ಬಹುನೀರಿಕ್ಷಿತ ಯಮಹಾ ಆಗುರ್ ಬಿಡುಗಡೆ: ಏನೆಲ್ಲಾ ವಿಶೇಷತೆಯಿದೆ?

09-01-23 07:01 pm       Source: Drive Spark   ಡಿಜಿಟಲ್ ಟೆಕ್

ಪ್ರಮುಖ ಜಪಾನೀಸ್ ದ್ವಿಚಕ್ರ ವಾಹನ ತಯಾರಿಕ ಕಂಪನಿ ಯಮಹಾ ತೈವಾನ್‌ನಲ್ಲಿ 'ಆಗುರ್' ಎಂಬ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ಪ್ರಮುಖ ಜಪಾನೀಸ್ ದ್ವಿಚಕ್ರ ವಾಹನ ತಯಾರಿಕ ಕಂಪನಿ ಯಮಹಾ ತೈವಾನ್‌ನಲ್ಲಿ 'ಆಗುರ್' ಎಂಬ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಯಮಹಾ ಏರಾಕ್ಸ್‌ 155 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಜೊತೆಗೆ ನೂತನ ಸ್ಕೂಟರ್ ಆಕರ್ಷಕ ಲುಕ್ ಹೊಂದಿದೆ.

ಭಾರತದಲ್ಲಿ ಮಾರಾಟದಲ್ಲಿರುವ ಯಮಹಾ ಏರಾಕ್ಸ್‌ಗೆ ಹೋಲಿಕೆ ಮಾಡಿದರೆ, ಹೊಸ ಸ್ಕೂಟರ್ ಲಿಕ್ವಿಡ್ ಕೂಲ್ಡ್ 155 ಸಿಸಿ ಎಂಜಿನ್‌ ಹೊಂದಿದೆ. ಆದರೆ ಯಮಹಾದ ತೈವಾನ್ ವೆಬ್‌ಸೈಟ್, ಪವರ್ ಹಾಗೂ ಟಾರ್ಕ್ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ. ಇದು ಏರಾಕ್ಸ್‌ ಉತ್ಪಾದಿಸುವ 15hp ಪವರ್ ಮತ್ತು 13.9Nm ಪೀಕ್ ಟಾರ್ಕ್ ಗಿಂತ ತುಂಬಾ ಹೆಚ್ಚಿರಬಹುದು. ಏರಾಕ್ಸ್‌ 5.5-ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, ಈ ನೂತನ ಆಗುರ್ ದೊಡ್ಡ 6.1-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಪಡೆದುಕೊಂಡಿದೆ. 132 ಕೆ.ಜಿ ತೂಕವಿದ್ದು, ಇದು ಏರಾಕ್ಸ್‌ಗಿಂತ 6 ಕೆ.ಜಿ ಹೆಚ್ಚಿದೆ.

Yamaha Augur launched, gets same engine as Aerox | Autocar India

ಆಗುರ್‌ ನೋಡಲು ತುಂಬಾ ಆಕರ್ಷಕವಾಗಿ ಕಾಣಲಿದ್ದು, ಸೆಂಟರ್ LED ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಅದು, ಕವಾಸಕಿ H2 ಸೂಪರ್‌ಬೈಕ್‌ನಂತೆಯೇ ಕಾಣುತ್ತದೆ. ಇತರೆ ಪ್ರೀಮಿಯಂ ವೈಶಿಷ್ಟ್ಯಗಳಾದ 4.3-ಇಂಚಿನ TFT ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟ್ದ್ ಮತ್ತು ಸಂಪೂರ್ಣ ಕೀಲೆಸ್ ಪಂಕ್ಷನ್ ಅನ್ನು ಒಳಗೊಂಡಿದ್ದು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಎಬಿಎಸ್‌ ಅನ್ನು ಹೊಂದಿದೆ. ಆದಾಗ್ಯೂ, ಈ ಎಬಿಎಸ್‌ ಸಿಂಗಲ್ ಅಥವಾ ಡ್ಯುಯಲ್ ಚಾನೆಲ್ ಸಿಸ್ಟಮ್ ಎಂಬುದನ್ನು ವೆಬ್‌ಸೈಟ್ ನಲ್ಲಿ ತಿಳಿಸಲಾಗಿಲ್ಲ. ನೂತನ ಆಗುರ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಆದ್ದರಿಂದ, ಡ್ಯುಯಲ್ ಚಾನೆಲ್ ಎಬಿಎಸ್ ಜೊತೆ ಬರುವ ಸಾಧ್ಯತೆಯಿದೆ. ಯಮಹಾ ಆಗುರ್ ಸ್ಕೂಟರ್ ಏರೋಕ್ಸ್‌ಗಿಂತ ಹೆಚ್ಚು ದುಬಾರಿಯಾಗಿದೆ (ರೂ. 1.4 ಲಕ್ಷ). ಯಮಹಾ ಹೊಸ ಆಗುರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೆ, ಎಕ್ಸ್ ಶೋರೂಂ ಬೆಲೆ ಸುಮಾರು ರೂ.1.6 - ರೂ.1.8 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್ ಖರೀದಿದಾರರಿಗೆ ಇಷ್ಟವಾಗಬಹುದು.

ಅಲ್ಲದೆ, ಯಮಹಾ ಏರೋಕ್ಸ್‌, 155ಸಿಸಿ BS6 ಎಂಜಿನ್‌ ಹೊಂದಿದ್ದು, ಇದು 14.79 bhp ಪವರ್ ಮತ್ತು 13.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್ ಗಳೊಂದಿಗೆ, ಯಮಹಾ ಏರಾಕ್ಸ್ 155 ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಖರೀದಿಗೆ ಲಭ್ಯವಿದೆ. ಈ ಏರೋಕ್ಸ್‌ 155 ಬೈಕ್, 126 ಕೆಜಿ ತೂಕವಿದ್ದು, 5.5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

Yamaha Augur 2023 launch

ಯಮಹಾ ಮೋಟಾರ್ ಇಂಡಿಯಾ ತಯಾರಿಸಿರುವ ಈ ಮ್ಯಾಕ್ಸಿ-ಸ್ಕೂಟರ್ ಏರೋಕ್ಸ್‌, ಒಂದು ರೂಪಾಂತರ ಹಾಗೂ ಎರಡು ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲಿಯನ್. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಸ್ಕೂಟರ್‌ನ ಸೀಮಿತ ಆವೃತ್ತಿಯಾದ MotoGP ರೂಪಾಂತರವನ್ನು ಸಹ ನೀಡುತ್ತದೆ. ಇದು ಹೆಚ್ಚಿನ ಯುವ ಖರೀದಿದಾರರನ್ನು ಆಕರ್ಷಿಸಲು ಯಮಹಾ ಕಂಪನಿಗೆ ಸಹಾಯ ಮಾಡಿದ್ದು, ಭಾರತದಲ್ಲಿ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುತ್ತಿರುವ ಯಮಹಾ ಏರಾಕ್ಸ್ 155, ಏಪ್ರನ್-ಮೌಂಟೆಡ್ ಟ್ವಿನ್-ಪಾಡ್ ಹೆಡ್‌ಲೈಟ್ ಸೆಟಪ್, ಸ್ಪ್ಲಿಟ್-ಸ್ಟೈಲ್ ಫುಟ್‌ಬೋರ್ಡ್, ಸ್ಟೆಪ್ - ಅಪ್ ಸೀಟ್, ದೊಡ್ಡ 24.5-ಲೀಟರ್ ಅಂಡರ್-ಸೀಟ್ ಸ್ಟೋರೇಜ್, ಐಚ್ಛಿಕ USB ಚಾರ್ಜರ್‌ನೊಂದಿಗೆ ಫ್ರಂಟ್ ಪಾಕೆಟ್ ಮತ್ತು ಬಾಡಿ ಕಲರ್ ಅಲಾಯ್ ವೀಲ್ಸ್ ಅನ್ನು ಹೊಂದಿದೆ. ಅಲ್ಲದೆ, ಎಲ್ಇಡಿ ಹೆಡ್ ಲೈಟ್, ಮುಂಭಾಗದಲ್ಲಿ ಎಲ್ಇಡಿ ಪೊಸಿಷನ್ ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ ಅನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಇದರ ಜೊತೆಗೆ ಬ್ಲೂಟೂತ್-ಆಕ್ಟಿವೇಟೆಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿಫಂಕ್ಷನ್ ಕೀ, ಆಟೋಮೆಟಿಕ್ ಸ್ಟಾರ್ಟ್ ಮತ್ತು ಸ್ಟಾಪ್ ಸಿಸ್ಟಮ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಫಂಕ್ಷನ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್‌ನಲ್ಲಿರುವ ಹಾರ್ಡ್‌ವೇರ್ ಸಸ್ಪೆಷನ್ ಕಾರ್ಯಗಳನ್ನು ನಿರ್ವಹಿಸಲು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಟ್ವಿನ್-ಸೈಡೆಡ್ ರಿಯರ್ ಸ್ಪ್ರಿಂಗ್‌ಗಳನ್ನು ಒಳಗೊಂಡಿದೆ. ಬ್ರೇಕಿಂಗ್ ಸೆಟಪ್ ಬರುವುದಾದರೆ, ಫ್ರಂಟ್ 230 ಎಂಎಂ ಸಿಂಗಲ್ ಡಿಸ್ಕ್ ಮತ್ತು ರೇರ್ 130 ಎಂಎಂ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ.

Two wheelers 2023 much awaited yamaha augur launch whats so special.