ಭಾರತದಲ್ಲಿ ಲಾಂಚ್‌ ಆಯ್ತು ಹೊಸ ಸ್ಮಾರ್ಟ್‌ವಾಚ್‌! ಇದರ ಬೆಲೆ ಕೇವಲ 3,000ರೂ!

07-06-23 07:55 pm       Source: Gizbot   ಡಿಜಿಟಲ್ ಟೆಕ್

ಭಾರತದಲ್ಲಿ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ವಾಚ್‌ಗಳಿಗೆ ನಾಯ್ಸ್‌ ಕಂಪೆನಿ ಹೆಸರುವಾಸಿಯಾಗಿದೆ. ತನ್ನ ಆಕರ್ಷಕ ಸ್ಮಾರ್ಟ್‌ವಾಚ್‌ಗಳ ಮೂಲಕ ಮನಗೆದ್ದಿರುವ ನಾಯ್ಸ್‌ ಕಂಪೆನಿ ಇದೀಗ ಹೊಸ ನಾಯ್ಸ್‌ಫಿಟ್‌ ವೋರ್ಟೆಕ್ಸ್ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ.

ಭಾರತದಲ್ಲಿ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ವಾಚ್‌ಗಳಿಗೆ ನಾಯ್ಸ್‌ ಕಂಪೆನಿ ಹೆಸರುವಾಸಿಯಾಗಿದೆ. ತನ್ನ ಆಕರ್ಷಕ ಸ್ಮಾರ್ಟ್‌ವಾಚ್‌ಗಳ ಮೂಲಕ ಮನಗೆದ್ದಿರುವ ನಾಯ್ಸ್‌ ಕಂಪೆನಿ ಇದೀಗ ಹೊಸ ನಾಯ್ಸ್‌ಫಿಟ್‌ ವೋರ್ಟೆಕ್ಸ್ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಮಲ್ಟಿ ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ.

ಹೌದು, ನಾಯ್ಸ್‌ಫಿಟ್‌ ವೋರ್ಟೆಕ್ಸ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ವಾಚ್‌ 3,000ರೂ. ಬೆಲೆ ಅಡಿಯಲ್ಲಿ ಬರಲಿದ್ದು, ಹೊಸ ಅಲೆ ಮೂಡಿಸುವ ಭರವಸೆ ಮೂಡಿಸಿದೆ. ಇದು 150 ಕ್ಕೂ ಹೆಚ್ಚು ಕಸ್ಟಮೈಸ್ಡ್‌ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

NoiseFit Vortex Launched In India: specifications and features details in  kannada|ಭಾರತದಲ್ಲಿ ಲಾಂಚ್‌ ಆಯ್ತು ಹೊಸ ಸ್ಮಾರ್ಟ್‌ವಾಚ್‌! ಇದರ ಬೆಲೆ ಕೇವಲ 3,000ರೂ! -  Kannada Gizbot

ನಾಯ್ಸ್‌ಫಿಟ್‌ ವೋರ್ಟೆಕ್ಸ್ ಫೀಚರ್ಸ್‌ ಹೇಗಿದೆ?

ನಾಯ್ಸ್‌ಫಿಟ್‌ ವೋರ್ಟೆಕ್ಸ್ ಸ್ಮಾರ್ಟ್‌ವಾಚ್‌ ವೃತ್ತಾಕಾರದ ಡಯಲ್ ಅನ್ನು ಹೊಂದಿದೆ. ಇದು 1.46-ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 150 ಕ್ಕೂ ಹೆಚ್ಚು ಕಸ್ಟಮೈಸ್ಡ್‌ ಮಾಡಬಹುದಾದ ವಾಚ್‌ ಫೇಸ್‌ಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ರೇಟಿಂಗ್‌ ಒಳಗೊಂಡಿದೆ.

ಸ್ಮಾರ್ಟ್‌ವಾಚ್‌ನಲ್ಲಿ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ 24×7 ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕರ್‌ ಮತ್ತು ಸ್ತ್ರೀ ಸೈಕಲ್ ಮಾನಿಟರ್ ಅನ್ನು ಹೊಂದಿದೆ. ಇದರಲ್ಲಿ ಒತ್ತಡದ ಮಟ್ಟವನ್ನು ಅಳೆಯಲು ಮತ್ತು ಉಸಿರಾಟದ ಅವಧಿಗಳನ್ನು ನೀಡುವ ಸಾಮರ್ಥ್ಯವನ್ನು ಸಹ ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಮಲ್ಟಿ ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ಸಹ ನೀಡಲಿದೆ.

ನಾಯ್ಸ್‌ಫಿಟ್‌ ವೋರ್ಟೆಕ್ಸ್ ಸಿಂಗಲ್‌-ಚಿಪ್ ಟೆಕ್ನಾಲಜಿಯನ್ನು ಹೊಂದಿದ್ದು, ಟ್ರೂಸಿಂಕ್‌ನೊಂದಿಗೆ ಬರಲಿದೆ. ಇದು ಸ್ಥಿರ ಸಂಪರ್ಕ, ಕಡಿಮೆ ವಿದ್ಯುತ್ ಬಳಕೆ ಮತ್ತು ಒಂದು-ಹಂತದ ಜೋಡಣೆಯನ್ನು ನೀಡುತ್ತದೆ. ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಅನ್ನು ಬೆಂಬಲಿಸಲಿದ್ದು, ಫೋನ್‌ ಕರೆಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಆಯ್ಕೆಯನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ನೋಟಿಫಿಕೇಶನ್‌ ಡಿಸ್‌ಪ್ಲೇ, ವೆದರ್‌ ಮತ್ತು ಸ್ಟಾಕ್‌ ಅಪ್ಡೇಟ್‌ಗಳ ಬಗ್ಗೆ ಮಾಹಿತಿ ನೀಡಲಿದೆ. ಜೊತೆಗೆ ಕ್ಯಾಮರಾ ಮತ್ತು ಮ್ಯೂಸಿಕ್‌ ಕಂಟ್ರೋಲ್‌ ಹೊಂದಿದೆ.

ನಾಯ್ಸ್‌ಫಿಟ್‌ ವೋರ್ಟೆಕ್ಸ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ 2,999ರೂ. ಬೆಲೆಯನ್ನು ಹೊಂದಿದೆ. ಇದನ್ನು ಜೆಟ್ ಬ್ಲಾಕ್, ಸಿಲ್ವರ್ ಗ್ರೇ, ವಿಂಟೇಜ್ ಬ್ರೌನ್, ರೋಸ್ ಪಿಂಕ್ ಮತ್ತು ಸ್ಪೇಸ್ ಬ್ಲೂ ಬಣ್ಣಗಳಲ್ಲಿ ಪರಿಚಯಿಸಲಾಗಿದ್ದು, ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ ಮೂಲಕ ಖರೀದಿಸಬಹುದಾಗಿದೆ.

ಇದಲ್ಲದೆ ನಾಯ್ಸ್‌ ಕಂಪೆನಿ ಇತ್ತೀಚಿಗೆ ಹೊಸ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 3 ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು ಆಪಲ್‌ ವಾಚ್‌ ಮಾದರಿಯ ವಿನ್ಯಾಸವನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಇದರಲ್ಲಿ ನೀವು 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಕಾಣಬಹುದಾಗಿದೆ.

NoiseFit Vortex Smartwatch Launched In India With AMOLED Display 7 days  battery life - Tech news hindi - आ गई बेहतरीन फीचर्स और महंगी दिखने वाली  किफायती Smartwatch, पहली नजर में आ जाएगा दिल!

ಇದು 1.96 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಆಲ್‌ವೇಸ್‌ ಆನ್ ಡಿಸ್‌ಪ್ಲೇ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಸಿಂಗಲ್‌ ಟ್ಯಾಪ್ ಮೂಲಕ ಡಿವೈಸ್‌ ಅನ್ನು ಆಲರ್ಟ್‌ ಮಾಡಬಹುದಾಗಿದೆ. ಜೊತೆಗೆ ಸ್ಕ್ರೀನ್‌ ಮೇಲೆ ನಿಮ್ಮ ಕೈಗಳನ್ನು ಇರಿಸುವ ಮೂಲಕ ಡಿಸ್‌ಪ್ಲೇಯನ್ನು ಆಫ್ ಮಾಡಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌ ಮೇಲಿನ ಬಲಭಾಗದಲ್ಲಿ ಸಂಪೂರ್ಣ ಕ್ರಿಯಾತ್ಮಕ ತಿರುಗುವ ಕಿರೀಟವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ಕೆಳಗಿನ ಭಾಗದಲ್ಲಿ ಹೆಚ್ಚುವರಿ ಬಟನ್ ಸಹ ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಹೆಲ್ತ್‌ ಫೀಚರ್ಸ್‌ ಅನ್ನು ಸಹ ನೀಡುತ್ತಿದೆ. ಇದರಲ್ಲಿ ಹಾರ್ಟ್‌ಬೀಟ್‌ ಮಾನಿಟರ್‌, SpO2 ಸೆನ್ಸಾರ್‌ ಮತ್ತಯ ಮಹಿಳೆಯರ ಆರೋಗ್ಯದ ವಿಚಾರವಾಗಿ ಅನೇಕ ಹೆಲ್ತ್‌ ಟ್ರ್ಯಾಕರ್‌ಗಳನ್ನು ಹೊಂದಿದೆ. ಹಾಗೆಯೇ ಸ್ಲಿಪ್‌ ಮಾನಿಟರ್‌ ಮತ್ತು ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

noisefit vortex launched in india specifications and features details.