ಬ್ರೇಕಿಂಗ್ ನ್ಯೂಸ್
13-02-23 07:35 pm Source: Vijayakarnataka ಡಿಜಿಟಲ್ ಟೆಕ್
ಕಳೆದ ಫೆಬ್ರವರಿ 7 ರಂದು OnePlus ಆಯೋಜಿಸಿದ್ದ OnePlus Cloud 11 ಸಮಾರಂಭದಲ್ಲಿ ಪರಿಚಯಗೊಂಡಿದ್ದ OnePlus ಕಂಪೆನಿಯ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್ 'OnePlus Pad' ಸಾಧನವು ಮುಂದಿನ ಏಪ್ರಿಲ್ ತಿಂಗಳಿನಿಂದ ಗ್ರಾಹಕ ಖರೀದಿಗೆ ಲಭ್ಯವಿರಲಿದೆ ಎಂದು ತಿಳಿದುಬಂದಿದೆ. OnePlus Cloud 11 ಸಮಾರಂಭದಲ್ಲಿ OnePlus 11, OnePlus 11R, OnePlus Buds Pro 2 ಮತ್ತು ಕಂಪೆನಿಯ ಇತರ ಉತ್ಪನ್ನಗಳ ಜೊತೆಗೆ OnePlus Pad ಟ್ಯಾಬ್ಲೆಟ್ ಸಹ ಬಿಡುಗಡೆಯಾಗಿತ್ತು. ಆದರೆ. OnePlus Pad ಟ್ಯಾಬ್ ಬಿಡುಗಡೆ ಸಮಾರಂಭದ ಸಮಯದಲ್ಲಿ ಕಂಪೆನಿಯು ಟ್ಯಾಬ್ಲೆಟ್‌ನ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಬಹಿರಂಗಪಡಿಸಲಿಲ್ಲ. ಇದರಿಂದ OnePlus Pad ಟ್ಯಾಬ್ಲೆಟ್ ಖರೀದಿಸಲು ಎದುರುನೋಡುತ್ತಿದ್ದ ಗ್ರಾಹಕರು ನಿರಾಸಗೊಂಡಿದ್ದರು. ಇದೀಗ ಕಂಪೆನಿಯು OnePlus Pad ಟ್ಯಾಬ್ಲೆಟ್ ಲಭ್ಯತೆಯ ಕುರಿತಂತೆ ತಿಳಿಸಿದೆ.
OnePlus Pad ಟ್ಯಾಬ್ಲೆಟ್ ಭಾರತದಲ್ಲಿ ಮುಂದಿನ ಏಪ್ರಿಲ್ ತಿಂಗಳಿಂದ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿರುತ್ತದೆ ಎಂದು OnePlus ಕಂಪೆನಿ ತಿಳಿಸಿದೆ. ಗ್ರಾಹಕರು ಫ್ಲಿಪ್‌ಕಾರ್ಟ್ ಮೂಲಕ OnePlus Pad ಟ್ಯಾಬ್ಲೆಟ್ ಸಾಧನವನ್ನು ಖರೀದಿಸಲು ಅವಕಾಶವಿರಲಿದೆ ಎಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಪೇಜ್ ತೆರೆದಿದೆ. ಆದಾಗ್ಯೂ, ಈ ಹೊಸ OnePlus ಟ್ಯಾಬ್ಲೆಟ್ ಬೆಲೆ ಎಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪೆನಿ ಈ ವರೆಗೂ ಬಹಿರಂಗಪಡಿಸಿಲ್ಲ. ನೂತನ OnePlus Pad' ಟ್ಯಾಬ್ಲೆಟ್ 12GB ವರೆಗಿನ LPDDR5 RAM, 67W SUPERVOOC ವೇಗದ ಚಾರ್ಜಿಂಗ್ ಬೆಂಬಲದ 9,510mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ಹೊಸ 'OnePlus Pad' ಟ್ಯಾಬ್ಲೆಟ್ ಹೇಗಿದೆ? ಮತ್ತು ಈ ಸಾಧನವು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬ ವಿವರಗಳನ್ನು ನೋಡೋಣ ಬನ್ನಿ.
ನೂತನ OnePlus Pad ಟ್ಯಾಬ್ಲೆಟ್ ವೈಶಿಷ್ಟ್ಯಗಳು
OnePlus ಪರಿಚಯಿಸಿರುವ ತನ್ನ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್ ಹಿಂಭಾಗದ ಫಲಕದ ಮಧ್ಯಭಾಗದಲ್ಲಿ ಒಂದೇ ಕ್ಯಾಮೆರಾ ಮತ್ತು ಕಂಪೆನಿಯ ಲೋಗೊ ಇರುವಂತಹ ಪ್ರೀಮಿಯಂ ಮಿರರ್ ಸ್ಕ್ರೀನ್‌ನಂತಹ ವಿನ್ಯಾಸ ಹಾಗೂ ಆಲಿವ್ ಗ್ರೀನ್ ವಿಶೇಷ ಬಣ್ಣದಲ್ಲಿ ಬಿಡುಗಡೆಯಾಗಿದೆ. ಈ OnePlus Pad ಟ್ಯಾಬ್‌ನಲ್ಲಿ 144Hz ರಿಫ್ರೆಶ್ ರೇಟ್ ಸಾಮರ್ಥ್ಯ ಹೊಂದಿರುವ 2800x2000 ರೆಸಲ್ಯೂಶನ್ (296 ppi) ಮತ್ತು 500nits ಬ್ರೈಟ್‌ನೆಸ್ ಹೊಂದಿರುವ 11.61-ಇಂಚಿನ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಅಳವಡಿಸಲಾಗಿದ್ದು, ಇದು 7:5 ಸ್ಕ್ರೀನ್ ಅನುಪಾತ ಮತ್ತು 88 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿದೆ. ಈ OnePlus Pad ಟ್ಯಾಬ್ಲೆಟ್ ಹೊಂದಾಣಿಕೆಯ ಮ್ಯಾಗ್ನೆಟಿಕ್ ಕೀಬೋರ್ಡ್ ಮತ್ತು ಚಿಲ್ಲರೆ ಬಾಕ್ಸ್‌ನಲ್ಲಿ ಸ್ಟೈಲಸ್‌ನೊಂದಿಗೆ ಬರುತ್ತದೆ.
ಹುಡ್ ಅಡಿಯಲ್ಲಿ, 12GB LPDDR5 RAM ನೊಂದಿಗೆ ಜೋಡಲಾಗಿರುವ MediaTek Dimensity 9000 ಪ್ರೊಸೆಸರ್ ಹೊಂದಿರುವ ಆಂಡ್ರಾಯ್ಡ್ 13 ಓಎಸ್‌ನಲ್ಲಿ ಕೆಲಸ ಮಾಡಲಿದೆ. ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದ ಜೊತೆಗೆ ಕ್ವಾಡ್-ಸ್ಪೀಕರ್ ಸೆಟಪ್ ಓಮ್ನಿಬೇರಿಂಗ್ ಸೌಂಡ್ ಸರೌಂಡಿಂಗ್ ಸ್ಪೀಕರ್‌ಗಳನ್ನು ಹೊಂದಿದ್ದು, ಟ್ಯಾಬ್ಲೆಟ್ ಬಳಕೆಯನ್ನು ಆಧರಿಸಿ ಎಡ-ಬಲ ಚಾನಲ್‌ಗಳ ನಡುವೆ ಬದಲಾಯಿಸಬಹು ಎಂದು ಕಂಪೆನಿ ತಿಳಿಸಿದೆ. ಇನ್ನುಳಿದಂತೆ, 5G ಸಿಮ್ ಬೆಂಬಲ, 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳ ಜೊತೆಗೆ ಈ ಟ್ಯಾಬ್ಲೆಟ್ 67W SUPERVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 9,510mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ.
Oneplus Pad Availability Confirmed, Start In April.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm