ಬ್ರೇಕಿಂಗ್ ನ್ಯೂಸ್
14-06-23 07:22 pm Source: Gizbot ಡಿಜಿಟಲ್ ಟೆಕ್
ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ 'ಗ್ಯಾಲಕ್ಸಿ F14 5G' ಸ್ಮಾರ್ಟ್‌ಫೋನ್ ಬಹುಬೇಗನೆ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯು ಈಗಾಗಲೇ ಗ್ಯಾಲಕ್ಸಿ F ಸರಣಿಯಲ್ಲಿ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಇದು ಹೊಸ ಸೇರ್ಪಡೆ ಆಗಿದೆ. ಆದರೆ ಸ್ವಲ್ಪ ಅಪ್‌ಡೇಟ್ ಫೀಚರ್ಸ್‌ಗಳು ಇದರಲ್ಲಿವೆ. ಪ್ರೊಸೆಸರ್, ಕ್ಯಾಮೆರಾ ಹಾಗೂ ಬ್ಯಾಟರಿ ಆಯ್ಕೆಗಳು ಆಕರ್ಷಕ ಎನಿಸಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಸ್ಮಾರ್ಟ್‌ಫೋನ್ ಬಜೆಟ್ ದರದಲ್ಲಿ ಕಾಣಿಸಿಕೊಂಡಿದ್ದರೂ, ಕೆಲವು ಫೀಚರ್ಸ್‌ಗಳು ಬೊಂಬಾಟ್ ಆಗಿವೆ. ಈ ಫೋನ್ ಬಾಟಮ್-ಫೈರಿಂಗ್ ಸ್ಪೀಕರ್‌ನೊಂದಿಗೆ 90Hz ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ ಈ ಫೋನ್ 6000mAH ಬ್ಯಾಟರಿ ಬ್ಯಾಕ್‌ಅಪ್ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿ ಗುರುತಿಸಿಕೊಂಡಿದೆ. ಜೊತೆಗೆ ಇದರ ಡಿಸೈನ್ ಹಾಗೂ ಕಲರ್ ಆಯ್ಕೆಗಳು ಕೂಡಾ ನೋಡುಗರನ್ನು ಸೆಳೆಯುವಂತಿದೆ.
ಇತ್ತೀಚಿನ ಟ್ರೆಂಡ್‌ನಂತೆ ಡ್ಯುಯಲ್ ಕ್ಯಾಮೆರಾ ರಚನೆಯನ್ನು ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾ ಸೆನ್ಸಾರ್ ತನ್ನ ವರ್ಗದಲ್ಲೇ ಉತ್ತಮವಾಗಿದೆ. ಇದು ಆಕ್ಟಾ ಕೋರ್ Exynos 1330 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಲೆಯು ಗ್ರಾಹಕ ಸ್ನೇಹಿ ಆಗಿರುವುದು ಈ ಫೋನಿನ ಮತ್ತೊಂದು ಪ್ರಮುಖ ಅಂಶವಾಗಿ ಕಾಣಿಸಿದೆ. ಉಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ನೋಡೋಣ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು ಹೆಚ್‌ಡಿ ಪ್ಲಸ್ LCD ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇನ್ನು ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ರಚನೆಯನ್ನು ಹೊಂದದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ನಲ್ಲಿ ಇದೆ. ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ. ಅಲ್ಲದೆ ಉತ್ತಮ ವಿಡಿಯೋ ಕರೆಗಳ ಅನುಭವ ಸಿಗಲಿದೆ. AMOLED ಡಿಸ್‌ಪ್ಲೇ ನೀಡಿದ್ದರೆ ಮತ್ತಷ್ಟು ಅನುಕೂಲಕರ ಎನಿಸುತ್ತಿತ್ತು.
ಪ್ರೊಸೆಸರ್ ಕಾರ್ಯವೈಖರಿ ಹೇಗೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ಆಕ್ಟಾ ಕೋರ್ Exynos 1330 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಇದರೊಂದಿಗೆ ಈ ಫೋನ್ 4 GB ಮತ್ತು 6 GB RAM ಜೊತೆಗೆ 128 GB ಸ್ಟೋರೇಜ್ ಆಯ್ಕೆ ಹೊಂದಿದ್ದು, ವರ್ಚುವಲ್ RAM 6 GB ವರೆಗೂ ಆಯ್ಕೆ ಲಭ್ಯ. ಈ ಪ್ರೊಸೆಸರ್ ಗೇಮಿಂಗ್ ಹಾಗೂ ಮಲ್ಟಿಟಾಸ್ಕ್ ಕೆಲಸಗಳಿಗೆ ಬೆಂಬಲವಾಗಿ ಕೆಲಸ ಮಾಡಲಿದೆ. ಹಾಗೆಯೇ ಆಂಡ್ರಾಯ್ಡ್ 13 ಓಎಸ್ ಇರುವುದರಿಂದ ಸೆಟ್ಟಿಂಗ್‌ನಲ್ಲಿ ನೂತನ ಆಯ್ಕೆಗಳು ಕಾಣಿಸುತ್ತವೆ.
ಡ್ಯುಯಲ್ ಕ್ಯಾಮೆರಾ ವಿನ್ಯಾಸ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ರಚನೆಯನ್ನು ಅನ್ನು ಒಳಗೊಂಡಿದ್ದು, ಈ ಫೋನಿನಲ್ಲಿ ಪ್ರಾಥಮಿಕ ರಿಯರ್ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಆಗಿದೆ. ತನ್ನ ವರ್ಗದಲ್ಲೇ ಇದು ಸ್ಪರ್ಧಾತ್ಮಕ ಕ್ಯಾಮೆರಾ ಆಯ್ಕೆ ಎನ್ನಬಹುದು. ಇದರೊಂದಿಗೆ 2 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 13 ಮೆಗಾ ಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ಪಡೆದಿದೆ. ಇದರೊಂದಿಗೆ ಸ್ಲೋ ಮೋಷನ್ ಸೇರಿದಂತೆಗ ಕೆಲವು ಅಗತ್ಯ ಆಯ್ಕೆಗಳು ಲಭ್ಯ.
ದೈತ್ಯ ಬ್ಯಾಟರಿ ಲೈಫ್ ಹೇಗಿದೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನಿನ ಪ್ರಮುಖ ಹೈಲೈಟ್ಸ್‌ಗಳಲ್ಲಿ ಬ್ಯಾಟರಿ ಕೂಡಾ ಒಂದಾಗಿದೆ. ಈ ಫೋನ್ 6000 mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದರೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, ಸುಮಾರು ಎರಡು ದಿನ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬ್ಯಾಟರಿ ವಿಭಾಗದಲ್ಲಿ ಪೈಪೋಟಿ ನೀಡುವಂತೆ
ಆಯ್ಕೆ ಪಡೆದಿದೆ. ಬೆಲೆ ಎಷ್ಟು : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನಿನ 4GB + 128GB ವೇರಿಯಂಟ್ ಬೆಲೆಯು 12,990ರೂ. ಆಗಿದೆ. ಅದೇ ರೀತಿ 6GB + 128 GB ವೇರಿಯಂಟ್ ಬೆಲೆ 14,990 ರೂ. ಗಳು ಆಗಿದೆ. ಈಗಾಗಲೇ ಮಾರಾಟ ಪ್ರಾರಂಭಿಸಲಿದ್ದು, ಫ್ಲಿಪ್‌ಕಾರ್ಟ್ ಹಾಗೂ ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಇದು ಬ್ಲ್ಯಾಕ್ ರೆಡ್ ಹಾಗೂ ಲೈಟ್ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಕೊನೆಯ ಮಾತು
ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಸ್ಮಾರ್ಟ್‌ಫೋನ್ ಹೊಸತನದ ಆಕರ್ಷಣೆಯ ಟಚ್‌ನೊಂದಿಗೆ ಗ್ರಾಹಕರನ್ನು ಸೆಳೆಯುವ ಆಯ್ಕೆ ಪಡೆದಿದೆ. ಈ ಫೋನ್ ಇತ್ತೀಚಿನ ಕೆಲವು ಜನಪ್ರಿಯ ಆಯ್ಕೆಗಳನ್ನು ಪಡೆದಿದ್ದು, ಅಪ್‌ಡೇಟ್ ಆವೃತ್ತಿ ಎನಿಸುತ್ತದೆ. ಡಿಸೈನ್, ಬಿಗ್ ಬ್ಯಾಟರಿ ಹಾಗೂ ಕ್ಯಾಮೆರಾ ಈ ಫೋನಿನ ಪ್ಲಸ್ ಪಾಯಿಂಟ್ ಗಳಾಗಿ ಕಾಣಿಸುತ್ತವೆ. ಹಾಗೆಯೇ ಈ ಫೋನ್ AMOLED ಡಿಸ್‌ಪ್ಲೇ ಹೊಂದಿದ್ದರೆ, ಮಾರುಕಟ್ಟೆಯಲ್ಲಿ ಮತ್ತಷ್ಟು ಪೈಪೋಟಿ ನೀಡಲು ನೆರವಾಗುತ್ತಿತ್ತು. ಇದನ್ನು ಹೊರತುಪಡಿಸಿ ನೋಡುವುದಾದರೇ ಈ ಫೋನ್ ಖಂಡಿತಾ ಬಜೆಟ್ ಬೆಲೆಗೆ ದೈತ್ಯ 5G ಸ್ಮಾರ್ಟ್‌ಫೋನ್ ಎನ್ನುವುದರಲ್ಲಿ ಎರಡು ಮಾತಿಲ್ಲ.
samsung galaxy f14 5g first impression powerful 5g phone at budget price.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm