ಬ್ರೇಕಿಂಗ್ ನ್ಯೂಸ್
15-05-23 08:11 pm Source: Gizbot ಡಿಜಿಟಲ್ ಟೆಕ್
ಸ್ಮಾರ್ಟ್‌ವಾಚ್‌ಗಳು ಇಂದು ವಿವಿಧ ರೀತಿಯ ಸುಧಾರಿತ ಫೀಚರ್ಸ್ ಮೂಲಕ ಬಳಕೆದಾರರಿಗೆ ಸಮಯದೊಂದಿಗೆ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ನೀಡುತ್ತಿವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ವಾಚ್ ತಯಾರಿಕಾ ಕಂಪೆನಿಯಾಗಿರುವ ಫೈರ್‌ಬೋಲ್ಟ್ ಹೊಸ ಸ್ಮಾರ್ಟ್‌ವಾಚ್ ಅನಾವರಣ ಮಾಡಿದ್ದು, ಈ ವಾಚ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದೆ.
ಹೌದು, ಫೈರ್-ಬೋಲ್ಟ್ ಕಂಪೆನಿಯು ಭಾರತದಲ್ಲಿ ಫೈರ್-ಬೋಲ್ಟ್ ಶಾರ್ಕ್ (Fire-Boltt Shark) ಎಂಬ ಹೊಸ ಒರಟಾದ ಸ್ಮಾರ್ಟ್‌ವಾಚ್ ಅನಾವರಣ ಮಾಡಿದ್ದು, ಈ ವಾಚ್ ಕೈಗೆಟುಕುವ ದರದಲ್ಲಿ ಲಭ್ಯ ಆಗುತ್ತಿರುವುದು ವಿಶೇಷ ಸಂಗತಿ. ಇನ್ನು ದೀರ್ಘ ಬಾಳಿಕೆ ಸಾಮರ್ಥ್ಯ ಹೊಂದಿರುವ ವಾಚ್ ಬ್ಲೂಟೂತ್ ಕರೆ ಬೆಂಬಲ ಸೇರಿದಂತೆ ಅಗತ್ಯ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ವಾಚ್ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಈ ವಾಚ್ ಬೆಲೆ ಎಷ್ಟೆಂದು ತಿಳಿಯೋಣ.

ಫೈರ್-ಬೋಲ್ಟ್ ಶಾರ್ಕ್ ಡಿಸ್‌ಪ್ಲೇ ವಿವರ: ಈ ಶಾರ್ಕ್ ಸ್ಮಾರ್ಟ್‌ವಾಚ್ ದೀರ್ಘ ಬಾಳಿಕೆ ಬರುವ ಮತ್ತು ಸ್ಕ್ರಾಚ್-ನಿರೋಧಕವಾದ 1.83 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ವಿವಿಧ ಕಾರ್ಯಗಳಿಗಾಗಿ ಅವಳಿ ಚೇಂಫರ್ಡ್ ಕ್ರೌನ್ ಬಟನ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 150ಕ್ಕೂ ಹೆಚ್ಚು ವಾಚ್‌ಫೇಸ್‌ಗಳನ್ನು ಹೊಂದಿದ್ದು, ಈ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ.
ಫೈರ್-ಬೋಲ್ಟ್ ಶಾರ್ಕ್ ಫೀಚರ್ಸ್: ಇನ್ನುಳಿದಂತೆ ಈ ವಾಚ್ ಮೀಸಲಾದ ಮೈಕ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಡಯಲ್ ಪ್ಯಾಡ್ ಆಯ್ಕೆ ಸಹ ಇದ್ದು, ಸಂಖ್ಯೆಗಳನ್ನು ನೇರವಾಗಿ ಎಂಟ್ರಿ ಮಾಡಬಹುದಾಗಿದೆ. ಜೊತೆಗೆ ಹೈಫೈ ಬ್ಲೂಟೂತ್ ಕರೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಕರೆ ಲಾಗ್‌ಗಳನ್ನು ಪ್ರವೇಶಿಸಲು ಇದು ಸಹಕಾರಿ. ಇದರಿಂದಾಗಿ ನಿಮ್ಮ ಫೋನ್ ಅನ್ನು ಪಾಕೆಟ್‌ನಿಂದ ಹೊರತೆಗೆದು ನೋಡುವ ಅವಶ್ಯಕತೆ ಇರುವುದಿಲ್ಲ.

ಇದರೊಂದಿಗೆ ವಾಕಿಂಗ್ ಮತ್ತು ಸೈಕ್ಲಿಂಗ್‌ನಂತಹ ಸರಳ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 120 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಆಯ್ಕೆ ನೀಡಲಾಗಿದ್ದು, ಆಟೋ ರೇಸಿಂಗ್, ಕುದುರೆ ಸವಾರಿ ಆಯ್ಕೆಗಳೂ ಸಹ ಇವೆ. ಇದರೊಂದಿಗೆ ಆರೋಗ್ಯ ಸೂಟ್ ಹೃದಯ ಬಡಿತ ಸೆನ್ಸರ್, SpO2 ಸೆನ್ಸರ್, ನಿದ್ರೆ ಟ್ರ್ಯಾಕರ್ ಸೌಲಭ್ಯ ಇದ್ದು, ನೀವು ಕ್ಯಾಲೊರಿಗಳನ್ನು ಇದರಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ. ಹಾಗೆಯೇ ದೂರವನ್ನು ಮತ್ತು ಸಂಚರಿಸಲು ತೆಗೆದುಕೊಂಡ ಕ್ರಮಗಳನ್ನು ಸಹ ಟ್ರ್ಯಾಕ್ ಮಾಡಬಹುದಾಗಿದೆ.
ಇನ್ನು ಇನ್‌ಬಿಲ್ಟ್ ಗೇಮ್‌ಗಳು ಸಹ ಈ ವಾಚ್‌ನಲ್ಲಿದ್ದು, ಬೇಸರ ಆದಾಗ ಅಥವಾ ಸಮಯ ಕಳೆಯಲು ಈ ವಾಚ್ ಅತ್ಯಂತ ಸಹಾಯಕವಾಗಿದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಅಥವಾ ಸಿರಿಗೂ ಸಹ ಬೆಂಬಲ ನೀಡಲಿರುವ ಈ ವಾಚ್ ಕ್ಷಣ ಮಾತ್ರದಲ್ಲಿ ಯಾವುದೇ ಮಾಹಿತಿ ಪಡೆಯಲು ಸಹಕಾರಿಯಾಗಿದೆ. ಮತ್ತು ಹವಾಮಾನ ನವೀಕರಣಗಳು, ಸ್ಮಾರ್ಟ್ ನೋಟಿಫಿಕೇಶನ್, ಅಲಾರಾಂ , ಸ್ಟಾಪ್‌ವಾಚ್, ರಿಮೋಟ್ ಕ್ಯಾಮೆರಾ ಹಾಗೂ ಮ್ಯೂಸಿಕ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಆಯ್ಕೆ ಇದರಲ್ಲಿದೆ.

ಫೈರ್-ಬೋಲ್ಟ್ ಶಾರ್ಕ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ವಾಚ್ ಕ್ಲಾಸಿಕ್ ಮೋಡ್‌ನಲ್ಲಿ 8 ದಿನಗಳವರೆಗೆ ಬ್ಯಾಕಪ್ ನೀಡಲಿದ್ದು, ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 25 ದಿನಗಳವರೆಗೆ ಬ್ಯಾಕಪ್ ನೀಡಲಿದೆ. ಇನ್ನುಳಿದಂತೆ ಈ ವಾಚ್‌ಅನ್ನು ಎಲ್ಲಾ ಸಮಯದಲ್ಲೂ ಎಲ್ಲಿ ಬೇಕೆಂದರಲ್ಲಿ ಬಳಕೆ ಮಾಡಬಹುದು ಇದಕ್ಕಾಗಿ ಈ ವಾಚ್ IP67 ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ನೀರು ಹಾಗೂ ಧೂಳಿಗೆ ಭಯ ಪಡುವ ಅಗತ್ಯ ಇರುವುದಿಲ್ಲ.
ಫೈರ್-ಬೋಲ್ಟ್ ಶಾರ್ಕ್ ಬೆಲೆ ಹಾಗೂ ಲಭ್ಯತೆ: ಈ ಹೊಸ ಫೈರ್-ಬೋಲ್ಟ್ ಶಾರ್ಕ್ ಬೆಲೆ 1,799 ರೂ. ಗಳ ಬೆಲೆ ಹೊಂದಿದ್ದು, ಈ ಮೂಲಕ ನಾಯ್ಸ್ ಫಿಟ್ ಫೋರ್ಸ್ ಪ್ಲಸ್, ಬೋಟ್ ವೇವ್ ಆರ್ಮೋರ್ ಸೇರಿದಂತೆ ವಿವಿಧ ವಾಚ್‌ಗಳೊಂದಿಗೆ ಸ್ಪರ್ಧಿಸಲಿದೆ. ಇನ್ನು ಈ ವಾಚ್ ಬ್ಲ್ಯಾಕ್, ಬ್ಲ್ಯಾಕ್ ಗೋಲ್ಡ್, ಗೋಲ್ಡ್ ಗ್ರೀನ್ ಮತ್ತು ಕ್ಯಾಮೊ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಈ ವಾಚ್ ಅನ್ನು ನೀವು ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಬಹುದು.
fire boltt shark smartwatch with scratch resistant glass launched in india.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 08:14 pm
Mangaluru Staffer
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
24-01-26 08:53 pm
HK Staffer
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm