ಇದೇ ಮಾರ್ಚ್ 14 ರಂದು ಭಾರತಕ್ಕೆ ಎಂಟ್ರಿ ನೀಡುತ್ತಿದೆ POCO X5 5G ಸ್ಮಾರ್ಟ್‌ಫೋನ್!

10-03-23 09:02 pm       Source: Vijayakarnataka   ಡಿಜಿಟಲ್ ಟೆಕ್

ಹೊಸ POCO X5 5G ಸ್ಮಾರ್ಟ್‌ಫೋನ್ 6.67-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇಯು 120Hz ರಿಫೇಶ್ ರೇಟ್, ಫುಲ್‌ ಹೆಚ್‌ಡಿ + ರೆಸಲ್ಯೂಶನ್, 1200 ನೈಟ್ಸ್ ಗರಿಷ್ಠ ಬ್ರೈಟ್‌ನೆಸ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿರಲಿದೆ.!

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Poco ಭಾರತದಲ್ಲಿ ತನ್ನ ಹೊಸ Poco X ಸರಣಿಯ ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲಿ ಇದೇ ಮಾರ್ಚ್ 14 ಎಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಹೊಸ POCO X5 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವುದಾಗಿ ಪೊಕೊ ಇಂಡಿಯಾದ ಮುಖ್ಯಸ್ಥ ಹಿಮನ್‌ಶು ಟಂಡನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ದೃಢಪಡಿಸಿದ್ದು, ಪ್ರಮುಖ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮೂಲಕ ಹೊಸ POCO X5 5G ಸ್ಮಾರ್ಟ್‌ಫೋನನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.

ಹಿಮನ್‌ಶು ಟಂಡನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಟೀಸರ್‌ನಲ್ಲಿ POCO X5 5G ಸ್ಮಾರ್ಟ್‌ನ್ ಬಿಡುಗಡೆ ದಿನಾಂಕ ಸೇರಿದಂತೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ. ಅವುಗಳಲ್ಲಿ ಹೊಸ POCO X5 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಪ್ಪು, ನೀಲಿ ಮತ್ತು ಹಸಿರು ಬಣ್ಣ ಆಯ್ಕೆಗಳಲ್ಲಿ ಬರಲಿದೆ ಎಂದು ತೋರಿಸುತ್ತದೆ. ಹಾಗೂ, ಇದು ದೇಶದಲ್ಲಿ ಅಗ್ಗದ ಎಕ್ಸ್-ಸೀರೀಸ್ ಸ್ಮಾರ್ಟ್‌ಫೋನ್ ಆಗಿರಬಹುದು ಎಂದು ತಿಳಿದುಬರುತ್ತಿದೆ. ಹಾಗಾದರೆ, ಇದೀಗ ಹೊಸ POCO X5 5G ಸ್ಮಾರ್ಟ್‌ಫೋನ್ ಕುರಿತು ನಾವು ತಿಳಿದಿರುವ ಎಲ್ಲಾ ಮಾಹಿತಿಗಳನ್ನು ನೋಡೋಣ ಬನ್ನಿ.

Poco X5 5G Confirmed To Launch On March 14 In India: Check Price, Release  Date, Specifications, Other Details | Technology News | Zee News

POCO X5 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು.
ಹೊಸ POCO X5 5G ಸ್ಮಾರ್ಟ್‌ಫೋನ್ 6.67-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇಯು 120Hz ರಿಫೇಶ್ ರೇಟ್, ಫುಲ್‌ ಹೆಚ್‌ಡಿ + ರೆಸಲ್ಯೂಶನ್, 1200 ನೈಟ್ಸ್ ಗರಿಷ್ಠ ಬ್ರೈಟ್‌ನೆಸ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿರಲಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ಮತ್ತು ಅಡ್ರಿನೊ 619 ಜಿಪಿಯು ಹೊಂದಿರಲಿದೆ ಎಂದು ಮೈ ಸ್ಮಾರ್ಟ್‌ಪ್ರೈಸ್ ವರದಿ ಮಾಡಿದೆ.

Poco X5 5G India Launch Set for March 14, To Be Priced Under Rs. 20,000 |  Technology News

ಮೈ ಸ್ಮಾರ್ಟ್‌ಪ್ರೈಸ್ ವರದಿಯ ಪ್ರಕಾರ, ಈ ಹೊಸ POCO X5 5G ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಷ್ ಜೊತೆಗೆ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಎಂದು ಹೇಳಲಾಗಿದೆ. ಇದು 48 ಎಂಪಿ ಸಾಮರ್ಥ್ಯದ ಪ್ರಾಥಮಿಕ ಲೆನ್ಸ್, 8 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2 ಎಂಪಿ ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿರಬಹುದು. ಹಾಗೂ,ಸೆ ಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13 ಎಂಪಿ ಸಾಮರ್ಥ್ಯದ ಕ್ಯಾಮೆರಾ ಇರುವ ಸಾಧ್ಯತೆ ಇದೆ ಎಂದು ಹೇಳಿದೆ.

POCO X5 5G ಸ್ಮಾರ್ಟ್‌ಫೋನ್ ಸಂಪರ್ಕ ಆಯ್ಕೆಗಳಲ್ಲಿ, 5G ಟೈಪ್-ಸಿ ಯುಎಸ್‌ಬಿ ಪೋರ್ಟ್ ಮತ್ತು 3.5 ಎಂಎಂ ಜ್ಯಾಕ್ ವೈಶಿಷ್ಟ್ಯಗಳು ಇರಲಿವೆ. ವಿಶೇರಷವಾಗಿ, ಈ ಹೊಸ ಸ್ಮಾರ್ಟ್‌ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ ಬೃಹತ್ 5000mAh ಬ್ಯಾಟರಿ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಜೊತೆಗೆ ಬರಲಿದೆ ಎಂದು ವರದಿಯು ಹೇಳಿದೆ. ಇನ್ನು ಈ POCO X5 5G ಭಾರತದಲ್ಲಿ 18,000 ರೂ.ಗಿಂತ ಕಡಿಮೆ ಬೆಲೆ ಹೊಂದಿರಲಿದೆ ಎಂದು ವರದಿಯು ಅಭಿಪ್ರಾಯಪಟ್ಟಿದೆ.

poco x5 5g india launch on march 14 price and features details.