ಉಪಯುಕ್ತ ಅನಿಸುವ ಈ ಸ್ಮಾರ್ಟ್‌ ಡಿವೈಸ್‌ಗಳು ಜಸ್ಟ್‌ 1,000ರೂ.ಒಳಗೆ ಲಭ್ಯ!

26-12-20 05:39 pm       Source: GIZBOT Manthesh   ಡಿಜಿಟಲ್ ಟೆಕ್

ಬಜೆಟ್‌ ದರದಲ್ಲಿನ ಸ್ಮಾರ್ಟ್‌ ದೈನಂದಿನ ಬಳಕೆಯ ಡಿವೈಸ್‌ಗಳು ಗ್ರಾಹಕರನ್ನು ಆಕರ್ಷಿಸಿವೆ.

ಪ್ರಸ್ತುತ ಜನರು ಹೆಚ್ಚು ಡಿಜಿಟಲೀಕರಣದತ್ತ ವಾಲುತ್ತಿದ್ದು, ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅತೀ ಅಗತ್ಯ ಡಿವೈಸ್‌ಗಳು ಈಗ ಸ್ಮಾರ್ಟ್‌ ರೂಪ ತಾಳುತ್ತಿವೆ. ಇಂದಿನ ಬಹುತೇಕ ಸ್ಮಾರ್ಟ್‌ ಉಪಕರಣಗಳು AI-ಕೃತಕ ಬುದ್ಧಿಮತ್ತೆ, ವಾಯಿಸ್‌ ಅಸಿಸ್ಟಂಟ್ ಮತ್ತು ವರ್ಚುವಲ್ ಅಸಿಸ್ಟಂಟ್ ತಂತ್ರಜ್ಞಾನಗಳ ಸಂಯೋಜನೆಗೊಂಡಿರುತ್ತವೆ. ಬಜೆಟ್‌ ದರದಲ್ಲಿನ ಸ್ಮಾರ್ಟ್‌ ದೈನಂದಿನ ಬಳಕೆಯ ಡಿವೈಸ್‌ಗಳು ಗ್ರಾಹಕರನ್ನು ಆಕರ್ಷಿಸಿವೆ.

ಹೌದು, ಸದ್ಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಡಿವೈಸ್‌ಗಳ ದೊಡ್ಡ ಪಟ್ಟಿಯೇ ಇದೆ. ಈ ಡಿವೈಸ್‌ಗಳನ್ನು ಬಳಕೆ ಮಾಡುವ ಮೂಲಕ ಬಳಕೆದಾರರು ಮನೆಯನ್ನು ಸ್ಮಾರ್ಟ್‌ ಹೋಮ್ ಆಗಿ ಮಾರ್ಪಡಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಕೆಲವು ಪ್ರತಿಷ್ಠಿತ ಕಂಪನಿಗಳ ಸ್ಮಾರ್ಟ್‌ ಡಿವೈಸ್‌ಗಳು ದುಬಾರಿ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಇನ್ನು ಮತ್ತೆ ಕೆಲವು ಸಂಸ್ಥೆಗಳ ಸ್ಮಾರ್ಟ್‌ ಡಿವೈಸ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯ ಇವೆ.



ವಿಪ್ರೋ Wi-Fi ಸ್ಮಾರ್ಟ್ ಬಲ್ಬ್

ಪ್ರತಿಯೊಬ್ಬರ ಮನೆಯಲ್ಲಿ ಬೆಳಕಿಗೆ ಲೈಟ್‌ ಅತೀ ಅಗತ್ಯ ಡಿವೈಸ್‌ ಆಗಿದೆ. ಆದರೆ ಸದ್ಯ ಸ್ಮಾರ್ಟ್‌ ಲೈಟ್‌ಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈ ಪೈಕಿ ಅಗ್ಗದ ದರದಲ್ಲಿ ವಿಪ್ರೋ Wi-Fi ಸ್ಮಾರ್ಟ್ ಬಲ್ಬ್ ಆಕರ್ಷಕ ಅನಿಸಿದ್ದು, ಈ ಡಿವೈಸ್‌ ವೈ-ಫೈ ಸೌಲಭ್ಯ ಪಡೆದಿದೆ. ಹಾಗೂ ಈ ಡಿವೈಸ್ ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟಂಟ್‌ ಸೌಲಭ್ಯವನ್ನು ಪಡೆದಿದೆ. ಇನ್ನು ಅಮೆಜಾನ್‌ನಲ್ಲಿ ಈ ಡಿವೈಸ್‌ ಬೆಲೆಯು 599ರೂ. ಗಳು ಆಗಿದೆ.



ಆಂಬ್ರೇನ್ ಸ್ಮಾರ್ಟ್‌ ಪ್ಲಗ್

ಮನೆಯ ರೂಮಿನಲ್ಲಿ ವಿದ್ಯುತ್ ಸಾಕೆಟ್‌ಗಳಿಗೆ, ಬಾಹ್ಯವಾಗಿ ಸ್ಮಾರ್ಟ್‌ಪ್ಲಗ್‌ಗಳನ್ನು ಬಳಸಬಹುದು. ಸ್ಮಾರ್ಟ್‌ಪ್ಲಗ್‌ಗಳು ವಿವಿಧ ಅಗತ್ಯಗಳಿಗೆ ಅನುಸಾರವಾಗಿ ಭಿನ್ನ ವಿದ್ಯುತ್ ಸಾಮರ್ಥ್ಯದಲ್ಲಿ ಲಭ್ಯವಾಗಲಿವೆ. ಈ ಪೈಕಿ ಆಂಬ್ರೇನ್ ವೈಫೈ ಸ್ಮಾರ್ಟ್ ಪ್ಲಗ್ 10A ಡಿವೈಸ್‌ ಹೆಚ್ಚು ಗಮನ ಸೆಳೆದಿದ್ದು, ಈ ಡಿವೈಸ್‌ಗೆ ಯಾವುದೇ ಹಬ್‌ ಅಗತ್ಯ ಇಲ್ಲ. ಇನ್ನು ಈ ಡಿವೈಸ್‌ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲ ಹೊಂದಿದೆ. ಇನ್ನು ಅಮೆಜಾನ್‌ನಲ್ಲಿ ಈ ಡಿವೈಸ್‌ ಬೆಲೆಯು 899ರೂ. ಗಳು ಆಗಿದೆ.

ಶಿಯೋಮಿ ಸ್ಮಾರ್ಟ್ LED ಬಲ್ಬ್

ಅಗ್ಗದ ಪ್ರೈಸ್‌ನಲ್ಲಿ ಶಿಯೋಮಿ ಸ್ಮಾರ್ಟ್ ಎಲ್ಇಡಿ ಬಲ್ಬ್ ಸಹ ಆಕರ್ಷಣೆ ಅನಿಸಿದೆ. ಇನ್ನು ಈ ಡಿವೈಸ್‌ನ ವೈಟ್‌ ಬಣ್ಣದ ವೇರಿಯಂಟ್‌ ಬೆಲೆಯು ಜಸ್ಟ್‌ 799 ರೂ. ಆಗಿದೆ. ಈ ಬಲ್ಬ್ 7.5W ಬಿ 22 ಬಲ್ಬ್ ಆಗಿದೆ. ಸಾಧನವು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಹೊಂದಿಕೊಳ್ಳುತ್ತದೆ. ಬಲ್ಬ್ 16 ಮಿಲಿಯನ್ ಬಣ್ಣಗಳನ್ನು ನೀಡುತ್ತದೆ

This News Article is a Copy of GIZBOT