ಭಾರತದಲ್ಲಿ Redmi 12 Note ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಸನ್ನಿಹಿತ!

03-12-22 07:29 pm       Source: Vijayakarnataka   ಡಿಜಿಟಲ್ ಟೆಕ್

Redmi Note 12 ಸರಣಿಯಲ್ಲಿ ಬಿಡುಗಡೆಯಾಗಿರುವ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ರೇಟ್ ಸಾಮರ್ಥ್ಯವಿರುವ OLED ಡಿಸ್‌ಪ್ಲೇಗಳೊಂದಿಗೆ ಬರುತ್ತವೆ.

ಭಾರತೀಯ Xiaomi ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ದಿನಾಂಕ ಹತ್ತಿರವಾಗಿದೆ. ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಿರುವ Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ಜನವರಿ ತಿಂಗಳ ಆರಂಭದಲ್ಲಿ ಪರಿಚಯಿಸಬಹುದು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಡೇಟಾಬೇಸ್‌ನಲ್ಲಿ Redmi Note 12 ಸರಣಿಯಲ್ಲಿನ Redmi Note 12, Redmi Note 12 Pro ಮತ್ತು Redmi Note 12 Pro+ ಮೂರು ಸ್ಮಾರ್ಟ್‌ಫೋನ್‌ಗಳನ್ನು ಗುರುತಿಸಲಾಗಿದ್ದು, ಈ ಮೂರು ಸ್ಮಾರ್ಟ್‌ಫೋನ್‌ಗಳನ್ನು ವಿಭಿನ್ನ ಹೆಸರುಗಳಲ್ಲಿ ದೇಶದಲ್ಲಿ ಬಿಡುಗಡೆಯಾಗಬಹುದು ಎಂದು ಇತ್ತೀಚಿನ ಪ್ರಮುಖ ಟೆಕ್ ಮಾಧ್ಯಮ ವರದಿಗಳು ತಿಳಿಸಿವೆ.

Xiaomi ಕಂಪೆನಿಯ Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿವೆ. Redmi Note 12 ಸರಣಿಯಲ್ಲಿ Redmi Note 12, Redmi Note 12 Pro ಮತ್ತು Redmi Note 12 Pro+ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದ್ದು, ಈ ಎಲ್ಲಾ ಸಾಧನಗಳು ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಬಂದಿವೆ. Redmi Note 12 ಸರಣಿಯಲ್ಲಿ ಹೈ ಎಂಡ್ ಮಾದರಿ ಸ್ಮಾರ್ಟ್‌ಫೋನ್ Redmi Note 12 Pro+ ಆವೃತ್ತಿಯು 210W ವೇಗದ ಚಾರ್ಜಿಂಗ್ ಬೆಂಬಲ ಮತ್ತು 200MP ಸ್ಯಾಮ್‌ಸಂಗ್ HPX ಪ್ರಾಥಮಿಕ ಕ್ಯಾಮೆರಾದೊಂದಿಗೆ ಬಿಡುಗಡೆಗೊಂಡಿದೆ. ಈ ಸ್ಮಾರ್ಟ್‌ಫೋನ್ ಕೇವಲ ಕೇವಲ 9 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Redmi Note 12 5G Gets SIRIM Certified, Could Launch Soon in Malaysia -  Gizmochina

Redmi Note 12 ಸರಣಿಯಲ್ಲಿ ಬಿಡುಗಡೆಯಾಗಿರುವ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ರೇಟ್ ಸಾಮರ್ಥ್ಯವಿರುವ OLED ಡಿಸ್‌ಪ್ಲೇಗಳೊಂದಿಗೆ ಬರುತ್ತವೆ. ಇವುಗಳಲ್ಲಿ Xiaomi Redmi Note 12 Pro ಸಾಧನವು ಇತ್ತೀಚಿನ MediaTek Dimensity 1080 ಚಿಪ್‌ಸೆಟ್ ಹೊಂದಿದೆ ಹಾಗೂ MIUI13 ಕಸ್ಟಮ್ ಸ್ಕಿನ್ ಔಟ್ ಆಫ್ ದಿ ಬಾಕ್ಸ್ ನಲ್ಲಿ ರನ್ ಆಗಲಿದೆ. Redmi Note 12, Redmi Note 12 Pro, ಮತ್ತು Redmi Note 12 Pro+ ಫೋನ್‌ಗಳು ಕ್ರಮವಾಗಿ 67W, 120W ಮತ್ತು 210W ವೇಗದ ಚಾರ್ಜಿಂಗ್ ಬೆಂಬಲಿಸಲಿವೆ.ಈ ಎಲ್ಲಾ ಹೊಸ ಸಾಧನಗಳು 5G ಬೆಂಬಲವನ್ನು ಹೊಂದಿರಲಿವೆ. ಇನ್ನುಳಿದಂತೆ, 4G LTE, Wi-Fi 6, ಬ್ಲೂಟೂತ್ 5.0, GPS ವೈಶಿಷ್ಟ್ಯಗಳಿವೆ. ಡೇಟಾ ವರ್ಗಾವಣೆಗಾಗಿ USB ಟೈಪ್-C ಪೋರ್ಟ್ ನೀಡಲಾಗಿದೆ.

Xiaomi Redmi Note 12 Series launching in China on October 27: Early 2023  launch expected for India - Smartprix

Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಗಳು
Redmi Note 12 ಸರಣಿಯ ಆರಂಭಿಕ ಸ್ಮಾರ್ಟ್ಫೋನ್ ಕೇವಲ 13,600 ರೂ.ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಸ್ಟ್ಯಾಂಡರ್ಡ್ Redmi Note 12 ಸ್ಮಾರ್ಟ್‌ಫೋನ್ ಮೂರು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು ಚೀನಾದಲ್ಲಿ, 4GB+128GB ಮಾದರಿಯ CNY 1,199 (ಸುಮಾರು 13,600) ಮತ್ತು 6GB+128GB ಮಾದರಿಯು CNY 1,299 (ಸುಮಾರು Rs 14,800), 8GB+128GB ಮಾದರಿಯು (ಸುಮಾರು ರೂ 19,300) ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ.

ಇದಕ್ಕಿಂತಲೂಸ್ವಲ್ಪ ಪ್ರೀಮಿಯಂ ಆಗಿರುವ Redmi Note 12 Pro ಸ್ಮಾರ್ಟ್‌ಪೋನಿನಲ್ಲಿ 6GB RAM ಮತ್ತು 128GB ಸ್ಟೋರೇಜ್ ಮಾದರಿಯು CNY 1699 (ಸುಮಾರು ರೂ. 19,380), 6GB+128GB ಮಾದರಿಯು CNY 1,799 (ಸುಮಾರು ರೂ. 20,500) ಮತ್ತು 8GB+256GB ಮಾದರಿಯು CNY 1699 (ಸುಮಾರು ರೂ. 21,700) ಹಾಗೂ 12GB+256GB ಮಾದರಿಯು CNY 2,099 (ಸುಮಾರು ರೂ 23,900) ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ.

ಈ ಎಲ್ಲ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರುವ Redmi Note 12 Pro+ ಸ್ಮಾರ್ಟ್‌ಫೋನನ್ನು 8GB+ 256GB ಮಾದರಿಯು CNY 2099 (ಸುಮಾರು Rs 23900) ಬೆಲೆಯಲ್ಲಿ ಮತ್ತು 12GB+256GB ಮಾದರಿಯು CNY 2299 (ಸುಮಾರು ರೂ 26,200) ಬೆಲೆಯಲ್ಲಿ ಪರಿಚಯಿಸಲಾಗಿದೆ. ಭಾರತದಲ್ಲಿಯೂ ಇದೇ ಬೆಲೆಗಳಲ್ಲಿ Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳು ಬೇರೆ ಬೇರೆ ಹೆಸರುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Redmi Note 12 Series India Launch Could Happen Soon.