ದೇಶದ ಮಾರುಕಟ್ಟೆಗೆ ಸೋನಿ 'BRAVIA X75L' ಟೆಲಿವಿಷನ್ ಸರಣಿ ಎಂಟ್ರಿ: ಇಲ್ಲಿದೆ ಫುಲ್ ಡೀಟೇಲ್ಸ್!

25-04-23 08:02 pm       Source: Vijayakarnataka   ಡಿಜಿಟಲ್ ಟೆಕ್

ಹೊಸ BRAVIA X75L 4ಕೆ ಟೆಲಿವಿಷನ್ಗಳು ನಿಮಗೆ ಅದ್ಭುತವಾದ 4ಕೆ ಚಿತ್ರಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತವೆ.

ಜಾಗತಿಕ ಟೆಕ್ ದೈತ್ಯ ಬ್ರ್ಯಾಂಡ್‌ಗಳಲ್ಲಿ ಒಂದಾದ 'ಸೋನಿ'(ಸೋನಿ ಇಂಡಿಯಾ) ಕಂಪೆನಿ 4ಕೆ ಅಲ್ಟ್ರಾ ಎಚ್‌ಡಿ ಎಲ್ಇಡಿ ಡಿಸ್‌ಪ್ಲೇ ಒಳಗೊಂಡಿರುವ ಹೊಸ 'BRAVIA X75L' ಟೆಲಿವಿಷನ್ ಸರಣಿಯನ್ನು ದೇಶೀಯ ಟಿವಿ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ತಲೆಮಾರಿನ ಟೆಲಿವಿಷನ್‌ಗಳನ್ನು ವೈಯಕ್ತಿಕಗೊಳಿಸಿದ ಮತ್ತು ನೈಜ-ಜೀವನದ ವೀಕ್ಷಣೆಯ ಅನುಭವ ನೀಡುವ ನಿಟ್ಟಿನಲ್ಲಿ ಈ ಹೊಸ 'BRAVIA X75L'ಟೆಲಿವಿಷನ್ ಸರಣಿಯನ್ನು ಬಿಡುಗಡೆಗೊಳಿಸಲಾಗಿದ್ದು, ಈ ಹೊಸ ಸರಣಿ ಸ್ಮಾರ್ಟ್‌ಟಿವಿಗಳೊಂದಿಗೆ ವೀಕ್ಷಕರು ನೈಜ ಮನರಂಜನೆಯ ಜಗತ್ತನ್ನು ಪ್ರವೇಶಿಸಬಹುದು. ಇವುಗಳಲ್ಲಿ ರೋಮಾಂಚಕ ಆಟಗಳು, ಸುಂದರ ಬಣ್ಣಗಳಲ್ಲಿ ಚಲನಚಿತ್ರಗಳು ಮತ್ತು ಸ್ಪಷ್ಟ ಮತ್ತು ನೈಸರ್ಗಿಕ ಧ್ವನಿಯೊಂದಿಗೆ ನಂಬಲಾಗದ 4ಕೆ ಧ್ವನಿ ಸ್ಪಷ್ಟತೆ ಅನುಭವಿಸಿ ಎಂದು ಕಂಪೆನಿ ತಿಳಿಸಿದೆ. ಈ ಹೊಸ 'BRAVIA X75L' ಟೆಲಿವಿಷನ್ ಸರಣಿಯ ಸಂಪೂರ್ಣ ವೈಶಿಷ್ಟ್ಯಗಳು ಮತ್ತು ಬೆಲೆಗಳ ಮಾಹಿತಿಯು ಈ ಕೆಳಕಂಡಂತಿದೆ.

1. ಎಕ್ಸ್1 4K ಪ್ರೊಸೆಸರ್ ಮತ್ತು ಲೈವ್ ಕಲರ್ ತಂತ್ರಜ್ಞಾನದ ನೆರವಿನಿಂದ ಸುಂದರವಾದ ಬಣ್ಣಗಳು, ಕಾಂಟ್ರಾಸ್ಟ್ ಮತ್ತು ಉತ್ತಮ ವಿವರಗಳನ್ನು ಅನುಭವಿಸಿ

