ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿ! ವಿಶೇಷತೆ ಏನು?

21-12-20 03:23 pm       Source: GIZBOT   ಡಿಜಿಟಲ್ ಟೆಕ್

ಸ್ಯಾಮ್‌ಸಂಗ್‌ ಇದೀಗ ಗ್ಯಾಲಕ್ಸಿ S21 ಸರಣಿಯನ್ನು ಪರಿಚಯಿಸಲು ಸಿದ್ದತೆ ನಡೆಸಿದೆ.

ದಕ್ಷಿಣ ಕೋರಿಯಾ ಮೂಲದ ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿರುವ ಸ್ಯಾಮ್‌ಸಂಗ್‌ ಇದೀಗ ಗ್ಯಾಲಕ್ಸಿ S21 ಸರಣಿಯನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್ನು ಈ ಸರಣಿಯಲ್ಲಿ ಗ್ಯಾಲಕ್ಸಿ S21, ಗ್ಯಾಲಕ್ಸಿ S21 + ಮತ್ತು ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದ್ದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 ಸರಣಿಯನ್ನು ಜನವರಿ 14, 2021 ರಂದು ಪ್ರಕಟಿಸುವ ನಿರೀಕ್ಷೆಯಿದೆ.

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ S21 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಜನವರಿ 14, 2021 ರಂದು ಅನಾವರಣಗೊಳಿಸಲಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿದೆ. ಇದರಲ್ಲಿ ಗ್ಯಾಲಕ್ಸಿ S21, ಗ್ಯಾಲಕ್ಸಿ S21 + ಮತ್ತು ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್‌ ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿವೆ ಎನ್ನಲಾಗಿದೆ.



ಡಿಸ್‌ಪ್ಲೇ ಮತ್ತು ವಿನ್ಯಾಸ

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿಯಲ್ಲಿ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್‌ 6.2 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಗ್ಯಾಲಕ್ಸಿ S21 + ಮತ್ತು ಗ್ಯಾಲಕ್ಸಿ S21 ಅಲ್ಟ್ರಾ ಕ್ರಮವಾಗಿ 6.7 ಇಂಚು ಮತ್ತು 6.8 ಇಂಚಿನ ಡಿಸ್‌ಪ್ಲೇ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದ್ದು, ಮೂರು ಸ್ಮಾರ್ಟ್‌ಫೋನ್‌ಗಳು ಪಂಚ್-ಹೋಲ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರಲಿವೆ. ಇದಲ್ಲದೆ ಗ್ಯಾಲಕ್ಸಿ S21 + ಮತ್ತು ಗ್ಯಾಲಕ್ಸಿ S21 ಅಲ್ಟ್ರಾ ರೂಪಾಂತರಗಳಿಗಾಗಿ ಸ್ಯಾಮ್ಸಂಗ್ ಗ್ಲಾಸ್ ಬ್ಯಾಕ್ ವಿನ್ಯಾಸಕ್ಕೆ ಹೋಗುವ ನಿರೀಕ್ಷೆಯಿದೆ. ಆದರೆ ಸ್ಟ್ಯಾಂಡರ್ಡ್ ವೇರೈಂಟ್ ಪ್ಲಾಸ್ಟಿಕ್ ಬ್ಯಾಕ್ ಪ್ಯಾನಲ್ ಅನ್ನು ಉಳಿಸಿಕೊಳ್ಳುತ್ತದೆ.



ಪ್ರೊಸೆಸರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿಯ ಸ್ಮಾರ್ಟ್‌ಫೋನ್‌ಗಳು ಯುಎಸ್‌ನಲ್ಲಿ ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತವೆ ಎಂದು ಹೇಳಲಾಗಿದೆ. ಭಾರತದಲ್ಲಿ ಎಕ್ಸಿನೋಸ್ ಪ್ರೊಸೆಸರ್ ಹೊಂದಿರಲಿದ್ದು, ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಮತ್ತು ಗ್ಯಾಲಕ್ಸಿ S21 + 256GB ಮತ್ತು 512 GB ಎರಡು ವೇರಿಯೆಂಟ್‌ ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಆದರೆ ಗ್ಯಾಲಕ್ಸಿS21 ಅಲ್ಟ್ರಾ 128GB, 256GB ಮತ್ತು 512GB ಎಂಬ ಮೂರು ವೇರಿಯೆಂಟ್‌ ಆಯ್ಕೆಯ ಸ್ಟೊರೇಜ್‌ ಆಯ್ಕೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.



ಕ್ಯಾಮೆರಾ

ಗ್ಯಾಲಕ್ಸಿ S21 ಮತ್ತು ಗ್ಯಾಲಕ್ಸಿ S21 + ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿರಬಹುದು, ಇದು 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ, 12 ಎಂಪಿ ವೈಡ್-ಆಂಗಲ್ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ ಇದು ಎಲ್ಇಡಿ ಫ್ಲ್ಯಾಷ್ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ 108 ಎಂಪಿ ಪ್ರೈಮರಿ ಸೆನ್ಸಾರ್, ಎರಡನೇ ಕ್ಯಾಮೆರಾ 10 ಎಂಪಿ ಟೆಲಿಫೋಟೋ ಲೆನ್ಸ್‌, ಮೂರನೇ ಕ್ಯಾಮೆರಾ 12 ಎಂಪಿ ಅಲ್ಟ್ರಾ ವೈಡ್-ಆಂಗಲ್ ಸೆನ್ಸಾರ್ ಮತ್ತು ಅಂತಿಮವಾಗಿ 100 ಎಕ್ಸ್ ಸ್ಪೇಸ್ ಜೂಮ್ ಸೇರಿದಂತೆ ಒಟ್ಟು ಐದು ಬ್ಯಾಕ್ ಕ್ಯಾಮೆರಾಗಳಿವೆ ಎಂದು ಅಂದಾಜಿಸಲಾಗಿದೆ..



ಬ್ಯಾಟರಿ ವಿಶೇಷತೆ

ಇನ್ನು ಬ್ಯಾಟರಿಯ ವಿಷಯದಲ್ಲಿ, ಗ್ಯಾಲಕ್ಸಿ S21 ಅಲ್ಟ್ರಾ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡಲಿದ್ದು, ಗ್ಯಾಲಕ್ಸಿ S21 ಮತ್ತು ಗ್ಯಾಲಕ್ಸಿ S21 + ಅನ್ನು ಕ್ರಮವಾಗಿ 4,000mAh ಬ್ಯಾಟರಿ ಮತ್ತು 4,800 mAh ಬ್ಯಾಟರಿ ಬೆಂಬಲಿಸುತ್ತದೆ.

This News Article is a Copy of GIZBOT