ಬ್ರೇಕಿಂಗ್ ನ್ಯೂಸ್
14-02-23 08:24 pm Source: Vijayakarnataka ಡಿಜಿಟಲ್ ಟೆಕ್
ಒಂದು ಕಾಲದಲ್ಲಿ ಭಾರತೀಯ ಟೆಲಿವಿಷನ್ ಮಾರುಕಟ್ಟೆಯ ದಿಗ್ಗಜ ಹಾಗೂ ಜನಪ್ರಿಯ ಟೆಕ್ ಬ್ರ್ಯಾಂಡ್ TCL ಕಂಪೆನಿ ದೇಶದಲ್ಲಿಂದು ತನ್ನ ಮೂರು ಬಜೆಟ್ ಬೆಲೆಯ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದೆ. ದೇಶದಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಟಿವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಅರಿತು, TCL S5400, S5400A ಮತ್ತು S5403A ಎಂಬ ಮೂರು ಸ್ಮಾರ್ಟ್‌ಟಿವಿಗಳನ್ನು ಕಂಪೆನಿ ಪರಿಚಯಿಸಿದ್ದು, ಇವುಗಳು 4K ರೆಸಲ್ಯೂಶನ್ ಸಾಮರ್ಥ್ಯದ ಬೆಜೆಲ್-ಲೆಸ್ ಡಿಸೈನ್ ಡಿಸ್‌ಪ್ಲೇ, ಡಾಲ್ಬಿ ಆಡಿಯೋ ಬೆಂಬಲದ 24W ಸಾಮರ್ಥ್ಯದ ಸ್ಪೀಕರ್‌ಗಳು ಮತ್ತು ಕ್ವಾಂಟಮ್ ಡಾಟ್ ಮ್ಯಾಟ್ರಿಕ್ಸ್ ಟೆಕ್ನಾಲಜಿ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿವೆ. ಹಾಗಾದರೆ, TCL ಕಂಪೆನಿಯ ಈ ಹೊಸ ಮೂರು ಸ್ಮಾರ್ಟ್‌ಟಿವಿಗಳು ಹೇಗಿವೆ ಮತ್ತು ಬೆಲೆಗಳ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
TCL ಪರಿಚಯಿಸಿರುವ S5400, S5400A ಮತ್ತು S5403A ಮೂರು ಸ್ಮಾರ್ಟ್‌ಟಿವಿಗಳಲ್ಲಿ TCL S5400 ಸ್ಮಾರ್ಟ್‌ಟಿವಿಯು ಸ್ವಲ್ಪ ಹೆಚ್ಚು ಎಂಬಂತೆ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಈ TCL S5400 ಸ್ಮಾರ್ಟ್‌ಟಿವಿಯಲ್ಲಿ HDR 10 ಬೆಂಬಲಿಸುವ 32-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಅಳವಡಿಸಲಾಗಿದೆ. ಅಂತರ್ನಿರ್ಮಿತ Chromecast (ಇತ್ತೀಚಿನ ಯಾವುದೇ ಗ್ಯಾಜೆಟ್ ಸಾಧನವನ್ನು ಟಿವಿಗೆ ಸಂಪರ್ಕಿಸಲು) ಜೊತೆಗೆ ಗೂಗಲ್‌ನ Android TV ಇಂಟರ್‌ಫೇಸ್ ಬೆಂಬಲ ಸಹ ಹೊಂದಿರುವ ಈ ಸ್ಮಾರ್ಟ್‌ಟಿವಿಯು ,ಇತ್ತೀಚಿನ ಸ್ಮಾರ್ಟ್‌ಟಿವಿಗಳಿಗೆ ಸೆಟ್ ಆಗುವ ಎಲ್ಲಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒದಗಿಸಲಿದೆ. ಇದಲ್ಲದೇ, ಪ್ಲೇಸ್ಟೋರ್ ಮತ್ತು ವಾಚ್‌ಲೀಸ್ಟ್ ಬೆಂಬಲದಂತಹ ಜೊತೆಗೆ ಒಟಿಟಿ ಅಪ್ಲಿಕೇಶನ್‌ಗಳ ಮೂಲಕವೂ ವೀಡಿಯೋ ಸ್ರೀಮಿಂಗ್ ಮಾಡುವುದಕ್ಕೂ ಅವಕಾಶ ನೀಡಲಿದೆ ಎಂದು ಕಂಪೆನಿ ತಿಳಿಸಿದೆ.
ಇನ್ನು S5400A ಮತ್ತು S5403A ಸ್ಮಾರ್ಟ್‌ಟಿವಿಗಳು ಸಹ 32 ಇಂಚಿನ HD ಡಿಸ್‌ಪ್ಲೇಯನ್ನೇ ಹೊಂದಿವೆ. ಆದರೆ, ಈ ಎರಡೂ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ TV 11 ನಲ್ಲಿ ಕಾರ್ಯನಿರ್ವಹಿಸಲಿವೆ. ಈ ಎರಡು ಸ್ಮಾರ್ಟ್‌ಟಿವಿಗಳು 7,000ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳ ಬೆಂಬಲ ಹೊಂದಿದ್ದು, ನೀವು 7,00,000ಕ್ಕೂ ಹೆಚ್ಚಿನ ಚಲನಚಿತ್ರಗಳು ಮತ್ತು ಶೋಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಬಹುದು. ಇನ್ನುಳಿದಂತೆ, ಈ ಮೂರು ಸ್ಮಾರ್ಟ್‌ಟಿವಿಗಳು ಡಾಲ್ಬಿ ಆಡಿಯೊ ಬೆಂಬಲ ಹೊಂದಿರುವ 24W ಸ್ಪೀಕರ್ ಸಿಸ್ಟಮ್ ಅಳವಡಿಸಲಾಗಿದ್ದು, ಇದು ಸ್ಟ್ಯಾಂಡರ್ಡ್, ಡೈನಾಮಿಕ್, ಮ್ಯೂಸಿಕ್, ಮೂವಿ, ವಾಯ್ಸ್, ಗೇಮ್ ಮತ್ತು ಸ್ಪೋರ್ಟ್ಸ್ ಸೌಂಡ್ ಮೋಡ್ ಹೊಂದಿದೆ. ಹಾಗೂ ಕ್ವಾಂಟಮ್ ಡಾಟ್ ಮ್ಯಾಟ್ರಿಕ್ಸ್ ಟೆಕ್ನಾಲಜಿ, 5.0 ಬ್ಲೂಟೂತ್, ವೈ-ಫೈ, HDMI x 2 ಮತ್ತು USB 2.0 ಫೊರ್ಟ್ ಸಂಪರ್ಕ ವೈಶಿಷ್ಟ್ಯಗಳು ಸಹ ನೋಡಬಹುದು.
ಸ್ಮಾರ್ಟ್‌ಟಿವಿಗಳ ಬೆಲೆ ಎಷ್ಟು?
TCL ಪರಿಚಯಿಸಿರುವ S5400, S5400A ಮತ್ತು S5403A ಮೂರು ಸ್ಮಾರ್ಟ್‌ಟಿವಿಗಳು ಕ್ರಮವಾಗಿ 15,990 ರೂ., 13,490 ರೂ. ಮತ್ತು 13,990ರೂ. ಬೆಲೆಯಲ್ಲಿ ದೇಶದಲ್ಲಿ ಮಾರಾಟಕ್ಕೆ ಬಂದಿವೆ. ದೇಶದ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳಾದ Amazon ಮತ್ತು Flipkart ಸೇರಿದಂತೆ TCL ಬ್ರ್ಯಾಂಡ್ ಸ್ಟೋರ್‌ಗಳು ಹಾಗೂ ಆಯ್ಕೆ ಕೆಲವು ಅಧಿಕೃತ ರಿಟೇಲ್ ಸ್ಟೋರ್‌ಗಳಲ್ಲಿ ಈ ಮೂರು ಸ್ಮಾರ್ಟ್‌ಟಿವಿಗಳನ್ನು ಖರೀದಿಸಲು ಅವಕಾಶವಿದೆ. ಜೊತೆಗೆ ಈ ಮೂರು ಸ್ಮಾರ್ಟ್‌ಟಿವಿಗಳಲ್ಲಿ S5400 ಮತ್ತು S5403A ಎರಡು ಸ್ಮಾರ್ಟ್‌ಟಿವಿಗಳ ಮೇಲೆ 10% ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಸಹ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.
TCL S Series Google And Android Tvs Launched In India Check Details.
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 10:33 pm
Mangalore Correspondent
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
Ullal news, Mangalore, Batapady; ಭ್ರಷ್ಟ ಅಧಿಕಾ...
22-11-24 11:55 am
22-11-24 10:47 pm
Mangalore Correspondent
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm