ಮೊಟೊರೊಲಾದಿಂದ ಮತ್ತೊಂದು ಅಚ್ಚರಿಯ ಸ್ಮಾರ್ಟ್‌ಫೋನ್‌ ಬಿಡುಗಡೆ! ಹೇಗಿದೆ ಫೀಚರ್ಸ್‌!

09-01-23 07:11 pm       Source: Giizbot   ಡಿಜಿಟಲ್ ಟೆಕ್

ಮೊಟೊರೊಲಾ ಕಂಪೆನಿ ಭಾರತದಲ್ಲಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೊನ್‌ ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಮೊಟೊರೊಲಾ ಎಡ್ಜ್‌ 30 ಫ್ಯೂಷನ್‌ ಸ್ಮಾರ್ಟ್‌ಫೋನ್‌ನ ಸ್ಪೇಷಲ್‌ ಎಡಿಷನ್‌ ವಿವಾ ಮಗೆಂಟಾವನ್ನು ಬಿಡುಗಡೆ ಮಾಡಿದೆ.

ಮೊಟೊರೊಲಾ ಕಂಪೆನಿ ಭಾರತದಲ್ಲಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೊನ್‌ ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಮೊಟೊರೊಲಾ ಎಡ್ಜ್‌ 30 ಫ್ಯೂಷನ್‌ ಸ್ಮಾರ್ಟ್‌ಫೋನ್‌ನ ಸ್ಪೇಷಲ್‌ ಎಡಿಷನ್‌ ವಿವಾ ಮಗೆಂಟಾವನ್ನು ಬಿಡುಗಡೆ ಮಾಡಿದೆ. ಅಂದರೆ ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಪೇಷಲ್‌ ಎಡಿಷನ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇನ್ನು ಈ ಸೀಮಿತ ಆವೃತ್ತಿಯು ಭಾರತದಲ್ಲಿ 39,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಹೌದು, ಮೊಟೊರೊಲಾ ಕಂಪೆನಿ ಹೊಸ ಮೊಟೊರೊಲಾ ಎಡ್ಜ್‌ 30 ಫ್ಯೂಷನ್‌ ಸ್ಪೇಷಲ್‌ ಎಡಿಷನ್‌ ಅನ್ನು ಪರಿಚಯಿಸಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 888+ 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಜೊತೆಗೆ 4400mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಮೊಟೊ ಎಡ್ಜ್‌ 30 ಫ್ಯೂಷನ್‌ ಸ್ಪೇಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ pOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಇದು HDR10+ ಮತ್ತು 144Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಈ ಡಿಸ್‌ಪ್ಲೇ ಸ್ಕ್ರೀನ್-ಟು-ಬಾಡಿ 91.89% ಅನುಪಾತವನ್ನು ಒಳಗೊಂಡಿದೆ.

motorola edge 30 fusion viva magenta launch india specifications features  flipkart

ಪ್ರೊಸೆಸರ್‌ ಯಾವುದು?

ಮೊಟೊ ಎಡ್ಜ್ 30 ಫ್ಯೂಷನ್ ಸ್ಪೇಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 888+ 5G SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

Motorola Edge 30 Fusion Viva Magenta special edition launched in India:  price, specifications

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಮೊಟೊ ಎಡ್ಜ್ 30 ಫ್ಯೂಷನ್ ಸ್ಪೇಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

Motorola Brings edge 30 fusion in Pantone Colour of the Year 2023 - Viva  Magenta

ಬ್ಯಾಟರಿ ಮತ್ತು ಇತರೆ

ಮೊಟೊ ಎಡ್ಜ್ 30 ಫ್ಯೂಷನ್ ಸ್ಪೇಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ 4400mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 68W TurboPower ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಇನ್ನು ಈ ಫೋನ್ ಡಾಲ್ಬಿ ಅಟ್ಮಾಸ್-ಚಾಲಿತ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಮೊಟೊ ಎಡ್ಜ್‌ 30 ಫ್ಯೂಷನ್ ಸ್ಪೇಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಗೆ 39,999 ರೂ.ಬೆಲೆಯಲ್ಲಿ ಬರಲಿದೆ. ಇದು ಫ್ಲಿಪ್‌ಕಾರ್ಟ್, Motorola.in ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಜನವರಿ 15 ರಂದು ಮಧ್ಯಾಹ್ನ 3 ಗಂಟೆಗೆ ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಸಿಂಗಲ್‌ ವೇರಿಯೆಂಟ್‌ ಸಾಮರ್ಥ್ಯದಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ಹೆಚ್ಚಿನ ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Motorola edge 30 fusion viva magenta limited edition launched in india.