ಬ್ರೇಕಿಂಗ್ ನ್ಯೂಸ್
05-05-23 09:10 pm Source: Vijayakarnataka ಡಿಜಿಟಲ್ ಟೆಕ್
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ (ಮೊಬೈಲ್ ನಂಬರ್‌ಗಳು) ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕೆ? ಹಾಗಾದರೆ, ಇದಕ್ಕೆ ಇದೀಗ ಕೇವಲ ಒಂದು ನಿಮಿಷ ಮಾತ್ರ ಸಾಕಾಗುತ್ತದೆ.! ಹೌದು, ದೂರಸಂಪರ್ಕ ಇಲಾಖೆಯ ವೆಬ್‌ಸೈಟ್ ಮೂಲಕ ಒಬ್ಬರ ಹೆಚ್ರಿನಲ್ಲಿ ಎಷ್ಟು ಸಿಮ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ತಿಳಿಯಬಹುದು. ದೇಶದ ಜನರು ತಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲ್ಪಟ್ಟಿರುವ ಎಲ್ಲಾ ಮೊಬೈಲ್ ನಂಬರ್‌ಗಳ ಮಾಹಿತಿಯನ್ನು ತಿಳಿಯಲು ಅವಕಾಶವಿದ್ದು, ಜನರು ಇಲ್ಲಿ ತಾವು ಬಳಸುತ್ತಿರುವ ಹಾಗೂ ಬಳಸದೆ ಇರುವ ಎಲ್ಲಾ ಮೊಬೈಲ್ ನಂಬರ್‌ಗಳನ್ನು ಪರಿಶೀಲಿಸಬಹುದು. ಇಷ್ಟೇ ಅಲ್ಲದೆ, ತಾವು ಬಳಸದಿರುವ ಅಥವಾ ತಮಗೆ ಬೇಡವಾದ ಮೊಬೈಲ್ ಸಂಖ್ಯೆಗಳನ್ನು ಇಲ್ಲಿ ರಿಪೋರ್ಟ್ ಮಾಡುವ ಸೌಲಭ್ಯ ಸಹ ಇದೆ.
ನೀವು ದೂರಸಂಪರ್ಕ ಇಲಾಖೆಯ TAFCOP portal ತೆರೆದು ಆಧಾರ್ ಸಹಾಯದಿಂದ ನಿಮ್ಮ ಹೆಸರಿನಲ್ಲಿ ಮತ್ತೊಂದು ಮೊಬೈಲ್ ನಂಬರ್ ಸಕ್ರೀಯವಾಗಿದೆ ಎಂಬುದನ್ನು ತಿಳಿಯಬಹುದು. ಇದಕ್ಕಾಗಿ ಮೊದಲಿಗೆ ದೂರಸಂಪರ್ಕ ಇಲಾಖೆಯ TAFCOP portal ವೆಬ್‌ಸೈಟ್ ಲಿಂಕ್ ತೆರೆಯಿರಿ. ನಂತರ ಈ ವೆಬ್‌ಸೈಟ್‌ಗೆ ಪ್ರಸ್ತುತ ಚಾಲ್ತಿಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅಲ್ಲಿ ಕಾಣಿಸುವ OTP ರಿಕ್ವೆಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್‌ಗೆ ಬರುವ OTP ಯನ್ನು ತುಂಬಿರಿ. ಇದೀಗ ನೀವು ವೆಬ್‌ಸೈಟ್‌ಗೆ ಲಾಗಿನ್ ಆಗಿದ್ದೀರಾ. ನಂತರ ಅಲ್ಲಿ ಕಾಣಿಸುವ ವ್ಯಾಲಿಡೇಟ್ (Validate) ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲ್ಪಟ್ಟಿರುವ ಎಲ್ಲಾ ಮೊಬೈಲ್ ನಂಬರ್‌ಗಳು ಕಾಣಿಸುತ್ತವೆ
ಇದು ಅತ್ಯಂತ ಮುಖ್ಯ ಕಾರ್ಯ ಏಕೆ?
ಇಂದು ನಡೆಯುವ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಟ್ರ್ಯಾಕ್ ಮಾಡುವ ಬಹುತೇಕ ಸಿಮ್ ಅಥವಾ ಮೊಬೈಲ್ ನಂಬರ್‌ಗಳು ನಕಲಿ ಹೆಸರಿನಲ್ಲಿ ಇರುತ್ತವೆ. ಸಿಮ್ ಖರೀದಿಸುವ ವೇಳೆ ಗ್ರಾಹಕರ ನಿರ್ಲಕ್ಷ್ಯದಿಂದಾಗಿ ವಂಚಕರು ಅವರ ಹೆಸರಿನಲ್ಲಿ ಅವರಿಗೆ ತಿಳಿಯದಂತೆಯೇ ಮತ್ತೊಂದು ಸಿಮ್ ಪಡೆದಿರುತ್ತಾರೆ. ಅಪರಾಧವನ್ನು ನಡೆಸುವಾಗ ವಂಚಕರು ಇಂತಹ ಸಿಮ್‌ಗಳನ್ನು ಬಳಸಿರುತ್ತಾರೆ. ಪೊಲೀಸರು ಇಂತಹ ಸಿಮ್‌ಗಳನ್ನು ಟ್ರ್ಯಾಕ್ ಮಾಡಿದ ವೇಳೆ ಅವು ಅಮಾಯಕರದ್ದಾಗಿರುತ್ತವೆ. ಇದರಿಂದ ಪೊಲೀಸರು ಅಮಾಯಕರಿಗೂ ತೊಂದರೆ ಕೊಡುತ್ತಾರೆ ಮತ್ತು ಅವರು ಏನೂ ತಪ್ಪು ಮಾಡದೇ ಇದ್ದರೂ ಸಹ ಕೆಲದಿನಗಳ ಕಾಲ ಪೊಲೀಸರ ಅತಿಥಿಯಾಗಿ ಇರಬೇಕಾಗುತ್ತದೆ. ಹಾಗಾಗಿ, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಆಕ್ಟಿವ್ ಆಗಿವೆ ಎಂಬುದನ್ನು ತಿಳಿಯುವುದು ಬಹುಮುಖ್ಯ.

ಸಿಮ್ ಖರೀದಿಗೂ ಮೊದಲು ಎಚ್ಚರವಹಿಸಿ.
ಇಂದು ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ಆನ್‌ಲೈನ್ ವೆರಿಫಿಕೇಶನ್ ಮೂಲಕ ಸಿಮ್‌ಗಳನ್ನು ಒದಗಿಸುತ್ತಿವೆ. ಇದು ಉತ್ತಮವಾಗಿದೆ.! ಆದರೆ, ಹಲವರು ಈಗಲೂ ಚಿಲ್ಲರೆ ಅಂಗಡಿಗಳಿಗೆ ತೆರಳಿ ಡಾಕ್ಯುಮೆಂಟ್ ನೀಡಿ ಸಿಮ್ ಖರೀದಿಸುತ್ತಿದ್ದಾರೆ. ಈ ವೇಳೆ ಅಲ್ಲಿ ವಂಚನೆ ನಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ, ನೀವು ಹೊಸ ಸಿಮ್ ಖರೀದಿಸುವಾಗ ಪರಿಚಯಸ್ಥ ಟೆಲಿಕಾಂ ಅಂಗಡಿಗಳ ಮೂಲಕ ಅಥವಾ ಟೆಲಿಕಾಂ ಸಂಸ್ಥೆಯ ಅಧಿಕೃತ ಮಳಿಗೆಗಳಲ್ಲಿ ಮಾತ್ರವೇ ಖರೀದಿಸಿ. ಒಂದು ವೇಳೆ ನೀವು ಎಲ್ಲಿಯೇ ಸಿಮ್ ಖರೀದಿಸಿದರೂ ನಿಮ್ಮ ಆಧಾರ್ ಕಾರ್ಡ್ ವೆರಿಫಿಕೇಶನ್ ಮೂಲಕವೇ ಸಿಮ್ ಖರೀದಿಸಿ. ನೀವು ವೋಟರ್ ಐಡಿ ಸೇರಿದಂತೆ ಇತರೆ ಡಾಕ್ಯುಮೆಂಟ್ ಬಳಸಿ ಸಿಮ್ ಖರೀದಿಸಲು ಸಾಧ್ಯ. ಆದರೆ, ಇವುಗಳನ್ನು ವಂಚನೆಗೆ ಬಳಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನು ಗಮನಿಸಿ.
ಈ ಎಚ್ಚರಿಕೆ ಅಂಶಗಳನ್ನು ಪಾಲಿಸಿ.
ನೀವು ಹೊಸ ಸಿಮ್ ಖರೀದಿಸುವ ವೇಳೆ ನೀಡುವ ಡಾಕ್ಯುಮೆಂಟ್ ಜೆರಾಕ್ಸ್ ಕಾಪಿಯ ಮೇಲೆ ನಿಮ್ಮ ಉದ್ದೇಶವನ್ನು ಬರೆದು ಸಹಿ ಮಾಡಿ. ಇದರಿಂದ ಈ ಡಾಕ್ಯುಮೆಂಟ್ ಅನ್ನು ಮತ್ತೊಂದು ಉದ್ದೇಶಕ್ಕಾಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗೆಯೇ, ಯಾವುದೇ ಕಾರಣಕ್ಕೂ ಈಗಾಗಲೇ ಸಕ್ರಿಯಯಾಗಿರುವ ಸಿಮ್ ಒಂದನ್ನು ಖರೀದಿಸಲೇಬೇಡಿ. ಮತ್ತು ಅನ್ಯರು ನಿಮ್ಮ ಆಧಾರ್ ಅಥವಾ ಇತರೆ ಯಾವುದೇ ವಿವರಗಳನ್ನು ಕೇಳಿದರೆ ಯಾವುದೇ ಕಾರಣಕ್ಕೂ ನೀಡಲೇಬೇಡಿ.
how do i find out how many numbers are registered with my aadhaar.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
24-01-26 02:13 pm
HK News Staffer
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm