ಬ್ರೇಕಿಂಗ್ ನ್ಯೂಸ್
29-11-22 08:09 pm Source: Vijayakarnataka ಡಿಜಿಟಲ್ ಟೆಕ್
ಆಡಿಯೊ ಉತ್ಪನ್ನಗಳ ಜನಪ್ರಿಯ ಬ್ರ್ಯಾಂಡ್ Wings ದೇಶದಲ್ಲಿ ಗೇಮಿಂಗ್ ಕೇಂದ್ರಿತ ಫೀಚರ್ಸ್‌ಗಳನ್ನು ಒಳಗೊಂಡಿರುವ Phantom 200 ಎಂಬ ಇಯರ್‌ಬಡ್ಸ್ ಸಾಧನವನ್ನು ಕೇವಲ 999 ರೂ. ಬೆಲೆಯಲ್ಲಿ ಪರಿಚಯಿಸಿದೆ. ಆಡಿಯೋ ಮತ್ತು ಗೇಮಿಂಗ್ ಅನುಭವಕ್ಕಾಗಿ ಅಕೌಸ್ಟಿಕ್ ಎಕೋ ಕ್ಯಾನ್ಸಲೇಶನ್ ವೈಶಿಷ್ಟ್ಯವನ್ನು ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಇಯರ್‌ಬಡ್ಸ್ ಸಾಧನ ಇದಾಗಿದ್ದು, 13mm ಗ್ರ್ಯಾಫೀನ್ ಆಡಿಯೋ ಡ್ರೈವರ್‌ಗಳು ಮತ್ತು ಟಚ್ ಕಂಟ್ರೋಲ್ ವೈಶಿಷ್ಟ್ಯಗಳ ಮೂಲಕವೂ ಸಹ ಗಮನಸೆಳೆದಿದೆ. ಹಾಗಾದರೆ, ಹೊಸ Phantom 200 ಇಯರ್‌ಬಡ್ಸ್ ಸಾಧನ ಹೊಂದಿರುವ ಸಂಪೂರ್ಣ ಫೀಚರ್ಸ್ ಯಾವುವು?, ಮಾರಾಟ ಯಾವಾಗ ಎಂಬುದನ್ನು ನೋಡೋಣ ಬನ್ನಿ.
Phantom 200 ಇಯರ್‌ಬಡ್ಸ್ ಫೀಚರ್ಸ್
Wings ಕಂಪೆನಿ ಪರಿಚಯಿಸಿರುವ ಹೊಸ Phantom 200 ಇಯರ್‌ಬಡ್ಸ್ ಸಾಧನವು ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಸೌಂಡ್‌ಗಾಗಿ 13 ಎಂಎಂ ಗ್ರ್ಯಾಫೀನ್ ಆಡಿಯೋ ಡ್ರೈವರ್‌ಗಳನ್ನು ಹೊಂದಿರುವ ಈ ಸಾಧನವು ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಕ್ವಾಡ್ ಡಿಎನ್ಎಸ್ ಮೈಕ್ರೊಫೋನ್ ಹಾಗೂ ಬಾಹ್ಯ ಶಬ್ದವನ್ನು ಕಡಿಮೆಗೊಳಿಸುವ noise cancellation ವೈಶಿಷ್ಟ್ಯದಿಂದ ಶಕ್ತವಾಗಿದೆ. ಬ್ಲೂಟೂತ್ 5.3 ಸಂಪರ್ಕವನ್ನು ಹೊಂದಿರುವ ಈ Phantom 200 ಇಯರ್‌ಬಡ್ಸ್ ಸಾಧನವನ್ನು ಏಕಕಾಲದಲ್ಲಿ ಎರಡು ಸಾಧನಗಳಿಗೆ ಹಾಗೂ 15m ವ್ಯಾಪ್ತಿಯವರೆಗೆ ಸಂಪರ್ಕಿಸಬಹುದು. ಇಷ್ಟೇ ಅಲ್ಲದೇ, ಈ ಸಾಧನವು ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ಕಮಾಂಡ್‌ಗಳನ್ನು ಬೆಂಬಲಿಸುತ್ತದೆ.
