ಬ್ರೇಕಿಂಗ್ ನ್ಯೂಸ್
24-04-23 07:36 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ನೋಕಿಯಾ ದೇಶದಲ್ಲಿ ಇತ್ತೀಚಿಗಷ್ಟೇ ಪರಿಚಯಿಸಿದ್ದ ಪ್ರೀಮಿಯಂ Nokia X30 5G ಸ್ಮಾರ್ಟ್‌ಫೋನ್ ಬೆಲೆ ಊಹಿಸಲಾಗಷ್ಟು ಇಳಿಕೆಯಾಗಿದೆ. ಕಳೆದ ಫೆಬ್ರವರಿಯಲ್ಲಷ್ಟೇ ದೇಶದಲ್ಲಿ ಬಿಡುಗಡೆಯಾಗಿದ್ದ Nokia X30 5G ಸ್ಮಾರ್ಟ್‌ಫೋನ್ ಇದೀಗ ಕೇವಲ 36,999 ರೂ. ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದೆ.! ಹೌದು, ಕಳೆದ ಫೆಬ್ರವರಿಯಲ್ಲಿ ಏಕೈಕ 8GB RAM ಮತ್ತು 256GB ಸ್ಟೋರೇಜ್ ಮಾದರಿಯ Nokia X30 5G ಸ್ಮಾರ್ಟ್‌ಫೋನನ್ನು 48,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿತ್ತು. ಇದೀಗ ಇದರ ಬೆಲೆಯಲ್ಲಿ ಬರೋಬ್ಬರಿ 13,000 ರೂ.ನಷ್ಟು ಇಳಿಕೆಯಾಗಿದ್ದು, 36,999 ರೂ.ಗಳ ಹೊಸ ರಿಸ್ಕೌಂಟ್ ಬೆಲೆಯಲ್ಲಿ ಅಮೆಜಾನ್ ಮೂಲಕ ಮಾರಾಟಕ್ಕೆ ಬಂದಿದೆ. ಹಾಗಾದರೆ, ಈ Nokia X30 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Nokia X30 5G ಸ್ಮಾರ್ಟ್‌ಫೋನ್ ಹೇಗಿದೆ?
Nokia X30 5G ಸ್ಮಾರ್ಟ್‌ಫೋನ್ IP67 ವಾಟರ್ ರೆಸಿಸ್ಟೆಂಡ್ ಸಾಮರ್ಥ್ಯದೊಂದಿಗೆ 100 ಪ್ರತಿಶತದಷ್ಟು ಮರುಬಳಕೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು 65 ಪ್ರತಿಶತದಷ್ಟು ಮರುಬಳಕೆಯ ಪ್ಲಾಸ್ಟಿಕ್ ಹೊಂದಿರುವ ಪರಿಸರ ಸ್ನೇಹಿ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. 90Hz ರಿಫ್ರೆಶ್ ರೇಟ್ ಸಾಮರ್ಥ್ಯ ಹೊಂದಿರುವ 6.43-ಇಂಚಿನ ಫುಲ್-ಎಚ್‌ಡಿ+ (1,080x2,400 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ ಇದರಲ್ಲಿದ್ದು, ಇದು 700 ನಿಟ್‌ಗಳ ಗರಿಷ್ಠ ಹೊಳಪು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಪಡೆದಿದೆ.
ಕಾರ್ಯನಿರ್ವಹಣೆ ವಿಭಾಗದಲ್ಲಿ, Nokia X30 5G ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ಜೊತೆಗೆ ಸಂಯೋಜಿಸಲಾಗಿರುವ Snapdragon 695 5G ಪ್ರೊಸೆಸರ್ ಹೊಂದಿದ್ದು, ಇದು ಆಂಡ್ರಾಯ್ಡ್ 12 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ನೋಕಿಯಾ ಕಂಪೆನಿಯು ಈ Nokia X30 5G ಸ್ಮಾರ್ಟ್‌ಫೋನ್‌ಗೆ ಮೂರು ಓಎಸ್ ನವೀಕರಣಗಳು ಮತ್ತು ಮೂರು ವರ್ಷಗಳ ಮಾಸಿಕ ಭದ್ರತಾ ನವೀಕರಣಗಳನ್ನು ಭರವಸೆ ನೀಡಿರುವುದರಿಂದ ಆಂಡ್ರಾಯ್ಡ್ 13ಗೆ ಅಪ್‌ಡೇಟ್ ದೊರೆಯಲಿದೆ.
ಕ್ಯಾಮೆರಾ ವಿಭಾಗದಲ್ಲಿ, Nokia X30 5G ಸ್ಮಾರ್ಟ್‌ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಲೇಯರ್ ಪ್ರೊಟೆಕ್ಷನ್ ಇರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ಯೂರ್ ವ್ಯೂ ಒಐಎಸ್ ಪ್ರಾಥಮಿಕ ಲೆನ್ಸ್ ಜೊತೆಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ಗಳಿಂದ ಶಕ್ತವಾಗಿದೆ. ಈ ಕ್ಯಾಮೆರಾವು ಎಐ ಪೋರ್ಟ್ರೇಟ್, ನೈಟ್ ಮೋಡ್ 2.0, ಡಾರ್ಕ್ ವಿಷನ್, ಟ್ರೈಪಾಡ್ ಮೋಡ್ ಮತ್ತು ನೈಟ್ ಸೆಲ್ಫಿ ಸೇರಿದಂತೆ ವಿಭಿನ್ನ ಫೋಟೊಗ್ರಫಿ ಮೂಡ್‌ಗಳನ್ನು ಬೆಂಬಲಿಸಲಿದೆ.
ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, Nokia X30 5G ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ವೈ-ಫೈ 802.11 ಎ/ಬಿ/ಜಿ/ಎನ್/ಎಸಿ/ಎಎಕ್ಸ್-ರೆಡಿ, ಬ್ಲೂಟೂತ್ 5.1, ಎನ್‌ಎಫ್‌ಸಿ, ಜಿಪಿಎಸ್/ಎಜಿಪಿಎಸ್, ಗ್ಲೋನಾಸ್, ಬೀಡೌ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,200mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
nokia x30 5g gets massive price drop!; check the offer now!
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm