ಬ್ರೇಕಿಂಗ್ ನ್ಯೂಸ್
16-12-20 12:45 pm Source: GIZBOT ಡಿಜಿಟಲ್ ಟೆಕ್
ದೇಶದ ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂಗಳಿಗೆ ಟಕ್ಕರ ನೀಡುವಂತಹ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಬಿಎಸ್‌ಎನ್‌ಎಲ್ ಪ್ರೀಪೇಯ್ಡ್ ಯೋಜನೆಗಳು ಅಧಿಕ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳ ಸೌಲಭ್ಯಗಳನ್ನು ಪಡೆದಿವೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿಎಸ್‌ಎನ್‌ಎಲ್ ಇದೀಗ ಮತ್ತೊಂದು ನೂತನ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿದ್ದು, ಖಾಸಗಿ ಟೆಲಿಕಾಂಗಳು ಕಕ್ಕಾಬಿಕ್ಕಿ ಆಗಿವೆ.
ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಕ್ರಿಸ್‌ಮಸ್ ಅಂಗವಾಗಿ ನೂತನವಾಗಿ 199ರೂ.ಗಳ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಆಕರ್ಷಕ ವ್ಯಾಲಿಡಿಟಿ ಅವಧಿ ಸೇರಿದಂತೆ ಪ್ರತಿದಿನ ಡೇಟಾ ಹಾಗೂ ವಾಯಿಸ್ ಕರೆಗಳ ಪ್ರಯೋಜನಗಳನ್ನು ಹೊಂದಿದೆ. ಅಗ್ಗದ ಬೆಲೆಯಲ್ಲಿ ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿರುವ ಈ ನೂತನ ಯೋಜನೆಯು ಡಿಸೆಂಬರ್ 24, 2020 ರಿಂದ ರೀಚಾರ್ಜ್‌ಗೆ ಲಭ್ಯವಾಗಲಿದೆ ಎಂದು ಟೆಲಿಕಾಂ ಹೇಳಿದೆ.
ಬಿಎಸ್‌ಎನ್‌ಎಲ್ 199ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ ಈ ಹೊಸ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸಿಗಲಿವೆ ಹಾಗೂ ಯಾವುದೇ ನೆಟವರ್ಕ್‌ಗೆ ಅನಿಯಮಿತ (250 ನಿಮಿಷಗಳ) ವಾಯಿಸ್ ಕರೆಯ ಸೌಲಭ್ಯವು ಸಹ ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಹಾಗೆಯೇ ಬಿಎಸ್‌ಎನ್‌ಎಲ್ ವಾರ್ಷಿಕ ವ್ಯಾಲಿಡಿಟಿಯ ಯೋಜನೆಗಳನ್ನು ಹೊಂದಿದೆ.
ಬಿಎಸ್‌ಎನ್‌ಎಲ್ 2,399ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್ ಟ್ಯೂನ್ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.
ಬಿಎಸ್‌ಎನ್‌ಎಲ್ 693ರೂ.ಪ್ಲ್ಯಾನ್
ಹಾಗೆಯೇ ಬಿಎಸ್‌ಎನ್‌ಎಲ್ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯುವುದಿಲ್ಲ.
This News Article is a Copy of GIZBOT
31-08-25 07:17 pm
HK News Desk
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
Bangalore Court, Dharmasthala, Delete Videos:...
30-08-25 04:51 pm
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 10:34 pm
Mangalore Correspondent
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
31-08-25 10:55 pm
Mangalore Correspondent
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm