OnePlus ಕಮ್ಯೂನಿಟಿ ಸೇಲ್‌ಆರಂಭ: ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌!

05-06-23 08:16 pm       Source: Gizbot   ಡಿಜಿಟಲ್ ಟೆಕ್

ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಒನ್‌ಪ್ಲಸ್‌ (OnePlus) ಸಹ ಅಗ್ರ ಸ್ಥಾನ ಪಡೆದುಕೊಂಡಿದ್ದು, ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷ ಬೆಲೆ ಇದೆ. ಕೆಲವು ಪ್ರಮುಖ ಇ- ಕಾಮರ್ಸ್‌ ಸೈಟ್‌ಗಳು ಈ ಫೋನ್‌ಗಳಿಗೆ ಭರ್ಜರಿ ಆಫರ್‌ ನೀಡಿ ಮಾರಾಟ ಮಾಡುವುದು ಸಾಮಾನ್ಯ.

ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಒನ್‌ಪ್ಲಸ್‌ (OnePlus) ಸಹ ಅಗ್ರ ಸ್ಥಾನ ಪಡೆದುಕೊಂಡಿದ್ದು, ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷ ಬೆಲೆ ಇದೆ. ಕೆಲವು ಪ್ರಮುಖ ಇ- ಕಾಮರ್ಸ್‌ ಸೈಟ್‌ಗಳು ಈ ಫೋನ್‌ಗಳಿಗೆ ಭರ್ಜರಿ ಆಫರ್‌ ನೀಡಿ ಮಾರಾಟ ಮಾಡುವುದು ಸಾಮಾನ್ಯ. ಆದರೆ, ಈ ವಿಶೇಷ ಸೇಲ್‌ನಲ್ಲಿ ನೀವು ಈವರೆಗೂ ಊಹೆ ಮಾಡಿರದ ಆಫರ್‌ ಬೆಲೆಯಲ್ಲಿ ಒನ್‌ಪ್ಲಸ್‌ನ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಹೌದು, ಒನ್‌ಪ್ಲಸ್ ಇದೀಗ ಕಮ್ಯೂನಿಟಿ ಸೇಲ್‌ (Community sale) ಆರಂಭಿಸಿದೆ. ಈ ಸೇಲ್‌ ನಿನ್ನೆಯಿಂದ ಆರಂಭ ಆಗಿದ್ದು, 5G ಫೋನ್‌ಗಳು ಹಾಗೂ ಇತರೆ ಒನ್‌ಪ್ಲಸ್‌ ಡಿವೈಸ್‌ಗಳಿಗೆ ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಇಷ್ಟು ಮಾತ್ರವಲ್ಲದೆ ಈ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. ಹಾಗಿದ್ರೆ, ಏನಿದು ಒನ್‌ಪ್ಲಸ್ ಕಮ್ಯೂನಿಟಿ ಸೇಲ್‌?, ಯಾವೆಲ್ಲಾ ಬ್ಯಾಂಕ್‌ ಕಾರ್ಡ್‌ಗಳಿಗೆ ಏನೆಲ್ಲಾ ಆಫರ್‌ ಇದೆ ಎಂದು ತಿಳಿದುಕೊಳ್ಳಿ.

OnePlus Cloud 11 event: OnePlus unveils a new flagship phone, tablet, buds  and even a keyboard - Mirror Online

ಬ್ಯಾಂಕ್‌ ಆಫರ್‌ ಏನು?: ಜೂನ್ 6ರಿಂದ ಜೂನ್ 11ರವರೆಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಹಾಗೂ ಇಎಂಐ ಮೂಲಕ ವ್ಯವಹಾರ ಮಾಡುವ ಗ್ರಾಹಕರು ಒನ್‌ಪ್ಲಸ್115G ಖರೀದಿಯ ಮೇಲೆ 1,000ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.ಈ ಕೊಡುಗೆ ಒನ್‌ಪ್ಲಸ್.ಇನ್,ಒನ್‌ಪ್ಲಸ್ ಸ್ಟೋರ್ ಆಪ್‌ ಹಾಗೂ ಅಮೆಜಾನ್‌ನಲ್ಲಿ ಲಭ್ಯ ಇದೆ. ಇನ್ನು ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್ ಇಎಂಐ ಬಳಕೆದಾರರು ಒನ್‌ಪ್ಲಸ್ 11 5Gನಲ್ಲಿ ಜೂನ್ 1ರಿಂದ ಜೂನ್ 11,2023 ರವರೆಗೆ1,000 ತ್ವರಿತ ಬ್ಯಾಂಕ್ ರಿಯಾಯಿತಿ ಪಡೆದುಕೊಳ್ಳಬಹುದು.

ನೋ-ಕಾಸ್ಟ್ ಇಎಂಐ ಆಯ್ಕೆ:ಇನ್ನು ಒನ್‌ಪ್ಲಸ್ 115G ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ನೋ-ಕಾಸ್ಟ್ ಇಎಂಐ ಆಯ್ಕೆಗಳ ಲಾಭವನ್ನು ಪಡೆಯಬಹುದು. ಜೂನ್ 1 ರಿಂದ ಜೂನ್ 5, 2023 ರವರೆಗೆ ಮತ್ತು ಜೂನ್ 12ರಿಂದ ಜೂನ್ 30,2023 ರವರೆಗೆ ಗ್ರಾಹಕರು ಒನ್‌ಪ್ಲಸ್.ಇನ್‌, ಒನ್‌ಪ್ಲಸ್ ಸ್ಟೋರ್ ಆಪ್‌, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ , ಅಮೆಜಾನ್‌ನ ಮೂಲಕ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿ ಖರೀದಿ ಮಾಡಿದರೆ 9 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಸೌಲಭ್ಯ ಲಭ್ಯ ಇರಲಿದೆ.

OnePlus Community Sale Announced; Special OnePlus Ensemble Offer on  Ecosystem Products Revealed - MySmartPrice

ಇದರೊಂದಿಗೆ ಮೇಲೆ ತಿಳಿಸಿದ ಎಲ್ಲಾ ಪ್ಲಾಟ್‌ಫಾರ್ಮ್‌ನಲ್ಲಿ ಜೂನ್ 06ರಿಂದ ಜೂನ್ 11, 2023ರವರೆಗೆ ಒನ್‌ಪ್ಲಸ್ 11 5Gಸ್ಮಾರ್ಟ್‌ಫೋನ್‌ ಅನ್ನು ಪ್ರಮುಖ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 12ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಸೌಲಭ್ಯ ಪಡೆದುಕೊಳ್ಳಬಹುದು.ಅದಾಗ್ಯೂ ಇನ್ನೂ ಹೆಚ್ಚಿನ ತಿಂಗಳ ಆಯ್ಕೆ ಬೇಕು ಎನ್ನುವವರಿಗೂ ಸಹ ಅವಕಾಶ ಇದ್ದು, ಒನ್‌ಪ್ಲಸ್‌.ಇನ್‌ ನಲ್ಲಿ ಪ್ರತ್ಯೇಕವಾಗಿ 24ತಿಂಗಳವರೆಗೆ ಕಡಿಮೆ-ವೆಚ್ಚದ ಇಎಂಐ ಅನ್ನು ನೀಡುತ್ತದೆ. ಈ ಕೊಡುಗೆ ಜೂನ್ ತಿಂಗಳ ಪೂರ್ತಿ ಇರಲಿದೆ.

ಹೆಚ್ಚುವರಿ ರಿಯಾಯಿತಿ: ಸಾಮಾನ್ಯ ಡಿಸ್ಕೌಂಟ್‌ ಮತ್ತು ಇಎಂಐ ಆಯ್ಕೆಗಳ ಜೊತೆಗೆ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಲಭ್ಯ ಇದೆ. ಒನ್‌ಪ್ಲಸ್.ಇನ್‌, ಒನ್‌ಪ್ಲಸ್ ಸ್ಟೋರ್‌ ಆಪ್‌ ಮತ್ತು ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಲ್ಲಿ ಜೂನ್ 6 ರಿಂದ ಜೂನ್ 11, 2023 ರವರೆಗೆ ಒನ್‌ಪ್ಲಸ್ 11 5G ಅನ್ನು ಖರೀದಿಸುವಾಗ ಬಳಕೆದಾರರು ಆಯ್ದ 4G ಡಿವೈಸ್‌ಗಳಲ್ಲಿ 6,000 ರೂಪಾಯಿ ಮೌಲ್ಯದ ವಿನಿಮಯ ಬೋನಸ್ ಪಡೆದುಕೊಳ್ಳಬಹುದು.

OnePlus 11 first look out, circular camera design looks classy and alert  slider is back - India Today

ಜೂನ್ 1 ರಿಂದ ಜೂನ್ 30, 2023 ರವರೆಗೆ ರೆಡ್ ಕೇಬಲ್ ಪ್ರೊ ಯೋಜನೆಗಳಿಗೆ ಚಂದಾದಾರರಾಗುವಾಗ ರೆಡ್ ಕೇಬಲ್ ಕ್ಲಬ್ ಸದಸ್ಯರು ವಿಶೇಷವಾಗಿ 2,000ರೂ.ಗಳ ಹೆಚ್ಚುವರಿ ಪ್ರಯೋಜನದ ಕೂಪನ್‌ನ ಲಾಭವನ್ನು ಪಡೆಯಬಹುದು. ಇದರೊಂದಿಗೆ ಜೂನ್ 6 ರಿಂದ 11 ರವರೆಗೆ, ಒನ್‌ಪ್ಲಸ್ 11 ನ 8GB ವೇರಿಯಂಟ್ ಖರೀದಿಸುವ ಗ್ರಾಹಕರು 999 ಮೌಲ್ಯದ ಉಚಿತ ಗೇಮಿಂಗ್ ಟ್ರಿಗ್ಗರ್ ಬಂಡಲ್ ಅನ್ನು ಪಡೆದುಕೊಳ್ಳಬಹುದು.

ಈ ವಿಶೇಷ ಆಫರ್‌ ಒನ್‌ಪ್ಲಸ್ 115G ನಲ್ಲಿ ಗೇಮಿಂಗ್ ಅನುಭವವನ್ನು ಹೆಚ್ಚಿಗೆ ಮಾಡಲಿದೆ. ಜೊತೆಗೆ ಬಜಾಜ್ ಫೈನಾನ್ಸ್ ಗ್ರಾಹಕರು ಒನ್‌ಪ್ಲಸ್.ಇನ್‌ನಲ್ಲಿ ಪ್ರತ್ಯೇಕವಾಗಿ 9ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಎಎಂಐ ಯೊಂದಿಗೆ ಒನ್‌ಪ್ಲಸ್ 11R 5Gಅನ್ನು ಖರೀದಿಸಬಹುದಾಗಿದೆ. ಇದರೊಂದಿಗೆ ಇದಲ್ಲದೆ ಒನ್‌ಪ್ಲಸ್ 11 5Gಅನ್ನು ಐಸಿಐಸಿಐ ಪೇಪರ್ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್‌ನಲ್ಲಿ ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌, ಇತರ ಆಫ್‌ಲೈನ್ ಸ್ಟೋರ್‌ಗಳಲ್ಲಿ18 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಮೂಲಕ ಖರೀದಿಸಬಹುದು.

oneplus gave big discount on smartphone in community sale details.