ಶಿಯೋಮಿ Redmi Watch 3, Redmi Band 2 ಬಿಡುಗಡೆ: ಇಲ್ಲಿದೆ ಫುಲ್ ಡೀಟೇಲ್ಸ್!

29-12-22 07:05 pm       Source: Vijayakarnataka   ಡಿಜಿಟಲ್ ಟೆಕ್

Redmi Watch 2 ಉತ್ತರಾಧಿಕಾರಿಯಾಗಿ ಬಿಡುಗಡೆಯಾಗಿರುವ ಹೊಸ Redmi Watch 3 ಸಾಧನವು 1.75-ಇಂಚಿನ AMOLED ಸ್ಕ್ವೇರ್ ಡಿಸ್‌ಪ್ಲೇಯನ್ನು ಹೊಂದಿದೆ.

ಹೊಸ ವರ್ಷದ ಆರಂಭಕ್ಕೂ ಮುನ್ನವೇ ಟೆಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Xiaomi ತನ್ನ ಮುಂದಿನ ಸರಣಿ ಸ್ಮಾರ್ಟ್‌ವಾಚ್ ಮತ್ತು ಸ್ಮಾರ್ಟ್‌ಬ್ಯಾಂಡ್ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. Redmi Watch ಸರಣಿಯಲ್ಲಿ Redmi Watch 2 ಉತ್ತರಾಧಿಕಾರಿಯಾಗಿ ಹೊಸ Redmi Watch 3 ಸಾಧನವನ್ನು ಪರಿಚಯಿಸಲಾಗಿದ್ದು, ಈ ಸಾಧನವು ಕಳೆದ ಬಾರಿಗಿಂತ ಉತ್ತಮ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಗೆ ಬಂದಿದೆ. ಇತ್ತ Redmi Band ಸಾಧನದ ಉತ್ತರಾಧಿಕಾರಿಯಾಗಿ ಬಿಡುಗಡೆಯಾಗಿರುವ Redmi Band 2 ಸಾಧನವು ಈ ಹಿಂದಿನ ಮಾದರಿಗಿಂತ ಹಗುರವಾಗಿ ವಿನ್ಯಾಸಗೊಂಡಿದೆ. ಹಾಗಾದರೆ, Xiaomi ಪರಿಚಯಿಸಿರುವ ಹೊಸ Redmi Watch 3 ಮತ್ತು Redmi Band 2 ಸಾಧನಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

Redmi Watch 3 ಸಾಧನದ ವೈಶಿಷ್ಟ್ಯಗಳು
Redmi Watch 2 ಉತ್ತರಾಧಿಕಾರಿಯಾಗಿ ಬಿಡುಗಡೆಯಾಗಿರುವ ಹೊಸ Redmi Watch 3 ಸಾಧನವು 1.75-ಇಂಚಿನ AMOLED ಸ್ಕ್ವೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಯಾವಾಗಲೂ ಆನ್ ಡಿಸ್‌ಪ್ಲೇ ವೈಶಿಷ್ಟ್ಯವನ್ನು ಹೊಂದಿರುವ ಈ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್ ಮತ್ತು 600 nits ಬ್ರೈಟ್‌ನೆಸ್ ನೀಡುತ್ತದೆ. ಈ ಹೊಸ ಸ್ಮಾರ್ಟ್‌ವಾಚ್ 121 ವಿಭಿನ್ನ ವರ್ಕ್‌ಔಟ್ ಮೋಡ್‌ಗಳನ್ನು ಬೆಂಬಲಿಸುತ್ತದೆ ಮತ್ತು SpO2 ಮತ್ತು ಹಿಯರ್-ರೇಟ್ ಮಾನಿಟರ್‌ಗಳು ಹಾಗೂ GPS ನ್ಯಾವಿಗೇಷನ್ ಬೆಂಬಲವನ್ನು ಹೊಂದಿದೆ. ಇಷ್ಟೇ ಅಲ್ಲದೇ, ಕರೆಗಳನ್ನು ರಿಸೀವ್ ಮಾಡಲು (ಸ್ಟ್ಯಾಂಡ್ ಅಲೋನ್ ಕರೆಗೆ ಬೆಂಬಲವಿಲ್ಲ)ಅನುಮತಿಸುವ ವೈಶಿಷ್ಟ್ಯವನ್ನು ನೀಡಲಾಗಿದೆ. ಇನ್ನು ನೀರಿನ ಪ್ರತಿರೋಧಕ್ಕಾಗಿ 5ATM ರೇಟಿಂಗ್ ಹೊಂದಿರುವ ಈ ಸಾಧನವು ನೀರಿನಲ್ಲಿ 50 ಮೀಟರ್ ಆಳದವರೆಗೂ ಕಾ

Redmi Watch 3 and Redmi Band 2 launched: price, specifications

Redmi Band 2 ಸಾಧನದ ವೈಶಿಷ್ಟ್ಯಗಳು
Redmi Band ಸಾಧನದ ಉತ್ತರಾಧಿಕಾರಿಯಾಗಿ ಬಿಡುಗಡೆಯಾಗಿರುವ Redmi Band 2 ಸಾಧನವು ಈ ಬಾರಿ ದೊಡ್ಡದಾರ 1.47-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಕಳೆದ ಮಾದರಿ ಬ್ಯಾಂಡ್‌ಗಿಂತ ಶೇ 76% ರಷ್ಟು ದೊಡ್ಡದಾದ ಡಿಸ್‌ಪ್ಲೇ ಹೊತ್ತು ಈ ಹೊಸ Redmi Band 2 ಸಾಧನ ಬಿಡುಗಡೆಗೊಂಡಿದೆ. ಈ ಹೊಸ ಸ್ಮಾರ್ಟ್‌ಬ್ಯಾಂಡ್ 30 ವ್ಯಾಯಾಮ ಮಾದರಿಗಳನ್ನು ಬೆಂಬಲಿಸಲಿದೆ ಮತ್ತು ರಕ್ತದ ಆಮ್ಲಜನಕ ಮಾನಿಟರ್ ಜೊತೆಗೆ ಋತುಚಕ್ರದ ಟ್ರ್ಯಾಕರ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಈ ಹೊಸ Redmi Band 2 ಸಾಧನವು ಬ್ಯಾಟರಿಯು ಭಾರೀ ಬಳಕೆಯೊಂದಿಗೆ ಬಂದಿದೆ ಎಂದು ಕಂಪೆನಿ ತಿಳಿಸಿದ್ದು, ಭಾರೀ ಬಳಕೆಯೊಂದಿಗೆ ಆರು ದಿನಗಳು ಮತ್ತು ಮಧ್ಯಮ ಅಥವಾ ಕಡಿಮೆ ಬಳಕೆಯೊಂದಿಗೆ ಹದಿನಾಲ್ಕು ದಿನಗಳವರೆಗೆ Redmi Band 2 ಸಾಧನವು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.

Redmi Watch 3 and Redmi Band 2 with up to 14 Days Battery Life Launched:  Price, Specifications - MySmartPrice

Redmi Watch 3 ಮತ್ತು Redmi Band 2 ಬೆಲೆಗಳು.
Xiaomi ಕಂಪೆನಿ Redmi Watch 3 ಮತ್ತು Redmi Band 2 ಎರಡೂ ಸಾಧನಗಳನ್ನು ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಪರಿಚಯಿಸಿದೆ. ಚೀನಾದಲ್ಲಿ Redmi Band 2 ಸಾಧನವು CNY 159 (ಸುಮಾರು ರೂ 2,000) ಬೆಲೆಯನ್ನು ಹೊತ್ತು ಬಂದಿರ ಮತ್ತು ಹಸಿರು, ಪಿಂಕ್ ಗೋಲ್ಡ್, ಕಪ್ಪು, ತಿಳಿ ನೀಲಿ, ಗಾಢ ಹಸಿರು ಮತ್ತು ಬಿಳಿ ಬಣ್ಣದ ಹಲವು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇತ್ತ Redmi Watch 3 ಸಾಧನವನ್ನು ಚೀನಾದಲ್ಲಿ CNY 499 (ಸುಮಾರು ರೂ 6,000) ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದು ಕಪ್ಪು ಮತ್ತು ಬಿಳಿಯ ಕೇವಲ ಎರಡು ಬಣ್ಣಗಳಲ್ಲಿ ಮಾತ್ರ ಖರೀದಿಗೆ ದೊರೆಯಲಿದೆ. ಇನ್ನು ಈ ಎರಡೂ ಸಾಧನಗಳು ಭಾರತದ ಮಾರುಕಟ್ಟೆಗೆ ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆ ಇದೆಯಾದರೂ Xiaomi ಕಂಪೆನಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Xiaomi Redmi Watch 3, Band 2 Launched Check Price, Specifications.