ಬ್ರೇಕಿಂಗ್ ನ್ಯೂಸ್
05-12-20 12:43 pm Source: GIZBOT ಡಿಜಿಟಲ್ ಟೆಕ್
ಪ್ರಸ್ತುತ ದಿನಗಳಲ್ಲಿ ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೇ ಸರ್ಚ್ ಇಂಜಿನ್ ದೈತ್ಯ ಗೂಗಲ್. ಅಷ್ಟರ ಮಟ್ಟಿಗೆ ಗೂಗಲ್ ಇಂದು ಎಲ್ಲದಕ್ಕೂ ಉತ್ತರ ನೀಡುವ ಬ್ರೌಸರ್ ಆಗಿ ಗುರುತಿಸಿಕೊಂಡಿದೆ. ಗೂಗಲ್ ನಲ್ಲಿ ಎಲ್ಲ ಮಾಹಿತಿಯನ್ನು ಕಾಣಬಹುದಾಗಿದೆ. ಅಷ್ಟೇ ಏಕೆ ನೀವು ಎಲ್ಲಿದ್ದೀರಿ ಮತ್ತು ನಿಮ್ಮ ಆನ್‌ಲೈನ್ ಸರ್ಚ್ ಆಕ್ಟಿವಿಟಿ ಎಲ್ಲದರ ಬಗ್ಗೆಯೂ ಗೂಗಲ್ ಮಾಹಿತಿಯನ್ನು ಹೊಂದಿದೆ. ಇನ್ನು ನೀವು, ನಿಮ್ಮ ಡಿವೈಸ್‌ನಲ್ಲಿ Google ಅನ್ನು ಸಕ್ರಿಯಗೊಳಿಸಿದ್ದರೆ, ನಿಮ್ಮ ಎಲ್ಲಾ ಮಾಹಿತಿಯು ಈಗಾಗಲೇ Google ನೊಂದಿಗೆ ಇದೆ ಅನ್ನೊದನ್ನ ಗಮನಿಸಲೇಬೇಕು.
ಹೌದು, ನಿವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಅನ್ನು ಆಕ್ಟಿವ್ ಮಾಡಿದ್ದರೆ, ನಿಮ್ಮ ಎಲ್ಲಾ ಮಾಹಿತಿಯನ್ನ ಗೂಗಲ್ ಟ್ರ್ಯಾಕ್ ಮಾಡುತ್ತದೆ. ಈ ಫೀಚರ್ಸ್ ನಿಮಗೆ ಹೆಚ್ಚು ಪ್ರಸ್ತುತವಾದ ಮಾಹಿತಿ ಮತ್ತು ಸಹಾಯವನ್ನು Google ನಿಮಗೆ ನೀಡುತ್ತದೆ. ಆದಾಗ್ಯೂ, ಈ ಫೀಚರ್ಸ್ ನಿಮಗೆ ಅಗತ್ಯ ಇಲ್ಲ ಎನಿಸಿದರೆ, ನೀವು ಯಾವಾಗ ಬೇಕಾದರೂ ಅದನ್ನು ಆಫ್ ಮಾಡಬಹುದು. ನಿಮಗೆ ಬೇಕಾದಾಗ Google ಟ್ರ್ಯಾಕ್ ಅನ್ನು ನಿಷ್ಕ್ರಿಯಗೊಳಿಸಬಹುದು.
ನಿಮ್ಮ ಕಂಪ್ಯೂಟರ್ ಅನ್ನು ಗೂಗಲ್ ಟ್ರ್ಯಾಕ್ ಮಾಡದಂತೆ ಸ್ಟಾಪ್ ಮಾಡುವುದು ಹೇಗೆ?
ಹಂತ:1 ನಿಮ್ಮ ಕಂಪ್ಯೂಟರ್‌ನಲ್ಲಿ ವೆಬ್ ಬ್ರೌಸರ್ ಅನ್ನು ಪ್ರಾರಂಭಿಸಿ ಮತ್ತು ನೇರವಾಗಿ Google ವೆಬ್‌ಪುಟಕ್ಕೆ ಹೋಗಿ. ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿ ನಿಮ್ಮ ಅವತಾರದ ಐಕಾನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಹಂತ:2 ನಿಮ್ಮ ಖಾತೆಗೆ ನೀವು ಲಾಗ್-ಇನ್ ಆಗದಿದ್ದರೆ, ಮೊದಲು ಲಾಗ್ ಇನ್ ಮಾಡಿ.
ಹಂತ:3 ಡ್ರಾಪ್‌ಡೌನ್ ಮೆನುಗೆ ನ್ಯಾವಿಗೇಟ್ ಮಾಡಿ ಮತ್ತು "Manage your Google Account" ಟ್ಯಾಪ್ ಮಾಡಿ.
ಹಂತ:4 ನಿಮ್ಮ ಖಾತೆ ಪುಟ ಕಾಣಿಸಿಕೊಂಡಾಗ, "Privacy & Personalization" ಕ್ಲಿಕ್ ಮಾಡಿ.
ಹಂತ:5 ನಂತರ "Data & personalization" ಪುಟಕ್ಕೆ ಹೋಗಿ.
ಹಂತ:6 ಇದಾದ ನಂತರ "Activity controls" ವಿಭಾಗದಲ್ಲಿ, "Web & App Activity" ಕ್ಲಿಕ್ ಮಾಡಿ. ಈ ಸೇವೆಯು ನಿಮ್ಮ ಸರ್ಚ್ ಆಕ್ಟಿವಿಟಿಯನ್ನು ಟ್ರ್ಯಾಕ್ ಮಾಡುವ ಮತ್ತು ಸಂಗ್ರಹಿಸುವ Google ನ ಸಾಮರ್ಥ್ಯವನ್ನು ಕಂಟ್ರೋಲ್ ಮಾಡಲಿದೆ.
ಹಂತ:7 Google ಇದನ್ನು ಟ್ರ್ಯಾಕ್ ಮಾಡಲು ನೀವು ಬಯಸದಿದ್ದರೆ, Google ಸೇವೆಗಳನ್ನು ಬಳಸುವ ಸೈಟ್‌ಗಳು, ಅಪ್ಲಿಕೇಶನ್‌ಗಳು ಮತ್ತು ಡಿವೈಸ್‌ಳಿಂದ Chrome ಹಿಸ್ಟರಿ ಮತ್ತು ಚಟುವಟಿಕೆಯನ್ನು ಆಡ್ ಮಾಡಿ ಬಾಕ್ಸ್ ಗುರುತಿಸಬೇಡಿ. ನಿಮಗಾಗಿ ಅನೇಕ ಸೇವೆಗಳನ್ನು ವೈಯಕ್ತೀಕರಿಸುವ ಸಾಮರ್ಥ್ಯವನ್ನು Google ಕಳೆದುಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀವು ನೋಡುತ್ತೀರಿ. ಇದನ್ನು ಖಚಿತಪಡಿಸಲು, ಕೆಳಗೆ ಸ್ಕ್ರಾಲ್ ಮಾಡಿ ಮತ್ತು "pause" ಕ್ಲಿಕ್ ಮಾಡಿ.
ಹಂತ:8 ಇದಾದ ನಂತರ ಬ್ಯಾಕ್ ಬಟನ್‌ನೊಂದಿಗೆ ಡೇಟಾ ಮತ್ತು ವೈಯಕ್ತೀಕರಣ ಪುಟಕ್ಕೆ ಹಿಂತಿರುಗಿ.
ಹಂತ:9 ಆಕ್ಟಿವಿಟಿ ಕಂಟ್ರೋಲ್ ವಿಭಾಗದಲ್ಲಿ, "Location history" ಕ್ಲಿಕ್ ಮಾಡಿ. ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ - ನೀವು ಈ Google ಖಾತೆಯನ್ನು ಬಳಸುತ್ತಿರುವ ಯಾವುದೇ ಸಾಧನದಲ್ಲಿ ನಿಮ್ಮ location ಟ್ರ್ಯಾಕ್ ಮಾಡುವ ಮತ್ತು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಈ ಸೇವೆಯು ನಿಯಂತ್ರಿಸುತ್ತದೆ.
ಹಂತ:10 ನಿಮ್ಮ ಲೊಕೇಶನ್ ಟ್ರ್ಯಾಕ್ ಮಾಡಲು ನೀವು ಬಯಸದಿದ್ದರೆ, ಬಟನ್ ಕ್ಲಿಕ್ ಮಾಡುವ ಮೂಲಕ "ಲೊಕೇಶನ್ ಹಿಸ್ಟರಿ" ಅನ್ನು ಆಫ್ ಮಾಡಿ ಇದರಿಂದ ಅದು ಎಡಕ್ಕೆ ಜಾರುತ್ತದೆ. ನಿಮ್ಮ ಸ್ಥಳದ ಆಧಾರದ ಮೇಲೆ Google ತನ್ನ ಅನೇಕ ಸೇವೆಗಳನ್ನು ವೈಯಕ್ತೀಕರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀವು ನೋಡುತ್ತೀರಿ. ಖಚಿತಪಡಿಸಲು, ಕೆಳಗೆ ಸ್ಕ್ರಾಲ್ ಮಾಡಿ ಮತ್ತು "Pause" ಕ್ಲಿಕ್ ಮಾಡಿ. ಈ ಮೂಲಕ ಗೂಗಲ್ ನಿಮ್ಮ ಡಿವೈಸ್ ಅನ್ನು ಟ್ರ್ಯಾಕ್ ಮಾಡುವುದನ್ನು ಸ್ಟಾಪ್ ಮಾಡಲಿದೆ.
This News Article is a Copy of GIZBOT
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
17-01-25 11:10 pm
Mangalore Correspondent
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
Mangalore Koteker Bank Robbery, MP Brijesh Ch...
17-01-25 10:36 pm
CM Siddaramaiah, RGUHS Mangalore; ರಾಜೀವ ಗಾಂಧಿ...
17-01-25 07:42 pm
17-01-25 07:58 pm
Mangaluru Correspondent
Kotekar Bank Robbery, Mangalore Crime; ಬೀದರ್...
17-01-25 03:02 pm
Bidar SBI Bank Robbery Update, Hyderabad Firi...
17-01-25 02:48 pm
Bidar SBI Bank Robbery; ಬೀದರ್; ATM ಹಣಹಾಕಲು ಬಂ...
16-01-25 03:10 pm
Fake Stock Market scam, Mangalore, Police: ನಕ...
15-01-25 11:06 pm