ಬ್ರೇಕಿಂಗ್ ನ್ಯೂಸ್
19-05-23 08:16 pm Source: Gizbot ಡಿಜಿಟಲ್ ಟೆಕ್
ನಾಯ್ಸ್ ಕಂಪೆನಿ ಸ್ಮಾರ್ಟ್ವಾಚ್ ಲೋಕದ ಅಚ್ಚರಿ ಅಂತಾನೇ ಪ್ರಸಿದ್ಧಿ ಪಡೆದಿದೆ. ವಿಭಿನ್ನ ಮಾದರಿಯ ಸ್ಮಾರ್ಟ್ವಾಚ್ಗಳ ಮೂಲಕ ಗುರುತಿಸಿಕೊಂಡಿರುವ ನಾಯ್ಸ್ ಸಂಸ್ಥೆ ಇದೀಗ ಹೊಸ ನಾಯ್ಸ್ ಕಲರ್ಫಿಟ್ ಕ್ಯೂಬ್ 2 ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ವಾಚ್ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ.
ಹೌದು, ನಾಯ್ಸ್ ಕಲರ್ಫಿಟ್ ಕ್ಯೂಬ್ 2 ಸ್ಮಾರ್ಟ್ವಾಚ್ ಭಾರತದಲ್ಲಿ ಲಾಂಚ್ ಆಗಿದೆ. ಈ ಸ್ಮಾರ್ಟ್ವಾಚ್ ಬಿಗ್ ಡಿಸ್ಪ್ಲೇ, ಇನ್ಬಿಲ್ಟ್ ಗೇಮ್ಸ್ ಮತ್ತು ಒಂದು ವಾರದ ಬ್ಯಾಟರಿ ಬ್ಯಾಕ್ಅಪ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ನಾಯ್ಸ್ ಕಲರ್ಫಿಟ್ ಕ್ಯೂಬ್ 2 ಫೀಚರ್ಸ್ ಹೇಗಿದೆ?
ನಾಯ್ಸ್ ಕಲರ್ಫಿಟ್ ಕ್ಯೂಬ್ 2 ಸ್ಮಾರ್ಟ್ವಾಚ್ ಮೆಟಲ್ ಬಿಲ್ಡ್ ಮತ್ತು ನಯವಾದ ವಿನ್ಯಾಸದೊಂದಿಗೆ ಸ್ಕ್ವಾರಿಶ್ ಡಯಲ್ ಅನ್ನು ಒಳಗೊಂಡಿದೆ. ಇದು 1.96 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, 240 x 282 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್ಪ್ಲೇ 450 ನಿಟ್ಸ್ ಬ್ರೈಟ್ನೆಸ್ ಬೆಂಬಲಿಸಲಿದ್ದು, IP67 ಪ್ರಮಾಣಿತ ನೀರು ನಿರೋಧಕ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಸ್ಮಾರ್ಟ್ವಾಚ್ ರೈಸ್ ಟು ವೇಕ್ ಫೀಚರ್ಸ್ ಅನ್ನು ಬೆಂಬಲಿಸಲಿದೆ.
ನಾಯ್ಸ್ ಕಲರ್ಫಿಟ್ ಕ್ಯೂಬ್ 2 ಸ್ಮಾರ್ಟ್ವಾಚ್ ಫಿಟ್ನೆಸ್ಗೆ ಸಂಬಂಧಿಸಿದಂತೆ ಹಲವು ಹೆಲ್ತ್ ಫೀಚರ್ಸ್ ಹೊಂದಿದೆ. ಇದರಲ್ಲಿ ಹಾರ್ಟ್ಬೀಟ್ ಸೆನ್ಸಾರ್, SpO2 ಸೆನ್ಸಾರ್, ಸ್ಲಿಪ್ ಟ್ರ್ಯಾಕರ್ ಮತ್ತು ಉಸಿರಾಟದ ಅವಧಿ ಟ್ರ್ಯಾಕ್ ಮಾಡುವ ಫೀಚರ್ಸ್ಗಳನ್ನು ಒಳಗೊಂಡಿದೆ. ಇದು 100 ಕ್ಕೂ ಹೆಚ್ಚು ಸ್ಪೊರ್ಟ್ಸ್ ಮೋಡ್ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಹೊಂದಿದ್ದು, ಫೋನ್ ಕಾಲ್ಗಳನ್ನು ರಿಸೀವ್ ಮಾಡಲು ಅವಕಾಶ ನೀಡಲಿದೆ.
ನಾಯ್ಸ್ ಕಲರ್ಫಿಟ್ ಕ್ಯೂಬ್ 2 ಸ್ಮಾರ್ಟ್ವಾಚ್ನಲ್ಲಿ ಡಯಲ್ಪ್ಯಾಡ್ ಅನ್ನು ಒಳಗೊಂಡಿದೆ. ಇದರಲ್ಲಿ ಇತ್ತೀಚಿನ ಕಾಲ್ ಲಾಗ್ಗಳಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಎಂಟು ಸಂಪರ್ಕಗಳನ್ನು ಸೇವ್ ಮಾಡಲು ಅವಕಾಶ ನೀಡಲಿದೆ. ಸದ್ಯ ಸ್ಮಾರ್ಟ್ ವಾಚ್ ವಾಯ್ಸ್ ಅಸಿಸ್ಟೆಂಟ್, ಮಿನಿ-ಗೇಮ್ಗಳು, ಹವಾಮಾನ ನವೀಕರಣಗಳು, ಕ್ಯಾಮೆರಾ ಮತ್ತು ಮ್ಯೂಸಿಕ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್ವಾಚ್ ಸಿಂಗಲ್ ಚಾರ್ಜ್ನಲ್ಲಿ 7 ದಿನಗಳ ಬಾಳಿಕೆಯನ್ನು ನೀಡಲಿದೆ.
ಇನ್ನು ಈ ಸ್ಮಾರ್ಟ್ವಾಚ್ ಭಾರತದಲ್ಲಿ 1,599 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ರಾಯಲ್ ಬ್ಲೂ, ಜೆಟ್ ಬ್ಲಾಕ್, ಡೀಪ್ ವೈನ್, ಸಿಲ್ವರ್ ಗ್ರೇ ಮತ್ತು ರೋಸ್ ಪಿಂಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ವಾಚ್ ಫ್ಲಿಪ್ಕಾರ್ಟ್ ಮತ್ತು ಬ್ರ್ಯಾಂಡ್ನ ಅಧಿಕೃತ ವೆಬ್ಸೈಟ್ ಮೂಲಕ ಖರೀದಿಸಲು ಲಭ್ಯವಿದೆ.
ಇತ್ತೀಚಿಗೆ ನಾಯ್ಸ್ ಕಂಪೆನಿ ನಾಯ್ಸ್ ಕಲರ್ಫಿಟ್ ಅಲ್ಟ್ರಾ 3 ಸ್ಮಾರ್ಟ್ವಾಚ್ ಪರಿಚಯಿಸಿತ್ತು. ಈ ಸ್ಮಾರ್ಟ್ವಾಚ್ ಆಪಲ್ ವಾಚ್ ಮಾದರಿಯ ವಿನ್ಯಾಸವನ್ನು ಹೊಂದಿದೆ. ಇದು 1.96 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಡಿಸ್ಪ್ಲೇ ಆಲ್ವೇಸ್ ಆನ್ ಡಿಸ್ಪ್ಲೇ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಸಿಂಗಲ್ ಟ್ಯಾಪ್ ಮೂಲಕ ಡಿವೈಸ್ ಅನ್ನು ಆಲರ್ಟ್ ಮಾಡಬಹುದಾಗಿದೆ. ಜೊತೆಗೆ ಸ್ಕ್ರೀನ್ ಮೇಲೆ ನಿಮ್ಮ ಕೈಗಳನ್ನು ಇರಿಸುವ ಮೂಲಕ ಡಿಸ್ಪ್ಲೇಯನ್ನು ಆಫ್ ಮಾಡಬಹುದಾಗಿದೆ.
ಇನ್ನು ಈ ಸ್ಮಾರ್ಟ್ವಾಚ್ ಮೇಲಿನ ಬಲಭಾಗದಲ್ಲಿ ಸಂಪೂರ್ಣ ಕ್ರಿಯಾತ್ಮಕ ತಿರುಗುವ ಕಿರೀಟವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್ವಾಚ್ ಕೆಳಗಿನ ಭಾಗದಲ್ಲಿ ಹೆಚ್ಚುವರಿ ಬಟನ್ ಸಹ ನೀಡಲಾಗಿದೆ. ಜೊತೆಗೆ ಸ್ಮಾರ್ಟ್ವಾಚ್ ಬಳಕೆದಾರರಿಗೆ ಹೆಲ್ತ್ ಫೀಚರ್ಸ್ ಅನ್ನು ಸಹ ನೀಡುತ್ತಿದೆ. ಇದರಲ್ಲಿ ಹಾರ್ಟ್ಬೀಟ್ ಮಾನಿಟರ್, SpO2 ಸೆನ್ಸಾರ್ ಮತ್ತಯ ಮಹಿಳೆಯರ ಆರೋಗ್ಯದ ವಿಚಾರವಾಗಿ ಅನೇಕ ಹೆಲ್ತ್ ಟ್ರ್ಯಾಕರ್ಗಳನ್ನು ಹೊಂದಿದೆ. ಹಾಗೆಯೇ ಸ್ಲಿಪ್ ಮಾನಿಟರ್ ಮತ್ತು ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
noise colorfit qube 2 launched in india specs and price.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 04:24 pm
Mangalore Correspondent
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm