ಬ್ರೇಕಿಂಗ್ ನ್ಯೂಸ್
16-05-23 07:39 pm Source: Vijayakarnataka ಡಿಜಿಟಲ್ ಟೆಕ್
ತಂತ್ರಜ್ಞಾನಗಳ ಅಭಿವೃದ್ಧಿ ವರದಾನವೂ ಹೌದು. ಈ ತಂತ್ರಜ್ಞಾನದ ಯುಗದಲ್ಲಿ ನಡೆಯುವ ಅದ್ಭುತ ಆವಿಷ್ಕಾರಗಳು ಜನರ ಜೀವ ಉಳಿಸುವುದಕ್ಕೂ ನೆರವಾಗುತ್ತವೆ ಎಂಬುದು ಸತ್ಯ. ತಂತ್ರಜ್ಞಾನದ ನೆರವಿನಿಂದ ಜನ ಅಪಾಯದಿಂದ ಪಾರಾದ ಸಾಕಷ್ಟು ಉದಾಹರಣೆಗಳು ಕಣ್ಣೆದುರೇ ಇದೆ. ಇದು ಕೂಡಾ ಇದೇ ಸಾಲಿಗೆ ಸೇರುವ ಘಟನೆ.
ಸ್ಮಾರ್ಟ್ ವಾಚ್ ಇಬ್ಬರ ಜೀವ ಉಳಿಸಿದ ಕಥೆ ಇದು. ಆಪಲ್ ವಾಚ್‌ಗಳು ಜೀವ ಉಳಿಸುವ ಸಾಧನಗಳಾಗಿಯೂ ಈಗೀಗ ಗಮನ ಸೆಳೆದಿವೆ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಈ ಆಪಲ್ ಸ್ಮಾರ್ಟ್ ವಾಚ್‌ಗಳಲ್ಲಿರುವ ಉಪಯುಕ್ತವಾದ `ಫಾಲ್ ಡಿಟೆಕ್ಷನ್ ಫೀಚರ್' ( Fall Detection feature) ಒಂದು ವರದಾನವೂ ಹೌದು. ಯಾಕೆಂದರೆ, ಅಪಘಾತ, ಮೂರ್ಛೆ ಸೇರಿ ತುರ್ತು ಸಂದರ್ಭದಲ್ಲಿ ಇದು ಸಹಾಯಕ್ಕೆ ಬರುತ್ತದೆ. 2018 ರಲ್ಲಿ ಆಪಲ್ ವಾಚ್ 4 ಸೀರೀಸ್ ಬಿಡುಗಡೆಯೊಂದಿಗೆ ಫಾಲ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಪರಿಚಯಿಸಿತು. ಅಂತೆಯೇ, MacRumors ವರದಿ ಪ್ರಕಾರ ಮತ್ತೆ ಇಬ್ಬರು ಈ ವಾಚ್‌ಗಳಿಂದ ಸಂಕಷ್ಟದಿಂದ ಪಾರಾಗಿದ್ದಾರೆ. ಈ ಮೂಲಕ ತುರ್ತು ಸಂದರ್ಭದಲ್ಲಿ ಈ ಸ್ಮಾರ್ಟ್ ವಾಚ್‌ನಿಂದ ನೆರವು ಪಡೆದ ಅನೇಕರ ಸಾಲಿಗೆ ಇವರೂ ಸೇರಿದ್ದಾರೆ.

ಏನಿದು ಘಟನೆ...?
ಯುಎಸ್‌ನ ಮಿನ್ನೇಸೋಟ ಮತ್ತು ಓಹಿಯೋದಲ್ಲಿ ನಡೆದ ಪ್ರತ್ಯೇಕ ಘಟನೆಗಳು ಇವು. ಮಿನ್ನೆಸೋಟದ ಮೈಕಲ್ ಬ್ರಾಡ್‌ಕಾರ್ಬ್ ಸಾಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ಹಿಟ್ ಆಂಡ್ ರನ್ ವೇಳೆ ಮೈಕಲ್ ಅವರಿಗೆ ಬ್ರಾಡ್‌ಕಾರ್ಬ್ ನೆರವಿಗೆ ಬಂದದ್ದು ಅವರು ಧರಿಸಿದ್ದ ಆಪಲ್ ವಾಚ್. ಫಾಲ್ ಡಿಟೆಕ್ಷನ್ ಫೀಚರ್ ಅಂದರೆ ಕುಸಿಯುವ ಕ್ಷಣವನ್ನು ಪತ್ತೆ ಹಚ್ಚುವ ವೈಶಿಷ್ಟ್ಯದ ಮೂಲಕ ಈ ವಾಚ್ ಆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿತ್ತು ಮತ್ತು ತಕ್ಷಣ ತುರ್ತು ಸಂಖ್ಯೆ 911ಕ್ಕೆ ಡಯಲ್ ಮಾಡಿತ್ತು. ಬರೀ ಅಷ್ಟೇ ಅಲ್ಲ, ತುರ್ತು ಸಹಾಯವಾಣಿ 911ಕ್ಕೆ ಮಾಹಿತಿ ನೀಡಿದ್ದ ವಾಚ್ ಮನೆಯಲ್ಲಿದ್ದ ಮೈಕಲ್ ಅವರ ಪತ್ನಿ ಮಕ್ಕಳಿಗೂ ಈ ಬಗ್ಗೆ ಮಾಹಿತಿ ರವಾನಿಸಿತ್ತು. ಹೀಗಾಗಿ, ತುರ್ತು ಸಂದರ್ಭದಲ್ಲಿ ಸಕಾಲದಲ್ಲಿ ನೆರವು ಸಿಗುವಂತೆ ಮಾಡಿತ್ತು. ಪರಿಣಾಮ ಮೈಕಲ್ ಅಪಾಯದಿಂದ ಪಾರಾಗಿದ್ದಾರೆ.
ಇದೇ ಯುಎಸ್‌ನ ಓಹಿಯೋದಲ್ಲಿ ಇನ್ನೊಂದು ಘಟನೆ ನಡೆದಿದೆ. ಇಲ್ಲಿನ ಸಿನ್ಸಿನಾಟಿಯಲ್ಲಿ 83 ವರ್ಷದ ವಿಲಿಯಂ ಫ್ರೈಯರ್ ಓಹಿಯೋ ನದಿಯ ಸಮೀಪದಲ್ಲಿ ಸಾಗುತ್ತಿದ್ದರು. ಈ ವೇಳೆ ಇವರು ಎಡವಿ ಬಿದ್ದಿದ್ದರು. ಒಂಟಿಯಾಗಿದ್ದ ಮಿಲಿಯಂಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ಈ ಸಂದರ್ಭದಲ್ಲಿ ಇವರು ಧರಿಸಿದ್ದ ಆಪಲ್ ವಾಚ್ ಇವರ ರಕ್ಷಣೆಗೆ ಬಂದಿತ್ತು. ತನ್ನ ವಿಶಿಷ್ಟ ಫೀಚರ್ ಮೂಲಕ ಈ ವಾಚ್ ತುರ್ತು ಸಂಖ್ಯೆಗೆ ಕರೆ ಮಾಡಿತ್ತು. ಜತೆಗೆ ವಿಲಿಯಂ ಪುತ್ರಿಗೂ ಮಾಹಿತಿಯೊದಗಿಸಿತ್ತು. ಈ ವಾಚ್‌ನಿಂದಾಗಿ ಸಿನ್ಸಿನಾಟಿ ಪೊಲೀಸರಿಗೆ ವಿಲಿಯಂ ಅವರು ಇರುವ ಜಾಗವನ್ನು ಕಂಡು ಹಿಡಿಯಲು ಸಾಧ್ಯವಾಗಿತ್ತು. ಜತೆಗೆ ತಕ್ಷಣ ಇವರಿಗೆ ವೈದ್ಯಕೀಯ ನೆರವು ಕೂಡಾ ಸಿಕ್ಕಿತ್ತು.

ಈ ಫೀಚರನ್ನು ಸಕ್ರಿಯಗೊಳಿಸುವುದು ಹೇಗೆ?
ನಿಮ್ಮ ಐಫೋನ್‌ನಲ್ಲಿ ವಾಚ್ ಅಪ್ಲಿಕೇಶನ್ ತೆರೆಯಿರಿ. ಬಳಿಕ `ಮೈ ವಾಚ್' ಟ್ಯಾಬನ್ನು ಒತ್ತಿ. ನಂತರ ನೀವು ಎಮರ್ಜೆನ್ಸಿ SOS ಕ್ಲಿಕ್ ಮಾಡಬೇಕು. ಇಲ್ಲಿ ಫಾಲ್ ಡಿಟೆಕ್ಷನ್ ಫೀಚರನ್ನು ಆನ್ ಅಥವಾ ಆಫ್ ಮಾಡುವ ಆಯ್ಕೆ ನಿಮಗೆ ಕಾಣಿಸುತ್ತದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಸಕ್ರಿಯಗೊಳಿಸಬಹುದು. 'ಸದಾ ಆನ್' ಅಥವಾ 'ವರ್ಕ್‌ಔಟ್‌ಗಳ ಸಮಯದಲ್ಲಿ ಮಾತ್ರ ಆನ್' ಎಂಬ ಎರಡು ಆಯ್ಕೆಗಳು ಇಲ್ಲಿವೆ. ನಿಮಗೆ ಬೇಕಾದ ಆಯ್ಕೆಯನ್ನು ನೀವಿಲ್ಲಿ ಮಾಡಬಹುದು. ಹದಿನೆಂಟು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ಈ ಫೀಚರ್‌ನ ಬಳಕೆಗೆ ಅವಕಾಶ ಸಿಗುತ್ತದೆ. ಆಪಲ್ ವಾಚ್ ಪಡೆದಾಗ ಅಥವಾ ಹೆಲ್ತ್ ಅಪ್ಲಿಕೇಷನ್‌ನಲ್ಲಿ ನಿಮ್ಮ ವಯಸ್ಸನ್ನು ನಮೂದಿಸಿದರೆ ಮತ್ತು ನಿಮ್ಮ ವಯಸ್ಸು 55ಕ್ಕಿಂತ ಹೆಚ್ಚಿದ್ದರೆ ಸ್ವಯಂಚಾಲಿತವಾಗಿ ಈ ಫೀಚರ್ ಸಕ್ರಿಯವಾಗುತ್ತದೆ.

ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ?
ಆಪಲ್ ವಾಚ್‌ನ ಫಾಲ್ ಡಿಟೆಕ್ಷನ್ ವೈಶಿಷ್ಟ್ಯ ಜೀವ ಉಳಿಸುವ ಫೀಚರ್ ಎಂದೇ ಗಮನ ಸೆಳೆದಿದೆ. ಒಂಟಿಯಾಗಿರುವಾಗ ಸಂಭವಿಸುವ ಅಪಾಯದ ಸಂದರ್ಭದಲ್ಲಿ ಇದು ನೆರವಿಗೆ ಬರುತ್ತವೆ. ಆಪಲ್ ವಾಚ್ ಎಸ್ಇ ಅಥವಾ ಆಪಲ್ ವಾಚ್ 4 ಸರಣಿ ಅಥವಾ ನಂತರದ ಆವೃತ್ತಿಯ ವಾಚ್‌ನಲ್ಲಿ ಈ ವಿಶೇಷತೆಯನ್ನು ನೋಡಬಹುದು. ಈ ಫೀಚರ್ ಮೂಲಕ ಈ ವಾಚ್ ತೀವ್ರವಾದ ಕುಸಿತದ ಪರಿಣಾಮವನ್ನು ಪತ್ತೆ ಮಾಡಿದರೆ ಅದರ ಅಲಾರಾಂ ಎಚ್ಚರಿಕೆ ಸಂದೇಶದೊಂದಿಗೆ ಧ್ವನಿಸುತ್ತದೆ. ಆಗ ಅಪಾಯಕ್ಕೊಳಗಾದವರು ತುರ್ತು ಸೇವನೆಯನ್ನು ಸಂಪರ್ಕಿಸುವ ಆಯ್ಕೆಯನ್ನು ಬಳಸಬಹುದು. ಒಂದೊಮ್ಮೆ ನೀವು ಆ ಕ್ಷಣದಲ್ಲಿ ಸುಧಾರಿಸುವ ಮಟ್ಟದಲ್ಲಿದ್ದರೆ ಅಥವಾ ಅಪಾಯದಿಂದ ಪಾರಾಗಿದ್ದರೆ ಡಿಜಿಟಲ್ ಕ್ರೌನ್ ಪ್ರೆಸ್ ಮಾಡುವ ಮೂಲಕ ಈ ಎಚ್ಚರಿಕೆಯ ಅಲಾರಾಂ ಅನ್ನು ನಿಲ್ಲಿಸಬಹುದು ಅಥವಾ ನಾನು ಚೆನ್ನಾಗಿದ್ದೇನೆ ಎಂಬ ಸಂದೇಶವನ್ನೂ ಕಳುಹಿಸಬಹುದು. ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಈ ವಾಚ್ ಸ್ವಯಂಚಾಲಿತವಾಗಿ ತುರ್ತು ಸಂಖ್ಯೆಗೆ ಕರೆ ಮಾಡುತ್ತದೆ. ಈ ವಾಚ್ ಧರಿಸಿರುವವರು ಅಪಾಯದಲ್ಲಿ ಸಿಲುಕಿರುವ ಸ್ಥಳದ ಮಾಹಿತಿಯ ಜತೆಗೆ ಅವರ ತುರ್ತು ಸಂಪರ್ಕಗಳಿಗೂ ಸಂದೇಶ ಹೋಗುತ್ತದೆ.
fall detection feature in the apple watch helps to save lives.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm