ಬ್ರೇಕಿಂಗ್ ನ್ಯೂಸ್
08-03-23 09:47 pm HK News Desk ಡಿಜಿಟಲ್ ಟೆಕ್
ಮೊಬೈಲ್ ಕಳೆದುಹೋದರೆ ಜನರು ಮೊದಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಫೈಂಡ್ ಮೈ ಡಿವೈಸ್ ನೆರವಿ ನೊಂದಿಗೆ ಫೋನ್ ಹುಡುಕುವ ಪ್ರಯತ್ನ ಸಹ ಮಾಡುತ್ತಾರೆ. ಇನ್ನು ಕೆಲವರು ಕಳೆದು ಹೋದ ಸ್ಮಾರ್ಟ್‌ಫೋನ್ ಮರಳಿ ಸಿಗುವ ಭರವಸೆಯನ್ನೇ ಕಳೆದುಕೊಳ್ಳುತ್ತಾರೆ.
ಕಳೆದುಹೋದ ಫೋನ್ ಮತ್ತೆ ಸಿಗುತ್ತೆ ಎನ್ನುವ ಭರವಸೆ ಬಹುತೇಕರಲ್ಲಿ ಇರುವುದಿಲ್ಲ. ಆದರೆ ಪೊಲೀಸ್ ಇಲಾಖೆಯಿಂದ ಮೊಬೈಲ್ ಪತ್ತೆ ಹಚ್ಚಲು ನೂತನ ಇ - ಪೋರ್ಟಲ್ www.ceir.gov.in/Home/index.jsp ಜಾರಿ ಮಾಡಲಾಗಿದೆ. ಈ ಮೂಲಕ ಕಳೆದುಹೋದ ಫೋನ್ ಮತ್ತೆ ಸಿಗುತ್ತೆ ಎನ್ನುವ ಭರವಸೆ ಉಳಿಸಿಕೊಳ್ಳುವಂತೆ ಮಾಡಿದೆ.
ಹೌದು, ಒಂದು ವೇಳೆ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಇ - ಪೋರ್ಟಲ್‌ನಲ್ಲಿ ಮನೆಯಲ್ಲಿಯೇ ಕುಳಿತು ಸುಲಭವಾಗಿ ದೂರು ದಾಖಲಿಸಬಹುದಾಗಿದೆ. ದೂರು ನೀಡಿದ ಕೆಲವೇ ದಿನಗಳಲ್ಲಿ ಫೋನ್ ಪತ್ತೆ ಮಾಡಲಾಗುತ್ತದೆ. ಹಾಗೆಯೇ ಪತ್ತೆಯಾಗದ ಫೋನ್‌ಗಳ ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಬಹುದಾಗಿದೆ.
ಇತ್ತೀಚಿಗೆ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈ ಮೂಲಕ ಸುಮಾರು 30 ಫೋನ್‌ಗಳನ್ನು ಪೊಲೀಸ್‌ರು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ರಮಣ್‌ಗುಪ್ತಾ ಅವರು ತಿಳಿಸಿದ್ದಾರೆ. ಇ - ಪೋರ್ಟಲ್‌ನಲ್ಲಿ ಫೋನ್ ಕಳೆದುಹೋಗಿರುವ ಬಗ್ಗೆ ದೂರು ದಾಖಲಿಸಿದ್ದ ವಾರಸುದಾರರಿಗೆ ಅವರ ಫೋನ್‌ಗಳನ್ನು ವಾಪಸ್ ಹಸ್ತಾಂತರಿಸಿದ್ದಾರೆ.
ನಿಮ್ಮ ಫೋನ್ ಕಳೆದುಹೋದರೆ ಕೂಡಲೇ ಹೀಗೆ ಮಾಡಿ:
ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿ ;
ಸಿಮ್ ಕಾರ್ಡ್ ಅನ್ನು ತಕ್ಷಣವೇ ನಿರ್ಬಂಧಿಸಿ, ಇದರಿಂದ ಕಳ್ಳರು ಹಣಕಾಸು ಸೇವೆಗಳ OTP ಗಳಿಗೆ ಅಥವಾ ಇತರ ವೈಯಕ್ತಿಕ ಸಂದೇಶಗಳಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಸಹಜವಾಗಿ, ನೀವು ಹೊಸ ಸಿಮ್ ಕಾರ್ಡ್‌ನೊಂದಿಗೆ ಅದೇ ಮೊಬೈಲ್ ಸಂಖ್ಯೆಯನ್ನು ಬಳಸುವುದನ್ನು ಮುಂದುವರಿಸಬಹುದು. ಆದರೆ ನಿಮ್ಮ ಹಳೆಯ ಮೊಬೈಲ್ ಸಂಖ್ಯೆಗೆ ಹೊಸ ಸಿಮ್ ಕಾರ್ಡ್ ಪಡೆಯುವ ಸಂಪೂರ್ಣ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ;
ನಿಮ್ಮ ಮೊಬೈಲ್ ಫೋನ್ ಕಳೆದುಕೊಂಡ ಕ್ಷಣ, ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ. ಕಳ್ಳರು ನಿಮ್ಮ ಬ್ಯಾಂಕಿಂಗ್ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾದರೆ ಅವರು ಸುಲಭವಾಗಿ ಹಣವನ್ನು ವರ್ಗಾಯಿಸಬಹುದು ಏಕೆಂದರೆ ಅವರು ನಿಮ್ಮ ಮೊಬೈಲ್‌ನಲ್ಲಿ OTP ಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಏಕೆಂದರೆ ನಿಮ್ಮ ಟೆಲಿಕಾಂ ಆಪರೇಟರ್ ನಿಮ್ಮ ಸಿಮ್ ಅನ್ನು ನಿರ್ಬಂಧಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
DOT had launched the portal to curtail the counterfeit mobile phone market, curb phone theft, protect consumer interest and help law enforcement agencies for lawful interception. CEIR gets connected to the IMEI database of all the mobile phone operators while acting as a Central system for all network operators to share blacklisted mobile devices. This was to ensure a device blacklisted in one network did not work on other networks even if the Subscriber Identity Module (SIM) in the device was changed.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm