ಬ್ರೇಕಿಂಗ್ ನ್ಯೂಸ್
06-06-23 08:06 pm Source: Gizbot ಡಿಜಿಟಲ್ ಟೆಕ್
ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು ಇತರೆ ಪ್ರಮುಖ ಸ್ಮಾರ್ಟ್‌ಫೋನ್‌ಗಳಂತೆ ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಇವುಗಳ ಸುಧಾರಿತ ಫೀಚರ್ಸ್‌ಗೆ ಗ್ರಾಹಕರು ಫಿದಾ ಆಗುತ್ತಿದ್ದಾರೆ. ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಮೊಟೊ ಸಂಸ್ಥೆಯು ಒಪ್ಪೋ ಮತ್ತು ಸ್ಯಾಮ್‌ಸಂಗ್‌ನ ಫೋಲ್ಡಿಂಗ್ ಫೋನ್‌ಗಳಿಗೆ ನಡುಕ ಉಂಟು ಮಾಡಲು ಮುಂದಾಗಿದೆ.
ಹೌದು, ಒಪ್ಪೋ ಮತ್ತು ಸ್ಯಾಮ್‌ಸಂಗ್‌ನ ಫೋಲ್ಡಿಂಗ್ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಮೊಟೊರೊಲಾ ರೇಜರ್ 40 ಸರಣಿಯನ್ನು ಭಾರತದಲ್ಲಿ ಶೀಘ್ರದಲ್ಲಿಯೇ ಲಾಂಚ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಸರಣಿಯಲ್ಲಿ ರೇಜರ್ 40 (Moto Razr 40) ಮತ್ತು ರೇಜರ್ 40 ಅಲ್ಟ್ರಾ (Moto Razr 40 Ultra) ಫೋನ್ ಸೇರಿವೆ. ಈ ಎರಡೂ ಫೋನ್‌ಗಳು ಸ್ಯಾಮ್‌ಸಂಗ್ ಹಾಗೂ ಒಪ್ಪೋದ ಫ್ಲಿಪ್ ಫೋನ್‌ಗಳ ರೀತಿಯಲ್ಲಿಯೇ ಕಾಣಿಸಿಕೊಂಡರು ಸುಧಾರಿತ ಫೀಚರ್ಸ್ ಹೊಂದಿವೆ. ಹಾಗಿದ್ರೆ, ಇವುಗಳ ವಿಶೇಷತೆ ತಿಳಿಯೋಣ ಬನ್ನಿ.
ಮೊಟೊರೊಲಾ ಶೀಘ್ರದಲ್ಲೇ ಭಾರತದಲ್ಲಿ ಮೊಟೊರೊಲಾ ರೇಜರ್ 40ಸರಣಿಯನ್ನು ಲಾಂಚ್ ಮಾಡುವುದಾಗಿ ತಿಳಿಸಿದೆ. ಈ ಹೊಸ ರೇಜರ್ 40 ಸರಣಿಯಲ್ಲಿ ಮೊದಲೇ ತಿಳಿಸಿದಂತೆ ಎರಡು ಫೋನ್‌ಗಳಿದ್ದು, ಇವು ಸ್ಯಾಮ್‌ಸಂಗ್‌ನ ನ ಗ್ಯಾಲಕ್ಸಿ Z ಫ್ಲಿಪ್4 ಮತ್ತು ಒಪ್ಪೋ ಫೈಂಡ್ N2ಫ್ಲಿಪ್ ಫೋನ್‌ಗಳನ್ನೇ ಹೋಲುತ್ತವೆ. ಈ ನಡುವೆ ಮೊಟೊ ಕಳೆದ ಎರಡು ವರ್ಷಗಳಿಂದ ಜಾಗತಿಕವಾಗಿ ವಿಶೇಷ ರೇಜರ್ ಫೋನ್‌ಗಳನ್ನು ಪರಿಚಯಿಸಿಕೊಂಡು ಬರುತ್ತಲೇ ಇದೆ. ಹಾಗಿದ್ರೆ ಬನ್ನಿ ಈ ಫೋನ್‌ಗಳ ಲೀಕ್ ಫೀಚರ್ಸ್ ಗಮನಿಸೋಣ.
ಡಿಸ್‌ಪ್ಲೇ ವಿವರ: ರೇಜರ್ 40 ಅಲ್ಟ್ರಾ ಹೆಚ್ಚು ಸುಧಾರಿತ ಫೀಚರ್ಸ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಈ ಫೋನ್ ವೆನಿಲ್ಲಾ ರೇಜರ್ 40ಗಿಂತ ದೊಡ್ಡ ಕವರ್ ಸ್ಕ್ರೀನ್ ಅನ್ನು ಒಳಗೊಂಡಿರಲಿದ್ದು,ಈ ಡಿಸ್ಪ್ಲೇಯು ಸ್ಯಾಮ್‌ಸಂಗ್ ಮತ್ತು ಒಪ್ಪೋದ ಎರಡೂ ಫೋನ್‌ಗಳಿಗಿಂತ ದೊಡ್ಡ ಗಾತ್ರ ಪಡೆದಿದೆ ಎಂದು ಹೇಳಲಾಗಿದೆ.ಜೊತೆಗೆ ಇದು 144Hzರಿಫ್ರೆಶ್ ರೇಟ್ ಆಯ್ಕೆ ಹೊಂದಿರಲಿದೆ. ಇನ್ನುಳಿದಂತೆ ಈ ಫೋನ್ 3.6ಇಂಚುಗಳ ವೀಕ್ಷಣಾ ಪ್ರದೇಶವನ್ನು ನೀಡುತ್ತದೆ ಎನ್ನಲಾಗಿದ್ದು.ತೆರೆದ ರೂಪದಲ್ಲಿ 6.9ಇಂಚುಗಳ ವೀಕ್ಷಣಾ ಪ್ರದೇಶವನ್ನು ನೋಡಬಹುದಾಗಿದೆ.
ಪ್ರೊಸೆಸರ್ ಮಾಹಿತಿ: ಈ ಫೋನ್‌ಗಳ ಕಾರ್ಯಕ್ಷಮತೆ ವಿಚಾರಕ್ಕೆ ಬರುವುದಾದರೆ ಚಿಪ್‌ಸೆಟ್‌ಗಳು ಸಹ ವಿಭಿನ್ನವಾಗಿವೆ ಎಂದು ತಿಳಿದುಬಂದಿದೆ. ರೇಜರ್ 40 ಅಲ್ಟ್ರಾ ಒಂದು ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ ಜನ್ 1 SoC ಅನ್ನು ಹೊಂದಿದ್ದರೆ ರೇಜರ್ 40 ಸ್ನ್ಯಾಪ್ ಡ್ರ್ಯಾಗನ್ 7 ಜನ್ 1 SoC ಪ್ರೊಸೆಸರ್ ಬಲ ಪಡೆದುಕೊಂಡಿದೆ ಎನ್ನಲಾಗಿದ್ದು, ಈ ಪ್ರೊಸೆಸರ್ ವಿಚಾರದಲ್ಲಿ ರೇಜರ್ 40 ಕೈಗೆಟುಕುವ ಬೆಲೆಗೆ ಲಭ್ಯ ಇರಬಹುದು ಎಂದು ಊಹಿಸಲಾಗಿದೆ.
ಕ್ಯಾಮೆರಾ ರಚನೆ: ಅಲ್ಟ್ರಾ ಮಾದರಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 12 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಹಾಗೂ 13 ಮೆಗಾಪಿಕ್ಸೆಲ್ ಸೆಕೆಂಡರಿ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಹೊಂದಿದ್ದರೆ ವೆನಿಲ್ಲಾ ರೇಜರ್ 40 ಫೋನ್ 64 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಈ ಎರಡೂ ಫೋನ್‌ಗಳು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ.
ಇನ್ನು ಈ ಹಿಂದೆ ಲಾಂಚ್ ಆಗಿರುವ ಗ್ಯಾಲಕ್ಸಿ Z ಫ್ಲಿಪ್ 4 ಮತ್ತು ಇಪ್ಪೋದ ಫೋಲ್ಡಬಲ್ ಫೋನ್‌ಗಳ 128GB ವೇರಿಯಂಟ್‌ಗೆ 89,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.ಆದರೆ,ಇದೇ ಬೆಲೆಯಲ್ಲಿ ಈ ಮೊಟೊದ ಫೋನ್‌ಗಳಿಗೆ ಹೋಲಿಕೆ ಮಾಡಲು ಸಾಧ್ಯವಾಗುವುದಿಲ್ಲ.ಯಾಕೆಂದರೆ ಮೊಟೊದ ಫೋನ್‌ಗಳು ಇತರೆ ಫೋನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುತ್ತವೆ. ಈ ಹೊಸ ರೇಜರ್ 40 ಸರಣಿಯು ಅಮೆಜಾನ್, ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು ಮತ್ತು ಭಾರತದಲ್ಲಿನ ಇತರ ಪ್ರಮುಖ ಚಿಲ್ಲರೆ ಮಳಿಗೆಗಳ ಮೂಲಕ ಮಾರಾಟವಾಗಲಿದೆ ಎಂದು ಮೊಟೊರೊಲಾ ಮಾಹಿತಿ ನೀಡಿದೆ.
ಆದಾಗ್ಯೂ ಕಂಪನಿಯು ಲಾಂಚ್ ದಿನಾಂಕವನ್ನು ಇನ್ನೂ ಹಂಚಿಕೊಂಡಿಲ್ಲ. ಆದರೂ ಸಹ ಈ ಫೋನ್‌ಗಳು ಜುಲೈನಲ್ಲಿ ಲಾಂಚ್ ಆಗಬಹುದು ಎಂದು ತಿಳಿದುಬಂದಿದೆ. ಯಾಕೆಂದರೆ ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್ ಮುಂದಿನ ತಿಂಗಳು ಹೊಸ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿವೆ ಎನ್ನಲಾಗಿದ್ದು, ಇದಾದ ನಂತರ ಮೊಟೊ ತನ್ನ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ನಂಬಲಾಗಿದೆ.
moto razr 40 series launch in india soon know expected features price details.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm