತು ಮೊಬೈಲ್ ಮಾರುಕಟ್ಟೆ!

19-11-22 08:27 pm       Source: Vijayakarnataka   ಡಿಜಿಟಲ್ ಟೆಕ್

ಇದೀಗ ಆನ್​ಲೈನ್​ನಲ್ಲಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, iQOO 11 ಸರಣಿ ಸ್ಮಾರ್ಟ್‌ಫೋನ್‌ಗಳು FHD+ ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್‌ಗೆ ಬೆಂಬಲದೊಂದಿಗೆ 6.78-ಇಂಚಿನ AMOLED ಡಿಸ್‌ಪ್ಲೇ ಹೊಂದಿರುತ್ತದೆ ಎಂಬ ವದಂತಿಗಳಿವೆ.

ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿರುವ ಮೊಬೈಲ್ ಬ್ರ್ಯಾಂಡ್ ಐಕ್ಯೂ (iQOO) ಇದೀಗ ಮತ್ತೆ ಸುದ್ದಿಯಲ್ಲಿದೆ. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ iQOO ಕಂಪನಿ ಇದೀಗ ಹೊಸ iQOO 11 ಮತ್ತು iQOO 11 ಪ್ರೊ ಎಂಬ ಎರಡು ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸಿದ್ದು, ಈ ಎರಡೂ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಪ್ರೀಮಿಯಂ ವೈಶಿಷ್ಟ್ಯಗಳು ಎಲ್ಲರ ಗಮನಸಳೆದಿವೆ.

ಇದೇ ಡಿಸೆಂಬರ್ ಮೊದಲ ವಾರದಲ್ಲಿ iQOO 11 ಸರಣಿ ಅನಾವರಣಗೊಳ್ಳಲಿದೆ ಎಂದು ಮೊಬೈಲ್ ಮಾರುಕಟ್ಟೆ ಮಾತನಾಡಿಕೊಳ್ಳುತ್ತಿದೆ. ಇದೇ ವೇಳೆಗೆ iQOO 11 ಸರಣಿಯಲ್ಲಿ iQOO 11 ಮತ್ತು iQOO 11 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳ ಕುರಿತ ಕೆಲವು ಫೀಚರ್ಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದ್ದು, ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್, 144Hz ರಿಫ್ರೆಶ್‌ ರೇಟ್‌ ಮತ್ತು 200W ವೇಗದ ಚಾರ್ಜಿಂಗ್ ಬೆಂಬಲದಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ ಎಂದು ಪ್ರಮುಖ ಟೆಕ್ ಮಾಧ್ಯಮ ವರದಿಗಳು ತಿಳಿಸಿವೆ.

iQOO 11 Pro full specifications surfaces online ahead of launch

ಇದೀಗ ಆನ್ಲೈನ್ನಲ್ಲಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, iQOO 11 ಸರಣಿ ಸ್ಮಾರ್ಟ್‌ಫೋನ್‌ಗಳು FHD+ ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್‌ಗೆ ಬೆಂಬಲದೊಂದಿಗೆ 6.78-ಇಂಚಿನ AMOLED ಡಿಸ್‌ಪ್ಲೇ ಹೊಂದಿರುತ್ತದೆ ಎಂಬ ವದಂತಿಗಳಿವೆ. ಈ ಡಿಸ್‌ಪ್ಲೇಯು 1500 ನಿಟ್ಸ್ ನಷ್ಟು ಗರಿಷ್ಠ ಬ್ರೈಟ್‌ನೆಸ್ ಹೊಂದಿರಬಹುದು ಮತ್ತು ಅಂಡರ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಎಂಬ ವದಂತಿಗಳಿವೆ. ಇದು ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಬರಬಹುದಾದ ಅತ್ಯುತ್ತಮ ವೈಶಿಷ್ಟ್ಯಗಳು ಎಂದು ಹೇಳಲಾಗುತ್ತಿದೆ.

iQoo beats OnePlus, Apple and Samsung in CSAT score - Pricebaba.com Daily

ಪ್ರೊಸೆಸರ್ ವಿಭಾಗದಲ್ಲಿ, iQOO 11 ಸರಣಿ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್ SM8550 ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದ್ದರೆ, iQOO 11 ಸರಣಿ ಸ್ಮಾರ್ಟ್‌ಫೋನ್‌ಗಳು 12 GB RAM + 256 GB ಸಂಗ್ರಹಣೆ ಮತ್ತು 16 GB RAM + 256 GB ಸಂಗ್ರಹಣೆ ಹಾಗೂ 16GB RAM + 256 GB ಸಂಗ್ರಹಣೆ ಮಾದರಿಗಳಲ್ಲಿ ಮಾದರಿಗಳಲ್ಲಿ ಬಿಡುಗಡೆಯಾಗಲಿವೆ ಎಂದು ವರದಿಗಳು ತಿಳಿಸಿವೆ. 16GB RAM + 256 GB ಸಂಗ್ರಹಣೆ ಮಾದರಿಯು iQOO 11 ಪ್ರೊ ನಲ್ಲಿ ಮಾತ್ರ ಬರಬಹುದು ಎಂದು ಹೇಳಲಾಗಿದೆ.


iQOO 11 ಸರಣಿಯಲ್ಲಿನ ಎರಡೂ ಸ್ಮಾರ್ಟ್‌ಫೋನ್‌ಗಳು 50-ಮೆಗಾಪಿಕ್ಸೆಲ್ (ಮುಖ್ಯ) + 13-ಮೆಗಾಪಿಕ್ಸೆಲ್ (ಅಲ್ಟ್ರಾ-ವೈಡ್) + 12-ಮೆಗಾಪಿಕ್ಸೆಲ್ (ಟೆಲಿಫೋಟೋ) ಸಾಮರ್ಥ್ಯದ ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹಾಗೂ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿರಬಹುದು ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆಯಾಗಿ, iQOO 11 ಸ್ಮಾರ್ಟ್‌ಫೋನ್ 120W ಮತ್ತು iQOO 11 ಪ್ರೊ 200W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಬಹುದು.!

Iqoo 11 Full Specifications Surface Ahead Of Launch Next Week.