ಗ್ರೂಪ್ ಗಳಿಂದ ಶಾಶ್ವತವಾಗಿ ಮುಕ್ತಿ ಹೊಂದಲು ಹೊಸ ಫೀಚರ್ ನೀಡಿದ ವಾಟ್ಸಾಪ್!!!

23-10-20 04:07 pm       Headline Karnataka News Network   ಡಿಜಿಟಲ್ ಟೆಕ್

ವಾಟ್ಸಾಪ್ ಬಳಕೆದಾರರು ಈಗ ಚಾಟ್‌ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡಬಹುದಾದಂತ ವೈಶಿಷ್ಟ್ಯವು ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗಳಲ್ಲಿ ಈಗ ಲಭ್ಯವಿದೆ

ಅಮೆರಿಕಾ, ಅಕ್ಟೋಬರ್.23 : ಫ್ಯಾಮಿಲಿ  ಗ್ರೂಪ್​, ಆಫೀಸ್​ ಗ್ರೂಪ್​ ಹೀಗೆ ಇಂತಹ ಹಲವಾರು ಗ್ರೂಪ್​ಗಳಲ್ಲಿ ಬರುವ ಅನಗತ್ಯ ಮೆಸೇಜ್​ಗಳು ತುಂಬಾನೇ ಕಿರಿಕಿರಿ ನೀಡುತ್ತವೆ. ಇಂತಹ ಚಾಟ್‌ಗಳನ್ನು ಇದೀಗ  ಶಾಶ್ವತವಾಗಿ ಮ್ಯೂಟ್ ಮಾಡುವಂತಹ  ಹೊಸ ವೈಶಿಷ್ಟ್ಯವು ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದೆ, ಮತ್ತು ವೆಬ್ ಆವೃತ್ತಿಯಲ್ಲೂ ಲಭ್ಯವಿದೆ.

ಈ ಹಿಂದೆ ವೈಯಕ್ತಿಕ ಚಾಟ್ಸ್​ ಅಥವಾ ಗ್ರೂಪ್​ ಚಾಟ್​​ಗಳನ್ನ ಮ್ಯೂಟ್​​ ಮಾಡಲು ಮಾಡಲು ಮೂರು ಆಯ್ಕೆ ಇತ್ತು. 8 ಗಂಟೆಗಳವರೆಗೆ, ಒಂದು ವಾರ ಅಥವಾ ಒಂದು ವರ್ಷದವರೆಗೆ ಚಾಟ್​​ಗಳನ್ನ ಮ್ಯೂಟ್ ಮಾಡಬಹುದಿತ್ತು. ಈಗ ಅದ್ರಲ್ಲಿ ಬದಲಾವಣೆ ತರಲಾಗಿದೆ.

 ಒಂದು ವರ್ಷ ಎಂಬ ಆಯ್ಕೆಯ ಬದಲಾಗಿ ಆಲ್​ವೇಸ್​ ಎಂಬ ಆಯ್ಕೆಯನ್ನ ನೀಡಲಾಗಿದ್ದು, ಇನ್ಮುಂದೆ ನೀವು ಬಯಸಿದ ಚಾಟ್​​​ಗಳನ್ನ ಶಾಶ್ವತವಾಗಿ ಮ್ಯೂಟ್​ ಮಾಡಬಹುದು.

ಇನ್ನು, ಶೀಘ್ರವೇ ವೆಕೇಶನ್​ ಮೋಡ್  ಆಯ್ಕೆ ಕೂಡ ಸಿಗಲಿದೆ. ಯಾವುದಾದರೂ ಚ್ಯಾಟ್​ಅನ್ನು ವಾಟ್ಸ್​​ಆಯಪ್​​ನಲ್ಲಿ ನೀವು ಆರ್ಕೈವ್​ ಮಾಡಿದರೆ ಅದು ತಾತ್ಕಾಲಿಕವಾಗಿ ಹೈಡ್​ ಆಗುತ್ತಿತ್ತು. ಹೊಸ ಸಂದೇಶ ಬಂದ ಕೂಡಲೇ ಈ ಚ್ಯಾಟ್​ ಮತ್ತೆ ಕಾಣುತ್ತಿತ್ತು. ಆದರೆ, ಹೊಸ ಅಪ್ಡೇಟ್​ನಲ್ಲಿ ಈ ಚ್ಯಾಟ್​ಅನ್ನು ಶಾಶ್ವತವಾಗಿ ಆರ್ಕೈವ್​ ಮಾಡಬಹುದಾಗಿದೆ.