ಬೋಟ್‌ನಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! ಬೆಲೆ ಕಡಿಮೆ, ಫೀಚರ್ಸ್‌ ಮಾತ್ರ ಬೆಂಕಿ!

16-06-23 07:07 pm       Source: Gizbot   ಡಿಜಿಟಲ್ ಟೆಕ್

ಕೈಯಲ್ಲಿ ಒಂದು ಫೋನ್‌ ಮಾತ್ರವಲ್ಲ ಕಿವಿಯಲ್ಲಿಯೊಂದು ಇಯರ್‌ಬಡ್ಸ್‌ ಇರಬೇಕು ಅಂತಾ ಬಯಸುತ್ತಾರೆ. ಪ್ರಯಾಣದ ಸಮಯದಲ್ಲಿ ಇಯರ್‌ಬಡ್ಸ್‌ ಇದ್ದರೆ ಸಾಕು ಪ್ರಯಾಣದ ದೂರ ಅರಿವಿಗೆ ಬರುವುದೇ ಇಲ್ಲ.

ಕೈಯಲ್ಲಿ ಒಂದು ಫೋನ್‌ ಮಾತ್ರವಲ್ಲ ಕಿವಿಯಲ್ಲಿಯೊಂದು ಇಯರ್‌ಬಡ್ಸ್‌ ಇರಬೇಕು ಅಂತಾ ಬಯಸುತ್ತಾರೆ. ಪ್ರಯಾಣದ ಸಮಯದಲ್ಲಿ ಇಯರ್‌ಬಡ್ಸ್‌ ಇದ್ದರೆ ಸಾಕು ಪ್ರಯಾಣದ ದೂರ ಅರಿವಿಗೆ ಬರುವುದೇ ಇಲ್ಲ. ಇದಕ್ಕೆ ತಕ್ಕಂತೆ ಹಲವು ಕಂಪೆನಿಗಳ ಇಯರ್‌ಬಡ್ಸ್‌ಗಳು ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿವೆ. ಇದರಲ್ಲಿ ಬೋಟ್‌ ಬ್ರ್ಯಾಂಡ್‌ ಕೂಡ ಸೇರಿದೆ.

ಹೌದು, ಬೋಟ್‌ ಕಂಪೆನಿಯ ಇಯರ್‌ಬಡ್ಸ್‌ಗಳು ಇಂದಿನ ಯುವಜನರ ನೆಚ್ಚಿನ ಆಯ್ಕೆಯಾಗಿ ಗುರುತಿಸಿಕೊಂಡಿವೆ. ಮ್ಯೂಸಿಕ್‌ ಪ್ರಿಯರಿಗೆ ಮಾತ್ರವಲ್ಲ ಗೇಮಿಂಗ್‌ ಪ್ರಿಯರ ಆಯ್ಕೆಯು ಕೂಡ ಬೋಟ್‌ ಇಯರ್‌ಬಡ್ಸ್‌ಗಳಾಗಿವೆ. ಇದೀಗ ಬೋಟ್‌ ಕಂಪೆನಿ ಹೊಸ ಬೋಟ್‌ ಇಮ್ಮಾರ್ಟಲ್ 150 TWS ಗೇಮಿಂಗ್ ಇಯರ್‌ಬಡ್ಸ್ ಅನ್ನು ಪರಿಚಯಿಸಿದೆ. ಈ ಇಯರ್‌ಬಡ್ಸ್‌ ಫೀಚರ್ಸ್‌ ಏನಿದೆ? ಇದರ ಬೆಲೆ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

boAt Immortal 150 TWS Gaming Earbuds With 10mm Drivers, Up To 40Hr Battery  Launched In India: Price, Specifications - MySmartPrice

ಬೋಟ್‌ ಇಮ್ಮಾರ್ಟಲ್ 150 TWS ಗೇಮಿಂಗ್ ಇಯರ್‌ಬಡ್ಸ್‌ ಬೋಟ್‌ ಇಮ್ಮಾರ್ಟಲ್ 150 TWS ಗೇಮಿಂಗ್ ಇಯರ್‌ಬಡ್ಸ್ ಗೇಮರ್‌ಗಳು ಮತ್ತು ಮ್ಯೂಸಿಕ್‌ ಪ್ರಿಯರಿಗೆ ಸೂಕ್ತವಾದ ವಿನ್ಯಾಸದೊಂದಿಗೆ ಎಂಟ್ರಿ ನೀಡಿದೆ. ಇದು 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ತಲ್ಲೀನಗೊಳಿಸುವ ಆಡಿಯೊ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಇದು ಡೀಪ್‌ ಬಾಸ್‌ನಿಂದ ಹೆಚ್ಚಿನ ಟ್ರಿಬಲ್‌ವರೆಗೆ ವ್ಯಾಪಕ್‌ ರೇಂಜ್‌ ಫ್ರಿಕ್ವೆನ್ಸಿಯನ್ನು ರಿ ಪ್ರೊಡಕ್ಷನ್‌ ಅನ್ನು ನೀಡಲಿದೆ. ಇದರಲ್ಲಿರುವ ಸೂಪರ್ ಬಾಸ್ ರೆಸ್ಪಾನ್ಸ್‌ ನಿಮ್ಮ ಧ್ವನಿಗೆ ಹೆಚ್ಚುವರಿ ಪಂಚ್ ಅನ್ನು ಸೇರಿಸಲಿದೆ.

ಇದಲ್ಲದೆ ಈ ಇಯರ್‌ಬಡ್ಸ್‌ ಸ್ಪಷ್ಟ ಮತ್ತು ಗರಿಗರಿಯಾದ ಕಮ್ಯೂನಿಕೇಷನ್‌ಗಾಗಿ ENC ಮೈಕ್‌ ಅನ್ನು ಹೊಂದಿದೆ. ಇದರಿಂದ ಬ್ಯಾಕ್‌ಗ್ರೌಂಡ್‌ ಸೌಂಡ್‌ ನಿಮ್ಮ ಕಿವಿಗೆ ಬೀಳದಂತೆ ಮಾಡಲಿದೆ. ಜೊತೆಗೆ ಗೇಮಿಂಗ್ ಸೆಷನ್‌ಗಳಲ್ಲಿ ನಿಮ್ಮ ಧ್ವನಿಯು ಸ್ಪಷ್ಟವಾಗಿ ಕೇಳಲಿದೆ ಅನ್ನೊದನ್ನ ಖಚಿತಪಡಿಸಲಿದೆ. ಇದು ಬಳಕೆದಾರರ ಕಿವಿಗೆ ತಕ್ಕಂತೆ ಹೊಂದಿಕೊಳ್ಳುವ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಇಯರ್‌ಬಡ್ಸ್‌ ಇನ್-ಲೈನ್ ರಿಮೋಟ್ ಕಂಟ್ರೋಲ್ ವಾಲ್ಯೂಮ್ ಕಂಟ್ರೋಲ್, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಕಾಲ್‌ ಕಂಟ್ರೋಲ್‌ ವ್ಯವಸ್ಥೆಯನ್ನು ಸಹ ಹೊಂದಿದೆ.

10 minute charging! 3 hour backup! boAt earbuds in beast mode! The price is  different! |

ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 10 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಜೊತೆಗೆ ಕೇವಲ ಹತ್ತು ನಿಮಿಷಗಳ ಚಾರ್ಜಿಂಗ್‌ನಲ್ಲಿ ಮೂರು ಗಂಟೆಗಳ ಅವಧಿಯನ್ನು ನೀಡಲಿದೆ. ಜೊತೆಗೆ ಇಯರ್‌ಬಡ್ಸ್‌ IPX4 ರೇಟಿಂಗ್‌ ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇದರಿಂದ ಇಯರ್‌ಬಡ್ಸ್‌ ಮಳೆ ಅಥವಾ ಬೆವರುವಿಕೆಯಿಂದ ರಕ್ಷಣೆಯನ್ನು ನೀಡಲಿದೆ. ಇದು ಬ್ಲೂಟೂತ್ v5.3 ಚಿಪ್ ಮತ್ತು ಇನ್‌ಸ್ಟಂಟ್ ವೇಕ್ ಮತ್ತು ಪೇರ್ ಫೀಚರ್ಸ್‌ ಅನ್ನು ಹೊಂದಿದೆ. ಇದರಿಂದ ವೇಗವಾಗಿ ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್‌ ಮಾಡಬಹುದಾಗಿದೆ.

BoAt Immortal 150 TWS gaming earbuds: ಬೋಟ್‌ನಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌!  ಬೆಲೆ ಕಡಿಮೆ, ಫೀಚರ್ಸ್‌ ಮಾತ್ರ ಬೆಂಕಿ!|ಬೋಟ್‌ನಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! ಬೆಲೆ  ಕಡಿಮೆ, ಫೀಚರ್ಸ್‌ ...

ಬೆಲೆ ಮತ್ತು ಲಭ್ಯತೆ

ಬೋಟ್‌ ಇಮ್ಮಾರ್ಟಲ್ 150 ಇಯರ್‌ಬಡ್ಸ್‌ ಭಾರತದಲ್ಲಿ 1,199ರೂ.ಬೆಲೆಯಲ್ಲಿ ಬರಲಿದೆ. ಇದನ್ನು ನೀವು ಬೋಟ್‌ಲೈಫ್‌ಸ್ಟೈಲ್‌.ಕಾಮ್‌ ಮತ್ತು ಫ್ಲಿಪ್‌ಕಾರ್ಟ್‌.ಕಾಮ್‌ ವೆಬ್‌ಸೈಟ್‌ಗಳಲ್ಲಿ ಖರೀದಿಸಬಹುದಾಗಿದೆ. ಇದು ನಿಮಗೆ ಬ್ಲ್ಯಾಕ್ ಸೇಬರ್ ಮತ್ತು ವೈಟ್ ಸೇಬರ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇತ್ತೀಚಿಗೆ ಬೋಟ್‌ ಕಂಪೆನಿ ಭಾರತದಲ್ಲಿ ಹೊಸ 'ಬೋಟ್‌ ಅಲ್ಟಿಮಾ ಕಾಲ್' (boAt Ultima Call) ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಕಾಂಟ್ಯಾಕ್ಟ್‌ ಸ್ಟೋರೇಜ್‌ ಹಾಗೂ ಡಯಲ್ ಪ್ಯಾಡ್‌ ಸೌಲಭ್ಯ ಪಡೆದಿದ್ದು, ಇದು ಇತರೆ ಡಿವೈಸ್‌ಗಳಿಗೆ ಪೈಪೋಟಿ ನೀಡುವಂತಹ ಫೀಚರ್ಸ್‌ ಆಗಿವೆ. ಹಾಗೆಯೇ ಸುಮಾರು 700 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದೆ.

ಈ ಸ್ಮಾರ್ಟ್‌ ವಾಚ್‌ ಕ್ಯಾಮೆರಾ ಕಂಟ್ರೋಲ್‌, ಲೈವ್ ಕ್ರಿಕೆಟ್ ಸ್ಕೋರ್‌ಗಳು, ಮ್ಯೂಸಿಕ್‌ ಕಂಟ್ರೋಲ್‌, ಹವಾಮಾನ ವರದಿ, ಅಲಾರ್ಮ್, ಕೌಂಟ್‌ಡೌನ್, ಸ್ಟಾಪ್‌ವಾಚ್, DND ಮತ್ತು ಫೈಂಡ್ ಮೈ ಫೋನ್‌ಗೆ ಬೆಂಬಲವನ್ನು ಪಡೆದಿದೆ. ಸಂಸ್ಥೆಯು ಬ್ಯಾಟರಿ ಪವರ್‌ ಬಗ್ಗೆ ಮಾಹಿತಿ ಹೊರಹಾಕಿಲ್ಲ.

Boat immortal 150 tws gaming earbuds with 40ms low latency mode launched in india.