8GB+128GB ಸ್ಟೋರೇಜ್ ಮಾದರಿಯಲ್ಲಿ Moto G32 ಫೋನ್ ಬಿಡುಗಡೆಯಾಗುವ ಸೂಚನೆ!

21-03-23 07:11 pm       Source: Vijayakarnataka   ಡಿಜಿಟಲ್ ಟೆಕ್

Moto G32 ಸ್ಮಾರ್ಟ್‌ಫೋನಿನಲ್ಲಿ 85.4% ಪರದೆ-ಟು-ಬಾಡಿ ನಡುವಿನ ರೇಷ್ಯೂ ಹೊಂದಿರುವ 6.5 ಇಂಚಿನ ದೊಡ್ಡ ಫುಲ್‌ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇ.

ದೇಶದಲ್ಲಿ ಪ್ರಸ್ತುತ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ Moto G32 ಇದೀಗ ಹೊಸದಾಗಿ 8GB+128GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆಯಾಗುವ ಸೂಚನೆ ದೊರೆತಿದೆ. ಕಳೆದ ಆಗಸ್ಟ್ 2022 ರಲ್ಲಿ ದೇಶದಲ್ಲಿ ಏಕೈಕ 4GB + 128GB ಸ್ಟೋರೇಜ್ ಮಾದರಿಯಲ್ಲಿ Moto G32 ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿತ್ತು. ಇದೀಗ ಈ Moto G32 ಸ್ಮಾರ್ಟ್‌ಫೋನ್ ಹೊಸದಾಗಿ 8GB+128GB ಸ್ಟೋರೇಜ್ ಮಾದರಿಯಲ್ಲಿ ಮಾರ್ಚ್ 22 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.!

ಹೌದು, ದೇಶದಲ್ಲಿ Moto G32 ಸ್ಮಾರ್ಟ್‌ಫೋನಿನ ಪ್ರಸ್ತುತ 4GB + 64GB ಸ್ಟೋರೇಜ್ ಮಾದರಿಯು 10,499 ರೂ.ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹಲವಾರು ವೈಶಿಷ್ಟ್ಯಗಳೊಂದಿಗೆ ಈಗಲೂ ಗ್ರಾಹಕರ ಗಮನಸೆಳೆದಿದೆ. ಇದೀಗ ಈ ಸ್ಮಾರ್ಟ್‌ಫೋನ್ನವೀಕರಿಸಿದ RAM ಮತ್ತು ಮೆಮೊರಿಯಲ್ಲಿ ಹಾಗೂ ಉಳಿದ ಅದೇ ವೈಶಿಷ್ಟ್ಯಳೊಂದಿಗೆ ಬರುವ ನಿರೀಕ್ಷೆಯಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ಆದರೆ, Motorola ಕಂಪೆನಿಯಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ ಎಂಬುದು ಸೂಜಿಗವಾಗಿದೆ.

Moto G32 New Variant (8GB RAM) Will Be Launched On March 22, See Details |  Cashify News

ಕಳೆದ ಆಗಸ್ಟ್ 2022 ರಲ್ಲಿ Moto G32 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್, 30W ಚಾರ್ಜಿಂಗ್ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿ, 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಾಮರ್ಥ್ಯದ ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟಪ್ ನಂತರ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗಿತ್ತು. ಇದೀಗ ಹೊಸದಾಗಿ 8GB+128GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆಯಾಗುವ ಸೂಚನೆ ಇರುವುದರಿಂದ, ಈ ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Motorola launched new variant of Moto G32, price less than 12 thousand. Moto  G32 Price in India this Motorola Mobile cost you under Rs12000

Moto G32 ಸ್ಮಾರ್ಟ್‌ಫೋನ್ ವಿಶೇಷಣಗಳು
Moto G32 ಸ್ಮಾರ್ಟ್‌ಫೋನಿನಲ್ಲಿ 85.4% ಪರದೆ-ಟು-ಬಾಡಿ ನಡುವಿನ ರೇಷ್ಯೂ ಹೊಂದಿರುವ 6.5 ಇಂಚಿನ ದೊಡ್ಡ ಫುಲ್‌ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇ ಅಳವಡಿಸಲಾಗಿದೆ. ಈ ಡಿಸ್‌ಪ್ಲೇಯು 90Hz ಪರದೆಯ ರಿಫ್ರೆಶ್ ರೇಟ್ ಸಾಮರ್ಥ್ಯದಲ್ಲಿ ಮತ್ತು 20:9 ರಚನೆಯ ಅನುಪಾತ 1,080x2,400 ಪಿಕ್ಸೆಲ್ಸ್ ರೆಸಲ್ಯೂಶನ್‌ನ ಸಾಮರ್ಥ್ಯದಲ್ಲಿದೆ. ಹುಡ್ ಅಡಿಯಲ್ಲಿ, ಈ Moto G32 ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಇದ್ದು, ಇದನ್ನು 4GB RAM ಮತ್ತು 128GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾಗಿದೆ ಮತ್ತು ಎಸ್‌ಡಿ ಕಾರ್ಡ್‌ನ ಮೂಲಕ ಸಂಗ್ರಹ ಸಾಮರ್ಥ್ಯ 1TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಕೂಡ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ.

Moto G32 ಸ್ಮಾರ್ಟ್‌ಫೋನ್‌ ರಿಯರ್ ಕ್ಯಾಮೆರಾ ಸೆಟ್‌ಆಪ್‌ ಹೊಂದಿದೆ. ಇದು F1.8 ಅಪಾರ್ಚರ್ ಲೆನ್ಸ್ ಜೊತೆಗೆ 50 ಮೆಗಾಪಿಕ್ಸೆಲ್ ಸೆನ್ಸಾರ್, F2.2 ಅಪಾರ್ಚರ್ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಮತ್ತು F2 ಜೊತೆಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ಗಳಿಂದ ಶಕ್ತವಾಗಿದೆ. ಸೆಲ್ಫಿಗಳಿಗಾಗಿ, 16 ಮೆಗಾಪಿಕ್ಸೆಲ್ ಸಾಮರ್ಥ್ಯದ ನೀಡಲಾಗಿದೆ. ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ, USB-C ಪೋರ್ಟ್ ಬ್ಲೂಟೂಟ್ 5.2 ಮತ್ತು ಎನ್‌ಎಫ್‌ಸಿಗೆ ಬೆಂಬಲವನ್ನು ನೀಡಲಿರುವ ಈ Moto G32 ಸ್ಮಾರ್ಟ್‌ಫೋನ್ ಬರೋಬ್ಬರಿ 50000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 30W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

moto g32 may get a new ram, storage variant: check details.