ಬ್ರೇಕಿಂಗ್ ನ್ಯೂಸ್
23-02-23 07:57 pm Source: Vijayakarnataka ಡಿಜಿಟಲ್ ಟೆಕ್
ಅತ್ಯುತ್ತಮ ಪ್ರೀಮಿಯಂ ಗೇಮಿಂಗ್ ಲ್ಯಾಪ್‌ಟಾಪ್ ಖರೀದಿಗಾಗಿ ಎದುರುನೋಡುತ್ತಿರುವ ಭಾರತೀಯ ಗ್ರಾಹಕರಿಗಾಗಿ HP ಸಂಸ್ಥೆ ದೇಶದಲ್ಲಿಂದು ತನ್ನ ಪ್ರೀಮಿಯಂ 'HP Omen 17' ಲ್ಯಾಪ್‌ಟಾಪ್ ಸಾಧನವನ್ನು ಪರಿಚಯಿಸಿದೆ. ಇತ್ತೀಚಿನ Nvidia GeForce RTX4080 ಮೊಬೈಲ್ GPU ಹೊತ್ತು ಈ ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆಯಾಗಿದ್ದು, ಇದು DLSS 3 (ಗ್ರಾಫಿಕ್ಸ್ ಸುಧಾರಿಸಲು AI ತಂತ್ರಜ್ಞಾನ) ಜೊತೆಗೆ ಒಟ್ಟಾರೆ ಗೇಮಿಂಗ್ ಅನುಭವವನ್ನು ಸುಧಾರಿಸುವ ಶಕ್ತಿ ಹೊಂದಿದೆ. ಹಾಗೂ 2023 ಆವೃತ್ತಿಯ 13-ಜನ್ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು HP ಸಂಸ್ಥೆ ತಿಳಿಸಿದೆ. ಹಾಗಾದರೆ, ದೇಶದಲ್ಲಿ ಬಿಡುಗಡೆಯಾಗಿರುವ ಪ್ರೀಮಿಯಂ 'HP Omen 17' ಲ್ಯಾಪ್‌ಟಾಪ್ ಹೇಗಿದೆ ಮತ್ತು ಇದರ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
'HP Omen 17' ಲ್ಯಾಪ್‌ಟಾಪ್ ವೈಶಿಷ್ಟ್ಯಗಳು.
HP Omen 17 ಹೆಸರೇ ಸೂಚಿಸುವಂತೆ ಈ ಲ್ಯಾಪ್‌ಟಾಪ್ 17-ಇಂಚಿನ ಡಿಸ್‌ಪ್ಲೇ ಹೊಂದಿದೆ (17.3-ಇಂಚು ನಿಖರವಾಗಿ). ಇದರಲ್ಲಿ 144Hz ರಿಫ್ರೆಶ್ ರೇಟ್‌ನೊಂದಿಗೆ ಫುಲ್-HD ರೆಸಲ್ಯೂಶನ್ (1920x1080 ಪಿಕ್ಸೆಲ್‌ಗಳು) ಅಥವಾ 240Hz ರಿಫ್ರೆಶ್ ದರದೊಂದಿಗೆ QHD ರೆಸಲ್ಯೂಶನ್ (2560x1440) ಡಿಸ್‌ಪ್ಲೇ ಹೊಂದಿರುವ ಮಾದರಿಗಳ ನಡುವೆ ಲ್ಯಾಪ್‌ಟಾಪ್ ಆಯ್ಕೆ ಮಾಡಬಹುದಾಗಿದ್ದು, ಈ ಎರಡೂ ಡಿಸ್‌ಪ್ಲೇ ಮಾದರಿಗಳು IPS LCD ಟೆಕ್ನಾಲಜಿಯನ್ನು ಒಳಗೊಂಡಿವೆ. ಹುಡ್ ಅಡಿಯಲ್ಲಿ, ಇತ್ತೀಚಿನ GeForce RTX Laptop GPU (even RTX4080) ಜೊತೆಗೆ ಜೋಡಿಸಲಾಗಿರುವ Intel i9-13900H ಪ್ರೊಸೆಸರ್ ಹೊಂದಿರುವ HP Omen 17 ಲ್ಯಾಪ್‌ಟಾಪ್ ಗೇಮರ್‌ಗಳಿಗೆ ಸೂಕ್ತವಾದ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಇವುಗಳಲ್ಲಿ, Wi-Fi 6e ರೂಟರ್ ಹೊಂದಿರುವ ವೃತ್ತಿಪರ ಗೇಮರ್‌ಗಳು ಈ ಗೇಮಿಂಗ್ ಲ್ಯಾಪ್‌ಟಾಪ್‌ನಲ್ಲಿ Wi-Fi 6e ಬೆಂಬಲದೊಂದಿಗೆ ವೇಗದ ಇಂಟರ್ನೆಟ್ ಅನ್‌ಲಾಕ್ ಮಾಡಬಹುದು ಎಂದು ಕಂಪೆನಿ ತಿಳಿದಿದೆ.
ಈ HP Omen 17 ಲ್ಯಾಪ್‌ಟಾಪ್‌ನಲ್ಲಿ HP ವೈಡ್ ವಿಷನ್ ಸಾಮರ್ಥ್ಯದ 720p HD ಕ್ಯಾಮೆರಾ ಇದೆ. ನೀವು ಸ್ಟ್ರೀಮರ್ ಆಗಿದ್ದರೆ, ಲ್ಯಾಪ್‌ಟಾಪ್‌ನಲ್ಲಿರುವ ತಾತ್ಕಾಲಿಕ ಶಬ್ದ ಕಡಿತ ಮತ್ತು ಸಂಯೋಜಿತ ಡ್ಯುಯಲ್ ಅರೇ ಡಿಜಿಟಲ್ ಮೈಕ್ರೋಫೋನ್‌ಗಳೊಂದಿಗೆ ಡ್ಯುಯಲ್ ಸ್ಪೀಕರ್‌ಗಳು Bang ಮತ್ತು Olufsen ಶಬ್ದವನ್ನು ಒದಗಿಸಲಿವೆ. ಇನ್ನು ಈ ಲ್ಯಾಪ್‌ಟಾಪ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬಳಕೆದಾರರು USB ಟೈಪ್-C (40Gbps), 1 ಥಂಡರ್ಬೋಲ್ಟ್ 4, 1 ಥಂಡರ್ಬೋಲ್ಟ್ 3, 3 USB ಟೈಪ್-A, 1 RJ-45, 1 ಹೆಡ್‌ಫೋನ್/ ಮೈಕ್ರೊಫೋನ್ ಕಾಂಬೊ, 1 AC ಸ್ಮಾರ್ಟ್ ಪಿನ್, 1 ಮಿನಿ ಡಿಸ್ಪ್ಲೇಪೋರ್ಟ್, ಮತ್ತು 1 HDMI 2.1 ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಇದರೊಂದಿಗೆ ಈ ಲ್ಯಾಪ್‌ಟಾಪ್ ಫುಲ್ ಸೈಜ್ 4 ರೇಂಜ್ RGB ಬ್ಯಾಕ್‌ಲಿಟ್ ಕೀಬೋರ್ಡ್ ಸಹ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, HP Omen 17 ಲ್ಯಾಪ್‌ಟಾಪ್ 83Wh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 330W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ಕಂಪೆನಿ ಹೇಳಿದೆ. .
'HP Omen 17' ಲ್ಯಾಪ್‌ಟಾಪ್ ಬೆಲೆ ಮತ್ತು ಲಭ್ಯತೆ
GeForce RTX 40 ಸರಣಿಯ ಈ ಲ್ಯಾಪ್‌ಟಾಪ್ ಉನ್ನತ-ಮಟ್ಟದ ಇಂಟೆಲ್ ಕೋರ್ ಪ್ರೊಸೆಸರ್, ಉತ್ತಮ ಪ್ರದರ್ಶನ ಮತ್ತು ಹೆಚ್ಚು ಶಕ್ತಿಶಾಲಿ Nvidia GPU ಹೊಂದಿರುವುದರಿಂದ ಸ್ವಾಭಾವಿಕವಾಗಿ ಇದರ ಬೆಲೆ ಹೆಚ್ಚಾಗಿದ್ದು, ದೇಶದಲ್ಲಿ 2,69,990 ರೂ.ಗಳ ಆರಂಭಿ ಬೆಲೆಯಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು HP Omen 17 ಲ್ಯಾಪ್‌ಟಾಪ್ ಅನ್ನು Omen ಪ್ಲೇಗ್ರೌಂಡ್ ಸ್ಟೋರ್‌ಗಳು, HP ವರ್ಲ್ಡ್ ಸ್ಟೋರ್‌ಗಳು ಮತ್ತು HP ಆನ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಲು ಸಾಧ್ಯವಿದ್ದು, ಕೆಲವು ಕೊಡುಗೆಗಳು ಸಹ ದೊರೆಯುವ ನಿರೀಕ್ಷೆ ಇದೆ.
HP omen 17 gaming laptop launched in india: check features and price.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm