ಫೆಬ್ರವರಿ 8 ರಿಂದ 'Lenovo Ideapad 1' ಲ್ಯಾಪ್‌ಟಾಪ್‌ ಸೇಲ್!...ವಿದ್ಯಾರ್ಥಿಗಳು ಇಲ್ಲಿ ಗಮನಿಸಿ!

06-02-23 08:44 pm       Source: Vijayakarnataka   ಡಿಜಿಟಲ್ ಟೆಕ್

Lenovo Ideapad 1 ಲ್ಯಾಪ್‌ಟಾಪ್‌ ವೀಡಿಯೊ ಕಾನ್ಫರೆನ್ಸಿಂಗ್‌ಗಾಗಿ 720p ವೆಬ್‌ಕ್ಯಾಮ್ ಮತ್ತು ಮೈಕ್ರೊಫೋನ್ ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ.

ಬಜೆಟ್ ಬೆಲೆಯಲ್ಲಿ ವೃತ್ತಿಪರ ಲ್ಯಾಪ್‌ಟಾಪ್‌ ಒಂದನ್ನು ಹುಡುಕುತ್ತಿರುವ ದೇಶದ ಗ್ರಾಹಕರು ಮತ್ತು ವಿದ್ಯಾರ್ಥಿಗಳಿಗಾಗಿ ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಬ್ರ್ಯಾಂಡ್ Lenovo ಭರ್ಜರಿ ಸಿಹಿಸುದ್ದಿಯೊಂದನ್ನು ಹೊತ್ತು ಬಂದಿದೆ. ಭಾರತದ ಮಾರುಕಟ್ಟೆಗೆ ಶೀಘ್ರವೇ ತನ್ನ ಅತ್ಯುತ್ತಮ ಮಲ್ಟಿ ಟಾಸ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಹಾಗೂ ಬಜೆಟ್ ಬೆಲೆಯ 'Lenovo Ideapad 1' ಲ್ಯಾಪ್‌ಟಾಪ್‌ ತರುತ್ತಿರುವುದಾಗಿ Lenovo ಕಂಪೆನಿ ತಿಳಿಸಿದ್ದು, ದೇಶದಲ್ಲಿ ಇದೇ ಫೆಬ್ರವರಿ 8 ರಿಂದ 44,690 ರೂ. ಆರಂಭಿಕ ಬೆಲೆಯಲ್ಲಿ ಮಾರಾಟಕ್ಕೆ ಬರಲಿದೆ ಎಂದು ತಿಳಿಸಿದೆ. ಹಾಗಾದರೆ, Lenovo ಕಂಪೆನಿ ಘೋಷಿಸಿರುವ ಹೊಸ 'Lenovo Ideapad 1' ಲ್ಯಾಪ್‌ಟಾಪ್‌ ಹೇಗಿದೆ ಮತ್ತು ಈ ಲ್ಯಾಪ್‌ಟಾಪ್‌ನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.

'Lenovo Ideapad 1' ಲ್ಯಾಪ್‌ಟಾಪ್‌ ವೈಶಿಷ್ಟ್ಯಗಳು
ನೂತನ Lenovo Ideapad 1 ಲ್ಯಾಪ್‌ಟಾಪ್‌ 15 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇ ಹೊಂದಿದೆ. ಇದರ ಡಿಸ್‌ಪ್ಲೇಯು 220 ನಿಟ್ಸ್ ಬ್ರೈಟ್‌ನೆಸ್ ಸಾಮರ್ಥ್ಯವನ್ನು ಹೊಂದಿದ್ದು, ಅತ್ಯುತ್ತಮ ವೀಡಿಯೋ ವೀಕ್ಷಣೆ ಮತ್ತು ಗೇಮಿಂಗ್‌ ಅನುಭ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹುಡ್ ಅಡಿಯಲ್ಲಿ, AMD Ryzen 3 7320U ಪ್ರೊಸೆಸರ್ ಮತ್ತು AMD Radeon 610M ಗ್ರಾಫಿಕ್ಸ್‌ ಕಾರ್ಡ್‌ ಹೊಂದಿರುವ ಈ ಲ್ಯಾಪ್‌ಟಾಪ್ 8GB RAM ಮತ್ತು 512GB SSD ಮೆಮೊರಿ ಮಾದರಿಯಲ್ಲಿ ಬಂದಿದೆ. ಬಳಕೆದಾರರು 1TB ವರೆಗೆ ಮೆಮೊರಿ ಅಪ್‌ಗ್ರೇಡ್ ಮಾಡಲು ಅವಕಾಶ ನೀಡಲಾಗಿದೆ. ಈ ಲ್ಯಾಪ್‌ಟಾಪ್ ಮೂಲಕ ಬಳಕೆದಾರರು ಮಲ್ಟಿಟಾಸ್ಕ್ ಅನುಭವದ ಜೊತೆಗೆ ವಿಸ್ತೃತ ಖಾತರಿ ಮತ್ತು ಅತ್ಯುತ್ತಮ-ದರ್ಜೆಯ ಕಾರ್ಯಕ್ಷಮತೆ ಹೊಂದಿರುವ ಸಾಧನ ಎಂದು ಕಂಪೆನಿ ತಿಳಿಸಿದೆ.

Lenovo India introduces Ideapad 1 with AMD Ryzen R3 processor

Lenovo Ideapad 1 ಲ್ಯಾಪ್‌ಟಾಪ್‌ ವೀಡಿಯೊ ಕಾನ್ಫರೆನ್ಸಿಂಗ್‌ಗಾಗಿ 720p ವೆಬ್‌ಕ್ಯಾಮ್ ಮತ್ತು ಮೈಕ್ರೊಫೋನ್ ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇದರಲ್ಲಿನ ಕ್ಯಾಮೆರಾ ಪ್ರೈವೆಸಿ ಶಟರ್ ಹೊಂದಿದ್ದು, ಇದು ಅನಪೇಕ್ಷಿತ ನೋಡುಗರನ್ನು ನಿರ್ಬಂಧಿಸಲಿದೆ ಎಂದು ಕಂಪೆನಿ ತಿಳಿಸಿದೆ. Lenovo Ideapad 1 ಲ್ಯಾಪ್‌ಟಾಪ್‌ನಲ್ಲಿರುವ ಸಂಪರ್ಕ ಆಯ್ಕೆಗಳಲ್ಲಿ, USB 2.0 ಪೋರ್ಟ್, USB 3.2 Gen 1, USB-C ಪೋರ್ಟ್, 4-in-1 ಕಾರ್ಡ್ ರೀಡರ್, WiFi-6, ಬ್ಲೂಟೂತ್ 5.1, ಹೆಡ್‌ಫೋನ್ ಜ್ಯಾಕ್ ಮತ್ತು HDMI 1.4 ವೈಶಿಷ್ಟ್ಯಗಳಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 65W ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್‌ನೊಂದಿಗೆ 42Wh ಸಾಮರ್ಥ್ಯದ ಬ್ಯಾಟರಿಯನ್ನ ಹೊಂದಿದ್ದು, ಇದು 14 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Lenovo IdeaPad Slim 3: tech specs, security features, price in India - The  Hindu

'Lenovo Ideapad 1' ಲ್ಯಾಪ್‌ಟಾಪ್‌ ಬೆಲೆ ಮತ್ತು ಲಭ್ಯತೆ.
ಮೊದಲೇ ಹೇಳಿದಂತೆ, ಭಾರತದಲ್ಲಿ ಇದೇ ಫೆಬ್ರವರಿ 8 ರಿಂದ 44,690 ರೂ. ಆರಂಭಿಕ ಬೆಲೆಯಲ್ಲಿ Lenovo Ideapad 1 ಲ್ಯಾಪ್‌ಟಾಪ್‌ ಮಾರಾಟಕ್ಕೆ ಬರುತ್ತಿದೆ. ಗ್ರಾಹಕರು Lenovo ಕಂಪೆನಿಯ ಅಧಿಕೃತ ಆನ್‌ಲೈನ್ ಸ್ಟೋರ್, ಅಮೆಜಾನ್. ಕಾಮ್ ಮತ್ತು Lenovo ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ Lenovo Ideapad 1 ಲ್ಯಾಪ್‌ಟಾಪ್‌ ಅನ್ನು ಖರೀದಿಸಬಹುದು. ಇನ್ನು ಈ Lenovo Ideapad 1 ಲ್ಯಾಪ್‌ಟಾಪ್ ಕ್ಲೌಡ್ ಗ್ರೇ ಬಣ್ಣದಲ್ಲಿ 2 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ ಎಂದು ಕಂಪೆನಿ ತಿಳಿಸಿದೆ. ದೈನಂದಿನ ಬಳಕೆಗಾಗಿ ಕೈಗೆಟುಕುವ ಲ್ಯಾಪ್‌ಟಾಪ್‌ಗಾಗಿ ಹುಡುಕುತ್ತಿರುವವರಿಗೆ ಈ Lenovo Ideapad 1 ಲ್ಯಾಪ್‌ಟಾಪ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.

Student-Focused Lenovo Ideapad Launched In India Check Details.