Phantom 200 ಇಯರ್‌ಬಡ್ಸ್ 40ms ಅಲ್ಟ್ರಾ-ಲೋ ಲೇಟೆನ್ಸಿಯೊಂದಿಗೆ ಮೀಸಲಾದ ಗೇಮಿಂಗ್ ಮೋಡ್ ಹೊಂದಿದೆ. ಬಳಕೆದಾರರು 2 ಸೆಕೆಂಡುಗಳ ಕಾಲ ಬಲ ಇಯರ್‌ಬಡ್ ಟ್ಯಾಪ್ ಮಾಡುವ ಮೂಲಕ ಗೇಮಿಂಗ್ ಮೋಡ್ ಸಕ್ರಿಯಗೊಳಿಸಬಹುದು. ಇದರಲ್ಲಿ ಗೇಮಿಂಗ್ ಸಮಯದಲ್ಲಿ ಸಂಭಾಷಣೆಗಳನ್ನು ಮಾಡುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ. ಇಷ್ಟೇ ಅಲ್ಲದೇ, ಗೇಮಿಂಗ್ ವೆಳೆ ಥಿಕ್ ಗ್ರೀನ್ ಗೇಮಿಂಗ್ LED ಹೈಲೈಟ್ಸ್ ವೈಶಿಷ್ಟ್ಯ ಸಹ ಇದೆ. ಇದು ಬ್ಯಾಟರಿ ಸ್ಟೇಟಸ್ ಇಂಡಿಕೇಟರ್ ಆಗಿ ಕಾರ್ಯನಿರ್ವಹಿಸಲಿದೆ. ಅಂದರೆ, ನೀವು ಗೇಮ್ ಆಡುವ ವೇಳೆ Phantom 200 ಸಾಧನದ ಕೇಸ್ ಎಷ್ಟು ಚಾರ್ಜ್ ಆಗಿದೆ ಎಂಬುದನ್ನು ಇದು ಸೂಚಿಸುವ ಕೆಲಸ ಮಾಡುತ್ತದೆ.
ಇನ್ನು ಈ Phantom 200 ಇಯರ್‌ಬಡ್ಸ್ ಸಾಧನವು ಒಂದೇ ಚಾರ್ಜ್‌ನಲ್ಲಿ ಚಾರ್ಜಿಂಗ್ ಕೇಸ್‌ನೊಂದಿಗೆ 38 ಗಂಟೆಗಳ ಬ್ಯಾಕ್‌ಅಪ್ ಮತ್ತು ಕೇಸ್ ಇಲ್ಲದೆ 8 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗೂ ಹೈ-ಸ್ಪೀಡ್ ಬುಲೆಟ್ ಚಾರ್ಜ್ ತಂತ್ರಜ್ಞಾನದ ಸಹಾಯದಿಂದ ಕೇವಲ 10 ನಿಮಿಷಗಳಲ್ಲಿ 20 ಗಂಟೆಗಳ ಪ್ಲೇಬ್ಯಾಕ್ ಟೈಂ ಒದಗಿಸಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನುಳಿದಂತೆ, ಟಚ್ ಕಂಟ್ರೋಲ್‌ಗಳು, IPX5 ರೇಟಿಂಗ್ ವಾಟರ್ ರೆಸಿಸ್ಟೆನ್ಸಿ ಮತ್ತು USB-C ಚಾರ್ಜಿಂಗ್ ಪೋರ್ಟ್ ವೈಶಿಷ್ಟ್ಯಗಳನ್ನು ನಾವು ಈ ಈ Phantom 200 ಇಯರ್‌ಬಡ್ಸ್ ಸಾಧನದಲ್ಲಿ ನೋಡಬಹುದು. ಆದ್ದರಿಂದ ಇದು 999 ರೂ. ಬೆಲೆಯಲ್ಲಿ ಯೋಗ್ಯ ಸಾಧನದಂತೆ ಕಾಣುತ್ತಿದೆ.
Phantom 200 ಇಯರ್‌ಬಡ್ಸ್ ಲಭ್ಯತೆ
ನಾವು ಈಗಾಗಲೇ ತಿಳಿಸಿರುವಂತೆ ದೇಶದಲ್ಲಿ Phantom 200 ಇಯರ್‌ಬಡ್ಸ್ ಸಾಧನವು 999ರೂ. ಬೆಲೆಯಲ್ಲಿ ಬಿಡುಗಡೆಗೊಂಡಿದೆ ಮತ್ತು ಇಂದಿನಿಂದಲೇ ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟಕ್ಕೆ ಬಂದಿದೆ. ಕಪ್ಪು ಮತ್ತು ಬಿಳಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುವ ಈ ಸಾಧನವನ್ನು Wings ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕವೂ ಖರೀದಿಸಬಹುದು.
Wings Phantom 200 With Enc, 8 Hour Battery Life Launched In India.
19-04-25 12:24 pm
HK News Desk
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm