ಬ್ರೇಕಿಂಗ್ ನ್ಯೂಸ್
19-01-23 01:53 pm Source: Drive Spark ಡಿಜಿಟಲ್ ಟೆಕ್
ಅಶೋಕ್ ಲೇಲ್ಯಾಂಡ್ ಭಾರತದ ಮಾರುಕಟ್ಟೆಯಲ್ಲಿ ವಾಣಿಜ್ಯ ಮತ್ತು ಭಾರೀ ವಾಹನಗಳನ್ನು ತಯಾರಿಸುವ ಮೂಲಕ ಖ್ಯಾತಿ ಗಳಿಸಿದೆ. ದೆಹಲಿಯಲ್ಲಿ ನಡೆದ ಬಹುನೀರಿಕ್ಷಿತ ಆಟೋ ಎಕ್ಸ್‌ಪೋದಲ್ಲಿ ಸಿಎನ್‌ಜಿ ಚಾಲಿತ 12 ಆಸನಗಳ ಮಿನಿ ಬಸ್ ಅನ್ನು ಪ್ರದರ್ಶಿಸಿದೆ. ಈ ಹೊಚ್ಚ ಹೊಸ ಬಸ್ ಕುರಿತಂತೆ ವಿವರವಾಗಿ ತಿಳಿಸಲಾಗಿದೆ.
ಈ ಮಿನಿ ಬಸ್ ಅನ್ನು ಅಶೋಕ್ ಲೇಲ್ಯಾಂಡ್ 'ಬಡಾ ದೋಸ್ತ್ ಎಕ್ಸ್‌ಪ್ರೆಸ್ ಸಿಎನ್‌ಜಿ' ಹೆಸರಿನಲ್ಲಿ ಅನಾವರಣ ಮಾಡಿದೆ. ಕಂಪನಿಯ ಪ್ರಕಾರ, ಈ ಮಿನಿ ಪ್ಯಾಸೆಂಜರ್ ಬಸ್, ನಗರ ಮತ್ತು ಹೆದ್ದಾರಿಯಂತಹ ಯಾವುದೇ ರೀತಿಯ ರಸ್ತೆಯಲ್ಲಿ ಬಳಕೆ ಮಾಡಬಹುದು. ಅದರಂತೆ ಈ ಬಸ್ ಅನ್ನು ಡಿಸೈನ್ ಮಾಡಲಾಗಿದೆ. ಇದು 12 ಆಸನಗಳನ್ನು ಹೊಂದಿದ್ದು, ದೂರದ ಕುಟುಂಬದ ಪ್ರವಾಸಗಳಿಗೆ ಸೂಕ್ತವಾದ ವಾಹನವಾಗಿದೆ. ಐಷಾರಾಮಿ ಒಳಾಂಗಣವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣಲಿದೆ. ಇಷ್ಟೇ ಅಲ್ಲದೆ, ಆಟೋ ಎಕ್ಸ್‌ಪೋದಲ್ಲಿ 7 ಸುಧಾರಿತ ಹೊಸ ವಾಹನ ಮಾದರಿಗಳನ್ನು ಅಶೋಕ್ ಲೇಲ್ಯಾಂಡ್ ಪ್ರದರ್ಶಿಸಿದೆ.
ಅಶೋಕ್ ಲೇಲ್ಯಾಂಡ್‌ನ ಈ ಮಿನಿ ಬಸ್, P15 BS6 CNG ಮೋಟಾರ್ ಹೊಂದಿದೆ. ಇದರಲ್ಲಿ ಅಳವಡಿಸಲಾಗಿರುವ ಮೋಟಾರ್ ಗರಿಷ್ಠ 58 ಎಚ್‌ಪಿ ಪವರ್ ಮತ್ತು 158 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 80 ಕಿ.ಮೀ. ಇದ್ದು, ಈ ಬಸ್ ವೀಲ್ ಬೇಸ್ 2800 ಎಂಎಂ ಇದೆ. ಯಾವುದೇ ರೀತಿಯ ರಸ್ತೆಯಲ್ಲಿ ಸುಲಭವಾಗಿ ಚಲಿಸಲಿದೆ ಎಂದು ಹೇಳಬಹುದು.
ಈ ಮಿನಿ ಬಸ್ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಬ್ ರೈಲ್‌ಗಳು, ಸೇಫ್ಟಿ ಹ್ಯಾಂಡಲ್‌ಗಳು ಆಂಟಿ-ಸ್ಕಿಡ್ ಫ್ಲೋರ್ (ನಾನ್ - ಸ್ಲಿಪ್ ಫ್ಲೋರ್) ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ಲೇಮೇಟ್ ಕಂಟ್ರೋಲ್, ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಪಡೆದಿದೆ. ಈ ಇಂಟರ್‌ಸಿಟಿ ಸಿಎನ್‌ಜಿ ಬಸ್, 13.5 ಮೀಟರ್ ಉದ್ದದ 4×2 ವಾಹನವಾಗಿದೆ. ಇದು 1500 ಲೀಟರ್ (255 ಕೆಜಿ) ಟರ್ಬೋಚಾರ್ಜ್ಡ್ ಸಿಎನ್‌ಜಿ ಎಂಜಿನ್‌ನಿಂದ ಚಾಲಿತವಾಗಿದೆ.
ಫುಲ್ ಸಿಎನ್‌ಜಿ ಟ್ಯಾಂಕ್ ಭರ್ತಿಯಾದಾಗ ಈ ಹೊಸ ಅಶೋಕ್ ಲೇಲ್ಯಾಂಡ್ ಬಸ್, ಸುಮಾರು 1,000 ಕಿ.ಮೀ ರೇಂಜ್ ನೀಡಲಾಗಿದೆ ಎಂದು ಹೇಳಲಾಗಿದೆ. ಇಷ್ಟೇಅಲ್ಲದೆ, ದೊಡ್ಡ ಕುಟುಂಬಗಳ ವೈಯಕ್ತಿಕ ಬಳಕೆಗಾಗಿ ಖರೀದಿ ಮಾಡಲು ಕಂಪನಿಯು ಈ ಬಸ್ ಅನ್ನು ಸಂಪೂರ್ಣವಾಗಿ ಆಕರ್ಷಕ ಲುಕ್ ನಲ್ಲಿ ವಿನ್ಯಾಸಗೊಳಿಸಿದೆ. ಈ ಸೂಪರ್ ಮಿನಿ ಬಸ್‌ನ ಬೆಲೆ ಮತ್ತು ಮಾರಾಟದ ವಿವರವನ್ನು ಅಶೋಕ್ ಲೇಲ್ಯಾಂಡ್ ಬಹಿರಂಗಪಡಿಸಿಲ್ಲ. ಸದ್ಯದಲ್ಲೇ ಎಲ್ಲ ಮಾಹಿತಿ ದೊರೆಯುವ ನಿರೀಕ್ಷೆ ಇದೆ.
ಅಲ್ಲದೆ, ಅಶೋಕ್ ಲೇಲ್ಯಾಂಡ್ ಆಟೋ ಎಕ್ಸ್‌ಪೋದಲ್ಲಿ ಹೊಸ ಪರ್ಯಾಯ ಇಂಧನ ಚಾಲಿತ ಏಳು ಕಮರ್ಷಿಯಲ್ ವೆಹಿಕಲ್ (CV)ಗಳನ್ನು ಪ್ರದರ್ಶಿಸಿತು. ಈ ಹೊಸ ವಾಹನಗಳ ಮೂಲಕ ಬೆಳೆಯುತ್ತಿರುವ ಪರ್ಯಾಯ ಇಂಧನ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಕಂಪನಿಯು ಪ್ರಯತ್ನಿಸುತ್ತಿದ್ದು, ಇದು ಅದರ ಭಾಗವಾಗಿದೆ. ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (BEV), ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (FCEV) ಮತ್ತು ಹೈಡ್ರೋಜನ್ ಇಂಟರ್ನಲ್ ಕಂಬುಸ್ಟಿವ್ನ್ ಎಂಜಿನ್ ಜೊತೆಗೆ ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (LNG) ವೆಹಿಕಲ್, ಇಂಟರ್‌ಸಿಟಿ CNG ಬಸ್, ಮಿನಿ ಪ್ಯಾಸೆಂಜರ್ ಬಸ್ ಅನ್ನು ಅನಾವರಣ ಮಾಡಿತು.
ಅಶೋಕ್ ಲೇಲ್ಯಾಂಡ್‌ನ ಎಂಡಿ ಮತ್ತು ಸಿಇಒ ಶೇನು ಅಗರ್ವಾಲ್ ಅವರು, 'ಆಟೋ ಎಕ್ಸ್‌ಪೋದಲ್ಲಿ ನಮ್ಮ ವಾಹನಗಳನ್ನು ಪ್ರದರ್ಶಿಸಲು ಸಂತೋಷಪಡುತ್ತೇವೆ. ಕಳೆದ ಎರಡು ವರ್ಷದಲ್ಲಿ ಆಟೋಮೊಬೈಲ್ ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸತನ ಕಂಡುಬಂದಿದೆ. ಸುಸ್ಥಿರ ಮತ್ತು ಪರಿಸರ ಸ್ನೇಹಿ ವಾಹನ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲು ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಭಾರತದ ಪರ್ಯಾಯ ಇಂಧನ ವಿಭಾಗವನ್ನು ಸ್ವಾವಲಂಬಿಯನ್ನಾಗಿ ನಮ್ಮ ಸಂಸ್ಥೆಯ ಗುರಿಯಾಗಿದೆ' ಎಂದು ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
Four Wheelers Ashok Leyland Bada Dost Xpress CNG Unveiled.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm