ಟೆಲಿಗ್ರಾಂನಲ್ಲಿ ಡೌನ್‌ಲೋಡ್‌ ಮಾಡಿದ ವಿಡಿಯೊ ಡಿಲೀಟ್ ಮಾಡುವುದು ಹೇಗೆ ಗೊತ್ತಾ?

25-12-20 03:18 pm       Source: GIZBOT   ಡಿಜಿಟಲ್ ಟೆಕ್

ಟೆಲಿಗ್ರಾಂ ಆಪ್‌ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್‌ಗಳ ಲಿಸ್ಟ್‌ನಲ್ಲಿ ಗುರುತಿಸಿಕೊಂಡಿದೆ.

ಟೆಲಿಗ್ರಾಂ ಆಪ್‌ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್‌ಗಳ ಲಿಸ್ಟ್‌ನಲ್ಲಿ ಗುರುತಿಸಿಕೊಂಡಿದೆ. ವಾಟ್ಸಾಪ್‌ನಂತೆ ಟೆಲಿಗ್ರಾಂನಲ್ಲಿಯೂ ಮೆಸೆಜ್, ಫೋಟೊ, ವಿಡಿಯೊ, ಡಾಕ್ಯುಮೆಂಟ್‌ ಫೈಲ್‌ಗಳನ್ನು ಶೇರ್ ಮಾಡಬಹುದಾಗಿದೆ. ಮುಖ್ಯವಾಗಿ ದೊಡ್ಡ ಗಾತ್ರದ ವಿಡಿಯೊಗಳನ್ನು ಸಹ ಟೆಲಿಗ್ರಾಂನಲ್ಲಿ ಶೇರ್ ಮಾಡಬಹುದಾಗಿದೆ. ಟೆಲಿಗ್ರಾಂನಲ್ಲಿ ಬರುವ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡುವುದರಿಂದ ಬಹುಬೇಗ ಫೋನ್‌ ಮೆಮೊರಿ ಫುಲ್‌ ಆಗಿ ಬಿಡುವ ಸಾಧ್ಯತೆಗಳಿರುತ್ತವೆ.



ಹೌದು, ಟೆಲಿಗ್ರಾಂನಲ್ಲಿ ದೊಡ್ಡ ಗಾತ್ರದ ವಿಡಿಯೊಗಳನ್ನು ಶೇರ್ ಮಾಡುವ ಆಯ್ಕೆ ಇದ್ದು, ಈ ಸೌಲಭ್ಯವು ಬಳಕೆದಾರರಿಗೆ ಬಹು ಉಪಯುಕ್ತ ಅನಿಸಿದೆ. ಆದರೆ ಆಪ್ತರಿಂದ, ಸ್ನೇಹಿತರಿಂದ ಹಾಗೂ ಗ್ರೂಪ್‌/ಚಾನಲ್‌ಗಳಿಂದ ಬರುವ ವಿಡಿಯೊಗಳನ್ನು ಬಳಕೆದಾರರು ಡೌನ್‌ಲೋಡ್‌ ಮಾಡುವುದರಿಂದ ಫೋನ್‌ ಸ್ಟೋರೇಜ್‌ ಫುಲ್ ಆಗುತ್ತದೆ. ಹೀಗಾಗಿ ಮೇಲಿಂದ ಮೇಲೆ ಅನಗತ್ಯ ವಿಡಿಯೊಗಳನ್ನು ಡಿಲೀಟ್ ಮಾಡುವುದು ಉತ್ತಮ.



ಟೆಲಿಗ್ರಾಂನಲ್ಲಿ ಎಲ್ಲ ವಿಡಿಯೊಗಳು ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್ ಆಗುವ ಆಯ್ಕೆಯನ್ನು ನಿಷ್ಕ್ರಿಯ ಮಾಡುಬಹುದಾಗಿದೆ. ಈ ಮೂಲಕ ಅನಗತ್ಯವಾಗಿ ಫೋನ್ ಸ್ಟೋರೇಜ್ ಭರ್ತಿ ಆಗುವದು ತಡೆಯಬಹುದಾಗಿದೆ. ಇನ್ನು ಈಗಾಗಲೇ ಟೆಲಿಗ್ರಾಂ ವಿಡಿಯೊಗಳಿಂದ ಫೋನಿನ ಮೆಮೊರಿ ಫುಲ್‌ ಆಗಿದ್ದರೇ ಅದನ್ನು ಡಿಲೀಟ್ ಮಾಡಲು ಆಯ್ಕೆಗಳಿವೆ.



ವಿಡಿಯೊ ಡಿಲೀಟ್ ಮಾಡಲು ಈ ಕೆಳಗಿನ ಕ್ರಮ ಅನುಸರಿಸಿ

* ನೀವು ಡಿಲೀಟ್ ಮಾಡ ಬಯಸುವ ವಿಡಿಯೊ ಇರುವ ಚಾಟ್ ತೆರೆಯಿರಿ.

* ಈಗ ನೀವು ಡಿಲೀಟ್ ಮಾಡ ಬಯಸುವ ವಿಡಿಯೊ ಅನ್ನು ಟ್ಯಾಪ್ ಮಾಡಿ ಮತ್ತು ಅದನ್ನು ಕೆಲ ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.

* ನಂತರ ಪರದೆಯ ಮೇಲಿನ ಬಲ ಭಾಗದಲ್ಲಿ ಗೋಚರಿಸುತ್ತಿರುವ ಡಿಲೀಟ್ ಐಕಾನ್ ಮೇಲೆ ಟ್ಯಾಪ್ ಮಾಡಿ.

* ಹಾಗೆಯೇ ನಿಮ್ಮ ಎರಡೂ ಚಾಟ್‌ಗಳಿಂದ ಫೈಲ್‌ಗಳನ್ನು ತೆಗೆದುಹಾಕಲು ನೀವು ಬಯಸಿದರೆ ಪಾಪ್-ಅಪ್ ವಿಂಡೋದಿಂದ ಕ್ಲಿಯರ್ ಆಯ್ಕೆಮಾಡಿ ಮತ್ತು ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಯ ಹೆಸರು.

  ಕ್ಲಿಯರ್ ಆಯ್ಕೆ ಕ್ಲಿಕ್ ಮಾಡಿ

* ಫೈಲ್ ಅನ್ನು ಸರಳವಾಗಿ ಟ್ಯಾಪ್ ಮಾಡುವ ಮೂಲಕ ನೀವು ಒಂದೇ ಮೆಸೆಜ್‌ಗಳನ್ನು ಕ್ಲಿಯರ್‌ ಮಾಡಬಹುದು. ನಂತರ ನೀವು ಹೊಸ ವಿಂಡೋವನ್ನು ನೋಡಬಹುದು ಮತ್ತು ಕ್ಲಿಯರ್ ಆಯ್ಕೆಯು ಗೋಚರಿಸುತ್ತದೆ          ಅದನ್ನು ಕ್ಲಿಕ್  ಮಾಡಿ.

   This News Article is a Copy of GIZBOT