ಬ್ರೇಕಿಂಗ್ ನ್ಯೂಸ್
28-01-23 09:20 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುಕುತೂಹಲದಿಂದ ಎದುರುನೋಡುತ್ತಿರುವ ಪ್ರೀಮಿಯಂ Samsung Galaxy S23 Ultra ಸ್ಮಾರ್ಟ್‌ಫೋನ್ ಬಿಡುಗಡೆಗೂ ಮೊದಲೇ ಈ ಸ್ಮಾರ್ಟ್‌ಫೋನಿನ ಚಿಲ್ಲರೆ ಬಾಕ್ಸ್‌ನ ಹ್ಯಾಂಡ್‌ಸೆಟ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳು ಇತ್ತೀಚಿಗಷ್ಟೇ ಬಹಿರಂಗವಾದ್ದವು. ಇದೀಗ Samsung Galaxy S23 Ultra ಸ್ಮಾರ್ಟ್‌ಫೋನಿನ ಬಹುನಿರೀಕ್ಷಿತ ಕ್ಯಾಮೆರಾ ಫೀಚರ್ ಕುರಿತು ಮಾಹಿತಿ ದೊರೆತಿದ್ದು, Galaxy S23 Ultra ಸ್ಮಾರ್ಟ್‌ಫೋನ್ 200mp ಸಾಮರ್ಥ್ಯದ ಸ್ಯಾಮ್‌ಸಂಗ್ HP2 ಪ್ರಾಥಮಿಕ ಕ್ಯಾಮೆರಾ, 12MP sony IMX564 ಅಲ್ಟ್ರಾ ವೈಡ್ ಕ್ಯಾಮೆರಾ, 10MP sony IMX756 ಟೆಲಿಫೋಟೊ ಮತ್ತು 10MP sony IMX756 10x ಟೆಲಿಫೋಟೊ ಸಂವೇದಕಗಳನ್ನು ಹೊಂದಿರುವ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಮತ್ತು 200 ಮಿಲಿಯನ್ ಪಿಕ್ಸೆಲ್‌ಗಳನ್ನು ಆಟೋಫೋಕಸಿಂಗ್ ಸಿಸ್ಟಮ್ ಮತ್ತು ಡೈನಾಮಿಕ್ ಶ್ರೇಣಿಯ ಸುಧಾರಿತ HDR ಬೆಂಬಲ ಹೊಂದಿದೆ ಎಂದು ತಿಳಿದುಬಂದಿದೆ.
Samsung Galaxy S23 Ultra ಸ್ಮಾರ್ಟ್‌ಫೋನಿನ ಅಧಿಕೃತ ಬಿಡುಗಡೆಗೂ ಮೊದಲು ಸ್ಮಾರ್ಟ್‌ಫೋನ್‌ನ ಲೈವ್ ಚಿತ್ರಗಳು ಮತ್ತು ಅದರ ಚಿಲ್ಲರೆ ಬಾಕ್ಸ್‌ನ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಸೋರಿಕೆಯಾದ ಚಿತ್ರದಲ್ಲಿ ತಿಳಿದುಬಂದಿರುವಂತೆ, Samsung Galaxy S23 Ultra ಸ್ಮಾರ್ಟ್‌ಫೋನ್ ಬೊಟಾನಿಕ್ ಗ್ರೀನ್, ಕಾಟನ್ ಫ್ಲವರ್, ಮಿಸ್ಟಿ ಲಿಲಾಕ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಬರುವುದು ಖಚಿತವಾಗಿದೆ. ನಿರೀಕ್ಷೆಯಂತೆಯೇ ಈ ಹೊಸ ಸ್ಮಾರ್ಟ್‌ಫೋನ್ Snapdragon 8 Gen 2 ಪ್ರೊಸೆಸರ್ ಹೊಂದಿರಲಿದ್ದು, ಕರ್ವ್ಡ್ ಡಿಸ್‌ಪ್ಲೇ ಮತ್ತು ಮ್ಯಾಟ್ ಫಿನಿಶ್‌ನೊಂದಿಗೆ ಎಲ್ಇಡಿ ಫ್ಲ್ಯಾಷ್ ಜೊತೆಗೆ ನಾಲ್ಕು ಕ್ಯಾಮೆರಾ ಸಂವೇದಕಗಳನ್ನು ಹೊಂದಿರುವ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಮಾಡ್ಯೂಲ್ನೊಂದಿಗೆ ಕಾಣಿಸಿಕೊಂಡಿದೆ. ಇನ್ನು ಹ್ಯಾಂಡ್‌ಸೆಟ್‌ನ ಚಿಲ್ಲರೆ ಬಾಕ್ಸ್‌ನೊಳಗೆ ಚಾರ್ಜಿಂಗ್ ಅಡಾಪ್ಟರ್ ಇರುವುದಿಲ್ಲ ಎಂದು ಸಹ ಸೂಚಿಸಲಾಗಿದೆ.!
