ಬ್ರೇಕಿಂಗ್ ನ್ಯೂಸ್
04-01-23 06:33 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ OnePlus 11 5G ಸ್ಮಾರ್ಟ್‌ಫೋನ್ ಇಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಳೆದ ಹಲವು ತಿಂಗಳುಗಳಿಂದ ವದಂತಿಗಳಿಂದಲೇ ಸುದ್ದಿಯಾಗಿದ್ದ ಹೊಸ OnePlus 11 5G ಸ್ಮಾರ್ಟ್‌ಫೋನ್ ನಿರೀಕ್ಷೆಯತೆಯೇ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಮಾರುಕಟ್ಟೆಗೆ ಬಂದಿದ್ದು, 120Hz ರಿಫ್ರೆಶ್ ರೇಟ್ ಸಾಮರ್ಥ್ಯದ QHD+ E4 OLED ಡಿಸ್‌ಪ್ಲೇ, ಇತ್ತೀಚಿನ Snapdragon 8 Gen 2 ಪ್ರೊಸೆಸರ್, 16GB ವರೆಗಿನ RAM, 100W ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳಿಂದ ಸ್ಮಾರ್ಟ್‌ಫೋನ್ ಪ್ರಿಯರ ಗಮನಸೆಳೆದಿದೆ. ಹಾಗಾದರೆ, ಹೊಸ OnePlus 11 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಹೊಸ OnePlus 11 5G ಸ್ಮಾರ್ಟ್‌ಫೋನ್ ಹೇಗಿದೆ?
ನೂತನ OnePlus 11 5G ಸ್ಮಾರ್ಟ್‌ಫೋನ್ 1,440 x 3,216 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ ಹಾಗೂ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.7 ಇಂಚಿನ QHD+ E4 OLED ಡಿಸ್‌ಪ್ಲೇ ಹೊಂದಿದೆ. ಡಾಲ್ಬಿ ವಿಷನ್ ಬೆಂಬಲ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬಂದಿರುವ ಇದರ ಡಿಸ್‌ಪ್ಲೇಯು ಮೂರನೇ ತಲೆಮಾರಿನ ಲೋ-ಟೆಂಪರೇಚರ್ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ತಂತ್ರಜ್ಞಾನವನ್ನು ಆಧರಿಸಿದೆ. ಇದರ ಪ್ರತಿ ಇಂಚಿನ ಪಿಕ್ಸೆಲ್ ಸಾಂದ್ರತೆ 525ppi ಆಗಿದ್ದು, 50,00,000:1 ಕಾಂಟ್ರಾಸ್ಟ್ ಅನುಪಾತದಲ್ಲಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನಿನಲ್ಲಿ 1300 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಸಹ ಇದೆ ಎಂದು OnePlus ಕಂಪೆನಿ ತಿಳಿಸಿದೆ.
ಹುಡ್ ಅಡಿಯಲ್ಲಿ, ಇತ್ತೀಚಿನ Snapdragon 8 Gen 2 ಪ್ರೊಸೆಸರ್ ಹೊಂದಿರುವ ಹೊಸ OnePlus 11 5G ಸ್ಮಾರ್ಟ್‌ಫೋನ್ 12GB + 256GB, 12GB + 512GB ಮತ್ತು 16GB + 512GB ಆಂತರಿಕ ಸ್ಟೋರೇಜ್ ಮಾದರಿಗಳಲ್ಲಿ ಮಾರುಕಟ್ಟೆಗೆ ಬಂದಿದೆ. ಹೆಚ್ಚಿನ ಫ್ರೇಮ್ ದರದ ಕಸ್ಟಮ್ ಗ್ರಾಫಿಕ್ಸ್ ಎಂಜಿನ್ ಒದಗಿಸುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಇದು ಎಂದು OnePlus ಕಂಪೆನಿ ಹೇಳಿಕೊಂಡಿದೆ. ಗೇಮ್‌ಗಳು ಯಾವ ಫ್ರೇಮ್ ದರವನ್ನು ಹೊಂದಿದ್ದರೂ ಸಹ, ಎಲ್ಲಾ ಗೇಮ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಸೆಕೆಂಡಿಗೆ 120 ಫ್ರೇಮ್‌ಗಳನ್ನು (FPS) ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಗೇಮಿಂಗ್ ಪ್ರಿಯರಿಗೆ ಅತ್ಯುತ್ತಮ ಅನುಭವ ದೊರೆಯುವ ಭರವಸೆಯನ್ನು ನೀಡಿದೆ.
ಕ್ಯಾಮೆರಾ ವಿಭಾಗದಲ್ಲಿ, OnePlus 11 5G ಸ್ಮಾರ್ಟ್‌ಫೋನ್ ಬ್ಯಾಸಲ್‌ಬಾಲ್ಡ್ ಬ್ರ್ಯಾಂಡಿಂಗ್‌ನೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊತ್ತು ಬಂದಿದೆ. ಇದು ಸೋನಿ IMX890 ಸಂವೇದಕದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ, Sony IMX581 ಸಂವೇದಕದೊಂದಿಗೆ 48MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು Sony IMX709 ಸಂವೇದಕದೊಂದಿಗೆ 32MP RGBW ಟೆಲಿಫೋಟೋ ಕ್ಯಾಮೆರಾಗಳೊಂದಿಗೆ ಶಕ್ತವಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಸ್ಮಾರ್ಟ್‌ಫೋನಿನ ಮುಂಭಾದ ಎಡಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನುಳಿದಂತೆ ಇತ್ತೀಚಿನ ಎಲ್ಲಾ ಪ್ರಮುಖ ಕ್ಯಾಮೆರಾ ವೈಶಿಷ್ಟ್ಯಗಳು ಸ್ಮಾರ್ಟ್‌ಫೋನಿನಲ್ಲಿವೆ.
OnePlus 11 5G ಸ್ಮಾರ್ಟ್‌ಫೋನಿನಲ್ಲಿ 100W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಇದೆ. ಇದು 25 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ ಮತ್ತು 10-ನಿಮಿಷದ ಚಾರ್ಜ್ 50% ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 5G, ವೈಫೈ 6 802.11 a/b/g/n/ac/ax, ಬ್ಲೂಟೂತ್ 5.3 ಸೌಲಭ್ಯಗಳಿವೆ. ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಯುಎಸ್‌ಬಿ 2.0 ಟೈಪ್-ಸಿ ಪೋರ್ಟ್ ಇದ್ದರೆ, ಡಾಲ್ಬಿ ಅಟ್ಮೋಸ್ ಬೆಂಬಲದ ಸ್ಟಿರಿಯೋ ಸ್ಪೀಕರ್‌ಗಳನ್ನು ಸ್ಮಾರ್ಟ್‌ಫೋನಿನಲ್ಲಿ ತರಲಾಗಿದೆ. ಇನ್ನು ಈ ಫೋನ್ ಆಂಡ್ರಾಯ್ಡ್ 13 ನಲ್ಲಿ OS ನಲ್ಲಿ ಕಾರ್ಯನಿರ್ವಹಿಸಲಿದೆ.
OnePlus 11 5G ಸ್ಮಾರ್ಟ್‌ಫೋನಿನ ಬೆಲೆ ಎಷ್ಟು?
ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ OnePlus 11 5G ಸ್ಮಾರ್ಟ್‌ಫೋನಿನ 12GB + 256GB ಮಾದರಿಯು RMB 3999 (ಭಾರತದಲ್ಲಿ ಅಂದಾಜು 48,080 ರೂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದರ 12GB + 512GB ಮಾದರಿಯು RMB 4399 (ಭಾರತದಲ್ಲಿ ಅಂದಾಜು 52,890 ರೂ.) ಬೆಲೆಯಲ್ಲಿ ಹಾಗೂ 16GB + 512GB ಮಾದರಿಯು RMB 4899 (ಭಾರತದಲ್ಲಿ ಅಂದಾಜು 58,890 ರೂ.) ಬೆಲೆಯಲ್ಲಿ ಬಿಡುಗಡೆಯಾಗಿದೆ. ಕಪ್ಪು ಮತ್ತು ಹಸಿರು ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಿರುವ ಈ OnePlus 11 5G ಸ್ಮಾರ್ಟ್‌ಫೋನ್ ಚೀನಾದಲ್ಲಿ ಇಂದಿನಿಂದ ಖರೀದಿಗೆ ದೊರೆಯುತ್ತಿದೆ. ಇನ್ನು ನಾವೆಲ್ಲರೂ ಈಗಾಗಲೇ ತಿಳಿದಿರುವಂತೆ, ಮುಂದಿನ ತಿಂಗಳು ಫೆಬ್ರವರಿ 07 ರಂದು ಭಾರತದಲ್ಲಿ OnePlus 11 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಬಗ್ಗೆ ಕಂಪೆನಿ ದೃಢಪಡಿಸಿದೆ.
Oneplus 11 With Snapdragon 8 Gen2, 100w Charging Launched.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm