ಬ್ರೇಕಿಂಗ್ ನ್ಯೂಸ್
27-12-22 06:52 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ Redmi ಪರಿಚಯಿಸಿದ್ದ ಜನಪ್ರಿಯ ಸ್ಮಾರ್ಟ್‌ಫೋನ್ Redmi 11 Prime 5G ಸಾಧನದ ಬೆಲೆ ಕೇವಲ ಎರಡೇ ತಿಂಗಳಲ್ಲಿ ಇಳಿಕೆಯಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಬಿಡುಗಡೆಯಾಗಿರುವ Redmi 11 Prime 5G ಸ್ಮಾರ್ಟ್‌ಫೋನಿನ ಎರಡೂ ಮಾದರಿಗಳ ಬೆಲೆಗಳು ಕ್ರಮವಾಗಿ 1 ಸಾವಿರದಷ್ಟು ಇಳಿಕೆಯಾಗಿದ್ದು, ಬೆಲೆ ಇಳಿಕೆಯ ನಂತರ 12,999 ರೂ.ಗಳ ಆರಂಭಿಕ ಬೆಲೆಯಲ್ಲಿ Redmi 11 Prime 5G ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. 4GB RAM + 64GB ಸ್ಟೋರೇಜ್ ಮಾದರಿಯ Redmi 11 Prime 5G ಸ್ಮಾರ್ಟ್‌ಫೋನ್ ಬೆಲೆ 13,999 ರೂ.ಗಳಿಂದ 12,999 ರೂ.ಗೆ ಇಳಿಕೆಯಾಗಿದೆ. ಹಾಗೆಯೇ 6GB RAM + 128GB ಸ್ಟೋರೇಜ್ ಮಾದರಿಯ ಫೋನ್ 15,999 ರೂ.ಗಳಿಂದ 14,999 ರೂ.ಗೆ ಇಳಿಕೆಯಾಗಿದೆ. ಹೆಚ್ಚುವರಿಯಾಗಿ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿವೆ.
ಪ್ರಸ್ತುತ ಬೆಲೆ ಇಳಿಕೆಯ ನಂತರವೂ Redmi 11 Prime 5G ಸ್ಮಾರ್ಟ್‌ಫೋನ್ ಮೇಲೆ ICICI ಬ್ಯಾಂಕ್ ಗ್ರಾಹಕರು 1,000 ತ್ವರಿತ ರಿಯಾಯಿತಿ ಪಡೆಯಬಹುದು. ಹಾಗೆಯೇ, HDFC ಬ್ಯಾಂಕ್ ಗ್ರಾಹಕರಿಗೆ 750 ತ್ವರಿತ ರಿಯಾಯಿತಿ ಲಭ್ಯವಿದೆ. ಗ್ರಾಹಕರು Mi.com ಮತ್ತು Amazon ತಾಣಗಳಲ್ಲಿ Redmi 11 Prime 5G ಸ್ಮಾರ್ಟ್‌ಫೋನನ್ನು ಮೆಡೋ ಗ್ರೀನ್, ಕ್ರೋಮ್ ಸಿಲ್ವರ್ ಮತ್ತು ಥಂಡರ್ ಬ್ಲ್ಯಾಕ್ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ದೇಶದಲ್ಲಿ ವಾಟರ್‌ಡ್ರಾಪ್-ಶೈಲಿಯ ಡಿಸ್‌ಪ್ಲೇ ನಾಚ್ ವಿನ್ಯಾಸದಲ್ಲಿ ಬಿಡುಗಡೆಯಾಗಿದ್ದ ಈ Redmi 11 Prime 5G ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹಾಗೂ 18W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Redmi 11 Prime 5G ಸ್ಮಾರ್ಟ್‌ಫೋನಿನ ವಿಶೇಷಣಗಳು
ನೂತನ Redmi 11 Prime 5G ಸ್ಮಾರ್ಟ್‌ಫೋನ್ 6.58-ಇಂಚಿನ ಫುಲ್-HD+ (1,080x2,400 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇಯನ್ನು ಹೊಂದಿದೆ. 20.7:9 ಆಕಾರ ಅನುಪಾತದಲ್ಲಿರುವ ಇದರ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್, 400 nits ಗರಿಷ್ಠ ಹೊಳಪು, 70 ಪ್ರತಿಶತ ವ್ಯಾಪ್ತಿಯ NTSC ಕಲರ್ ಗ್ಯಾಮೆಟ್ ವೈಶಿಷ್ಟ್ಯಗಳನ್ನು ಹೊಂದಿರುವ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ಯಾನೆಲ್‌ನಿಂದ ರಕ್ಷಿಸಲ್ಪಟ್ಟಿದೆ. ಹುಡ್ ಅಡಿಯಲ್ಲಿ, Mali-G57 GPU ಜೊತೆಗೆ 6GB ವರೆಗೆ LPDDR4x RAM ಅನ್ನು ಜೋಡಲಾಗಿರುವ ಆಕ್ಟಾ-ಕೋರ್ 7nm ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿರುವ ಈ ಸ್ಮಾರ್ಟ್‌ಫೋನಿಲ್ಲಿ 128GB ವರೆಗೆ UFS 2.2 ಆನ್‌ಬೋರ್ಡ್ ಮೆಮೊರಿ ಇದ್ದು, ಇದರ ಆಂತರಿಕ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು.
