ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14:.. ಖರೀದಿಗೆ ಯೋಗ್ಯವೇ?

14-08-23 08:55 pm       Source: Gizbot Kannada   ಡಿಜಿಟಲ್ ಟೆಕ್

ಸ್ಯಾಮ್‌ಸಂಗ್‌ ಕಂಪೆನಿ ಕೆಲ ತಿಂಗಳ ಹಿಂದೆ ಗ್ಯಾಲಕ್ಸಿ M14 ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡಿದೆ.

ಸ್ಯಾಮ್‌ಸಂಗ್‌ ಕಂಪೆನಿ ಕೆಲ ತಿಂಗಳ ಹಿಂದೆ ಗ್ಯಾಲಕ್ಸಿ M14 ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡಿದೆ. ತನ್ನ ಬ್ಯಾಟರಿ ಬ್ಯಾಕ್‌ಅಪ್‌ ಮೂಲಕ ಭಾರಿ ಬೇಡಿಕೆ ಪಡೆದುಕೊಂಡಿದ್ದ ಈ ಸ್ಮಾರ್ಟ್‌ಫೋನ್‌ ಇದೀಗ ಡಿಸ್ಕೌಂಟ್‌ ದರದಲ್ಲಿ ಸೇಲ್‌ ಆಗ್ತಿದೆ. ಅದು ಕೂಡ ಕೈಗೆಟಕುವ ಬೆಲೆಯಲ್ಲಿ ಅನ್ನೋದು ವಿಶೇಷ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್‌ ಭಾರತದಲ್ಲಿ 14,990ರೂ. ಆರಂಭಿಕ ಬೆಲೆಯಲ್ಲಿ ಸೇಲ್‌ ಆಗ್ತಿದೆ. ಆದರೆ ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯವಾಗಿದ್ದು, ಭಾರಿ ಬೆಲೆ ಕಡಿತವನ್ನು ಘೋಷಿಸಿದೆ. ಈ ಮೂಲಕ ಅತಿ ಕಡಿಮೆ ಬೆಲೆಗೆ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಫೋನ್‌ ಖರೀದಿಸುವುದಕ್ಕೆ ಅವಕಾಶ ಸಿಗುತ್ತಿದೆ. ಹಾಗಾದ್ರೆ ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್‌ ಪಡೆದುಕೊಂಡಿರುವ ಡಿಸ್ಕೌಂಟ್‌ ಬೆಲೆ ಎಷ್ಟು? ಈ ಬೆಲೆಯಲ್ಲಿ ಈ ಫೋನ್‌ ಖರೀದಿಸಲು ಇದು ಯೋಗ್ಯವೇ ಇದೆಲ್ಲದರ ಕಂಪ್ಲೀಟ್‌ ಡಿಟೇಲ್ಸ್‌ ಅನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Samsung Galaxy M14 5G launched in India with 6,000mAh battery, price starts  at Rs 13,490 - India Today

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 ಬೆಲೆಯಲ್ಲಿ ಭಾರಿ ಇಳಿಕೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್‌ ತನ್ನ ಅಧಿಕೃತ ಆನ್‌ಲೈನ್‌ ಸ್ಟೋರ್‌ನಲ್ಲಿ ಕೇವಲ 12,490ರೂ. ಬೆಲೆಗೆ ಸೇಲ್‌ ಆಗ್ತಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ ಇದೀಗ 15,000ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿರುವ ಅತ್ಯುತ್ತಮ ಫೋನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 14,990ರೂ.ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಇದು ಇನ್ನಷ್ಟು ಕಡಿಮೆ ಬೆಲೆಗೆ ಲಭ್ಯವಾಗ್ತಿರೋದು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಪ್ರಿಯರ ಸಂತೋಷಕ್ಕೆ ಕಾರಣವಾಗಿದೆ.

ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್‌ ಖರೀದಿಗೆ ಯೋಗ್ಯವೇ?

ಭಾರತದಲ್ಲಿ 15,000ರೂ.ಗಿಂತ ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌ ಸ್ಮಾರ್ಟ್‌ಫೋನ್‌ ಬಯಸೋರಿಗೆ ಇದು ಬೆಸ್ಟ್‌ ಆಯ್ಕೆ ಎನಿಸಿಕೊಳ್ಳಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಕೂಡ ಇದನ್ನು ಖರೀದಿಸೋದಕ್ಕೆ ಮುಖ್ಯ ಕಾರಣ ಎನ್ನಬಹುದು. ಏಕೆಂದರೆ ಈ ಸ್ಮಾರ್ಟ್‌ಫೋನ್‌ ಬ್ಯಾಟರಿ ಎರಡು ದಿನಗಳ ಬಾಳಿಕೆಯೊಂದಿಗೆ ಬರಲಿದ್ದು, ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಕಂಟೆಂಟ್‌ ಬಳಕೆಗೆ ಸಾಕಷ್ಟು ಉತ್ತಮವಾಗಿದೆ. LCD ಪ್ಯಾನೆಲ್ ಆಗಿದ್ದರೂ, ಇದು ಯಾವುದೇ ಸಮಸ್ಯೆಗಳಿಲ್ಲದೆ ರೋಮಾಂಚಕ ಅನುಭವವನ್ನು ನೀಡಲಿದೆ.

Samsung launches industry-leading Galaxy M14 5G in India

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ ಬರಲಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್ ಪ್ರೊಟೆಕ್ಷನ್‌ ಅನ್ನು ಪಡೆದಿದೆ. ಇನ್ನು ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಎಕ್ಸಿನೋಸ್‌ 1330 ಆಕ್ಟಾ ಕೋರ್ SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

Samsung Galaxy M14 5G launched in India at Rs 13,490 onwards: Know more |  Technology News – India TV

ಇದು 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದರ ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

Samsung Galaxy M14 5G gets Price Drop in India Details.