ಬ್ರೇಕಿಂಗ್ ನ್ಯೂಸ್
12-08-23 08:22 pm Source: Gizbot Kannada ಡಿಜಿಟಲ್ ಟೆಕ್
ರಿಯಲ್‌ಮಿ (Realme) ಫೋನ್‌ಗಳಿಗೆ ಭಾರತದಲ್ಲಿ ದೊಡ್ಡ ಬೇಡಿಕೆ ಇದೆ. ಈ ಫೋನ್ ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಈ ನಡುವೆ ರಿಯಲ್‌ಮಿ ಹೊಸ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಅನಾವರಣ ಮಾಡಿದೆ. ಇದೆಲ್ಲದರ ಜೊತೆಗೆ ಈಗ ರಿಯಲ್‌ಮಿಯ ಮೂರು ಸ್ಮಾರ್ಟ್‌ಫೋನ್‌ಗಳ ಮೇಲೆ ಅದೂ ಸಹ ಪ್ರೀಮಿಯಂ ಫೋನ್‌ಗಳ(Premium phone) ಮೇಲೆ ಕೊಡುಗೆ ಘೋಷಣೆ ಮಾಡಲಾಗಿದೆ.
ಹೌದು, ಕೈಗೆಟಕುವ ದರದಲ್ಲಿ ಅತ್ಯುತ್ತಮ ಫೋನ್ ಖರೀದಿ ಮಾಡಬೇಕು ಎಂದರೆ ಈ ಆಫರ್ ಸದುಪಯೋಗಪಡಿಸಿಕೊಳ್ಳಬಹುದು. ಅಂದರೆ ಈ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೋ N55, ರಿಯಲ್‌ಮಿ ನಾರ್ಜೋ 60 5G ಮತ್ತು ರಿಯಲ್‌ಮಿ ನಾರ್ಜೋ 60 ಪ್ರೊ 5G ಮೇಲೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಲಾಗಿದ್ದು, ಈ ಆಫರ್ ಆಗಸ್ಟ್ 13 ರಂದು ಮಧ್ಯಾಹ್ನ 12 ರಿಂದ ಆಗಸ್ಟ್ 17 ರವರೆಗೆ ಲಭ್ಯ ಇದೆ. ಹಾಗಿದ್ರೆ, ಬನ್ನಿ ಈ ಫೋನ್‌ಗಳ ಆಫರ್ ಬೆಲೆ ಏನು ಖರೀದಿ ಮಾಡುವುದು ಎಲ್ಲಿ ಎಂಬಿತ್ಯಾದಿ ಮಾಹಿತಿಯನ್ನು ನೋಡೋಣ.

ಈ ಆಫರ್ ಎಲ್ಲಿ ಲಭ್ಯ?: ಈ ಆಫರ್ ಸೇಲ್ ನಾಳೆಯಿಂದ ಅಂದರೆ ಆಗಸ್ಟ್ 13 ರಂದು ಮಧ್ಯಾಹ್ನ 12 ಗಂಟೆಗೆ ಲೈವ್ ಆಗಲಿದ್ದು, ಆಗಸ್ಟ್ 17 ರವರೆಗೆ ಇರಲಿದೆ. ನೀವು ಈ ಫೋನ್‌ಗಳನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಹಾಗೂ ರಿಯಲ್‌ಮಿಯ (Amazon and Realme) ಅಧಿಕೃತ ಸೈಟ್‌ಗೆ ಭೇಟಿ ನೀಡುವ ಮೂಲಕ ಖರೀದಿ ಮಾಡಬಹುದು. ಇದರೊಂದಿಗೆ ಇನ್ನೂ ಹೆಚ್ಚಿನ ಕೊಡುಗೆಗಳು ಸಹ ಲಭ್ಯ ಇವೆ.
ಯಾವ ಮಾದರಿಗೆ ಎಷ್ಟು ರಿಯಾಯಿತಿ? ಇನ್ನು ರಿಯಲ್‌ಮಿ ನಾರ್ಜೋ 60 ಪ್ರೊ 5Gನ(Realme Narzo 60 Pro 5G) ಎಲ್ಲಾ ವೇರಿಯಂಟ್‌ಗೆ ಅಮೆಜಾನ್‌ನಲ್ಲಿ 1000 ರೂ.ಗಳ ಬ್ಯಾಂಕ್ ಆಫರ್ ಮತ್ತು 6 ತಿಂಗಳ ನೋ ಕಾಸ್ಟ್ ಇಎಮ್‌ಐ ಆಯ್ಕೆ ನೀಡಲಾಗಿದೆ. ಹಾಗೆಯೇ ಅಮೆಜಾನ್ ಹಾಗೂ ರಿಯಲ್‌ಮಿ ಸೈಟ್‌ನಲ್ಲಿ ರಿಯಲ್‌ಮಿ ನಾರ್ಜೋ 60 5G (Realme Narzo 60 5G) ಖರೀದಿ ಮಾಡಿದರೆ ಗ್ರಾಹಕರು 750ರೂ ಮೌಲ್ಯದ ಕೂಪನ್ ಜೊತೆಗೆ ಅಮೆಜಾನ್‌ನಲ್ಲಿ (Amazon) 3 ತಿಂಗಳ ಇಎಮ್‌ಐ ಆಯ್ಕೆ ಪಡೆದುಕೊಳ್ಳಬಹುದು.

ಇದರೊಂದಿಗೆ ರಿಯಲ್‌ಮಿ ನಾರ್ಜೋ N55 (Realme Narzo N55 6GB+128GB) ಗಾಗಿ 750ರೂ.ಗಳ ಮೌಲ್ಯದ ಕೂಪನ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ಅಮೆಜಾನ್ ಹಾಗೂ ರಿಯಲ್‌ಮಿ ಸೈಟ್‌ನಲ್ಲಿ ಖರೀದಿ ರಿಯಲ್‌ಮಿ ನಾರ್ಜೋ N55 (4GB+64GB) ಫೋನ್ ಖರೀದಿ ಮಾಡಿದರೆ ಗ್ರಾಹಕರು 500 ರೂ.ಗಳ ಮೌಲ್ಯದ ಕೂಪನ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಆಫರ್ ನಂತರದ ಬೆಲೆ ಎಷ್ಟು? : ರಿಯಲ್‌ಮಿ ನಾರ್ಜೋ N55 4GB + 64GB ವೇರಿಯಂಟ್ 500 ರೂ.ಗಳ ರಿಯಾಯಿತಿಯ ನಂತರ 10,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ 6GB + 128GB ವೇರಿಯಂಟ್ ಅನ್ನು 12,249ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ರಿಯಲ್‌ಮಿ ನಾರ್ಜೋ 60 5g 8GB + 128GB ವೇರಿಯಂಟ್ ಅನ್ನು 17,249ರೂ.ಗಳಿಗೆ ಹಾಗೂ 8GB + 256GB ವೇರಿಯಂಟ್ ಫೋನ್ ಅನ್ನು 19,249ರೂ.ಗಳ ಆಪರ್ ಬೆಲೆಗೆ ಖರೀದಿ ಮಾಡಬಹುದು.

ಇದರೊಂದಿಗೆ ರಿಯಲ್‌ಮಿ ನಾರ್ಜೋ 60 ಪ್ರೊ ನ 8GB+128GB ವೇರಿಯಂಟ್‌ಗೆ 1,000 ರೂ.ಗಳ ರಿಯಾಯಿತಿ ನೀಡಲಾಗಿದ್ದು, ನೀವು ಇದನ್ನು 22,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ನಂತರ 12GB+256GB ವೇರಿಯಂಟ್‌ಗೆ 1,000ರೂ.ಗಳ ಡಿಸ್ಕೌಂಟ್ ಲಭ್ಯ ಇದ್ದು, 25,999ರೂ.ಗಳಿಗೆ ಇದನ್ನು ಖರೀದಿ ಮಾಡಬಹುದು ಹಾಗೂ 12GB+1TB ವೇರಿಯಂಟ್‌ಗೂ ಸಹ 1,000 ರೂ.ರಿಯಾಯಿತಿ ಇದ್ದು, 26,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ 5G ನ ಫೀಚರ್ಸ್: ರಿಯಲ್‌ಮಿ ನಾರ್ಜೋ 60 ಪ್ರೊ 5G ಸ್ಮಾರ್ಟ್‌ಫೋನ್ 12GB 12GB ಡೈನಾಮಿಕ್ RAM ಅನ್ನು ಹೊಂದಿದೆ ಮತ್ತು 1TB ಸ್ಟೋರೇಜ್‌ನೊಂದಿಗೆ ಈ ಕಾಣಿಸಿಕೊಂಡ ಈ ವಿಭಾಗದ ಏಕೈಕ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಕರ್ವ್ಡ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಜೊತೆಗೆ 100 ಮೆಗಾಪಿಕ್ಸೆಲ್ OIS ಪ್ರೊಲೈಟ್ ಪ್ರಮುಖ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ.
ರಿಯಲ್‌ಮಿ ನಾರ್ಜೋ 60 5G ಫೀಚರ್ಸ್: ಈ ಫೋನ್ 90Hz ರಿಫ್ರೆಶ್ ರೇಟ್ ನೊಂದಿಗೆ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 64 ಮೆಗಾಪಿಕ್ಸೆಲ್ ಸ್ಟ್ರೀಟ್ ಫೋಟೋಗ್ರಫಿ ಕ್ಯಾಮೆರಾದ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಉಳಿದಂತೆ ಡೈಮೆನ್ಸಿಟಿ 6020 5G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಮಾರ್ಸ್ ಆರೆಂಜ್, ಮತ್ತು ಕಾಸ್ಮಿಕ್ ಬ್ಲಾಕ್ ಬಣ್ಣದಲ್ಲಿ ಕಾಣಿಸಿಕೊಂಡಿದೆ.
ರಿಯಲ್‌ಮಿ ನಾರ್ಜೋ n55 ಫೀಚರ್ಸ್: ಈ ಫೋನ್ ಕಡೆ ಕಣ್ಣಾಯಿಸುವುದಾದರೆ ಇದು 90 Hz ರಿಫ್ರೆಶ್ ರೇಟ್ ಆಯ್ಕೆ ಇರುವ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಹಿಲಿಯೋ G88 ಚಿಪ್‌ಸೆಟ್ ಬಲ ಪಡೆದಿದೆ ಹಾಗೂ ಆಟೋ ಪಿಕ್ಸೆಲೇಟ್ ಎಂಬ ಹೊಸ ಫೀಚರ್ಸ್ ಹೊಂದಿದ್ದು, ಸ್ಕ್ರೀನ್‌ಶಾಟ್‌ಗಳಲ್ಲಿ ಪ್ರೊಫೈಲ್ ಫೋಟೋಗಳು ಮತ್ತು ಹೆಸರುಗಳನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಮಾಡುತ್ತದೆ.
Huge Discount on Realme Narzo N55 Realme Narzo 60 5G and Realme Narzo 60 pro 5G.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
24-01-26 02:13 pm
HK News Staffer
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm