ಬ್ರೇಕಿಂಗ್ ನ್ಯೂಸ್
06-01-23 07:20 pm Source: Vijayakarnataka ಡಿಜಿಟಲ್ ಟೆಕ್
ಲ್ಯಾಪ್ಟಾಪ್ಗಳ ತಯಾರಿಕೆಯಲ್ಲಿ ಹೆಸರಾಂತ ಟೆಕ್ ಬ್ರ್ಯಾಂಡ್ Lenovo ತನ್ನ ಮೊಟ್ಟ ಮೊದಲ ಥಿಂಕ್ ಬ್ರ್ಯಾಂಡಿಂಗ್ ಸ್ಮಾರ್ಟ್ಫೋನ್ ಸಾಧನವನ್ನು ಇಂದು ಮಾರುಕಟ್ಟೆಗೆ ಪರಿಚಯಿಸಿದೆ. ಬ್ಯುಸಿನೆಸ್ ಗ್ರೆಡ್ ಗ್ರಾಹಕರಿಗಾಗಿ Lenovo ThinkPhone ಹೆಸರಿನಲ್ಲಿ ಈ ಹೊಸ ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಲಾಗಿದ್ದು, ಈ ಸ್ಮಾರ್ಟ್ಫೋನಿನಲ್ಲಿ ಬಳಕೆದಾರರ ಸೂಕ್ಷ್ಮ ಡೇಟಾವನ್ನು ಪ್ರೊಟೆಕ್ಟ್ ಮಾಡುವುದಕ್ಕಾಗಿ ವಿಶೇಷ Moto KeySafe ವೈಶಿಷ್ಟ್ಯ ಸೇರಿದಂತೆ, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 144Hz ರಿಫ್ರೆಶ್ ರೇಟ್ ಮತ್ತು HDR10+ ಬೆಂಬಲದಂತಹ ಪ್ರಮುಖ ವೈಶಿಷ್ಟ್ಯಗಳನ್ನು ತರಲಾಗಿದೆ. ಹಾಗಾದರೆ, Lenovo ಕಂಪೆನಿಯ ಮೊದಲ ThinkPhone ಬ್ರ್ಯಾಂಡಿಂಗ್ ಸ್ಮಾರ್ಟ್ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
ಹೊಸ Lenovo ThinkPhone ಸ್ಮಾರ್ಟ್ಫೋನ್ ಹೇಗಿದೆ?
ನೂತನ ThinkPhone ಸಾಧನವು ಮುಂಭಾಗದ ಕೇಂದ್ರೀಕೃತ ಪಂಚ್ ಹೋಲ್ ನಾಚ್ ಹೊಂದಿದ್ದರೆ, ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರುವ ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಈ ಹೊಸ ThinkPhone ಸಾಧನವು ಫುಲ್ HD+ (2400 × 1080 ಪಿಕ್ಸೆಲ್) ರೆಸಲ್ಯೂಶನ್ ಸಾಮರ್ಥ್ಯದ poLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ರೇಟ್ ಮತ್ತು HDR10+ ಬೆಂಬದ ವೈಶಿಷ್ಟ್ಯಗಳೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಲೇಯರ್ ಒಳಗೊಂಡಿದೆ. ಹುಡ್ ಅಡಿಯಲ್ಲಿ, 12GB RAM ಮತ್ತು 512GB ಸ್ಟೋರೇಜ್ ಜೊತೆಗೆ ಜೋಡಿಸಲಾದ ಶಕ್ತಿಯು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ Gen 1SoC ಪ್ರೊಸೆಸರ್ ಮತ್ತು Adreno 730 GPU ಹೊಂದಿರುವ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ.
ಮೊದಲೇ ಹೇಳಿದಂತೆ, ಈ ಹೊಸ ThinkPhone ಸಾಧನವು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ನೊಂದಿಗೆ 50MP ಪ್ರಾಥಮಿಕ ಲೆನ್ಸ್ ಜೊತೆಗೆ 13MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಈ ಸ್ಮಾರ್ಟ್ಫೋನಿನಲ್ಲಿ 32MP ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ThinkPhone ಸಾಧನವು 68W ವೇಗದ ಚಾರ್ಜಿಂಗ್ ಮ್ತತು 15W ವರೆಗೆ ವಾಯರ್ಲೆಸ್ ಚಾರ್ಜಿಂಗ್ ಬೆಂಬಲವಿರುವ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇನ್ನುಳಿದಂತೆ, USB 3.1 ಟೈಪ್-ಸಿ ಪೋರ್ಟ್ ಡಿವೈಸ್ ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು ಡಾಲ್ಬಿ ಅಟ್ಮಾಸ್ ಆಡಿಯೊ ವೈಶಿಷ್ಟ್ಯಗಳ ಜೊತೆಗೆ Moto KeySafe ಸೆಕ್ಯುರಿಟಿ ವೈಶಿಷ್ಟ್ಯವಿದೆ.
ಥಿಂಕ್2 ಥಿಂಕ್ ಕನೆಕ್ಟ್ ಫೀಚರ್!
ನೂತನ ThinkPhone ಸಾಧನವು ಥಿಂಕ್ಫೋನ್ ಮತ್ತು ಥಿಂಕ್ಪ್ಯಾಡ್ ಲ್ಯಾಪ್ಟಾಪ್ಗಳ ನಡುವೆ ತಡೆರಹಿತ ಏಕೀಕರಣವನ್ನು ಒದಗಿಸುವ ಹೊಸ ಥಿಂಕ್2 ಥಿಂಕ್ ಕನೆಕ್ಟ್ ಫೀಚರ್ ಹೊಂದಿದೆ. ಇದರಿಂದ ಥಿಂಕ್ಪ್ಯಾಡ್ ಬಳಕೆದಾರರು ಥಿಂಕ್ ಲ್ಯಾಪ್ಟಾಪ್ಗಳ ಮೂಲಕ ವೀಡಿಯೊ ಕರೆಗಳಿಗಾಗಿ ಥಿಂಕ್ಫೋನ್ ಅನ್ನು ವೆಬ್ಕ್ಯಾಮ್ನಂತೆ ಬಳಸಬಹುದು. ಬಳಕೆದಾರರು ತಮ್ಮ ThinkPad ಪರದೆಯ ಮೇಲೆ ತಮ್ಮ ಥಿಂಕ್ಫೋನ್ನಲ್ಲಿ ಸ್ಥಾಪಿಸಲಾದ Android ಅಪ್ಲಿಕೇಶನ್ ರನ್ ಮಾಡುವ ಆಯ್ಕೆಹೊಂದಿರುತ್ತಾರೆ. ಇಷ್ಟೇ ಅಲ್ಲದೇ, ThinkPhone ಸಾಧನವು ಬಳಕೆದಾರರಿಗೆ ಅತ್ಯಂತ ನಿರ್ಣಾಯಕ ವ್ಯಾಪಾರ ಮತ್ತು ಅಪ್ಲಿಕೇಶನ್ಗಳನ್ನು ಒಂದು ಕ್ಲಿಕ್ನಲ್ಲಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಮತ್ತು ಈ ಪೋನ್ IP68 ರೇಟೆಡ್ ಧೂಳು ಮತ್ತು ನೀರು ನಿರೋಧಕವಾಗಿದೆ ಎಂದು ಕಂಪೆನಿ ತಿಳಿಸಿದೆ.
ಹೊಸ Lenovo ThinkPhone ಸ್ಮಾರ್ಟ್ಫೋನ್ ಲಭ್ಯತೆ
ಇಂದು ಮಾರುಕಟ್ಟೆಗೆ ಪರಿಚಯಿಸಲಾಗಿರುವ ಹೊಸ ThinkPhone ಸ್ಮಾರ್ಟ್ಫೋನ್ ಸಾಧನದ ಬೆಲೆಯನ್ನು ಬೆಲೆಯನ್ನು Lenovo ಕಂಪೆನಿ ಇನ್ನೂ ಪ್ರಕಟಿಸಿಲ್ಲ. ಆದರೆ, ಶೀಘ್ರದಲ್ಲೇ ಈ ಸ್ಮಾರ್ಟ್ಫೋನ್ ಯುಎಸ್, ಯುರೋಪ್, ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಮುಂಬರುವ ತಿಂಗಳುಗಳಲ್ಲಿ ಏಷ್ಯಾದಾದ್ಯಂತ ಆಯ್ದ ದೇಶಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಈ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ಕಂಪೆನಿಯಿಂದ ನಿರೀಕ್ಷಿಸಲಾಗಿದೆ.
Lenovo Thinkphone With Qualcomm Snapdragon 8+ Gen 1 Soc Launched Specifications, Features.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 06:54 pm
Mangalore Correspondent
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
17-09-25 06:04 pm
Mangalore Correspondent
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm