ಬ್ರೇಕಿಂಗ್ ನ್ಯೂಸ್
19-06-23 08:02 pm Source: Gizbot ಡಿಜಿಟಲ್ ಟೆಕ್
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಹೋಮ್ ಸೆಕ್ಯುರಿಟಿ ವ್ಯವಸ್ಥೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. 24x7 ವಾಚ್ ಮಾಡುವ ಸ್ಮಾರ್ಟ್‌ಹೋಮ್ ಆಕ್ಸಿಸರೀಸ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾ ಮಾರುಕಟ್ಟೆ ಹೆಚ್ಚಿನ ಬೆಳವಣಿಗೆ ಸಾಧಿಸಿದೆ.
ಹೌದು, ಭಾರತದಲ್ಲಿ ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಅದರಲ್ಲೂ 2023ರ ಮೊದಲ ತ್ರೈಮಾಸಿಕದಲ್ಲಿ 48% ಸೆಕ್ಯುರಿಟಿ ಕ್ಯಾಮೆರಾಗಳನ್ನು ಭಾರತದಲ್ಲಿ ಶಿಪ್ಪಿಂಗ್ ಮಾಡಲಾಗಿದೆ. ಹಾಗಾದ್ರೆ ಭಾರತದ ಸೆಕ್ಯುರಿಟಿ ಕ್ಯಾಮೆರಾ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾದಿಸಿರುವ ಟಾಪ್ ಬ್ರ್ಯಾಂಡ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಸಿಪಿ ಪ್ಲಸ್
ಭಾರತದ ಸೆಕ್ಯುರಿಟಿ ಕ್ಯಾಮೆರಾ ಮಾರುಕಟ್ಟೆಯಲ್ಲಿ ಸಿಪಿ ಪ್ಲಸ್ ಕಂಪೆನಿ 71% ಪಾಲನ್ನು ಹೊಂದಿದೆ. ಇದು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಅದರಲ್ಲೂ ಇದರ 3MP ಮತ್ತು 4MP ಆಯ್ಕೆಯ ಸೆಕ್ಯುರಿಟಿ ಕ್ಯಾಮೆರಾಗಳು ಹೆಚ್ಚು ಗಮನಸೆಳೆದಿವೆ.
ಶಿಯೋಮಿ
ಶಿಯೋಮಿ ಕಂಪೆನಿ ಅತಿ ಹೆಚ್ಚು ಮಾರಾಟವಾಗುವ ಸೆಕ್ಯುರಿಟಿ ಕ್ಯಾಮೆರಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಇದರ ಹೋಮ್ ಸೆಕ್ಯುರಿಟಿ ಕ್ಯಾಮೆರಾ 2i ಅತಿ ಹೆಚ್ಚು ಮಾರಾಟವಾದ ದಾಖಲೆ ಹೊಂದಿದೆ. ಶಿಯೋಮಿ ಸೆಕ್ಯುರಿಟಿ ಕ್ಯಾಮೆರಾ ಮಾರುಕಟ್ಟೆಯಲ್ಲಿ 12% ಮಾರುಕಟ್ಟೆ ಪಾಲನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ.
Ezviz
Ezviz ಬ್ರ್ಯಾಂಡ್‌ನ C6N ಕ್ಯಾಮೆರಾ ಅತಿ ಹೆಚ್ಚು ಮಾರಾಟವಾಗುವ ಸೆಕ್ಯುರಿಟಿ ಕ್ಯಾಮೆರಾಗಳಲ್ಲಿ ಒಂದಾಗಿದೆ. ಇದು ಪ್ರಸ್ತುತ ಮೂರನೇ ಅತ್ಯುತ್ತ ಸೆಕ್ಯುರಿಟಿ ಕ್ಯಾಮೆರಾ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಈ ಕಂಪೆನಿಯು ಮಾರುಕಟ್ಟೆಯಲ್ಲಿ 10% ಮಾರುಕಟ್ಟೆ ಪಾಲನ್ನು ಹೊಂದಿದೆ.
Tapo
ಅತ್ಯುತ್ತ ಸೆಕ್ಯುರಿಟಿ ಕ್ಯಾಮೆರಾ ಕಂಪೆನಿಗಳಲ್ಲಿ Tapo ನಾಲ್ಕನೇ ಸ್ಥಾನ ಪಡೆದುಕೊಂಡಿದೆ. TP ಲಿಂಕ್‌ನ Tapo ಮಾರುಕಟ್ಟೆಯಲ್ಲಿ 9% ಪಾಲನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ತನ್ನ ಸ್ಥಾನವನ್ನು ದ್ವಿಗುಣಗೊಳಿಸಿಕೊಂಡಿದೆ. ಅದರಲ್ಲೂ ಹೆಚ್ಚಾಗಿ ಆನ್‌ಲೈನ್ ಚಾನೆಲ್‌ಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಈ ಕಂಪೆನಿಯ C210 ಕ್ಯಾಮೆರಾ ಅತಿ ಹೆಚ್ಚು ಮಾರಾಟವಾದ ಸೆಕ್ಯುರಿಟಿ ಕ್ಯಾಮೆರಾಗಳಲ್ಲಿ ಒಂದಾಗಿದೆ.
ಕ್ಯುಬೋ
ಕ್ಯುಬೋ ಕಂಪೆನಿ ತನ್ನ ಜನಪ್ರಿಯ ಸೆಕ್ಯುರಿಟಿ ಕ್ಯಾಮೆರಾಗಳ ಮೂಲಕ ಸೈ ಎನಿಸಿಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ 5% ಪಾಲನ್ನು ಹೊಂದುವ ಮೂಲಕ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಈ ಕಂಪೆನಿಯ ಸ್ಮಾರ್ಟ್ ಕ್ಯಾಮ್ 360 ಅತಿ ಹೆಚ್ಚು ಮಾರಾಟವಾಗುವ ಕ್ಯಾಮೆರಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಶೇಷವಾಗಿ 2,000ರೂ. ರಿಂದ 2,500ರೂ. ಬೆಲೆಯಲ್ಲಿ ಲಭ್ಯವಾಗಲಿವೆ.
Imou
ಜನಪ್ರಿಯ ಸೆಕ್ಯುರಿಟಿ ಕ್ಯಾಮೆರಾಗಳ ಮೂಲಕ Imou ಬ್ರ್ಯಾಂಡ್ ಗುರುತಿಸಿಕೊಂಡಿದೆ. ಬ್ರ್ಯಾಂಡ್‌ನ ರೇಂಜರ್ ಸರಣಿಯ ಕ್ಯಾಮೆರಾಗಳು ಒಟ್ಟು ಸಾಗಣೆಯಲ್ಲಿ 60% ಕ್ಕಿಂತ ಹೆಚ್ಚು ಕೊಡುಗೆ ನೀಡಿವೆ.
ಕೆಂಟ್
ಕೆಂಟ್ ಕಂಪೆನಿ ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ತನ್ನ ಮೊದಲ ತ್ರೈಮಾಸಿಕದಲ್ಲಿ ಸಾಕಷ್ಟು ಬೆಳವಣಿಗೆ ಸಾದಿಸಿದೆ. ಅದರಲ್ಲೂ ಈ ಎಲ್ಲಾ ಕ್ಯಾಮೆರಾಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಅನ್ನೊದು ಇಂಟ್ರೆಸ್ಟಿಂಗ್ ವಿಚಾರ.
ರಿಯಲ್‌ಮಿ
ರಿಯಲ್‌ಮಿ ಕಂಪೆನಿ ಕೂಡ ಟಾಪ್ 10 ಪಟ್ಟಿ ಸೆಕ್ಯುರಿಟಿ ಕ್ಯಾಮೆರಾ ಬ್ರ್ಯಾಂಡ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಇನ್ನು ಕಂಪನಿಯು ಮೊದಲ ತ್ರೈಮಾಸಿಕದಲ್ಲಿ 18% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.
ಏರ್‌ಟೆಲ್
ಏರ್‌ಟೆಲ್ ಕಂಪೆನಿ ಕೂಡ ಸೆಕ್ಯುರಿಟಿ ಕ್ಯಾಮೆರಾಗಳ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಕ್ಲೌಡ್ ಸ್ಟೋರೇಜ್ ಸೇವೆಯನ್ನು ಒದಗಿಸುವ ಏಕೈಕ ಬ್ರ್ಯಾಂಡ್ ಆಗಿದೆ. ಈ ಬ್ರ್ಯಾಂಡ್ ಟೈರ್-1 ಮತ್ತು ಟೈರ್-2 ನಗರಗಳನ್ನು ಭೇದಿಸುವ ಗುರಿಯನ್ನು ಹೊಂದಿದೆ.
Top Selling Models in Indias Smart Home Security Market.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm