ಕೈಗೆಟಕುವ ಬೆಲೆಯಲ್ಲಿ ಆಕರ್ಷಕ ಇಯರ್‌ಬಡ್ಸ್‌ ಪರಿಚಯಿಸಿದ ನಾಯ್ಸ್‌!

08-06-23 07:56 pm       Source: Gizbot   ಡಿಜಿಟಲ್ ಟೆಕ್

ಇಯರ್‌ಬಡ್ಸ್‌ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ನಾಯ್ಸ್‌ ಸಂಸ್ಥೆ ಕೂಡ ಸ್ಥಾನ ಪಡೆದುಕೊಂಡಿದೆ. ವಿಶಿಷ್ಟ ಶೈಲಿಯ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ನಿಂದಾಗಿ ನಾಯ್ಸ್‌ ಬಡ್ಸ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ.

ಇಯರ್‌ಬಡ್ಸ್‌ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ನಾಯ್ಸ್‌ ಸಂಸ್ಥೆ ಕೂಡ ಸ್ಥಾನ ಪಡೆದುಕೊಂಡಿದೆ. ವಿಶಿಷ್ಟ ಶೈಲಿಯ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ನಿಂದಾಗಿ ನಾಯ್ಸ್‌ ಬಡ್ಸ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಇದಕ್ಕೆ ಪೂರಕವಾಗಿ ನಾಯ್ಸ್‌ ಕಂಪೆನಿ ಇದೀಗ ಭಾರತದಲ್ಲಿ ಹೊಸ ನಾಯ್ಸ್‌ ಬಡ್ಸ್‌ ಟ್ರಾನ್ಸ್‌ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್‌ ಲಾಂಚ್‌ ಮಾಡಿದೆ.

ಹೌದು, ನಾಯ್ಸ್‌ ಬಡ್ಸ್ ಟ್ರಾನ್ಸ್ ಟ್ರೂ ವಾಯರ್‌ಲೆಸ್ ಇಯರ್‌ಫೋನ್‌ ಭಾರತಕ್ಕೆ ಎಂಟ್ರಿ ನೀಡಿದೆ. ಕೈ ಗೆಟಕುವ ಬೆಲೆಯಲ್ಲಿ ಗ್ರ್ಯಾಂಡ್‌ ಎಂಟ್ರಿ ನೀಡಿರುವ ಈ ಬಡ್ಸ್‌ ಬ್ಲೂಟೂತ್‌ 5.3 ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಜೆಟ್ ಬ್ಲಾಕ್, ಸ್ನೋ ವೈಟ್, ಸ್ಪೇಸ್ ಬ್ಲೂ, ಟ್ರೂ ಬ್ಲೂ ಮತ್ತು ಟ್ರೂ ಪರ್ಪಲ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Noise Buds Trance TWS With Up to 45 Hours Battery Life, IPX5 Rating Launched  in India: All Details | Technology News

ನಾಯ್ಸ್‌ ಬಡ್ಸ್‌ ಟ್ರಾನ್ಸ್‌ ಟ್ರೂ ಫೀಚರ್ಸ್‌: ನಾಯ್ಸ್ ಬಡ್ಸ್ ಟ್ರಾನ್ಸ್ ಇಯರ್‌ಬಡ್ಸ್‌ AAC ಬೆಂಬಲಿಸಲಿದ್ದು, 6mm ಡ್ರೈವರ್ ಅನ್ನು ಒಳಗೊಂಡಿರಲಿದೆ. ಇಯರ್‌ಬಡ್ಸ್‌ ಗೇಮಿಂಗ್ ಮಾಡುವಾಗ 40ms ವರೆಗೆ ಲೋ ಲೇಟೆನ್ಸಿ ಮೋಡ್ ಅನ್ನು ನೀಡಲಿದೆ. ಜೊತೆಗೆ ಈ ಇಯರ್‌ಬಡ್ಸ್‌ ಬೆವರು ಮತ್ತು ನೀರಿನ ಪ್ರತಿರೋಧಕ್ಕಾಗಿ IPX5 ರೇಟಿಂಗ್ ಅನ್ನು ಸಹ ನೀಡಲಿದೆ.

ಇನ್ನು ಈ ಇಯರ್‌ಬಡ್ಸ್‌ ಬ್ಲೂಟೂತ್ 5.3 ಆವೃತ್ತಿಯನ್ನು ಬೆಂಬಲಿಸಲಿದೆ. 10m ವರೆಗಿನ ಕನೆಕ್ಟಿವಿಟಿ ರೇಂಜ್‌ ಅನ್ನು ನೀಡಲಿದೆ. ಇದಲ್ಲದೆ ವೇಗದ ಜೋಡಣೆಗಾಗಿ ಹೈಪರ್ ಸಿಂಕ್ ಅನ್ನು ಸಹ ಬೆಂಬಲಿದೆ. ಇದರೊಂದಿಗೆ ಇಯರ್‌ಬಡ್ಸ್‌ ಚಾರ್ಜಿಂಗ್‌ ಕೇಸ್ ಸೇರಿದಂತೆ ಸಿಂಗಲ್‌ ಚಾರ್ಜ್‌ನಲ್ಲಿ 45 ಗಂಟೆಗಳ ಒಟ್ಟು ಪ್ಲೇಟೈಮ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

New launches from Noise: NoiseFit Vortex smartwatch, Noise Buds Trance TWS  earbuds

ನಾಯ್ಸ್‌ ಬಡ್ಸ್‌ ಟ್ರಾನ್ಸ್‌ ಟ್ರೂ ಇನ್‌ಸ್ಟಾಚಾರ್ಜ್ ಟೆಕ್ನಾಲಜಿಯೊಂದಿಗೆ ಬರಲಿದೆ. 10 ನಿಮಿಷಗಳ ಚಾರ್ಜ್‌ನೊಂದಿಗೆ 200 ನಿಮಿಷಗಳ ಪ್ಲೇಟೈಮ್ ಅನ್ನು ಒದಗಿಸಲಿದೆ. ಇದಲ್ಲದೆ ಕೇಸ್‌ನಲ್ಲಿ ಎಲ್ಇಡಿ ಚಾರ್ಜಿಂಗ್ ಸೂಚಕ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ನಾಯ್ಸ್ ಬಡ್ಸ್ ಟ್ರಾನ್ಸ್ ಇಯರ್‌ಬಡ್ಸ್‌ ಭಾರತದಲ್ಲಿ 999ರೂ. ಬೆಲೆಯನ್ನು ಹೊಂದಿದೆ. ಇದು ಜೆಟ್ ಬ್ಲಾಕ್, ಸ್ನೋ ವೈಟ್, ಸ್ಪೇಸ್ ಬ್ಲೂ, ಟ್ರೂ ಬ್ಲೂ ಮತ್ತು ಟ್ರೂ ಪರ್ಪಲ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಇದನ್ನು ನೀವು GoNoise ಆನ್‌ಲೈನ್ ಸ್ಟೋರ್‌ನಲ್ಲಿ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.

Noise launched Noise Buds Trance with up to 45 hours playtime

ಇದಲ್ಲದೆ ನಾಯ್ಸ್‌ ಕಂಪೆನಿ ಇತ್ತೀಚಿಗೆ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 3 ಸ್ಮಾರ್ಟ್‌ವಾಚ್‌ ಆಪಲ್ ವಾಚ್‌ ಮಾದರಿಯ ವಿನ್ಯಾಸವನ್ನು ಹೊಂದಿದೆ. ಇದು 1.96 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಆಲ್‌ವೇಸ್‌ ಆನ್ ಡಿಸ್‌ಪ್ಲೇ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಸಿಂಗಲ್‌ ಟ್ಯಾಪ್ ಮೂಲಕ ಡಿವೈಸ್‌ ಅನ್ನು ಆಲರ್ಟ್‌ ಮಾಡಬಹುದಾಗಿದೆ. ಜೊತೆಗೆ ಸ್ಕ್ರೀನ್‌ ಮೇಲೆ ನಿಮ್ಮ ಕೈಗಳನ್ನು ಇರಿಸುವ ಮೂಲಕ ಡಿಸ್‌ಪ್ಲೇಯನ್ನು ಆಫ್ ಮಾಡಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಮೇಲಿನ ಬಲಭಾಗದಲ್ಲಿ ಸಂಪೂರ್ಣ ಕ್ರಿಯಾತ್ಮಕ ತಿರುಗುವ ಕಿರೀಟವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ಕೆಳಗಿನ ಭಾಗದಲ್ಲಿ ಹೆಚ್ಚುವರಿ ಬಟನ್ ಸಹ ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಹೆಲ್ತ್‌ ಫೀಚರ್ಸ್‌ ಅನ್ನು ಸಹ ನೀಡುತ್ತಿದೆ. ಇದರಲ್ಲಿ ಹಾರ್ಟ್‌ಬೀಟ್‌ ಮಾನಿಟರ್‌, SpO2 ಸೆನ್ಸಾರ್‌ ಮತ್ತಯ ಮಹಿಳೆಯರ ಆರೋಗ್ಯದ ವಿಚಾರವಾಗಿ ಅನೇಕ ಹೆಲ್ತ್‌ ಟ್ರ್ಯಾಕರ್‌ಗಳನ್ನು ಹೊಂದಿದೆ. ಹಾಗೆಯೇ ಸ್ಲಿಪ್‌ ಮಾನಿಟರ್‌ ಮತ್ತು ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಇದಲ್ಲದೆ ನಾಯ್ಸ್ ಕಲರ್‌ಫಿಟ್ ಅಲ್ಟ್ರಾ 3 ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಸ್ಪೀಕರ್ ಅನ್ನು ಹೊಂದಿದೆ. ಇದಕ್ಕಾಗಿ ಮೈಕ್ರೊಫೋನ್‌ ಅನ್ನು ಸಹ ಪಡೆದಿದೆ. ಇನ್ನು ಸ್ಥಿರ ಸಂಪರ್ಕ, ದೀರ್ಘ ಶ್ರೇಣಿ ಮತ್ತು ಬ್ಲೂಟೂತ್ ಕರೆಗಾಗಿ ಸುಲಭ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಅಲ್ಲದೆ ಸ್ಮಾರ್ಟ್‌ವಾಚ್‌ ವೆದರ್‌ ರಿಪೊರ್ಟ್‌, ಸ್ಟಾಕ್ ಅಪ್ಡೇಟ್ಸ್‌, ಕ್ಯಾಲ್ಕುಲೇಟರ್, ಮ್ಯೂಸಿಕ್‌ ಕಂಟ್ರೋಲ್‌, ರಿಮೈಂಡರ್‌, ನೋಟಿಫಿಕೇಶನ್‌ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ಏಳು ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಸಹ ನೀಡಲಿದೆ.

noise buds trance tws launched in india specs and price detail.