ಬ್ರೇಕಿಂಗ್ ನ್ಯೂಸ್
21-04-23 08:32 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೊ ದೇಶದಲ್ಲಿ ಇತ್ತೀಚಿಗಷ್ಟೇ ಪರಿಚಯಿಸಿರುವ ಅತ್ಯಂತ ಬಜೆಟ್ ಬೆಲೆಯ ವಿವೊ T2x 5G ಸ್ಮಾರ್ಟ್‌ಫೋನ್ ಇಂದಿನಿಂದ (ಏಪ್ರಿಲ್ 21 ) ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ಪ್ರಮುಖ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್, ಕಂಪೆನಿಯ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಈ ಹೊಸ ವಿವೊ T2x 5G ಸ್ಮಾರ್ಟ್‌ಫೋನನ್ನು ಮಾರಾಟಕ್ಕಿಡಲಾಗಿದ್ದು, ಗ್ರಾಹಕರು 4GB RAM + 128GB ಮತ್ತು 6GB + 128GB ಎರಡು ಮಾದರಿಗಳಲ್ಲಿ ಕ್ರಮವಾಗಿ 12,999 ರೂ. ಮತ್ತು 13,999 ರೂ. ಬೆಲೆಗಳಲ್ಲಿ ಹಾಗೂ ಅರೋರಾ ಗೋಲ್ಡ್, ಗ್ಲಿಮ್ಮರ್ ಬ್ಲ್ಯಾಕ್ ಮತ್ತು ಮೆರೈನ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಸಲು ಅವಕಾಶವಿದೆ.
ಕಳೆದ ಏಪ್ರಿಲ್ 11 ರಂದು ದೇಶದಲ್ಲಿ ವಿವೊ T ಸರಣಿಯಲ್ಲಿ ವಿವೊ T2 5G ಮತ್ತು ವಿವೊ T2x 5G ಎರಡು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ಈ ಎರಡು ಫೋನ್‌ಗಳಲ್ಲಿ ಲ್ಲಿವಿವೊ T2 5G ಸ್ಮಾರ್ಟ್‌ಫೋನ್ 6GB RAM + 128GB ಮತ್ತು 8GB + 128GB ಎರಡು ಮಾದರಿಗಳಲ್ಲಿ ಕ್ರಮವಾಗಿ 18,999 ರೂ. ಮತ್ತು 20,999 ರೂ. ಬೆಲೆಗಳಲ್ಲಿ ಏಪ್ರಿಲ್ 18 ರಿಂದ ಮಾರಾಟಕ್ಕೆ ಬಂದಿತ್ತು. ಇದೀಗ ಇಂದಿನಿಂದ ಈ ವಿವೊ T2x 5G ಸ್ಮಾರ್ಟ್‌ಫೋನ್ ಖರೀದಿಸಲು ಅವಕಾಶ ನೀಡಲಾಗಿದೆ. ಹಾಗಾದರೆ, ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ನೂತನ ವಿವೊ T2 5G ಮತ್ತು ವಿವೊ T2x 5G ಎರಡೂ ಸ್ಮಾರ್ಟ್‌ಫೊನ್‌ಗಳು ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
ವಿವೊ T2 5G ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
ನೂತನ ವಿವೊ T2 5G ಸ್ಮಾರ್ಟ್‌ಫೋನ್ 6.38-ಇಂಚಿನ AMOLED (1,080x2,400 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿದೆ ಈ ಡಿಸ್‌ಪ್ಲೇಯು 1300 nits ಗರಿಷ್ಠ ಬ್ರೈಟ್‌ನೆಸ್, 90Hz ದಿಂದ 360Hz ವರೆಗೆ ರಿಫ್ರೆಶ್ ರೇಟ್, 6000000: 1 ಕಾಂಟ್ರಾಸ್ಟ್ ಅನುಪಾತದ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಕಾರ್ಯನಿರ್ವಹಣೆಯಲ್ಲಿ, 8GB RAM ಮತ್ತು 128GB ಮೆಮೊರಿಯೊಂದಿಗೆ ಸಂಯೋಜಿಸಲಾದ 6 nm-ಆಧಾರಿತ ಸ್ನಾಪ್‌ಡ್ರಾಗನ್ 695 SoC ನಿಂದ ಚಾಲಿತವಾಗಿರುವ ಈ ವಿವೊ t2 5G ಸ್ಮಾರ್ಟ್‌ಫೋಮಮ್ ಆಂಡ್ರಾಯ್ಡ್ 13 ಆಧಾರಿತ Funtouch OS 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೂ, ಈ ಸ್ಮಾರ್ಟ್‌ಫೋನಿನಲ್ಲಿ 8GB ವರೆಗೆ ವರ್ಚುವಲ್ RAM ಮತ್ತು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಮೆಮೊರಿ ವಿಸ್ತರಣೆಗೆ ಅವಕಾಶವಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ ವಿವೊ T2 5G ಸ್ಮಾರ್ಟ್‌ಫೋನ್ 64-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಬೊಕೆ ಸೆನ್ಸಾರ್ ಇರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು ಪೋರ್ಟ್ರೇಟ್, ಮೈಕ್ರೋ, ಪನೋರಮಾ, ಸ್ಲೋ ಮೋಷನ್, ಡ್ಯುಯಲ್ ವ್ಯೂ ವೀಡಿಯೋ ಮತ್ತು ಡಬಲ್ ಎಕ್ಸ್‌ಪೋಸರ್ ಸೇರಿದಂತೆ ವಿವಿಧ ಫೋಟೊಗ್ರಫಿ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನುಳಿದಂತೆ, 5G, Wi-Fi 6, ಬ್ಲೂಟೂತ್ 5.1, GPS, OTG, Beidu, Glonass ಮತ್ತು USB ಟೈಪ್-C ಪೋರ್ಟ್ ಕನೆಕ್ಟಿವಿಟಿ ಆಯ್ಕೆಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಮತ್ತು 44W ಪಾಸ್ಟಡ್ ಚಾರ್ಜಿಂಗ್ ಬೆಂಬಲಿಸುವ 4500mAh ಬ್ಯಾಟರಿ ಇದೆ. .
ವಿವೊ T2x 5G ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
ಇತ್ತ ವಿವೊ T2x 5G ಸ್ಮಾರ್ಟ್‌ಫೋನ್ ಕೂಡ ವಿವೊ T2 5G ಫೋನಿನಂತೆಯೇ ಅದೇ SIM ಮತ್ತು ಸಾಫ್ಟ್‌ವೇರ್ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ, ಈ ವಿವೊ T2x 5G ಸ್ಮಾರ್ಟ್‌ಫೋನ್ 6.58-ಇಂಚಿನ ಫುಲ್-HD+ (1,080x2,408 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿದೆ. ಕಾರ್ಯನಿರ್ವಹಣೆಯಲ್ಲಿ, 8GB RAM ಮತ್ತು 128GB ಮೆಮೊರಿಯೊಂದಿಗೆ ಸಂಯೋಜಿಸಲಾದ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ನಿಂದ ಚಾಲಿತವಾಗಿರುವ ಈ ವಿವೊ T2x 5G ಸ್ಮಾರ್ಟ್‌ಫೋನ್ RAM 3.0 ವೈಶಿಷ್ಟ್ಯದೊಂದಿಗೆ ಬಂದಿದೆ ಮತ್ತು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಮೆಮೊರಿ ವಿಸ್ತರಣೆಗೆ ಅವಕಾಶವಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ ವಿವೊ T2x 5G ಸ್ಮಾರ್ಟ್‌ಫೋನ್ ಕೂಡ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ, ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2-ಮೆಗಾಪಿಕ್ಸೆಲ್ ಸಂವೇದಕ ಮ್ಯಾಕ್ರೊ ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಇದು f/2.0 ದ್ಯುತಿರಂಧ್ರದೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.ಕ ನೆಕ್ಟಿವಿಟಿ ಆಯ್ಕೆಗಳು ಮತ್ತು ಸಂವೇದಕಗಳು ವಿವೊ T2 5G ಸ್ಮಾರ್ಟ್‌ಫೋನಿಗೆ ಹೋಲುತ್ತವೆ. ಆದರೆ, ಈ ವಿವೊ T2x 5G ಸ್ಮಾರ್ಟ್‌ಪೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿದೆ.
vivo t2 5g goes on sale on flipkart today check price and specs.
04-03-25 07:20 pm
Bangalore Correspondent
Kasaragod, Manjeshwar Accident: ಮಂಜೇಶ್ವರ ; ಹೆ...
04-03-25 01:37 pm
Bird Flu, Eggs: ಹಕ್ಕಿಜ್ವರ ಪೀಡಿತ ಕೋಳಿ, ಮೊಟ್ಟೆ...
04-03-25 12:14 pm
Mla Ravi Ganiga, Rashmika Mandanna: ರಶ್ಮಿಕಾ ಕ...
03-03-25 11:03 pm
ಮೊಯ್ಲಿ ಮಾತು ಅಂತಿಮ ಅಲ್ಲ , ಹೈಕಮಾಂಡ್ ನೀಡುವ ಸೂಚನೆ...
03-03-25 10:35 pm
01-03-25 10:39 pm
HK News Desk
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
04-03-25 07:35 pm
Mangalore Correspondent
Mangalore MLA Vedavyas kamath, Shakthinagr: ವ...
04-03-25 05:42 pm
Kangana Ranaut, kateel temple Mangalore: ಗುಲಾ...
04-03-25 05:17 pm
Kangana Ranaut, Udupi Temple; ಕಾಪು ಮಾರಿಯಮ್ಮ ದ...
04-03-25 02:07 am
Puttur suicide, Bangalore: ಹತ್ತು ತಿಂಗಳ ಹಿಂದೆ...
03-03-25 09:59 pm
04-03-25 03:12 pm
HK News Desk
ಹರ್ಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಕೊಲೆಗೈದು ಸೂಟ...
03-03-25 01:51 pm
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm
Bike Robbery, Mangalore Police, Crime, TD Nag...
01-03-25 02:40 pm