Km ಸೆಲ್ ಸ್ಟೋರ್ (Slashleaks) ಪ್ರಕಟಿಸಿರುವ Samsung Galaxy S23 Ultra ಸ್ಮಾರ್ಟ್‌ಫೋನಿನ ಚಿಲ್ಲರೆ ಬಾಕ್ಸ್‌ನಲ್ಲಿ Galaxy S23 Ultra $1,400 (ಸುಮಾರು ರೂ. 1,13,400) (12GB RAM + 256GB) ಬೆಲೆಯೊಂದಿಗೆ ಬರಬಹುದು ಎಂದು ಸೂಚಿಸಿದೆ. ಇಲ್ಲಿ ನಾವು ಗಮನಿಸುವುದಾದರೆ, ಕಳೆದ ವರ್ಷ ಇದರ ಪೂರ್ವವರ್ತಿಯಾದ Galaxy S22 Ultra ಸ್ಮಾರ್ಟ್‌ಫೋನ್ (12GB RAM + 256GB) ಆಯ್ಕೆಗೆ 1,09,999 ರೂ. ಬೆಲೆ ನಿಗಧಿಪಡಿಸಲಾಗಿತ್ತು. ಇನ್ನುಳಿದಂತೆ, ಈ ಫೋನಿನಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಹ್ಯಾಂಡ್‌ಸೆಟ್‌ನ ಎಡಭಾಗದಲ್ಲಿ ಮೇಲೆ ಇರಿಸಲಾಗಿದೆ. ಇದೀಗ ವದಂತಿಯ ಮಾಹಿತಿಗಳಂತೆ, Samsung Galaxy S23 Ultra ಸ್ಮಾರ್ಟ್‌ಫೋನ್ 6.8-ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ, ಗೆ 12GB ವರೆಗಿನ LPDDR5 RAM , ಮತ್ತು 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು ಹೇಳಲಾಗುತ್ತಿದೆ.
Samsung ಆಯೋಜಿಸಿರುವ Galaxy Unpacked 2023 ಕಾರ್ಯಕ್ರಮವು ದೇಶದಲ್ಲಿ ಇದೇ ಫೆಬ್ರವರಿ 1 ರಂದು ರಾತ್ರಿ 11: 30 ಕ್ಕೆ ಪ್ರಾರಂಭವಾಗಲಿದೆ ಮತ್ತು ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ ಚಾನೆಲ್‌ಗಳ ಮೂಲಕ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.ದೇಶದಲ್ಲಿ ಬಿಡುಗಡೆಯಾಗಲಿರುವ Samsung Galaxy S23 ಸರಣಿ ಸ್ಮಾರ್ಟ್‌ಪೋನ್‌ಗಳನ್ನು ಮೊದಲೇ ಪಡೆಯಲು ಇಚ್ಚಿಸುವ ಗ್ರಾಹಕರು ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಯಾವುದೇ Galaxy S23, Galaxy S23+, ಮತ್ತು Galaxy S23 Ultra ಸಾಧನವನ್ನು ಪ್ರೀ-ಬುಕ್ ಮಾಡಬಹುದು. ಇದಕ್ಕಾಗಿ, Samsung ಕಂಪೆನಿ 1999 ರೂ.ಗೆ ಪ್ರೀ ಬುಕ್ಕಿಂಗ್ ಬೆಲೆಯನ್ನು ನಿಗಧಿಪಡಿಸಿದೆ. ಹೀಗೆ 1999 ರೂ. ಪಾವತಿಸಿ ಪ್ರೀ-ಬುಕ್ ಮಾಡುವ ಗ್ರಾಹಕರಿಗೆ 5000 ಮೌಲ್ಯದ ಪ್ರಯೋಜನಗಳನ್ನು ಒದಗಿಸುವುದಾಗಿ ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೇ, Galaxy S23 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪ್ರೀ-ಬುಕ್ ಮಾಡುವ ಗ್ರಾಹಕರಿಗೆ ಆರಂಭಿಕ ವಿತರಣೆ, ವಿಶೇಷ ಬಣ್ಣದ ಆಯ್ಕೆಗಳು ಮತ್ತು 2000 ರೂ. ವೆಲ್‌ಕಮ್ ಕೂಪನ್ ಸಹ ದೊರೆಯಲಿವೆ.
Samsung Galaxy S23 Ultra Camera Everything We Know So Far Check Details.
10-04-25 04:40 pm
Bangalore Correspondent
Lokayukta Shivamogga arrest: ಶಿವಮೊಗ್ಗ ಸ್ಮಾರ್ಟ...
09-04-25 09:31 pm
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
10-04-25 01:25 pm
HK News Desk
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
09-04-25 10:57 pm
Mangalore Correspondent
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
10-04-25 08:41 pm
HK News Desk
Puttur crime, Sword, Mangalore: ಪುತ್ತೂರಿನಲ್ಲಿ...
10-04-25 02:57 pm
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm