ಬ್ರೇಕಿಂಗ್ ನ್ಯೂಸ್
28-12-22 06:52 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಿಯೋಮಿ ಚೀನಾ ಮಾರುಕಟ್ಟೆಯಲ್ಲಿಂದು ತನ್ನ ವಿನೂತನ Redmi Buds 4 Lite ಇಯರ್‌ಬಡ್ಸ್ ಸಾಧನವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಪರಿಚಯಿಸಿದೆ. ಬಹುನಿರೀಕ್ಷಿತ Redmi k60 ಸರಣಿ ಸ್ಮಾರ್ಟ್‌ಫೋನ್‌ಗಳು ಮತ್ತು Redmi Band 2 ವಾಚ್ ಸಾಧನಗಳ ಜೊತೆಗೆ ಇಂದು Redmi Buds 4 Lite ಇಯರ್‌ಬಡ್ಸ್ ಸಾಧನವು ಸಹ ಬಿಡುಗಡೆಗೊಂಡಿದ್ದು, ಇದು 12mm ಡ್ರೈವರ್ಸ್, ಬ್ಲೂಟೂತ್ 5.3 ಸಪೋರ್ಟ್ ಹಾಗೂ ನಾಯ್ಸ್ ರೆಡಕ್ಷನ್‌ನಂತಹ ವೈಶಿಷ್ಟ್ಯಗಳನ್ನು ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ಹೊಸ Redmi Buds 4 Lite ಇಯರ್‌ಬಡ್ಸ್ ಹೇಗಿದೆ?, ಮತ್ತು ಇದರ ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Redmi Buds 4 Lite ಇಯರ್‌ಬಡ್ಸ್ ಹೇಗಿದೆ?
ಶಿಯೋಮಿಯ ನೂತನ Redmi Buds 4 Lite ಇಯರ್‌ಬಡ್ಸ್ ಸಾಧನವು ಅತ್ಯಂತ ಹಗುರವಾದ ಹಾಫ್ ಇನ್ ಇಯರ್ ಡಿಸೈನ್ ವಿನ್ಯಾಸವನ್ನು ಹೊಂದಿದ್ದು, ಇದರಲ್ಲಿರುವ 3.9 ಗ್ರಾಂ ತೂಕದ ಪ್ರತಿ ಇಯರ್‌ಬಡ್‌ಗಳನ್ನು ಧರಿಸಲು ಆರಾಮದಾಯಕವಾಗಿರುವಂತೆ ನಿರ್ಮಿಸಲಾಗಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ. ಈ ಇಯರ್‌ಬಡ್‌ಗಳು 12mm ನಷ್ಟು ದೊಡ್ಡ ಡ್ರೈವರ್‌ಗಳನ್ನು ಹೊಂದಿದ್ದು, ಬಳಕೆದಾರರಿಗೆ ತಲ್ಲೀನಗೊಳಿಸುವ ಸೌಂಡ್ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಇತ್ತೀಚಿನ ಬ್ಲೂಟೂತ್ 5.3 ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಸಾಧನವು 10 ಮೀಟರ್ ಶ್ರೇಣಿಯಲ್ಲಿ ಕೆಲಸ ಮಾಡಲಿದ್ದು, ಬೆವರಿನ ಪ್ರತಿರೋಧಕ್ಕಕಾಗಿ IP54 ರೇಟಿಂಗ್ ಸಹ ಹೊಂದಿದೆ.
Redmi Buds 4 Lite ಇಯರ್‌ಬಡ್ಸ್ ಹೊಂದಿರುವ ನಾಯ್ಸ್ ರೆಡಕ್ಷನ್ ವೈಶಿಷ್ಟ್ಯವು ಕರೆಗಳನ್ನು ಮಾಡುವ ವೇಳೆ ಇತರೆ ಶಬ್ಧದ ಅಡೆತಡೆ ತಡೆದು ಉತ್ತಮ ಕರೆ ಅನುಭವ ನೀಡಲಿದೆ. ಇದರೊಂದಿಗೆ ಕರೆಗಳು, ಸಂಗೀತವನ್ನು ನಿಯಂತ್ರಿಸಲು ಮತ್ತು ಗೇಮಿಂಗ್ ಮೋಡ್ ಸಕ್ರೀಯಗೊಳಿಸಲು ಹಲವಾರು ಟಚ್ ಕಂಟ್ರೋಲ್ ಆಯ್ಕೆಗಳಿವೆ. ಈ ಇಯರ್‌ಬಡ್ಸ್‌ಗಳು ಒಂದು ಪೂರ್ಣ ಚಾರ್ಜ್‌ನಲ್ಲಿ 5 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ನೀಡಲಿವೆ. ಹಾಗೆಯೇ ಚಾರ್ಜಿಂಗ್ ಕೇಸ್‌ನ ಬ್ಯಾಟರಿ ಸಾಮರ್ಥ್ಯ ಒಂದು ಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 20 ಗಂಟೆಗಳ ವರೆಗೆ ಇರಲಿದೆ ಮತ್ತು MIUI ಆಧಾರಿತ ಶಿಯೋಮಿಯ ಎಲ್ಲಾ ಸಾಧನಗಳಿಗೆ ತ್ವರಿತ ಕನೆಕ್ಟಿವಿಟಿ ಹೊಂದುತ್ತದೆ ಎಂದು ಕಂಪೆನಿ ತಿಳಿಸಿದೆ.
Redmi Buds 4 Lite ಇಯರ್‌ಬಡ್ಸ್ ಬೆಲೆ?
ಪ್ರಸ್ತುತ ಚೀನಾದಲ್ಲಿ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿರುವ ಈ Redmi Buds 4 Lite ಇಯರ್‌ಬಡ್ಸ್ ಸಾಧನವನ್ನು 139 ಯುವಾನ್ (1,650ರೂ. ಗಳ) ಬೆಲೆಯಲ್ಲಿ ಮಾರಾಟಕ್ಕೆ ತರಲಾಗಿದೆ. ಗ್ರಾಹಕರು ಸನ್ನಿ ವೈಟ್, ಮಿಡ್‌ನೈಟ್ ಬ್ಲಾಕ್, ಸನ್‌ಸೆಟ್ ಆರೆಂಜ್ ಮತ್ತು ಟ್ರೆಂಡ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ Redmi Buds 4 Lite ಇಯರ್‌ಬಡ್ಸ್ ಸಾಧನನ್ನು ಖರೀದಿಸಬಹುದು. ಮತ್ತೊಂದು ಸಿಹಿಸುದ್ದಿ ಏನೆಂದರೆ, ಈ ಬಣ್ಣಗಳು ಭಾರತದ ಧ್ವಜದ ಬಣ್ಣಕ್ಕೆ ಹೋಲಿಕೆಯಾಗಲಿದ್ದು, ಭಾರತೀಯರಿಯನ್ನು ಸೆಳೆಯುವ ಸಲುವಾಗಿಯೇ ಈ ಸಾಧನವನ್ನು ರೂಪಿಸಿರುವಂತೆ ಕಾಣುತ್ತದೆ. ಆದರೆ, ಭಾರತದಲ್ಲಿ ಈ ಇಯರ್‌ಬಡ್ಸ್ ಬಿಡುಗಡೆ ಮಾಡುವ ಸಮಯದ ಬಗ್ಗೆ ಕಂಪೆನಿಯಿಂದ ಯಾವುದೇ ಮಾಹಿತಿ ದೊರೆತಿಲ್ಲ.
Redmi Buds 4 Lite With Up To 20 Hours Total Battery Life Announced.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm