ಭಾರತವು ಈಗ ವಿಶ್ವದ ಅತಿದೊಡ್ಡ ಸ್ಮಾರ್ಟ್‌ವಾಚ್ ಮಾರುಕಟ್ಟೆ: ವರದಿ!

01-12-22 07:23 pm       Source: Vijayakarnataka   ಡಿಜಿಟಲ್ ಟೆಕ್

ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಹೊರತಾಗಿಯೂ 2022ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್ ಮಾರಾಟವು ಶೇ 30 ರಷ್ಟುಹೆಚ್ಚಾಗಿದೆ.

ವಿಶ್ವದ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಇದೀಗ ಭಾರತವು ಅತಿದೊಡ್ಡ ಸ್ಮಾರ್ಟ್‌ವಾಚ್ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ. 2022ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ವಾಚ್ ಮಾರುಕಟ್ಟೆಯು ಶೇ. 171 ಪ್ರತಿಶತದಷ್ಟು (ವರ್ಷದಿಂದ ವರ್ಷಕ್ಕೆ) ಬೆಳವಣಿಗೆ ಹೊಂದುವ ಮೂಲಕ ಭಾರತವು ಜಾಗತಿಕವಾಗಿ ಪ್ರಮುಖ ಸ್ಮಾರ್ಟ್‌ವಾಚ್ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ ಎಂದು ಜನಪ್ರಿಯ ಉದ್ಯಮ ವಿಶ್ಲೇಷಕ ಸಂಸ್ಥೆ ಕೌಂಟರ್‌ಪಾಯಿಂಟ್ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.

ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಹೊರತಾಗಿಯೂ 2022ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್ ಮಾರಾಟವು ಶೇ 30 ರಷ್ಟುಹೆಚ್ಚಾಗಿದೆ. ಇದರಲ್ಲಿ ಭಾರತದ ಸ್ಮಾರ್ಟ್ ವಾಚ್ ಮಾರುಕಟ್ಟೆಯು ಶೇ 171 ಪ್ರತಿಶತದಷ್ಟು ಬೆಳೆದು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದೆ. ಒಟ್ಟು ಉತ್ಪಾದನೆಯಾದ ಸ್ಮಾರ್ಟ್‌ವಾಚ್‌ಗಳ ಪೈಕಿ, ಭಾರತದಲ್ಲೇ ಶೇ 30 ರಷ್ಟು ಸ್ಮಾರ್ಟ್‌ವಾಚ್‌ಗಳು ಮಾರಾಟವಾಗಿವೆ ಎಂದು ವರದಿ ತಿಳಿಸಿದೆ.

India is now the biggest Global smartwatch Market - TechnoSports

ಚೀನಾದಲ್ಲಿನ ಕಠಿಣ ಕೋವಿಡ್ ನಿರ್ಬಂದಗಳಿಂದಾಗಿ ಎಲಾಕ್ಟ್ರಾನಿಕ್ ಮತ್ತು ಗ್ಯಾಜೆಟ್ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇದರಿಂದ ಭಾರತವು ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯಲ್ಲಿ ಹೇಳಲಾಗಿದೆ. ಹಾಗೆಯೇ, ಭಾರತದಲ್ಲಿ ನಾಯ್ಸ್, ಫೈರ್‌ಬೋಲ್ಟ್, ಬೋಟ್ ಮತ್ತು ಮಿ ಬ್ರ್ಯಾಂಡ್ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಮಾರಾಟವಾದ ಸ್ಮಾರ್ಟ್‌ವಾಚ್‌ಗಳು ಎಂದು ವರದಿಯಲ್ಲಿ ಗುರುತಿಸಲಾಗಿದೆ.

India pips North America to become the biggest smartwatch market |  TechCrunch

ಒಟ್ಟಾರೆ ಅಂಕಿಅಂಶಗಳು ಇವಾದರೆ, ದೇಶದ ಪ್ರೀಮಿಯಂ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಆಪಲ್ ಬ್ರ್ಯಾಂಡ್ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಮಾರಾಟವಾಗಿವೆ ಎಂದು ವರದಿ ತಿಳಿಸಿದೆ. ಆಪಲ್ ನಂತರ ಸ್ಥಾನ ನಿರೀಕ್ಷೆಯಂತೆಯೇ ಸ್ಯಾಮ್‌ಸಂಗ್ ಕಂಪೆನಿಯ ಪಾಲಾಗಿದ್ದರೆ, ಹುವಾವೆ, ಅಮೇಜ್‌ಫಿಟ್ ಮತ್ತು ಗಾರ್ಮಿನ್ ಬ್ರ್ಯಾಂಡ್ ಸ್ಮಾರ್ಟ್‌ವಾಚ್‌ಗಳು ಕೂಡ ಹೆಚ್ಚು ಮಾರಾಟವಾದ ಪ್ರಮುಖ ಸ್ಮಾರ್ಟ್‌ವಾಚ್ ಸಾಧನಗಳಾಗಿವೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯು ಹೇಳಿದೆ.

''ಭಾರತದ ಸ್ಮಾರ್ಟ್ ವಾಚ್ ಮಾರುಕಟ್ಟೆಯು ಶೇ 171 ಪ್ರತಿಶತದಷ್ಟು ಬೆಳೆದು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದೆ. ದಾಖಲೆಯ ತ್ರೈಮಾಸಿಕ ಬೆಳವಣಿಗೆ ಹಿಂದಿನ ಪ್ರಮುಖ ಅಂಶವೆಂದರೆ ಭಾರತದ ಹಬ್ಬದ ಋತು. ಭಾರತೀಯ ಬ್ರಾಂಡ್‌ಗಳು ಕೈಗೆಟುಕುವ ಬೆಲೆಯಲ್ಲಿ ತಮ್ಮ ಉತ್ಪನ್ನಗಳ ಪಟ್ಟಿಯನ್ನು ವಿಸ್ತರಿಸುತ್ತಿರುವುದು ಮತ್ತು ಸ್ಥಳೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿರುವುದು ಸಹ ಮಾರುಕಟ್ಟೆಗೆ ಬೆಳವಣಿಗೆಗೆ ಕೊಡುಗೆ ನೀಡಿದೆ'' ಎಂದು ಹಿರಿಯ ವಿಶ್ಲೇಷಕ ಅಂಶಿಕಾ ಜೈನ್ ಅವರು ಹೇಳಿದ್ದಾರೆ.

India Is Now The Biggest Smartwatch Market In The World.