ದೇಶದಲ್ಲಿ ಹೊಸ iTel Pad One ಟ್ಯಾಬ್ಲೆಟ್ ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

03-03-23 07:37 pm       Source: Vijayakarnataka   ಡಿಜಿಟಲ್ ಟೆಕ್

ಕ್ಯಾಮೆರಾ ವಿಭಾಗದಲ್ಲಿ, ಹೊಸ iTel Pad One ಟ್ಯಾಬ್ಲೆಟ್‌ನಲ್ಲಿ 5MP ಸಾಮರ್ಥ್ಯದ ಸಿಂಗಲ್‌ ರಿಯರ್ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ 8MP ವೈಡ್-ಆಂಗಲ್ ಸೆಲ್ಫಿ.

ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಹೆಸರಾಂತ ಟೆಕ್ ಬ್ರ್ಯಾಂಡ್ ಐಟೆಲ್ (iTel) ದೇಶದಲ್ಲಿ ನೂತನ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಗಮನಸೆಳೆದಿದೆ. iTel Pad One ಎಂಬ ಹೆಸರಿನಲ್ಲಿ ಐಟೆಲ್ ಕಂಪೆನಿಯ ಇತ್ತೀಚಿನ ಈ ಹೊಸ ಟ್ಯಾಬ್ಲೆಟ್ ದೇಶದಲ್ಲಿ ಬಿಡುಗಡೆಯಾಗಿದ್ದು, ಇದು 10.1-ಇಂಚಿನ ಡಿಸ್‌ಪ್ಲೇ, ಯುನಿಸೊಕ್ SC9863A1 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 6,000mAh ಬ್ಯಾಟರಿ ಸೇರಿದಂತೆ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ಐಟೆಲ್ ಪರಿಚಯಿಸಿರುವ ಹೊಸ iTel Pad One ಟ್ಯಾಬ್ಲೆಟ್ ಹೇಗಿದೆ ಮತ್ತು ಈ ಟ್ಯಾಬ್ಲೆಟ್ ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.

iTel Pad One ಟ್ಯಾಬ್ಲೆಟ್ ವೈಶಿಷ್ಟ್ಯಗಳು
ನೂತನ iTel Pad One ಟ್ಯಾಬ್ಲೆಟ್‌ ಬಾಕ್ಸಿ ಫಾರ್ಮ್ ಫ್ಯಾಕ್ಟರ್‌ ಮೆಟಲ್‌ ಯುನಿಬಾಡಿ ಮತ್ತು ಥಿಕ್ನೆಸ್ ಬೆಜೆಲ್‌ಗಳನ್ನು ಒಳಗೊಂಡಿರುವ 10.1 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, 4GB RAM ಮತ್ತು 128GB ಸ್ಟೋರೇಜ್ ಜೊತೆಗೆ ಸಂಯೋಜಿಸಲಾಗಿರುವ ಯುನಿಸೊಕ್ SC9863A1 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿರುವ ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 12 Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ SD ಕಾರ್ಡ್ ಸ್ಲಾಟ್ ಮೂಲಕ 512GB ವರೆಗೆ ಮೆಮೊರಿ ವಿಸ್ತರಣೆಗೆ ಅವಕಾಶವಿದೆ.

iTel Pad 1 Introduced in India at Under Rs 15,000; Check out the Details! |  Beebom

ಕ್ಯಾಮೆರಾ ವಿಭಾಗದಲ್ಲಿ, ಹೊಸ iTel Pad One ಟ್ಯಾಬ್ಲೆಟ್‌ನಲ್ಲಿ 5MP ಸಾಮರ್ಥ್ಯದ ಸಿಂಗಲ್‌ ರಿಯರ್ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ 8MP ವೈಡ್-ಆಂಗಲ್ ಸೆಲ್ಫಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗಮನಾರ್ಹವಾಗಿ, ಈ ಟ್ಯಾಬ್ಲೆಟ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 10W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನುಳಿದಂತೆ, 4G VoLTE, ವೈಫೈ, ಬ್ಲೂಟೂತ್, 3.5mm ಜ್ಯಾಕ್ ಮತ್ತು OTG ಬೆಂಬಲದಂತಹ ಕನೆಕ್ಟಿವಿಟಿ ವೈಶಿಷ್ಟ್ಯಗಳು ಹಾಗೂ ಡ್ಯುಯಲ್ ಸ್ಪೀಕರ್‌ಗಳನ್ನು ಈ ಟ್ಯಾಬ್ಲೆಟ್ ಒಳಗೊಂಡಿದೆ.

iTel PAD 1 4G tablet launched with 6,000mAh battery and 10.1-inch display,  price is less than 13 thousand - Digit News

iTel Pad One ಟ್ಯಾಬ್ಲೆಟ್ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನೂತನ iTel Pad One ಟ್ಯಾಬ್ಲೆಟ್ 12,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬಂದಿರುವ ಈ ಹೊಸ iTel Pad One ಟ್ಯಾಬ್ಲೆಟ್ ಶೀಘ್ರದಲ್ಲೇ ಇನ್ನಿತರ ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳು ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟಕ್ಕೆ ಬರಲಿದ್ದು, ಗ್ರಾಹಕರು ಡೀಪ್ ಗ್ರೇ ಮತ್ತು ಲೈಟ್ ಬ್ಲೂ ಎರಡು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.

itel pad one with 6,000mah battery launched in india check details.