-ಸೋನಿಯ ಹೊಸ X75L ಟೆಲಿವಿಷನ್ ಸರಣಿಯು 108 ಸಿಎಂ (43), 126 ಸಿಎಂ (50), 139ಸಿಎಂ (55), 164ಸಿಎಂ (65) ಗಾತ್ರಗಳಲ್ಲಿ ಲಭ್ಯವಿರಲಿದೆ. ಈ X75L ಸರಣಿಯು ಎಕ್ಸ್1 ಪಿಕ್ಚರ್ ಪ್ರೊಸೆಸರ್ ಒಳಗೊಂಡಿದ್ದು, ಶಕ್ತಿಯುತವಾದ ಈ ಎಕ್ಸ್1 ಪ್ರೊಸೆಸರ್ ಗೌಜು–ಗದ್ದಲದ ಶಬ್ದ ಕಡಿಮೆಗೊಳಿಸಲು ಮತ್ತು ವಿವರಗಳನ್ನು ಹೆಚ್ಚಿಸಲು ಸುಧಾರಿತ ಕ್ರಮಾವಳಿಗಳನ್ನು ಬಳಸುತ್ತದೆ. ಇನ್ನೂ ಸ್ಪಷ್ಟವಾದ 4ಕೆ ಸಿಗ್ನಲ್ನೊಂದಿಗೆ, ನೀವು ವೀಕ್ಷಿಸುವ ಪ್ರತಿಯೊಂದೂ 4ಕೆ ರೆಸಲ್ಯೂಷನ್‌ಗೆ ಹತ್ತಿರದಲ್ಲಿದೆ. ಲೈವ್ ಕಲರ್ ತಂತ್ರಜ್ಞಾನದಿಂದ ನಡೆಸಲ್ಪಡುವ ಸಹಜ ಬಣ್ಣಗಳಿಂದ ತುಂಬಿರುತ್ತದೆ ಎಂದು ಕಂಪೆನಿ ತಿಳಿಸಿದೆ.

Bring home BRAVIA X75L television series for a thrilling gaming experience  - Pragativadi

2. ಎಕ್ಸ್– ರಿಯಾಲಿಟಿ ಪ್ರೊ ಮತ್ತು ಮೋಷನ್ಫ್ಲೋ™ ಎಕ್ಸ್ಆರ್ ಅನುಭವದೊಂದಿಗೆ ಬೆರಗುಗೊಳಿಸುವ 4ಕೆ ಚಿತ್ರದ ಗುಣಮಟ್ಟವು ಟೆಲಿವಿಷನ್ವೀಕ್ಷಿಸುವ ಅನುಭವವನ್ನು ಹೆಚ್ಚು ಎದ್ದುಕಾಣುವಂತೆ ಮಾಡಲಿರುವುದರ ಜೊತೆಗೆ ವೀಕ್ಷಣೆ ಸುಗಮವಾಗಿಸಲಿದೆ

ಹೊಸ BRAVIA X75L 4ಕೆ ಟೆಲಿವಿಷನ್ಗಳು ನಿಮಗೆ ಅದ್ಭುತವಾದ 4ಕೆ ಚಿತ್ರಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತವೆ. ನೈಜ ಜಗತ್ತಿನ ವಿವರಗಳು ಮತ್ತು ವಿನ್ಯಾಸದೊಂದಿಗೆ ಸಮೃದ್ಧವಾಗಿವೆ. 2ಕೆ ಮತ್ತು ಪೂರ್ಣ ಎಚ್ಡಿಯಲ್ಲಿ ಚಿತ್ರೀಕರಿಸಲಾದ ಚಿತ್ರಗಳನ್ನು 4ಕೆ ಎಕ್ಸ್-ರಿಯಾಲಿಟಿ™ ಪ್ರೊ ಮೂಲಕ 4ಕೆ ರೆಸಲ್ಯೂಷನ್ಗೆ ಹತ್ತಿರದಲ್ಲಿ ಒಂದು ಅನನ್ಯ 4ಕೆ ಡೇಟಾಬೇಸ್ ಬಳಸಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಮೋಷನ್ಫ್ಲೊ™ ಎಕ್ಸ್ಆರ್ನೊಂದಿಗೆ ವೇಗವಾಗಿ ಚಲಿಸುವ ದೃಶ್ಯಗಳಲ್ಲಿಯೂ ಸಹ ನೀವು ನಯವಾದ ಮತ್ತು ತೀಕ್ಷ್ಣವಾದ ವಿವರಗಳನ್ನು ಆನಂದಿಸಬಹುದು. ಈ ನವೀನ ತಂತ್ರಜ್ಞಾನವು ಮೂಲ ಚೌಕಟ್ಟುಗಳ ನಡುವೆ ಹೆಚ್ಚುವರಿ ಚೌಕಟ್ಟುಗಳನ್ನು ಸೃಷ್ಟಿಸುತ್ತದೆ. ಇದು ಅನುಕ್ರಮ ಚೌಕಟ್ಟುಗಳಲ್ಲಿನ ಪ್ರಮುಖ ದೃಶ್ಯಗಳ ಜೊತೆ ಹೋಲಿಸುತ್ತದೆ. ನಂತರ ಅನುಕ್ರಮಗಳಲ್ಲಿ ಕಾಣೆಯಾದ ಕ್ರಿಯೆಯ ವಿಭಜನೆಯ ಸೆಕೆಂಡ್ ಅನ್ನು ಲೆಕ್ಕಾಚಾರ ಮಾಡುತ್ತದೆ. ಕೆಲವು ಮಾದರಿಗಳು ಕಪ್ಪು ಬಣ್ಣವನ್ನು ಸಹ ಒಳಗೊಂಡಿವೆ ಎಂದು ಕಂಪೆನಿ ತಿಳಿಸಿದೆ.

Sony Bravia X75K 4K Launched With An Unbelievable Price | Cashify News

3. ಪಂಚಿ ಬಾಸ್, ಡಾಲ್ಬಿ ಆಡಿಯೊ ಮತ್ತು ಕ್ಲಿಯರ್ಫೇಸ್ ತಂತ್ರಜ್ಞಾನದ ನೆರವಿನ ಶಕ್ತಿಯುತ ಮತ್ತು ನೈಸರ್ಗಿಕ ಧ್ವನಿಯ ಕಾರಣಕ್ಕೆ ತನ್ಮಯಗೊಳಿಸುವ ಅನುಭವ ಆನಂದಿಸಿ
BRAVIA X75L ಓಪನ್ ಬ್ಯಾಫಲ್ ಡೌನ್ ಫೈರಿಂಗ್ ಎರಡು ಸ್ಪೀಕರ್ಗಳೊಂದಿಗೆ ಬರುತ್ತದೆ. ಇದು ಡಾಲ್ಬಿ ಆಡಿಯೊದೊಂದಿಗೆ 20-ವಾಟ್ನಷ್ಟು ಶಕ್ತಿಯುತ ಧ್ವನಿ ನೀಡುತ್ತದೆ. ತೆರೆದ ಬ್ಯಾಫಲ್ ಸ್ಪೀಕರ್ಗಳು ಚಲನಚಿತ್ರಗಳು, ಕ್ರೀಡೆ ಮತ್ತು ಸಂಗೀತಕ್ಕೆ ಸೂಕ್ತವಾದ ಕಡಿಮೆ-ಮಟ್ಟದ ಧ್ವನಿ ನೀಡುತ್ತವೆ. ಈಗ ಸ್ಪಷ್ಟವಾದ ಮತ್ತು ಹೆಚ್ಚು ಸಹಜವಾದ ಧ್ವನಿ ಆಲಿಸುವುದನ್ನು ಅನುಭವಿಸಿ. ಉತ್ಕೃಷ್ಟ ಸಂಗೀತ ಆಲಿಸುವುದರಲ್ಲಿ ತನ್ಮಯರಾಗಿರಿ. ಕ್ಲಿಯರ್ ಫೇಸ್ ತಂತ್ರಜ್ಞಾನದೊಂದಿಗೆ ಬ್ರೇವಿಯಾ™ ಸ್ಪೀಕರ್ ಸ್ಪಂದಿಸುವುದರಲ್ಲಿನ ಖಚಿತತೆಗಳನ್ನು ವಿಶ್ಲೇಷಿಸಲು ಮತ್ತು ಅಸಮಂಜಸತೆ ಸರಿದೂಗಿಸಲು ಶಕ್ತಿಯುತ ಕಂಪ್ಯೂಟರ್ ಮಾದರಿ ಬಳಸುತ್ತದೆ. ಇದು, ಸ್ಪೀಕರ್ಗಳ ಆವರ್ತನಗಳನ್ನು 'ಮಾದರಿ’ ಮಾಡುವ ಮೂಲಕ ಗರಿಷ್ಠ ಖಚಿತತೆ ಒದಗಿಸಲಿದೆ. ಸ್ವೀಕರ್ನ ಸಹಜ ಪ್ರತಿಕ್ರಿಯೆಗೆ ಪೂರಕವಾಗಿ ಸ್ವೀಕರ್ನ ಧ್ವನಿಯ ತಾರಕ ಅಥವಾ ಮಂದ ಹಂತಗಳನ್ನು ರದ್ದುಗೊಳಿಸುವುದಕ್ಕೆ ಈ ಮಾಹಿತಿಯನ್ನು ಪೂರಕವಾಗಿ ಬಳಸಿಕೊಳ್ಳಲಾಗುವುದು. ಇದು ಸ್ವೀಕರ್ನ ಎಲ್ಲಾ ಆವರ್ತನಗಳ ನಯವಾದ, ಸಹ ಪುನರ್ಉತ್ಪಾದನೆಯೊಂದಿಗೆ ಶುದ್ಧ, ಸಹಜ ಶ್ರವಣ ಧ್ವನಿ ಸೃಷ್ಟಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

Sony Bravia X75K Smart TV Series With 4K HDR, Dolby Audio Support Launched  in India | Technology News

4. X75L ಸರಣಿಯು ಗೂಗಲ್ ಟಿವಿಯೊಂದಿಗೆ ಚುರುಕಿನ ಬಳಕೆದಾರರ ಅನುಭವ ನೀಡುತ್ತದೆ. ಇದು 7,00,000ಕ್ಕೂ ಚಲನಚಿತ್ರಗಳು ಮತ್ತು ಟಿವಿ ಸರಣಿಗಳೊಂದಿಗೆ 10,000ಕ್ಕೂ ಅಪ್ಲಿಕೇಷನ್ಗಳು ಮತ್ತು ಗೇಮ್ಗಳ ಮೂಲಕ ಸರಿಸಾಟಿ ಇಲ್ಲದ ಮನರಂಜನೆ ನೀಡುತ್ತದೆ. ಇದು ಆಪಲ್ ಏರ್ಪ್ಲೇ2 ಮತ್ತು ಹೋಮ್ ಕಿಟ್ ಮೂಲಕ ಅಪರಿಮಿತ ಬಗೆಯಲ್ಲಿ ಕಾರ್ಯನಿರ್ವಹಿಸಲಿದೆ.
ಹೊಸ BRAVIA X75L ಸರಣಿಯೊಂದಿಗೆ, 10,000ಕ್ಕೂ ಹೆಚ್ಚು ಅಪ್ಲಿಕೇಷನ್ಗಳನ್ನು ಡೌನ್ಲೋಡ್ ಮಾಡಿ, 700,000ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳನ್ನು ವೀಕ್ಷಿಸಿ, ಜೊತೆಗೆ ಲೈವ್ ಟಿವಿಯನ್ನೂ ವೀಕ್ಷಿಸಬಹುದು. ಎಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡಿ. ಗೂಗಲ್ ಟಿವಿ ಅಪ್ಲಿಕೇಷನ್ಗಳು ಮತ್ತು ಚಂದಾದಾರಿಕೆಗಳಾದ್ಯಂತ ಪ್ರತಿಯೊಬ್ಬರ ಮೆಚ್ಚಿನ ಮಾಹಿತಿ / ವಿಷಯವನ್ನು ವ್ಯವಸ್ಥಿತವಾಗಿ ಸಂಘಟಿಸಿ ಪೂರೈಸುತ್ತದೆ. ಇಲ್ಲಿ ವಿಷಯ / ಮಾಹಿತಿ ಹುಡುಕುವುದೂ ಸುಲಭ- ಗೂಗಲ್ನಲ್ಲಿ ಬರಿ ಕೇಳಿದರೆ ಸಾಕು, ಎಲ್ಲವೂ ವೀಕ್ಷಣೆಗೆ ದೊರೆಯಲಿದೆ. ಅಪ್ಲಿಕೇಷನ್ಗಳಾದ್ಯಂತ ಹುಡುಕಲು, ‘ಹೇ ಗೂಗಲ್, ಆ್ಯಕ್ಷನ್ ಚಲನಚಿತ್ರಗಳನ್ನು ಹುಡುಕು’ ಎಂದು ಹೇಳಲು ಪ್ರಯತ್ನಿಸಿ. ವೀಕ್ಷಿಸುವ ಕಾರ್ಯಕ್ರಮಗಳ ಪಟ್ಟಿಯನ್ನು ಮೊಬೈಲ್ ಫೋನ್ ಮೂಲಕ ಸೇರ್ಪಡೆ ಮಾಡುವ ಗ್ರಾಹಕರು ತಮ್ಮ ವೈಯಕ್ತಿಕ ಶಿಫಾರಸುಗಳು ಮತ್ತು ಬುಕ್ಮಾರ್ಕ್ ಮಾಡಿದ ಷೋಗಳು ಮತ್ತು ಚಲನಚಿತ್ರಗಳೊಂದಿಗೆ ವೀಕ್ಷಿಸಲು ಏನನ್ನಾದರೂ ಸುಲಭವಾಗಿ ಹುಡುಕಬಹುದು. ಏನನ್ನು ವೀಕ್ಷಿಸಬೇಕು ಎಂಬುದರ ಮೇಲೆ ನಿಗಾ ಇರಿಸಬಹುದು. ಬಳಕೆದಾರರು ಗೂಗಲ್ ಹುಡುಕಾಟದೊಂದಿಗೆ ತಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ನಿಂದ ತಮ್ಮ ವೀಕ್ಷಣೆ ಪಟ್ಟಿಗೆ ಸೇರಿಸಬಹುದು ಮತ್ತು ಎಲ್ಲವನ್ನೂ ಒಂದೇ ಸ್ಥಳದಲ್ಲಿ ಕಾಣಬಹುದು. BRAVIA X75L, ಆ್ಯಪಲ್ ಹೋಮ್ ಕಿಟ್ ಮತ್ತು ಏರ್ಪ್ಲೇ ಬೆಂಬಲಿಸುತ್ತದೆ. ಇದು ಆಪಲ್ ಸಾಧನಗಳಾದ ಐಪ್ಯಾಡ್ಗಳು ಮತ್ತು ಐಫೋನ್ಗಳನ್ನು ಸಲೀಸಾಗಿ ವಿಷಯ ಸ್ಟ್ರೀಮಿಂಗ್ಗಾಗಿ ಟಿವಿಯೊಂದಿಗೆ ಸಂಯೋಜಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

Sony X75K Review (KD-55X75K, KD-65X75K) - RTINGS.com

5 . ನಿಮ್ಮ ಗೇಮಿಂಗ್ ಅನುಭವವನ್ನು ಆಟೊ ಎಚ್ಡಿಆರ್ ಟೋನ್ ಮ್ಯಾಪಿಂಗ್ ಮತ್ತು ಆಟೊ ಜೆನರ್ ಪಿಕ್ಚರ್ ಮೋಡ್ಗೆ ಪರಿವರ್ತಿಸುವ ಪಿಎಸ್5 ವೈಶಿಷ್ಟ್ಯದೊಂದಿಗೆ X75L ಬರುತ್ತದೆ. ಇದರ ಎಚ್ಡಿಎಂಐ 2.1 ಹೊಂದಾಣಿಕೆಯು ಆಟೊ ಲೋ ಲೇಟೆನ್ಸಿ ಮೋಡ್ (ಎಎಲ್ಎಲ್ಎಂ) ನೊಂದಿಗೆ ಗೇಮಿಂಗ್ ಬೆಂಬಲಿಸುತ್ತದೆ
ಎಚ್ಡಿಎಂಐ 2.1ನಲ್ಲಿ ಆಟೊ ಲೋ ಲೇಟೆನ್ಸಿ ಮೋಡ್ನೊಂದಿಗೆ, ಕನ್ಸೋಲ್ ಸಂಪರ್ಕಿಸಿದಾಗ ಮತ್ತು ಪವರ್ ಆನ್ ಮಾಡಿದಾಗ X75L ಗುರುತಿಸಲ್ಪಡುತ್ತದೆ ಮತ್ತು ಸ್ವಯಂಚಾಲಿತವಾಗಿ ಲೋ ಲೇಟೆನ್ಸಿ ಮೋಡ್ಗೆ ಬದಲಾಗುತ್ತದೆ. ಇದರ ನೆರವಿನಿಂದ ನೀವು ಸುಲಲಿತ, ಹೆಚ್ಚು ಸ್ಪಂದಿಸುವ ಆಟವನ್ನು ಆನಂದಿಸುವಿರಿ, ಇದು ಕ್ಷಿಪ್ರವಾಗಿ ಚಲಿಸುವ, ಹೆಚ್ಚಿನ ತೀವ್ರತೆಯ ಆಟಗಳಿಗೆ ಪ್ರಮುಖವಾಗಿದೆ. ಆಟೊ ಎಚ್ಡಿಆರ್ ಟೋನ್ ಮ್ಯಾಪಿಂಗ್ ನೆರವಿನಿಂದ ನಿಮ್ಮ ಪಿಎಸ್5™ ಕನ್ಸೋಲ್ನ ಆರಂಭಿಕ ಸೆಟಪ್ ಸಮಯದಲ್ಲಿ ಎಚ್ಡಿಆರ್ ಸೆಟ್ಟಿಂಗ್ಗಳನ್ನು ತಕ್ಷಣವೇ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ನಿಮ್ಮ ಪಿಎಸ್5™ ಸ್ವಯಂಚಾಲಿತವಾಗಿ ಪ್ರತ್ಯೇಕ ಬ್ರೇವಿಯಾ ಟಿವಿ ಮಾದರಿಗಳನ್ನು ಗುರುತಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಟಿವಿಗೆ ಉತ್ತಮ ಎಚ್ಡಿಆರ್ ಸೆಟ್ಟಿಂಗ್ ಆಯ್ಕೆ ಮಾಡುತ್ತದೆ. ಆದ್ದರಿಂದ ಹೆಚ್ಚಿನ ಕಾಂಟ್ರಾಸ್ಟ್ ದೃಶ್ಯಗಳಲ್ಲಿಯೂ ಸಹ, ನೀವು ಪರದೆಯ ಪ್ರಕಾಶಮಾನವಾದ ಮತ್ತು ಗಾಢ ಕಪ್ಪು ಬಣ್ಣದ ಭಾಗಗಳಲ್ಲಿ ನಿರ್ಣಾಯಕ ವಿವರಗಳು ಮತ್ತು ಬಣ್ಣಗಳನ್ನು ವೀಕ್ಷಿಸುವಿರಿ. ಇನ್ಪುಟ್ ಲ್ಯಾಗ್ ಕಡಿಮೆ ಮಾಡಲು ಮತ್ತು ಕ್ರಿಯೆಯನ್ನು ಹೆಚ್ಚು ಸ್ಪಂದಿಸುವಂತೆ ಮಾಡಲು ಟಿವಿ ಸ್ವಯಂಚಾಲಿತವಾಗಿ ಗೇಮ್ ಮೋಡ್ಗೆ ಬದಲಾಗುತ್ತದೆ. ಪ್ಲೇಸ್ಟೇಷನ್5® ಕನ್ಸೋಲ್ಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸುವಾಗ, ಭಾವನೆಗಳ ಅಭಿವ್ಯಕ್ತಿಯ ದೃಶ್ಯಗಳಲ್ಲಿ ಚಿತ್ರದ ಸಂಸ್ಕರಣೆಗೆ ಒತ್ತು ನೀಡುವ ಟಿವಿ, ಸ್ಟ್ಯಾಂಡರ್ಡ್ ಮೋಡ್ಗೆ ಬದಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

Sony Bravia smart TV: Best Sony Bravia Smart TVs in India - The Economic  Times

6. ಧ್ವನಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ರಿಮೋಟ್ನೊಂದಿಗೆ, ನಿಮ್ಮ ಮೆಚ್ಚಿನ ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ಪ್ಲೇ ಮಾಡಲು ನೀವು ಟಿವಿಯೊಂದಿಗೆ ಸಂವಹನ ನಡೆಸಬಹುದು
ನಿಮ್ಮ ಧ್ವನಿಯ ಶಕ್ತಿ ಬಳಸಿ ಈ ಮೊದಲಿಗಿಂತ ವೇಗವಾಗಿ ನಿಮ್ಮ ಮೆಚ್ಚಿನ ವಿಷಯವನ್ನು ಹುಡುಕಬಹುದು. ಇದಕ್ಕೆ ರಿಮೋಟ್ ಅಗತ್ಯವಿಲ್ಲ. ಧ್ವನಿ ಹುಡುಕಾಟದೊಂದಿಗೆ, ಹೆಚ್ಚು ಸಂಕೀರ್ಣವಾದ ದಿಕ್ಸೂಚಿ ಮೇಲಿನ ಅವಲಂಬನೆಯಾಗಲಿ ಅಥವಾ ಉದಾಸೀನದಿಂದ ಟೈಪಿಂಗ್ ಮಾಡುವ ಅಗತ್ಯ ಇಲ್ಲಿ ಇರುವುದಿಲ್ಲ. ನೀವು ಕೇಳುವುದನ್ನು ಮಾತ್ರ ಮರೆಯಬಾರದು. ಟಿವಿಯಲ್ಲಿ ಇರುವ ಅಂತರ್ನಿರ್ಮಿತ ಮೈಕ್ರೊಫೋನ್ಗಳು ವೀಕ್ಷಕರಿಗೆ ನಿಜವಾದ ಹ್ಯಾಂಡ್ಸ್-ಫ್ರೀ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುತ್ತವೆ. ವೀಕ್ಷಕರು ಗೂಗಲ್ ಅಸಿಸ್ಟಂಟ್ ಬಳಸಿ ಟಿವಿ ಜೊತೆ ಸಂವಾದ ನಡೆಸಿ ಕ್ಷಿಪ್ರವಾಗಿ ತಮಗೆ ಬೇಕಾದುದನ್ನು ಗುರುತಿಸಬಹುದು. ಅಥವಾ, ಟಿವಿ ಷೋ, ಚಲನಚಿತ್ರ ಹಾಗೂ ಇನ್ನೂ ಹೆಚ್ಚಿನದನ್ನು ಟಿವಿ ರಿಮೋಟ್ ಬಳಸಿ ವೀಕ್ಷಿಸಬಹುದು ಎಂದು ಕಂಪೆನಿ ತಿಳಿಸಿದೆ.

7. X75L ಸರಣಿಯು ಎಕ್ಸ್ಆರ್ ಪ್ರೊಟೆಕ್ಷನ್ ಪ್ರೊ ನೆರವಿನಿಂದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ
ಹೊಸ BRAVIA X75L ಸರಣಿಯನ್ನು ಹೊಸ ಮತ್ತು ಸುಧಾರಿತ ಎಕ್ಸ್-ಪ್ರೊಟೆಕ್ಷನ್ ಪ್ರೊ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಸೋನಿಯ ಮಿಂಚಿನ ಪರೀಕ್ಷೆಗಳ ಅತ್ಯುನ್ನತ ಮಾನದಂಡಗಳಲ್ಲಿ ಇವುಗಳು ಉತ್ತೀರ್ಣವಾಗಿರುವುದರಿಂದ ಅವುಗಳು ಉತ್ತಮವಾದ ಧೂಳು ಮತ್ತು ತೇವಾಂಶದ ರಕ್ಷಣೆಯೊಂದಿಗೆ ಸಜ್ಜುಗೊಂಡಿವೆ. ಅಂದರೆ ನಿಮ್ಮ ಟಿವಿಯನ್ನು ಮಿಂಚಿನ ಆಘಾತಗಳು ಮತ್ತು ತೀವ್ರ ಸ್ವರೂಪದ ವಿದ್ಯುತ್ ಏರಿಳಿತಗಳಿಂದ ರಕ್ಷಿಸಲಾಗಿದೆ. ಟಿವಿಯೊಂದಿಗೆ ತಡೆರಹಿತ ಮನರಂಜನೆ ಆನಂದಿಸುತ್ತಾ ಇರಬಹುದು ಎಂದು ಕಂಪೆನಿ ತಿಳಿಸಿದೆ.

8. X75L ಕಿರಿದಾದ ಅಂಚಿನೊಂದಿಗೆ ಕನಿಷ್ಠ ವಿನ್ಯಾಸ ಹೊಂದಿದೆ. ತೆಳ್ಳನೆಯ ಸ್ಮಾರ್ಟ್ ರಿಮೋಟ್, ತನ್ಮಯಗೊಳಿಸುವ ಮನರಂಜನೆ ಒದಗಿಸಲಿದೆ
X75L ನ ಕನಿಷ್ಠ ವಿನ್ಯಾಸವು ಪರದೆಯನ್ನು ಗರಿಷ್ಠಗೊಳಿಸುತ್ತದೆ. ಆದ್ದರಿಂದ ನೀವು ಚಿತ್ರ ಯಾವುದು ಮುಖ್ಯ ಎಂಬುದರ ಮೇಲೆ ಗಮನ ಕೇಂದ್ರೀಕರಿಸಬಹುದು. ಟೆಲಿವಿಷನ್ ಅನ್ನು ಸ್ಟ್ಯಾಂಡ್ನಲ್ಲಿ ಇರಿಸಲಾಗಿದ್ದರೂ ಅಥವಾ ಗೋಡೆಯ ಮೇಲೆ ಜೋಡಿಸಿದ್ದರೂ, ಇದು ತನ್ಮಯಗೊಳಿಸುವ ಧ್ವನಿಗಾಗಿ ವಿನ್ಯಾಸಗೊಳಿಸಲಾದ ಟಿವಿಯಾಗಿದೆ. ಟೆಲಿವಿಷನ್ ಅಂಚು ಅತ್ಯಂತ ಕಿರಿದಾಗಿರುವುದರಿಂದ, ನಿಮ್ಮ ಕಣ್ಣುಗಳು ತಮ್ಮ ಸುತ್ತಲಿನ ದೃಶ್ಯಗಳನ್ನು ನಿರ್ಲಕ್ಷಿಸಿ ಸ್ವಾಭಾವಿಕವಾಗಿ ಚಿತ್ರದ ಮೇಲೆಯೇ ತಮ್ಮೆಲ್ಲ ಗಮನ ಕೇಂದ್ರೀಕರಿಸುತ್ತವೆ. ಸ್ಲಿಮ್ಲೈನ್ ಸ್ಟ್ಯಾಂಡ್ ಅನ್ನು ಟಿವಿಗೆ ಸಂಪೂರ್ಣವಾಗಿ ಹೊಂದಿಸಲು ಮತ್ತು ನಿಮ್ಮ ಕೋಣೆ ಮತ್ತು ಅದರ ಅಲಂಕಾರದೊಂದಿಗೆ ಸಮನ್ವಯಗೊಳಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. X75L ಪುಟ್ಟ ಮತ್ತು ಸುಲಭವಾಗಿ ನಿರ್ವಹಿಸಬಹುದಾದ ರಿಮೋಟ್ ಕಂಟ್ರೋಲ್ ಅನ್ನು ಆರು ಹಾಟ್ ಕೀಗಳೊಂದಿಗೆ (ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ಹಾಟ್ಸ್ಟಾರ್, ಸೋನಿ ಲಿವ್, ಯುಟ್ಯೂಬ್ ವಿಡಿಯೊ ಮತ್ತು ಸಂಗೀತ) ನಿಮ್ಮ ಅಚ್ಚುಮೆಚ್ಚಿನ ವಿಡಿಯೊ ಆನ್ ಡಿಮ್ಯಾಂಡ್ ಸೇವೆಗಳನ್ನು ಪಡೆದು ಭರಪೂರ ಮನರಂಜನೆ ಮತ್ತು ತನ್ಮಯಗೊಳಿಸುವ ಮನರಂಜನೆಯ ಜಗತ್ತಿನಲ್ಲಿ ಧುಮುಕಲು ಅವಕಾಶ ಒದಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

ಬೆಲೆ ಮತ್ತು ಲಭ್ಯತೆ
KD-43X75L: 69,900/-ರೂ. ಏಪ್ರಿಲ್ 24ರಿಂದ ಖರೀದಿಗೆ ಲಭ್ಯ
KD-50X75L: 85,900/ರೂ. ಏಪ್ರಿಲ್ 24ರಿಂದ ಖರೀದಿಗೆ ಲಭ್ಯ
KD-55X75L: ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು
KD-65X75L: 1,39,900/- ಏಪ್ರಿಲ್ 24ರಿಂದ ಖರೀದಿಗೆ ಲಭ್ಯ

ಈ ಎಲ್ಲಾ ಪ್ರಮುಖ ಮಾದರಿಗಳು ಎಲ್ಲ ಸೋನಿ ಸೆಂಟರ್, ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳು ಮತ್ತು ಭಾರತದಲ್ಲಿನ ಇ–ಕಾಮರ್ಸ್ ಅಂತರ್ಜಾಲ ಮಾರಾಟ ತಾಣಗಳಲ್ಲಿ ಖರೀದಿಗೆ ಲಭ್ಯವಿರಲಿವೆ.

sony bravia x75l television series: for a thrilling gaming experience.