ಟೆಲಿಕಾಂ ಟಾರೀಫ್‌ ಪ್ಲ್ಯಾನ್‌ಗಳ ದರ ಏರಿಕೆ ಸಾಧ್ಯತೆ; ಯಾವ ಟೆಲಿಕಾಂಗೆ ಬೀಳಲಿದೆ ಪೆಟ್ಟು!

22-12-20 04:58 pm       Source: GIZBOT Manthesh   ಡಿಜಿಟಲ್ ಟೆಕ್

ಹೊಸ ವರ್ಷದಲ್ಲಿ 2021 ಟೆಲಿಕಾಂಗಳು ಕಂಪನಿಗಳು ಮತ್ತೆ ತಮ್ಮ ಟಾರೀಫ್‌ ಯೋಜನೆಗಳ ಬೆಲೆ ಏರಿಕೆಯ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ವರ್ಷದ ಅಂತ್ಯದ ವೇಳೆಗೆ ಟೆಲಿಕಾಂ ಕಂಪನಿಗಳು ಟಾರೀಫ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿ ಅಚ್ಚರಿ ಮೂಡಿಸಿದವು. ಅದೇ ಬರುವ ಹೊಸ ವರ್ಷದಲ್ಲಿ 2021 ಟೆಲಿಕಾಂಗಳು ಕಂಪನಿಗಳು ಮತ್ತೆ ತಮ್ಮ ಟಾರೀಫ್‌ ಯೋಜನೆಗಳ ಬೆಲೆ ಏರಿಕೆಯ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಹೌದು, ಕಳೆದ ವರ್ಷ ವೊಡಾಫೋನ್‌-ಐಡಿಯಾ, ಜಿಯೋ, ಏರ್‌ಟೆಲ್‌ ಟೆಲಿಕಾಂಗಳು ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್‌) ಬಾಕಿಯಿಂದ ಭಾರೀ ಆರ್ಥಿಕ ನಷ್ಟ ಎದುರಿಸಿದವು. ಡೇಟಾ ಕನಿಷ್ಠ ದರ ನಿಗದಿಪಡಿಸಲು ಮನವಿ ಸಲ್ಲಿಸಿದ್ದವು. ಕಂಪನಿಗಳು ಬೆಲೆ ಏರಿಕೆ ಮಾಡಿದಾಗೂ ಸಹ ಪ್ರಸಕ್ತ ವರ್ಷ ವರ್ಕ್‌ ಫ್ರಮ್‌ ಹೋಮ್‌ನಂತಹ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿವೆ. ಆದರೆ ಜನೆವರಿಯಲ್ಲಿ ಮತ್ತೆ ಟಾರೀಫ್‌ ದರಗಳಲ್ಲಿ ಮತ್ತೆ ಏರಿಕೆ ಮಾಡುವ ಸಾಧ್ಯತೆಗಳಿ ಇವೆ ಎನ್ನಲಾಗಿದೆ.



ಟಾರೀಫ್‌ನಲ್ಲಿ ಶೇ.15-20% ಹೆಚ್ಚಳ ಸಾಧ್ಯತೆ

ಆರ್ಥಿಕ ನಷ್ಟದ ಹೊರೆ ಇಳಿಕೆ ಮಾಡಲು ಟೆಲಿಕಾಂಗಳು ಸುಂಕವನ್ನು ಹೆಚ್ಚಿಸಲು ನೋಡುತ್ತಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಹೊಸ ವರ್ಷದ (2020) ಆರಂಭದಲ್ಲಿ ಟಾರೀಫ್ ಯೋಜನೆಗಳ ದರಗಳಲ್ಲಿ 15-20% ರಷ್ಟು ಹೆಚ್ಚಳ ಮಾಡಬಹುದು ಎನ್ನಲಾಗಿದೆ.



ಜಿಯೋ ಸಹ ದರ ಏರಿಕೆ ಮಾಡುವ ಸಾಧ್ಯತೆ

ಜನೆವರಿಯಲ್ಲಿ ವೊಡಾಫೋನ್-ಐಡಿಯಾ, ಏರ್‌ಟೆಲ್‌ ಹಾಗೂ ಜಿಯೋ ಸಹ ದರ ಏರಿಕೆ ಮಾಡುವ ನಿರೀಕ್ಷೆಗಳಿವೆ. ಅವುಗಳಲ್ಲಿ ವಿ ಹಾಗೂ ಏರ್‌ಟೆಲ್‌ ಟೆಲಿಕಾಂ ಮೊದಲು ದರ ಏರಿಕೆ ಮಾಡುವ ಸಾಧ್ಯತೆಗಳಿದ್ದ, ಈ ಎರಡು ಟೆಲಿಕಾಂಗಳ ನಡೆ ನೋಡಿ ಜಿಯೋ ಟೆಲಿಕಾಂ ತನ್ನ ನಿರ್ಣಯ ಮಾಡುವ ನಿರೀಕ್ಷೆಗಳಿವೆ ಎನ್ನಲಾಗಿದೆ.



ಯಾವ ಟೆಲಿಕಾಂಗೆ ಬೀಳಲಿದೆ ಪೆಟ್ಟು

ಟಾರೀಫ್‌ಗಳ ಬೆಲೆ ಹೆಚ್ಚಳದಿಂದ ಚಂದಾದಾರರು ಇತರೆ ಟೆಲಿಕಾಂಗೆ ಎಂಎನ್‌ಪಿ ಮಾಡಿಕೊಳ್ಳಬಹುದು. ಇದರಿಂದ ಮೊದಲು ದರ ಏರಕೆ ಮಾಡುವ ಟೆಲಿಕಾಂಗೆ ಹೆಚ್ಚು ಪೆಟ್ಟು ಬೀಳುವ ಸಾಧ್ಯತೆ ಎಂದು ಹೇಳಬಹುದಾಗಿದೆ. ಇನ್ನೊಂದೆಡೆ ದರ ಹೆಚ್ಚಳ ಒಂದೆಡೇಯಾದರೇ ಉತ್ತಮ ನೆಟ್‌ವರ್ಕ್ ವ್ಯವಸ್ಥೆ ಕಾಯ್ದುಕೊಳ್ಳದ ಟೆಲಿಕಾಂನಿಂದ ಚಂದಾದಾರರು ಹೊರಹೋಗುವ ಸಾಧ್ಯತೆಗಳು ಇವೆ.

This News Article is a Copy of GIZBOT