ಬ್ರೇಕಿಂಗ್ ನ್ಯೂಸ್
16-02-23 07:30 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ Nokia ಬ್ರ್ಯಾಂಡ್ ಒಡೆತನವನ್ನು ಹೊಂದಿರುವ ಹೆಚ್‌ಎಂಡಿ ಗ್ಲೋಬಲ್ ಸಂಸ್ಥೆ ದೇಶದ ಮೊಬೈಲ್ ಮಾರುಕಟ್ಟೆಗೆ ತನ್ನ ವಿನೂತನ Nokia X30 5G ಸ್ಮಾರ್ಟ್‌ಫೋನನ್ನು ಪರಿಚಯಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆಯ್ದ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಾಗಿದ್ದ ಈ Nokia X30 5G ಸ್ಮಾರ್ಟ್‌ಫೋನ್ ಮರುಬಳಕೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು ಮರುಬಳಕೆಯ ಪ್ಲಾಸ್ಟಿಕ್ ನಲ್ಲಿ ತಯಾರಾದ ಅತ್ಯಂತ ಪರಿಸರ ಸ್ನೇಹಿ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗಿತ್ತು. ಇದೀಗ ದೇಶದಲ್ಲಿಯೂ ಸಹ ಇದೇ ವೈಶಿಷ್ಟ್ಯಗಳೊಂದಿಗೆ Nokia X30 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಹಾಗಾದರೆ, ನೂತನ Nokia X30 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಹೇಗಿದೆ ಹೊಸ Nokia X30 5G ಸ್ಮಾರ್ಟ್‌ಫೋನ್?
ನೂತನ Nokia X30 5G ಸ್ಮಾರ್ಟ್‌ಫೋನ್ IP67 ವಾಟರ್ ರೆಸಿಸ್ಟೆಂಡ್ ಸಾಮರ್ಥ್ಯದೊಂದಿಗೆ 100 ಪ್ರತಿಶತದಷ್ಟು ಮರುಬಳಕೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು 65 ಪ್ರತಿಶತದಷ್ಟು ಮರುಬಳಕೆಯ ಪ್ಲಾಸ್ಟಿಕ್ ಹೊಂದಿರುವ ಪರಿಸರ ಸ್ನೇಹಿ ವಿನ್ಯಾಸವನ್ನು ಹೊಂದಿದೆ. 90Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿರುವ 6.43-ಇಂಚಿನ ಫುಲ್-ಎಚ್‌ಡಿ+ (1,080x2,400 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ ಇದರಲ್ಲಿದ್ದು, ಇದು 700 ನಿಟ್‌ಗಳ ಗರಿಷ್ಠ ಹೊಳಪು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಪಡೆದಿದೆ. ಹುಡ್ ಅಡಿಯಲ್ಲಿ, 8GB RAM ಮತ್ತು 256GB ಸ್ಟೋರೇಜ್ ಜೊತೆಗೆ ಜೋಡಲಾಗಿರುವ Snapdragon 695 5G ಪ್ರೊಸೆಸರ್ ಅನ್ನು Nokia X30 5G ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, ಇದು ಆಂಡ್ರಾಯ್ಡ್ 12 ರಲ್ಲಿ ಕಾರ್ಯನಿರ್ವಹಿಸಲಿದೆ. ಕಂಪೆನಿಯು ಈ ಸ್ಮಾರ್ಟ್‌ಫೋನ್‌ಗೆ ಮೂರು ಓಎಸ್ ನವೀಕರಣಗಳು ಮತ್ತು ಮೂರು ವರ್ಷಗಳ ಮಾಸಿಕ ಭದ್ರತಾ ನವೀಕರಣಗಳನ್ನು ಭರವಸೆ ನೀಡಿದೆ.
ಕ್ಯಾಮೆರಾ ವಿಭಾಗದಲ್ಲಿ, Nokia X30 5G ಸ್ಮಾರ್ಟ್‌ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಲೇಯರ್ ಪ್ರೊಟೆಕ್ಷನ್ ಇರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ಯೂರ್ ವ್ಯೂ ಒಐಎಸ್ ಪ್ರಾಥಮಿಕ ಲೆನ್ಸ್ ಜೊತೆಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ಗಳಿಂದ ಶಕ್ತವಾಗಿದೆ. ಈ ಕ್ಯಾಮೆರಾವು ಎಐ ಪೋರ್ಟ್ರೇಟ್, ನೈಟ್ ಮೋಡ್ 2.0, ಡಾರ್ಕ್ ವಿಷನ್, ಟ್ರೈಪಾಡ್ ಮೋಡ್ ಮತ್ತು ನೈಟ್ ಸೆಲ್ಫಿ ಸೇರಿದಂತೆ ವಿಭಿನ್ನ ಫೋಟೊಗ್ರಫಿ ಮೂಡ್‌ಗಳನ್ನು ಬೆಂಬಲಿಸಲಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, 16 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ವೈ-ಫೈ 802.11 ಎ/ಬಿ/ಜಿ/ಎನ್/ಎಸಿ/ಎಎಕ್ಸ್-ರೆಡಿ, ಬ್ಲೂಟೂತ್ 5.1, ಎನ್‌ಎಫ್‌ಸಿ, ಜಿಪಿಎಸ್/ಎಜಿಪಿಎಸ್, ಗ್ಲೋನಾಸ್, ಬೀಡೌ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,200mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
Nokia X30 5G ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ
ಭಾರತದ ಮಾರುಕಟ್ಟೆಗೆ Nokia X30 5G ಸ್ಮಾರ್ಟ್‌ಫೋನನ್ನು (ಏಕೈಕ 8GB RAM ಮತ್ತು 256GB ಸ್ಟೋರೇಜ್ ಮಾದರಿ) 48,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ. ಪ್ರಸ್ತುತ ಕ್ಲೌಡ್ ಬ್ಲೂ ಮತ್ತು ಐಸ್ ವೈಟ್ ಎರಡು ಬಣ್ಣಗಳಲ್ಲಿ ನೋಕಿಯಾ ಇಂಡಿಯಾ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಪೂರ್ವ-ಬುಕಿಂಗ್‌ಗೆ ಲಭ್ಯವಿರುವ Nokia X30 5G ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಫೆಬ್ರವರಿ 20 ರಿಂದ ಪ್ರಾರಂಭವಾಗಲಿದೆ. ಇನ್ನು Nokia X30 5G ಸ್ಮಾರ್ಟ್‌ಫೋನ್ ಖರೀದಿಯ ಮೇಲಿನ ಕೊಡುಗೆಯಾಗಿ 2,799 ರೂ. ಬೆಲೆ ಹೊಂದಿರುವ Nokia Comfort ಇಯರ್‌ಬಡ್ಸ್ ಹಾಗೂ 2,999 ರೂ. ಬೆಲೆ ಹೊಂದಿರುವ 33W ಚಾರ್ಜರ್ ಸಾಧನಗಳನ್ನು Nokia X30 5G ಸ್ಮಾರ್ಟ್‌ಫೋನ್ ಖರೀದಿಯ ಜೊತೆಗೆ ಉಚಿತವಾಗಿ ಒದಗಿಸಲಾಗುವುದು ಎಂದು ಹೆಚ್‌ಎಂಡಿ ಗ್ಲೋಬಲ್ ಸಂಸ್ಥೆ ತಿಳಿಸಿದೆ.
nokia x30 5g with dual rear cameras launched in india check price and specifications.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm