ಎಂಟ್ರಿಗೂ ಮುನ್ನವೇ ಧೂಳೆಬ್ಬಿಸಿದ ಶಿಯೋಮಿ ಪ್ಯಾಡ್ 6 ಮ್ಯಾಕ್ಸ್; ವಿಶೇಷತೆ ಏನು?

11-08-23 06:50 pm       Source: Gizbot Kannada   ಡಿಜಿಟಲ್ ಟೆಕ್

ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟ್ಯಾಬ್‌ಗಳಿಗೂ ಕೂಡ ಪ್ರಸಿದ್ಧಿ ಪಡೆದಿದೆ. ತನ್ನ ಭಿನ್ನ ಮಾದರಿಯ ಟ್ಯಾಬ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ.

ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟ್ಯಾಬ್‌ಗಳಿಗೂ ಕೂಡ ಪ್ರಸಿದ್ಧಿ ಪಡೆದಿದೆ. ತನ್ನ ಭಿನ್ನ ಮಾದರಿಯ ಟ್ಯಾಬ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಹೊಸ ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಅನ್ನು ಪರಿಚಯಿಸಲು ತಯಾರಿ ನಡೆಸಿದೆ. ಈ ಟ್ಯಾಬ್‌ ಇದೇ ಆಗಸ್ಟ್ 14 ರಂದು ಬಿಡುಗಡೆ ಆಗೋದು ಪಕ್ಕಾ ಆಗಿದೆ.

ಹೌದು, ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ ಟ್ಯಾಬ್‌ ಸದ್ಯದಲ್ಲೇ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಇನ್ನು ಈ ಟ್ಯಾಬ್ಲೆಟ್‌ ಶಿಯೋಮಿ ಬ್ರ್ಯಾಂಡ್‌ನ ಅತಿದೊಡ್ಡ ಮತ್ತು ಪವರ್‌ಫುಲ್‌ ಟ್ಯಾಬ್ಲೆಟ್ ಎಂದು ಹೇಳಲಾಗಿದೆ. ಇದಲ್ಲದೆ ಈ ಟ್ಯಾಬ್‌ 10,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಟ್ಯಾಬ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿರಬಹುದು ಎಂಬ ನಿರೀಕ್ಷೆಯಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Xiaomi Pad 6 Max will be officially launched on August 14th. - xiaomiui

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಫೀಚರ್ಸ್‌ ನಿರೀಕ್ಷೆ?

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ 14 ಇಂಚಿನ ಡಿಸ್‌ಪ್ಲೇಯೊಂದಿಗೆ ಬರಲಿದೆ. ಈ ಡಿಸ್‌ಪ್ಲೇ 1848 x 2960 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಪ್ರೊಸೆಸರ್‌ ಯಾವುದು?

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಪ್ಯಾಡ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ ಎನ್ನಲಾಗಿದೆ.

Xiaomi Pad 6 Max Tablet Specs Confirmed: 14” Screen, Flagship SD8+ G1 SoC,  Large Battery Revealed - Gizbot News

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಕ್ಯಾಮೆರಾ ಸೆಟ್‌ಅಪ್‌

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದು ಕ್ಯಾಮರಾ + 3D ToF ಸಂವೇದಕ ಸೆಟಪ್ ಆಗಿರಬಹುದು ಎನ್ನಲಾಗಿದೆ. ಈ ಟ್ಯಾಬ್‌ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್‌ ಸೆನ್ಸಾರ್‌ ಹಾಗೂ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಲಿದೆ ಎಂದು ಅಂದಾಜಿಸಲಾಗಿದೆ.

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಬ್ಯಾಟರಿ ಬ್ಯಾಕ್‌ಅಪ್‌

ಶಿಯೋಮಿ ಪ್ಯಾಡ್‌ 6 ಸ್ಮಾರ್ಟ್‌ ಟ್ಯಾಬ್‌ 10,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ ಎಂದು ಶಿಯೋಮಿ ಕಂಪೆನಿ ದೃಢಪಡಿಸಿದೆ. ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಟ್ಯಾಬ್‌ ಟಾಪ್-ಎಂಡ್ ಟ್ಯಾಬ್ಲೆಟ್ ವೇಗದ ಚಾರ್ಜ್ ಹೊಂದಾಣಿಕೆಯ ಡಿವೈಸ್‌ಗಳಿಗೆ 33W ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ ಎಂದು ಅಂದಾಜಿಸಲಾಗಿದೆ.

Xiaomi Pad 6 Max Tablet Specs Confirmed: 14” Screen, Flagship SD8+ G1 SoC,  Large Battery Revealed - Gizbot News

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಇತರೆ ಫೀಚರ್ಸ್‌

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಗೇಮಿಂಗ್ ಮತ್ತು ಸ್ಟ್ರೀಮಿಂಗ್ ಸೆಷನ್‌ಗಳಲ್ಲಿ ಶಕ್ತಿಯುತ ಆಡಿಯೊ ಔಟ್‌ಪುಟ್‌ಗಾಗಿ ಎಂಟು-ಸ್ಪೀಕರ್ ಸಿಸ್ಟಮ್‌ ಹೊಂದಿರಲಿದೆ. ಇದಲ್ಲದೆ ನಾಲ್ಕು-ವಿಂಡೋ ಸ್ಪ್ಲಿಟ್ ಸ್ಕ್ರೀನ್ ಮತ್ತು ಕಂಪ್ಯೂಟರ್ ತರಹದ ಕಚೇರಿ ಕಾರ್ಯಕ್ಷಮತೆಗಾಗಿ WPS ಆಫೀಸ್ ಪಿಸಿಯಂತಹ ಫಂಕ್ಷನ್‌ಗಳನ್ನು ದೃಢಪಡಿಸಿದೆ.

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಬೆಲೆ ಮತ್ತು ಲಭ್ಯತೆ

ಶಿಯೋಮಿ ಪ್ಯಾಡ್‌ 6 ಮ್ಯಾಕ್ಸ್‌ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಇದೇ ಆಗಸ್ಟ್‌ 14 ಬಿಡುಗಡೆ ಆಗುವುದರಿಂದ ಇದರ ಬೆಲೆ ವಿವರಗಳು ಸದ್ಯದಲ್ಲೇ ಬಹಿರಂಗವಾಗುವ ಸಾದ್ಯತೆಯಿದೆ. ಇದರ ಕಲರ್‌ ಆಯ್ಕೆಗಳ ವಿವರಗಳನ್ನು ಇನ್ನಷ್ಟು ಬಹಿರಂಗವಾಗಬೇಕಿದೆ.

Xiaomi Pad 6 Max officially Confirmed to Feature a 14 Inch Display Expected Details.