ಬಹುನಿರೀಕ್ಷಿತ Samsung Galaxy S23 Ultra ಬೆಲೆ, ಫೀಚರ್ಸ್ ಮತ್ತು ಡಿಸೈನ್ ವಿವರಗಳು ಲೀಕ್!

24-01-23 07:48 pm       Source: Vijayakarnataka   ಡಿಜಿಟಲ್ ಟೆಕ್

Samsung Galaxy S23 Ultra ಸ್ಮಾರ್ಟ್‌ಫೋನಿನ ಅಧಿಕೃತ ಬಿಡುಗಡೆಗೂ ಮೊದಲು ಸ್ಮಾರ್ಟ್‌ಫೋನ್‌ನ ಲೈವ್ ಚಿತ್ರಗಳು ಮತ್ತು ಅದರ ಚಿಲ್ಲರೆ ಬಾಕ್ಸ್‌ನ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ಸೂಚಿಸಿವೆ.

Samsung Galaxy S23 Ultra, ಭಾರತ ಸೇರಿದಂತೆ ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುಕುತೂಹಲದಿಂದ ಎದುರುನೋಡುತ್ತಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಇದೇ ಫೆಬ್ರವರಿ ಫೆಬ್ರವರಿ 1 ರಂದು Samsung ಕಂಪೆನಿ ಆಯೋಜಿಸಿರುವ Galaxy Unpacked 2023 ಕಾರ್ಯಕ್ರಮದಲ್ಲಿ Galaxy S23 ಮತ್ತು Galaxy 23+ ಸ್ಮಾರ್ಟ್‌ಫೋನ್‌ಗಳ ಜೊತೆಗೆ Samsung Galaxy S23 Ultra ಪ್ರೀಮಿಯಂ ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗಲಿದೆ. ಇದು ನಾವೆಲ್ಲರೂ ತಿಳಿದಿರುವ ವಿಷಯ. ಆದರೆ, ಬಿಡುಗಡೆಗೂ ಮೊದಲೇ Samsung Galaxy S23 Ultra ಸ್ಮಾರ್ಟ್‌ಫೋನಿನ ಚಿಲ್ಲರೆ ಬಾಕ್ಸ್‌ನ ಹ್ಯಾಂಡ್‌ಸೆಟ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳು ಬಹಿರಂಗವಾಗಿವೆ.! ಹೌದು, ವಿಶ್ವದಾದ್ಯಂತ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ ನೂತನ Samsung Galaxy S23 Ultra ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದು ತಿಳಿದುಬಂದಿದೆ.

Samsung Galaxy S23 Ultra ಸ್ಮಾರ್ಟ್‌ಫೋನಿನ ಅಧಿಕೃತ ಬಿಡುಗಡೆಗೂ ಮೊದಲು ಸ್ಮಾರ್ಟ್‌ಫೋನ್‌ನ ಲೈವ್ ಚಿತ್ರಗಳು ಮತ್ತು ಅದರ ಚಿಲ್ಲರೆ ಬಾಕ್ಸ್‌ನ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ಸೂಚಿಸಿವೆ. ಸೋರಿಕೆಯಾದ ಚಿತ್ರದಲ್ಲಿ ತಿಳಿದುಬಂದಿರುವಂತೆ, Samsung Galaxy S23 Ultra ಸ್ಮಾರ್ಟ್‌ಫೋನ್ ಬೊಟಾನಿಕ್ ಗ್ರೀನ್, ಕಾಟನ್ ಫ್ಲವರ್, ಮಿಸ್ಟಿ ಲಿಲಾಕ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಬರುವುದು ಖಚಿತವಾಗಿದೆ. ನಿರೀಕ್ಷೆಯಂತೆಯೇ ಈ ಹೊಸ ಸ್ಮಾರ್ಟ್‌ಫೋನ್ Snapdragon 8 Gen 2 ಪ್ರೊಸೆಸರ್ ಹೊಂದಿರಲಿದ್ದು, ಕರ್ವ್ಡ್ ಡಿಸ್‌ಪ್ಲೇ ಮತ್ತು ಮ್ಯಾಟ್ ಫಿನಿಶ್‌ನೊಂದಿಗೆ ಎಲ್ಇಡಿ ಫ್ಲ್ಯಾಷ್ ಜೊತೆಗೆ ಕನಿಷ್ಠ ನಾಲ್ಕು ಕ್ಯಾಮೆರಾ ಸಂವೇದಕಗಳನ್ನು ಹೊಂದಿರುವ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಮಾಡ್ಯೂಲ್ನೊಂದಿಗೆ ಕಾಣಿಸಿಕೊಂಡಿದೆ. ಇನ್ನು ಹ್ಯಾಂಡ್‌ಸೆಟ್‌ನ ಚಿಲ್ಲರೆ ಬಾಕ್ಸ್‌ನೊಳಗೆ ಚಾರ್ಜಿಂಗ್ ಅಡಾಪ್ಟರ್ ಇರುವುದಿಲ್ಲ ಎಂದು ಸಹ ಸೂಚಿಸಲಾಗಿದೆ.!

Samsung Galaxy S23, Galaxy S23 Plus, Galaxy S23 Ultra price, specifications  leaked

ಸಾಮಾಜಿಕ ಜಾಲತಾಣಗಳಲ್ಲಿ Km ಸೆಲ್ ಸ್ಟೋರ್ (Slashleaks) ಪ್ರಕಟಿಸಿರುವ Samsung Galaxy S23 Ultra ಸ್ಮಾರ್ಟ್‌ಫೋನಿನ ಚಿಲ್ಲರೆ ಬಾಕ್ಸ್‌ನಲ್ಲಿ Galaxy S23 Ultra $1,400 (ಸುಮಾರು ರೂ. 1,13,400) (12GB RAM + 256GB) ಬೆಲೆಯೊಂದಿಗೆ ಬರಬಹುದು ಎಂದು ಸೂಚಿಸಿದೆ. ಇಲ್ಲಿ ನಾವು ಗಮನಿಸುವುದಾದರೆ, ಕಳೆದ ವರ್ಷ ಇದರ ಪೂರ್ವವರ್ತಿಯಾದ Galaxy S22 Ultra ಸ್ಮಾರ್ಟ್‌ಫೋನ್ (12GB RAM + 256GB) ಆಯ್ಕೆಗೆ 1,09,999 ರೂ. ಬೆಲೆ ನಿಗಧಿಪಡಿಸಲಾಗಿತ್ತು. ಇನ್ನುಳಿದಂತೆ, ಈ ಫೋನಿನಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಹ್ಯಾಂಡ್‌ಸೆಟ್‌ನ ಎಡಭಾಗದಲ್ಲಿ ಮೇಲೆ ಇರಿಸಲಾಗಿದೆ. ಇದೀಗ ವದಂತಿಯ ಮಾಹಿತಿಗಳಂತೆ, Samsung Galaxy S23 Ultra ಸ್ಮಾರ್ಟ್‌ಫೋನ್ 6.8-ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ, ಗೆ 12GB ವರೆಗಿನ LPDDR5 RAM , 200-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು ಹೇಳಲಾಗುತ್ತಿದೆ.

Samsung Galaxy S23 pre-registration offer leaked: Here are the details

Samsung ಆಯೋಜಿಸಿರುವ Galaxy Unpacked 2023 ಕಾರ್ಯಕ್ರಮವು ದೇಶದಲ್ಲಿ ಇದೇ ಫೆಬ್ರವರಿ 1 ರಂದು ರಾತ್ರಿ 11: 30 ಕ್ಕೆ ಪ್ರಾರಂಭವಾಗಲಿದೆ ಮತ್ತು ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ ಚಾನೆಲ್‌ಗಳ ಮೂಲಕ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.ದೇಶದಲ್ಲಿ ಬಿಡುಗಡೆಯಾಗಲಿರುವ Samsung Galaxy S23 ಸರಣಿ ಸ್ಮಾರ್ಟ್‌ಪೋನ್‌ಗಳನ್ನು ಮೊದಲೇ ಪಡೆಯಲು ಇಚ್ಚಿಸುವ ಗ್ರಾಹಕರು ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಯಾವುದೇ Galaxy S23, Galaxy S23+, ಮತ್ತು Galaxy S23 Ultra ಸಾಧನವನ್ನು ಪ್ರೀ-ಬುಕ್ ಮಾಡಬಹುದು. ಇದಕ್ಕಾಗಿ, Samsung ಕಂಪೆನಿ 1999 ರೂ.ಗೆ ಪ್ರೀ ಬುಕ್ಕಿಂಗ್ ಬೆಲೆಯನ್ನು ನಿಗಧಿಪಡಿಸಿದೆ. ಹೀಗೆ 1999 ರೂ. ಪಾವತಿಸಿ ಪ್ರೀ-ಬುಕ್ ಮಾಡುವ ಗ್ರಾಹಕರಿಗೆ 5000 ಮೌಲ್ಯದ ಪ್ರಯೋಜನಗಳನ್ನು ಒದಗಿಸುವುದಾಗಿ ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೇ, Galaxy S23 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪ್ರೀ-ಬುಕ್ ಮಾಡುವ ಗ್ರಾಹಕರಿಗೆ ಆರಂಭಿಕ ವಿತರಣೆ, ವಿಶೇಷ ಬಣ್ಣದ ಆಯ್ಕೆಗಳು ಮತ್ತು 2000 ರೂ. ವೆಲ್‌ಕಮ್ ಕೂಪನ್ ಸಹ ದೊರೆಯಲಿವೆ.

Samsung Galaxy S23 Ultra Price Tipped: Live Images Leak Again.