ಬ್ರೇಕಿಂಗ್ ನ್ಯೂಸ್
09-12-22 08:00 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದಿಲ್ಲದಂತೆ ಹೆಸರುವಾಸಿಯಾಗುತ್ತಿರುವ ಜನಪ್ರಿಯ ಟೆಕ್ ಬ್ರ್ಯಾಂಡ್ ಟೆಕ್ನೋ ಇದೀಗ ಪ್ರೀಮಿಯಂ ಲ್ಯಾಪ್‌ಟಾಪ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಗಮನಸೆಳೆದಿದೆ. ಟೆಕ್ನೋ ಕಂಪೆನಿ ಇಂದು ಆಯೋಜಿಸಿದ್ದ ಗ್ಲೋಬಲ್ ಲಾಂಚ್ ಈವೆಂಟ್‌ನಲ್ಲಿ 'ಟೆಕ್ನೋ ಮೆಗಾಬುಕ್ S1' ಎಂಬ ಹೆಸರಿನ ಹೊಸ ಲ್ಯಾಪ್‌ಟಾಪ್ ಒಂದನ್ನು ಪರಿಚಯಿಸಿದ್ದು, ಈ ಸಾಧನವು 7nm ಫ್ಯಾಬ್ರಿಕೇಶನ್ 12 ನೇ-ಜನ್ ಕೋರ್ ಪ್ರೊಸೆಸರ್, 2K ಹೈ ರೆಸಲ್ಯೂಶನ್ ಡಿಸ್‌ಪ್ಲೇ, ಟು-ಇನ್-ಒನ್ ಫಿಂಗರ್‌ಪ್ರಿಂಟ್ ಪವರ್ ಬಟನ್ ಮತ್ತು ವಿಸಿ ಕೂಲಿಂಗ್ ಟೆಕ್ನಾಲಜಿಯಂತಹ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗಿದೆ. ಹಾಗಾದರೆ, ಹೊಸ 'ಟೆಕ್ನೋ ಮೆಗಾಬುಕ್ S1' ಲ್ಯಾಪ್‌ಟಾಪ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
'ಟೆಕ್ನೋ ಮೆಗಾಬುಕ್ S1' ಲ್ಯಾಪ್‌ಟಾಪ್ ವೈಶಿಷ್ಟ್ಯಗಳು
ನೂತನ 'ಟೆಕ್ನೋ ಮೆಗಾಬುಕ್ S1' ಲ್ಯಾಪ್‌ಟಾಪ್ ಟೆಕ್ನೋ ಕಂಪನಿ ಪರಿಚಯಿಸುತ್ತಿರುವ ಎರಡನೇ ಲ್ಯಾಪ್‌ಟಾಪ್ ಆಗಿದೆ. ಕಳೆದ ಲ್ಯಾಪ್‌ಟಾಪ್‌ಗಿಂತಲೂ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಬಂದಿರುವ ಈ ಲ್ಯಾಪ್‌ನಲ್ಲಿ 2K ಹೈ ರೆಸಲ್ಯೂಶನ್ ಬೆಂಬಲಿಸುವ 15.6-ಇಂಚಿನ ಡಿಸ್‌ಪ್ಲೇ ಅಳವಡಿಸಲಾಗಿದೆ. 16:10 ಅನುಪಾತದಲ್ಲಿ 90% ವೈಡ್ ಸ್ಕ್ರೀನ್ ಹೊಂದಿರುವ ಈ ಡಿಸ್‌ಪ್ಲೇಯು 120Hz ಸ್ಕ್ರೀನ್ ರಿಫ್ರೆಶ್ ರೇಟ್ ಮತ್ತು 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸಲಿದೆ. ಇಷ್ಟೇ ಅಲ್ಲದೇ, ಈ ಡಿಸ್‌ಪ್ಲೇಯು DC ಡಿಮ್ಮಿಂಗ್ ಸ್ಮಾರ್ಟ್ ಸೆನ್ಸಿಂಗ್, TUV SUD ಐ ಕಂಫರ್ಟ್ ಮತ್ತು 180 ಡಿಗ್ರಿ ವ್ಯೂ ಆಂಗಲ್ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷ ವಿನ್ಯಾಸದಲ್ಲಿ ಬಂದಿರುವ ಈ ಲ್ಯಾಪ್‌ಟಾಪ್ ಟು-ಇನ್-ಒನ್ ಫಿಂಗರ್‌ಪ್ರಿಂಟ್ ಪವರ್ ಬಟನ್ ಮತ್ತು ಸ್ಟಾರ್ರಿ ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು ಬಿಗ್ ಟಚ್‌ಪ್ಯಾಡ್‌ನೊಂದಿಗೆ ಬಂದಿದೆ.
ಹುಡ್ ಅಡಿಯಲ್ಲಿ, ಹೊಸ ಟೆಕ್ನೋ ಮೆಗಾಬುಕ್ S1 ಲ್ಯಾಪ್‌ಟಾಪ್ 7nm ಫ್ಯಾಬ್ರಿಕೇಶನ್ ಪ್ರೊಸೆಸ್ ಮೂಲಕ ತಯಾರಿಸಲಾಗಿರುವ ಇಂಟೆಲ್‌ನ 12 ನೇ-ಜನ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. i7 ಮತ್ತು i5 ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುವ ಈ ಲ್ಯಾಪ್‌ಟಾಪ್ 16GB RAM ಮತ್ತು 1TB ಮೆಮೊರಿಯನ್ನು ಹೊಂದಿದೆ. ಗೇಮಿಂಗ್‌ಗಾಗಿ, ವಿಸಿ ಕೂಲಿಂಗ್ ಟೆಕ್ನಾಲಜಿಯನ್ನು ಒಳಗೊಂಡಿರುವ ಐಸ್ ಸ್ಟಾರ್ಮ್ ಕೂಲಿಂಗ್ ಸಿಸ್ಟಮ್ ಹಾಗೂ ಹೆಚ್ಚಿನ ಒತ್ತಡ ನಿಭಾಯಿಸುವುದಕ್ಕಾಗಿ ಡ್ಯುಯಲ್ ಫ್ಯಾನ್‌ಗಳನ್ನು ನೀಡಲಾಗಿದೆ. ಇನ್ನು ಈ ಟೆಕ್ನೋ ಮೆಗಾಬುಕ್ S1 ಲ್ಯಾಪ್‌ಟಾಪ್‌ನಲ್ಲಿ 65W GaN ವೇಗದ ಚಾರ್ಜರ್‌ನೊಂದಿಗೆ ಜೋಡಿಸಲಾಗಿರುವ 70Whr ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು 12 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಟೆಕ್ನೋ ಮೆಗಾಬುಕ್ S1 ಲ್ಯಾಪ್‌ಟಾಪ್‌ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6, TF ಕಾರ್ಡ್ ರೀಡರ್, 3.5mm ಜ್ಯಾಕ್, ಎರಡು USB 3.1-A ಪೋರ್ಟ್‌ಗಳು, USB 4.0 ಪೋರ್ಟ್, HDMI 2.0 ಪೋರ್ಟ್ ಮತ್ತು USB ಟೈಪ್- ಸಿ ಸೇರಿದಂತೆ ಒಟ್ಟು ಏಳು ಪೋರ್ಟ್‌ಗಳನ್ನು ನೀಡಲಾಗಿದೆ. ಸಿನಿಮೀಯ ಸೌಂಡ್ ಸಿಸ್ಟಂಗಾಗಿ DTS:X ಅಲ್ಟ್ರಾ ಜೊತೆಗೆ ಒಟ್ಟು ಆರು ಸ್ಪೀಕರ್‌ಗಳಿವೆ. AI ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಟೆಕ್ನಾಲಜಿಯೊಂದಿಗೆ ಡ್ಯುಯಲ್ ಮೈಕ್ ಹೊಂದಿರುವ ಈ ಲ್ಯಾಪ್‌ಟಾಪ್ ಕಾನ್ಫರೆನ್ಸ್ ಕರೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೇ, ಈ ಟೆಕ್ನೋ ಮೆಗಾಬುಕ್ S1 ಲ್ಯಾಪ್‌ಟಾಪ್‌ನಲ್ಲಿ AI ಆಧಾರಿತ ಆಂಟಿ-ಪೀಪ್ ಡಿಟೆಕ್ಷನ್‌ನಂತಹ ಅಪ್ಡೇಟ್ ಫೀಚರ್ಸ್‌ಗಳೊಂದಿಗೆ ಸ್ಮಾರ್ಟ್ AI ಕ್ಯಾಮೆರಾವನ್ನು ಸಹ ತರಲಾಗಿದೆ.
'ಟೆಕ್ನೋ ಮೆಗಾಬುಕ್ S1' ಲ್ಯಾಪ್‌ಟಾಪ್ ಬೆಲೆ ಎಷ್ಟು?
ನೂತನ 'ಟೆಕ್ನೋ ಮೆಗಾಬುಕ್ S1' ಲ್ಯಾಪ್‌ಟಾಪ್ 16GB RAM ಮತ್ತು 1TB SSD ಸ್ಟೋರೇಜ್ ಮತ್ತು 16GB RAM ಮತ್ತು 512GB ಸ್ಟೋರೇಜ್ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದೆ. ಪ್ರಸ್ತುತ ವಿಶ್ವ ಮಾರುಕಟ್ಟೆಯಲ್ಲಿ ಡಾಲರ್ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಲ್ಯಾಪ್‌ಟಾಪ್‌ನ ಎರಡೂ ಮಾದರಿಗಳು ಕ್ರಮವಾಗಿ 1599 USD (ಅಂದಾಜು 1,31,770 ರೂ.) ಮತ್ತು 1699 USD (ಅಂದಾಜು 1,40,000 ರೂ.) ಬೆಲೆ ಹೊಂದಿವೆ. ಇನ್ನು ಭಾರತದಲ್ಲಿ ಈ ಲ್ಯಾಪ್‌ಟಾಪ್ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಕಂಪೆನಿಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
The Tecno Megabook S1 Is A Super Thin And Light 15,6 Laptop 120hz Launched.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm