ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ ?

01-12-20 06:00 pm       Source: GIZBOT   ಡಿಜಿಟಲ್ ಟೆಕ್

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ನೀವು ವಾಟ್ಸಾಪ್‌ ಬಳಕೆದಾರರಾಗಿದ್ದು, ನಿಮ್ಮದೇ ಆದ ಮೊಬೈಲ್ ನಂಬರ್‌ ಅನ್ನು ನೀಡಿರುತ್ತೀರಿ. ಒಂದು ವೇಳೆ ನಿಮ್ಮ ಮೊಬೈಲ್‌ ಬದಲಾಯಿಸಲು ಬಯಸಿದರೆ ನಿಮ್ಮ ವಾಟ್ಸಾಪ್‌ ಖಾತೆಯ ಎಲ್ಲಾ ಚಾಟ್‌ಗಳು ಮತ್ತು ಡೇಟಾವನ್ನು ಕಳೆದುಕೊಳ್ಳದೆ? ನಂಬರ್‌ ಬದಲಾಯಿಸುವುದಕ್ಕೂ ಕೂಡ ಅವಕಾಶವಿದೆ.

ಹೌದು, ನೀವು ವಾಟ್ಸಾಪ್‌ ಬಳಕೆ ಮಾಡುತ್ತಿದ್ದು, ನೀವು ಈಗ ವಾಟ್ಸಾಪ್ ಖಾತೆಗೆ ನೀಡಿರುವ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸಲು ಅವಕಾಶವಿದೆ. ಆದರೂ ವಾಟ್ಸಾಪ್‌ ನಂಬರ್‌ ಅನ್ನು ಬದಲಾಯಿಸದಾಗ ಹಿಂದಿನ ಖಾತೆಯ ಮೆಸೇಜ್‌ ಚಾಟ್‌, ಡೇಟಾ, ಕಂಟ್ಯಾಕ್ಟ್‌, ಯಾವುದು ಕೂಡ ಕಳೆದು ಹೋಗದ ಹಾಗೇ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಅವಕಾಶ ವಾಟ್ಸಾಪ್‌ನಲ್ಲಿದೆ. ಈ ಫೀಚರ್ಸ್‌ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಹಾಗಾದ್ರೆ ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನೀವು ಹೇಗೆ ಬದಲಾಯಿಸಬಹುದು ಅನ್ನೊದನ್ನ ಎಂಬುದು ಇಲ್ಲಿದೆ.



ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ ?

ಹಂತ 1: ನೀವು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯುವ ಅಗತ್ಯವಿದೆ

ಹಂತ 2: ನಿಮ್ಮ ಪ್ರೊಫೈಲ್‌ಗೆ ಹೋಗಿ

ಹಂತ 3: ಸೆಟ್ಟಿಂಗ್ ಮೆನು ತೆರೆಯಿರಿ

ಹಂತ 4: ನಂತರ ಖಾತೆ ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ

ಹಂತ 5: ಹಲವು ಆಯ್ಕೆಗಳು ಲಭ್ಯವಿರುತ್ತವೆ, ಬದಲಾವಣೆ ಸಂಖ್ಯೆ ಕ್ಲಿಕ್ ಮಾಡಿ

ಹಂತ 6: ನಂತರ ನೆಕ್ಸ್ಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಹಳೆಯ ಮತ್ತು ಹೊಸ ಮೊಬೈಲ್ ಸಂಖ್ಯೆಯನ್ನು ಸೇರಿಸಿ.