ಫೋಟೊಗಳು ಮತ್ತು ವಿಡಿಯೋಗಳಿಗಾಗಿ, Redmi Prime 5G ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ತರಲಾಗಿದೆ. ಇದು f/1.8 ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು f/2.4 ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಪೋಟ್ರೇಟ್ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, f/2.0 ಲೆನ್ಸ್‌ನೊಂದಿಗೆ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವನ್ನು ಅಳವಡಿಸಲಾಗಿದೆ. Redmi 11 Prime 5G ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 802.11 a/b/g/n/ac, USB OTG, IR ಬ್ಲಾಸ್ಟರ್, ಬ್ಲೂಟೂತ್ v5.1, GPS/ A-GPS, USB ಟೈಪ್-C ಸಂಪರ್ಕಗಳ ಜೊತೆಗೆ 3.5 ಹೆಡ್‌ಫೋನ್ ಎಂಎಂ ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯವನ್ನು ಸಹ ನಾವು ನೋಡಬಹುದು.
ಬ್ಯಾಟರಿ ವಿಭಾಗದಲ್ಲಿ, Redmi Prime 5G ಸ್ಮಾರ್ಟ್‌ಫೋನಿನಲ್ಲಿ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ನೀಡಲಾಗಿದೆ. ಆದರೆ, ಇದರ ಬಂಡಲ್ ಚಾರ್ಜರ್ 22.5W ವರೆಗೆ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಡ್ಯುಯಲ್-ಸಿಮ್ (ನ್ಯಾನೋ) Redmi 11 Prime 5G ಫೋನ್ ಆಂಡ್ರಾಯ್ಡ್ 12 ನಲ್ಲಿ MIUI 13 ಜೊತೆಗೆ ರನ್ ಆಗುತ್ತದೆ. ಇನ್ನುಳಿದಂತೆ, IP52 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರು-ನಿರೋಧಕ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕದ ಜೊತಗೆ ಫೇಸ್ ಅನ್‌ಲಾಕ್ ವೈಶಿಷ್ಟ್ಯ, 1.7W ಔಟ್‌ಪುಟ್‌ನೊಂದಿಗೆ ಜೋಡಿಸಲಾದ ಸ್ಪೀಕರ್ ಹಾಗೂ ಅಕ್ಸೆಲೆರೊಮೀಟರ್, ಇ-ದಿಕ್ಸೂಚಿ, ಸುತ್ತುವರಿದ ಬೆಳಕಿನ ಸಂವೇದಕ ಮತ್ತು ಸಾಮೀಪ್ಯ ಸಂವೇದಕಗಳನ್ನು Redmi Prime 5G ಸ್ಮಾರ್ಟ್‌ಫೋನಿನಲ್ಲಿ ನಾವು ನೋಡಬಹುದು.
Redmi 11 Prime 5g Price In India Cut By Rs 1,000.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 03:23 pm
HK News Desk
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
05-08-25 04:29 pm
Mangalore Correspondent
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm